Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪುರುಷರು ತಮ್ಮ ಲುಕ್ ಸ್ಮಾರ್ಟ್ ಆಗಿಸಲು ಈ ರೀತಿ ಸ್ಕಿನ್ ಕೇರ್ ಬೆಸ್ಟ್
ಹೆಣ್ಣು ಮಕ್ಕಳು ತಮ್ಮ ತ್ವಚೆಯ ಸೌಂದರ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿ ಇರುತ್ತಾರೆ. ಕೆಲವರಂತೂ ಅತಿ ಎನ್ನಿಸುವಷ್ಟು ತ್ವಚೆಯ ಆರೈಕೆ ಮಾಡುತ್ತಾರೆ. ಆದರೆ ಈ ತ್ವಚೆಯ ಆರೈಕೆ ಎನ್ನುವುದು ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಕೂಡ ಬೇಕಾಗಿರುವ ಅತ್ಯಗತ್ಯವಾದ ವಿಷಯ. ದಿನವೂ ಹೊರಗಡೆ ಧೂಳು ಪ್ರದೂಷಣಗಳನ್ನು ಎದುರಿಸುವ ಗಂಡಸರ ತ್ವಚೆಗೆ ಕೂಡ ಹೆಚ್ಚುವರಿ ಕಾಳಜಿ ಬೇಕಾಗುತ್ತದೆ.

ಪುರುಷರ ತ್ವಚೆಯನ್ನು ಡಿಟಾಕ್ಸ್ ಮಾಡುವುದು
ಪುರುಷರು ಕೂಡ ತಮ್ಮ ತ್ವಚೆಯರನ್ನು ಆರೋಗ್ಯವಂತವಾಗಿ ಇಟ್ಟುಕೊಳ್ಳುವುದು ಮುಖ್ಯ. ತ್ವಚೆಯಲ್ಲಿ ಇರುವ ವಿಷಕಾರಿ ಗುಣಗಳನ್ನು ಹೋಗಲಾಡಿಸಿ, ಡಿಟಾಕ್ಸ್ ಮಾಡಿಕೊಳ್ಳುವುದರಿಂದ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ ಜೊತೆಗೆ ಹೊಳೆಯುವ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು. ದಿನವಿಡೀ ತಾಜಾ ಹಾಗೂ ಹೊಳೆಯುವ ಆರೋಗ್ಯವಂತ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಲು ಬೆಳಿಗ್ಗೆ ಎದ್ದು ಈ ಕೆಲವು ಕೆಲಸಗಳನ್ನು ಮಾಡಲೇಬೇಕು. ಈ ರೀತಿ ಮಾಡಿದರೆ ನಿಮ್ಮ ತ್ವಚೆ ಹೊಳಪಿನಿಂದ ಕೂಡಿರುವುದು ಮಾತ್ರವಲ್ಲದೆ ಮನಸ್ಸು ಕೂಡ ಆಹ್ಲಾದಕರವಾಗಿರುತ್ತದೆ.
ಬೆಳಿಗ್ಗೆ ತ್ವಚೆ ಡಿಟಾಕ್ಸ್ ಮಾಡುವ ವಿಧಾನಗಳು:
ನೀರು: ನಾವು ದೇಹದಲ್ಲಿ ಯಾವುದೇ ರೋಗವು ಬಾರದಂತೆ ತಡೆಗಟ್ಟಲು ಮೊಟ್ಟಮೊದಲನೆಯದಾಗಿ ಮಾಡಬೇಕಾಗಿರುವ ಕೆಲಸವೇ ಇದು ದೇಹವನ್ನು ಯಾವುದೇ ಕಾರಣಕ್ಕೂ ಡಿ-ಹೈಡ್ರೇಟ್ ಆಗಲು ಬಿಡಬಾರದು. ದಿನವೂ ಮುಂಜಾನೆ ಎದ್ದ ತಕ್ಷಣ ಮೊದಲು ಎರಡು ಗ್ಲಾಸ್ ನಷ್ಟು ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ರಾತ್ರಿ 8 ಗಂಟೆಗಳ ಸುಖ ನಿದ್ದೆಯ ನಂತರ ದೇಹ ಡಿ-ಹೈಡ್ರೇಟ್ ಅಥವಾ ನಿರ್ಜಲೀಕರಣಗೊಳ್ಳಬಹುದು. ಹಾಗಾಗಿ ದೇಹಕ್ಕೆ ಎನರ್ಜಿ ತುಂಬುವಂತಹ ನೀರನ್ನು ಸೇವಿಸಬೇಕು. ಇದರಿಂದ ದೇಹದ ಚಯಾಪಚಯ ಕ್ರಿಯೆಯೂ ಕೂಡ ಸರಿಯಾಗುತ್ತದೆ ಜೊತೆಗೆ ದೇಹದಲ್ಲಿರುವ ಟಾಕ್ಸಿಕ್ ಅಂಶಗಳನ್ನು ಹೊರಗಡೆ ಹಾಕಲು ಕೂಡ ಸಾಧ್ಯವಾಗುತ್ತದೆ. ನೀರು ಕುಡಿಯುವುದರಿಂದ ಚರ್ಮ ಸುಲಭವಾಗಿ ಹೈಡ್ರೇಟ್ ಆಗುತ್ತದೆ. ಇನ್ನು ಇಲ್ಲಿ ಸಾಕಷ್ಟು ಜನರಿಗೆ ಬಿಸಿನೀರು ಕುಡಿಯಬೇಕೆ ಅಥವಾ ತಣ್ಣನೆಯ ನೀರು ಕುಡಿಯಬೇಕೇ ಎನ್ನುವ ಗೊಂದಲ ಇರುತ್ತದೆ. ಈ ಎರಡು ಕ್ರಿಯೆಯು ಒಳ್ಳೆಯದೇ ಆಗಿರುವುದರಿಂದ ನಿಮಗೆ ಯಾವುದು ಅನುಕೂಲವೋ ಆ ರೀತಿ ಮಾಡಿ ಆದ್ರೆ ನೀರು ಕುಡಿಯುವುದನ್ನು ಮಾತ್ರ ಮರೆಯಬೇಡಿ.
ಜೇನುತುಪ್ಪ ಹಾಗೂ ನಿಂಬೆರಸ ಬಳಕೆ
ನೀವು ನಿಮ್ಮ ತ್ವಚೆಯನ್ನು ಕ್ಷಣಮಾತ್ರದಲ್ಲಿ ಗೆಲುವಾಗಿಸಬೇಕು, ಮನಸ್ಸಿಗೂ ಕೂಡ ಆಹ್ಲಾದವನ್ನು ಉಂಟುಮಾಡಬೇಕು ಅಂದರೆ ಈ ಒಂದು ಕೆಲಸವನ್ನು ಮಾಡಿ. ಒಂದು ಗ್ಲಾಸ್ ನೀರಿಗೆ ಜೇನುತುಪ್ಪ ಹಾಗೂ ಒಂದು ಹನಿ ನಿಂಬೆರಸ ಸೇರಿಸಿಕೊಂಡು ಕುಡಿದರೆ ಒಳ್ಳೆಯದು. ಇದರಲ್ಲಿ ಸಾಕಷ್ಟು ಆರೋಗ್ಯಕರ ಗುಣಲಕ್ಷಣಗಳು ಇರುತ್ತವೆ. ನಿಂಬೆಯಲ್ಲಿ ವಿಟಮಿನ್ ಸಿ ಅಂಶ ಇದ್ದರೆ, ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಉರಿಯುತದ ಗುಣಲಕ್ಷಣಗಳನ್ನು ಕೂಡ ಹೊಂದಿರುತ್ತದೆ. ಈ ಎಲ್ಲಾ ಪೋಷಕಾಂಶಗಳು ಬಹಳ ಅಗತ್ಯವಾಗಿ ಬೇಕಾಗಿರುವ ಅಂಶಗಳಾಗಿರುವುದರಿಂದ ಜೇನುತುಪ್ಪ ಹಾಗೂ ನಿಂಬೆರಸವನ್ನು ಸೇವಿಸುವುದು ಬಹಳ ಒಳ್ಳೆಯದು. ಬೆಳಿಗ್ಗೆ ಎದ್ದ ತಕ್ಷಣ ನೀವು ನಿಮ್ಮ ಚರ್ಮವನ್ನು ಆರೋಗ್ಯವಂತವಾಗಿ ಇಟ್ಟುಕೊಳ್ಳಲು ನಿಂಬೆರಸ ಹಾಗೂ ಜೇನುತುಪ್ಪ ಮಿಶ್ರಿತ ನೀರನ್ನು ಕುಡಿಯಬಹುದು.
ಹರ್ಬಲ್ ಚಹಾ: ಇತ್ತೀಚಿಗೆ ವೈದ್ಯರು ಕೂಡ ಇದನ್ನು ಸಲಹೆ ಮಾಡುತ್ತಾರೆ. ಬೆಳಿಗ್ಗೆ ಎದ್ದ ತಕ್ಷಣ ಕೆಫಿನ್ ಇರುವ ಟೀ ಅಥವಾ ಕಾಫಿ ಸೇವನೆ ಮಾಡುವುದಕ್ಕಿಂತ ಒಂದು ಕಪ್ ಬಿಸಿ ಬಿಸಿಯಾಗಿರುವ ಗ್ರೀನ್ ಟೀ ಅಥವಾ ಹರ್ಬಲ್ ಟೀ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಜೊತೆಗೆ ಉರಿಯೂತದ ಗುಣಲಕ್ಷಣಗಳು ಇರುತ್ತವೆ ಬೆಳಿಗ್ಗೆ ಎದ್ದು ಗ್ರೀನ್ ಟೀ ಕುಡಿಯುವುದರಿಂದ ತ್ವಚೆಯ ಡಿಟಾಕ್ಸ್ ಮಾಡಿಕೊಳ್ಳಬಹುದು. ಇದು ದೇಹದಲ್ಲಿರುವ ವಿಷಯವನ್ನು ಹೊರ ಹಾಕುವುದರ ಮೂಲಕ ತ್ವಚೆಯಲ್ಲಿ ಯಾವುದೇ ರೀತಿಯ ಮೊಡವೆ ಅಥವಾ ಕಪ್ಪು ಕಲೆ ಬಾರದಂತೆ ತಡೆಯುತ್ತದೆ. ಕ್ರಿಯೆಯನ್ನು ಹೆಚ್ಚಿಸುವುದರ ಮೂಲಕ ಚರ್ಮದಲ್ಲಿ ಹೊಸ ಚೈತನ್ಯ ತುಂಬುತ್ತದೆ ಜೊತೆಗೆ ಚರ್ಮ ಕಾಂತಿಯುತವಾಗಿ ಇರುವಂತೆ ಮಾಡುತ್ತದೆ.
ಎಳನೀರು ಸೇವನೆ:
ಇತ್ತೀಚೆಗೆ ಸಾಮಾನ್ಯವಾಗಿ ಬೆಳಿಗ್ಗೆ ಎದ್ದು ಜಾಗಿಂಗ್ ಅಥವಾ ವಾಕಿಂಗ್ ಹೋಗಿ ಬಂದ ನಂತರ ಸಾಕಷ್ಟು ಜನ ಈ ಒಂದು ಅಮೃತದ ಸೇವನೆ ಅಭ್ಯಾಸ ಮಾಡಿಕೊಂಡಿರುವುದನ್ನು ನೀವು ನೋಡಿರಬಹುದು. ಅದುವೇ ಎಳನೀರು. ನೈಸರ್ಗಿಕವಾಗಿ ಸಿಗುವ ಈ ಪಾನೀಯ ದೇಹದ ಒಟ್ಟಾರೆ ಆರೋಗ್ಯಕ್ಕೆ ಬಹಳನೇ ಒಳ್ಳೆಯದು. ತ್ವಚೆಯ ಕಾಂತಿಗಂತೂ ರಾಮಬಾಣ ಎಂದೇ ಹೇಳಬಹುದು. ಇದರಲ್ಲಿ ಅತ್ಯುತ್ತಮವಾದ ಹೈಡ್ರೇಟಿಂಗ್ ಗುಣಲಕ್ಷಣಗಳು ಇರುತ್ತವೆ. ಇದು ಚರ್ಮದಲ್ಲಿ ಇರುವ ವಿಷಯವನ್ನು ಹೊರಹಾಕಿ ಚರ್ಮದ ಕಾಂತಿಯನ್ನು ಕಾಪಾಡುತ್ತದೆ. ಇನ್ನು ತ್ವಚೆಯ ಆರೋಗ್ಯಕ್ಕೆ ಮುಖ್ಯವಾಗಿ ಬೇಕಾಗಿರುವ ವಿಟಮಿನ್ ಸಿ ಹಾಗೂ ಉತ್ಕರ್ಷಣ ನಿರೋಧಕ ಗುಣಗಳು ಕೂಡ ಎಳನೀರಿನಲ್ಲಿ ಸಮೃದ್ಧವಾಗಿವೆ. ಎಳನೀರನ್ನು ದಿನವೂ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಮುಖದಲ್ಲಿ ಸುಕ್ಕುಗಟ್ಟುವುದು, ಸೂಕ್ಷ್ಮ ರೇಖೆಗಳು ಕಾಣಿಸುವುದು, ಡಾರ್ಕ್ ಸರ್ಕಲ್, ಆಗಾಗ ಮೊಡವೆ ಆಗುವುದು ಇಂತಹ ಎಲ್ಲಾ ಸಮಸ್ಯೆಗಳಿಗೂ ಕೂಡ ಬಾಯ್ ಬಾಯ್ ಹೇಳ್ಬಹುದು. ಹಾಗಾಗಿ ಮುಂಜಾನೆ ಎದ್ದು ಗಂಡಸರು ಕೂಡ ತಮ್ಮ ತ್ವಚೆಯ ಬಗ್ಗೆ ಸ್ವಲ್ಪ ಗಮನ ಕೊಡಬೇಕು. ಇದರಿಂದ ಇನ್ನಷ್ಟು ಆರೋಗ್ಯವಂತರಾಗಿ ಇರಲು ಸಾಧ್ಯ.



Click it and Unblock the Notifications