Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ನಿಮ್ಮ ಮುಖವನ್ನು ನೀವು ದಿನಕ್ಕೆ ಎಷ್ಟು ಬಾರಿ ತೊಳೆದುಕೊಳ್ಳಬಹುದು..? ಇಲ್ಲಿದೆ ಪಕ್ಕಾ ಲೆಕ್ಕ..!
ಮನುಷ್ಯನ ದೇಹದ ಸೂಕ್ಷ್ಮ ಅಂಗಗಳ ಪೈಕಿ ಮುಖ ಕೂಡ ಒಂದು. ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು ಎಂದರೆ ಕೇವಲ ನೀವು ಸೌಂದರ್ಯವರ್ಧಕ ಉತ್ಪನ್ನಗಳನ್ನು ಬಳಸಿದರೆ ಮಾತ್ರ ಸಾಲದು. ಬದಲಾಗಿ ನೀವು ಮುಖದ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ಕೂಡ ತುಂಬಾ ಮುಖ್ಯವಾಗಿರುತ್ತದೆ.

ಹೀಗಾಗಿ ಮುಖವನ್ನು ಆಗಾಗ ತೊಳೆದುಕೊಳ್ಳುವ ಪ್ರಕ್ರಿಯೆಯನ್ನು ಕಡೆಗಣಿಸುವಂತಿಲ್ಲ. ಹಾಗಂತ ನೆನಪಾದಾಗಲೆಲ್ಲ ಮುಖ ತೊಳೆದುಕೊಳ್ಳುವುದು ಕೂಡ ಒಳ್ಳೆಯದಲ್ಲ. ಎಲ್ಲದಕ್ಕೂ ಮಿತಿ ಎನ್ನುವುದು ಇರುತ್ತದೆ. ಹಾಗಾದರೆ ಆರೋಗ್ಯಯುತ ತ್ವಚೆಗಾಗಿ ಮನುಷ್ಯ ದಿನಕ್ಕೆ ಎಷ್ಟು ಬಾರಿ ಮುಖ ತೊಳೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಮುಖ ತೊಳೆಯುವುದು ಏಕೆ ಮುಖ್ಯ,,?
ದಿನಕ್ಕೆ ಎಷ್ಟು ಬಾರಿ ಮುಖ ತೊಳೆದುಕೊಳ್ಳಬೇಕು ಎಂದು ತಿಳಿದುಕೊಳ್ಳುವುದಕ್ಕಿಂತ ಮುಂಚೆ ಮುಖ ತೊಳೆಯುವುದು ಏಕೆ ಮುಖ್ಯ ಎಂಬ ಪ್ರಶ್ನೆಗೆ ನಾವು ಮೊದಲು ಉತ್ತರ ಕಂಡುಕೊಳ್ಳಬೇಕು. ನಾವು ದಿನನಿತ್ಯ ಎಲ್ಲೆಂದರಲ್ಲಿ ಸಂಚರಿಸುತ್ತೇವೆ. ಸೂರ್ಯನ ಶಾಖ, ಹೊರಗಿನ ವಾತಾವರಣ ಇವೆಲ್ಲದಕ್ಕೂ ತ್ವಚೆ ಒಗ್ಗಿಕೊಳ್ಳುವುದರಿಂದ ಮಾಲಿನ್ಯಕಾರಕಗಳನ್ನು ಮುಖದಿಂದ ತೆಗೆದುಹಾಕುವುದು ಮುಖ್ಯವಾಗಿರುತ್ತದೆ. ಮುಖ ಕ್ಲೆನ್ಸಿಂಗ್ ಮಾಡುವುದರಿಂದ ನಿಮ್ಮ ಮುಖದಲ್ಲಿರುವ ಸತ್ತ ಕೋಶಗಳು ನಾಶವಾಗುತ್ತವೆ. ಹಾಗೂ ಮುಖದ ಮೇಲಿರುವ ಮಾಲಿನ್ಯಕಾರಕಗಳು ಸಹ ನಿವಾರಣೆಯಾಗುತ್ತವೆ.
ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ಮುಖ ತೊಳೆದುಕೊಳ್ಳುವಿಕೆಯಿಂದ ಹಾನಿ ಕೂಡ ಕಾದಿದೆ. ಮುಖ ತೊಳೆಯದೇ ಇದ್ದರೆ ಹೇಗೆ ಮೊಡವೆ ಮೂಡುತ್ತದೆಯೋ ಅದೇ ರೀತಿ ಮುಖ ಅತಿಯಾಗಿ ತೊಳೆದರೆ ಕೂಡ ಮೊಡವೆಗಳು ಮೂಡುತ್ತವೆ ಎಂದು ಸೌಂದರ್ಯತಜ್ಞರು ಹೇಳಿದ್ದಾರೆ. ಅತಿಯಾಗಿ ಮುಖ ತೊಳೆಯುವುದು ಬೆವರು ಗ್ರಂಥಿಗಳಿಗೆ ಹಾನಿಯುಂಟು ಮಾಡುತ್ತದೆ. ಇವುಗಳು ಮೊಡವೆ ಹಾಗೂ ಕಲೆಗಳನ್ನು ಉಂಟು ಮಾಡುತ್ತವೆ ಎನ್ನಲಾಗಿದೆ.
ದಿನಕ್ಕೆ ಎಷ್ಟು ಬಾರಿ ಮುಖ ತೊಳೆಯಬೇಕು..?
ನಿಮ್ಮ ಚರ್ಮ ಯಾವ ವರ್ಗಕ್ಕೆ ಸೇರಿದ್ದು ಎನ್ನುವುದರ ಮೇಲೆ ಇದನ್ನು ನಿರ್ಧರಿಸಬಹುದಾಗಿದೆ. ಉದಾಹರಣೆ ನೀವು ಶುಷ್ಕ ಚರ್ಮದವರಾಗಿದ್ದರೆ ದಿನಕ್ಕೆ ಒಂದರಿಂದ ಎರಡು ಬಾರಿ ಮುಖ ತೊಳೆದರೆ ಸಾಕಾಗುತ್ತದೆ. ಜಿಡ್ಡಿನಂಶಯುಕ್ತ ತ್ವಚೆಯನ್ನು ಹೊಂದಿರುವವರು ದಿನಕ್ಕೆ ಮೂರು ಬಾರಿ ಮುಖ ತೊಳೆಯುವುದು ಉತ್ತಮ ಎಂದು ಹೇಳಬಹುದು, ಹಾಗೆಯೇ ಮುಖ ತೊಳೆಯುವಾಗ ಯಾವುದೇ ಸೋಪುಗಳನ್ನು ಬಳಕೆ ಮಾಡಬಾರದು. ಯಾವುದೇ ರೀತಿಯ ಸುಗಂಧವನ್ನು ಹೊಂದಿರದ ಕ್ಲೆನ್ಸರ್ಗಳನ್ನು ಖರೀದಿಸಿ ಅದರಿಂದಲೇ ಮುಖ ತೊಳೆಯಬೇಕು. ಮುಖಕ್ಕೆ ಮೇಕಪ್ ಮಾಡಿದ ಸಂದರ್ಭದಲ್ಲಿ ನೀವು ಹೆಚ್ಚು ಬಾರಿ ಮುಖ ತೊಳೆಯಲು ಅವಕಾಶವಿದೆ.
ನೀವು ಮುಖ ತೊಳೆದ ಬಳಿಕವೂ ನಿಮಗೆ ಮೊಡವೆಯಂತಹ ಸಮಸ್ಯೆಗಳು ಕಾಡುತ್ತಿದ್ದರೆ ನೀವು ಮುಖ ತೊಳೆಯುವ ಅಭ್ಯಾಸವನ್ನು ಕಡಿಮೆ ಮಾಡುವುದು ಒಳ್ಳೆಯದು. ಹಾಗಂತ ರಾತ್ರಿ ಮಲಗುವ ಮುನ್ನ ತಪ್ಪದೇ ಮುಖ ತೊಳೆದು ಮಲಗಿಕೊಳ್ಳುವ ಅಭ್ಯಾಸ ನಿಮಗೆ ಇರಬೇಕು.
ಮೇಕಪ್ ಮಾಡಿದಾಗ ಮುಖ ಹೇಗೆ ತೊಳೆದುಕೊಳ್ಳಬೇಕು..?
ಮೇಕಪ್ ನಿಮ್ಮ ಮುಖವನ್ನು ಅಂದವಾಗಿ ಕಾಣುವಂತೆ ಮಾಡುತ್ತದೆ. ಆದರೆ ಮುಖದ ಮೇಲೆ ಮೇಕಪ್ ಹೆಚ್ಚುಕಾಲ ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಕೇವಲ ಮುಖ ತೊಳೆದ ಮಾತ್ರಕ್ಕೆ ಚರ್ಮದ ಆಳದಲ್ಲಿ ಸೇರಿದ ಮೇಕಪ್ ಹೋಗುವುದಿಲ್ಲ. ಹೀಗಾಗಿ ಮೊದಲು ನೀವು ಕೊಬ್ಬರಿ ಎಣ್ಣೆಯಿಂದ ನಿಮ್ಮ ಮುಖವನ್ನು ಚೆನ್ನಾಗಿ ಮಸಾಜ್ ಮಾಡಿಕೊಂಡು ಸಂಪೂರ್ಣ ಮೇಕಪ್ ತೆಗೆದುಕೊಳ್ಳಬೇಕು. ಇದಾದ ಬಳಿಕವೇ ನೀವು ಫೇಸ್ವಾಶ್ಗಳಿಂದ ಮುಖ ತೊಳೆದುಕೊಳ್ಳಬಹುದು.
ಜಿಡ್ಡಿನಂಶಯುಕ್ತ ತ್ವಚೆಯನ್ನು ಹೊಂದಿರುವವರು ಕೊಬ್ಬರಿ ಎಣ್ಣೆಯ ಬದಲಾಗಿ ಮಾರುಕಟ್ಟೆಯಲ್ಲಿ ಸಿಗುವ ಸೂಕ್ತವಾದ ಯಾವುದೇ ಕ್ಲೆನ್ಸಿಂಗ್ ಬಾಮ್ಗಳನ್ನು ಬಳಸಿ ಮೇಕಪ್ ತೆಗೆದುಕೊಳ್ಳಬಹುದಾಗಿದೆ. ಮುಖ ತೊಳೆದ ಬಳಿಕ ಟವೆಲ್ನಿಂದ ಮುಖವನ್ನು ಗಟ್ಟಿಯಾಗಿ ಉಜ್ಜಬಾರದು. ಮೆದುವಾಗಿ ಟವಲ್ನಿಂದ ಮುಖದ ನೀರು ಹೀರುವಂತೆ ಮಾಡಬೇಕು. ಮೃದುವಾದ ಟವೆಲ್ಗಳನ್ನೇ ಬಳಕೆ ಮಾಡಬೇಕು. ಮುಖ ಉಜ್ಜಿಕೊಳ್ಳಲೆಂದೇ ಪ್ರತ್ಯೇಕ ಟವೆಲ್ ಇಟ್ಟುಕೊಳ್ಳುವುದು ಉತ್ತಮ ಅಭ್ಯಾಸವಾಗಿದೆ.



Click it and Unblock the Notifications
