Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಚಳಿಗಾಲದಲ್ಲಿ ತ್ವಚೆ, ಕೂದಲಿನ ಆರೈಕೆಗೆ ಚರ್ಮರೋಗ ತಜ್ಞೆ ಡಾ. ಕಲಾ ವಿಮಲ ಟಿಪ್ಸ್
ಚಳಿಗಾಲದಲ್ಲಿ ಎದುರುವ ಪ್ರಮುಖ ಸಮಸ್ಯೆಯೆಂದರೆ ತ್ವಚೆ ಸಮಸ್ಯೆ, ಕೂದಲು ಒರಟಾಗುವುದು. ಈ ಬಗೆಯ ಸಮಸ್ಯೆಯನ್ನು ತಡೆಗಟ್ಟಲು ಚಳಿಗಾಲ ಪ್ರಾರಂಭವಾಗುವಾಗಲೇ ಆರೈಕೆ ಮಾಡಬೇಕು. ಹೀಗೆ ಮಾಡುವುದರಿಂದ ಚಳಿಗಾಲದಲ್ಲಿಯೂ ನೀವು ಆಕರ್ಷಕ ತ್ವಚೆ, ಕೂದಲಿನ ಸೌಂದರ್ಯ ಪಡೆಯಬಹುದು. ಚಳಿಗಾಲದಲ್ಲಿ ಫಿಲಾಗ್ರಿನ್ ಕಡಿಮೆಯಾಗುವುದು, ಚರ್ಮಕ್ಕೆ ಅಗತ್ಯ ಪ್ರೋಟಿನ್ ಸಿಗದಿರುವುದು, ಶುಷ್ಕ, ಶೀತ ಹವಾಮಾನ ಮತ್ತು ಕಡಿಮೆ ಆರ್ದ್ರತೆ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ.
ಈ ಚಳಿಗಾಲದಲ್ಲಿ ನಿಮ್ಮ ಕೂದಲನ್ನು ಹೇಗೆ ಆರೈಕೆ ಮಾಡಬೇಕೆಂದು ಹೇರ್ ಲೈನ್ ಇಂಟರ್ ನ್ಯಾಶನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್‌ನ ಚರ್ಮರೋಗ ತಜ್ಞೆ ಡಾ.ಕಲಾ ವಿಮಲ್ ಟಿಪ್ಸ್ ನೀಡಿದ್ದಾರೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಎದುರಾಗುವ ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ? ಆರೋಗ್ಯಕರ ತ್ವಚೆಯನ್ನು ಕಾಪಾಡಿಕೊಳ್ಳಲು ಹೆಚ್ಚಿನ ಕಾಳಜಿ ಹೇಗೆ ವಹಿಸಬೇಕಾಗಿದೆ? ಈ ಬಗ್ಗೆ ನಿಮಗೆ ಉಪಯುಕ್ತ ಟಿಪ್ಸ್ ನೀಡಿದ್ದಾರೆ ನೋಡಿ.

ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಸಲಹೆಗಳು
1.ನಿರಂತರವಾಗಿ ತೇವಗೊಳಿಸುವುದು: ಹೈಡ್ರೇಟಿಂಗ್ ಮಾಯಿಶ್ಚರೈಸಿಂಗ್ ಗಾಗಿ ಹೈಲುರಾನಿಕ್ ಆಮ್ಲ ಅಥವಾ ಲ್ಯಾಕ್ಟಿಕ್ ಆಮ್ಲದಂತಹ ಪದಾರ್ಥಗಳನ್ನು ತೆಗೆದುಕೊಳ್ಳಬೇಕು. ಸ್ನಾನದ ನಂತರ ತಕ್ಷಣವೇ ಇದನ್ನು ಹಚ್ಚವುದರಿಂದ ಚರ್ಮದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಬಹುದು.
2.ಜೆಂಟಲ್ ಕ್ಲೆನ್ಸಿಂಗ್: ಸ್ನಾನಕ್ಕೆ ಉಗುರುಬೆಚ್ಚಗೆ ನೀರನ್ನು ಬಳಸಬೇಕು. ಪರಿಮಳ ಮುಕ್ತ, ಸೌಮ್ಯವಾದ, ಹೈಡ್ರೇಟಿಂಗ್ ಸೋಪ್ ಅಥವಾ ಬಾಡಿ ಲೋಶನ್ ಗಳನ್ನು ಬಳಸಬೇಕು. ಚರ್ಮ ಹೆಚ್ಚು ಒಣಗುವುದು ಅಥವಾ ಒರಟಾಗುವುದನ್ನು ತಪ್ಪಿಸಲು ಜೋರಾಗಿ ಉಜ್ಜುವುದು, ಹೆಚ್ಚು ನೊರೆ ಮಾಡುವುದು ನಿಲ್ಲಿಸಬೇಕು.
3.ಸನ್ ಸ್ಕ್ರೀನ್ ರಕ್ಷಣೆ: ಮೋಡದ ಕವಿದಂತಿದ್ದರೂ ಯುವಿ ಕಿರಣಗಳು ಚರ್ಮವನ್ನು ಹಾನಿಗೊಳಿಸುತ್ತವೆ. ಸನ್ ಬರ್ನ್ ಮತ್ತು ಅಕಾಲಿಕ ವಯಸ್ಸಾದ ಚರ್ಮ ಹೊಂದುವುದರ ವಿರುದ್ಧ ಹೋರಾಡಲು ಕನಿಷ್ಠವೆಂದರೂ 30 SPF ಹೊಂದಿರುವ ಸನ್ ಸ್ಕ್ರೀನ್ ಬಳಸಬೇಕು.
4.ಹೈಡ್ರೇಟೆಡ್ ಆಗಿರಿ: ಒಳಗಿನಿಂದ ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸಾಕಷ್ಟು ನೀರು ಕುಡಿಯಬೇಕು.
5.ಮೈಂಡ್ ಫುಲ್ ಫೇಸ್ ವಾಶ್: ಅತಿಯಾದ ಶುಷ್ಕತೆಯನ್ನು (ಒಣ ಚರ್ಮ) ತಡೆಗಟ್ಟಲು ಫೋಮಿಂಗ್ ಅಲ್ಲದ ಮೈಲ್ಡ್ ಆಗಿರುವ ಫೇಸ್ ವಾಶ್ ಬಳಸಬೇಕು.
ಕೂದಲಿನ ಆರೈಕೆಗೆ ಸಲಹೆಗಳು
1.ಪೌಷ್ಟಿಕ ಆಹಾರ: ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರ ಸೇವಿಸಬೇಕು.
2.ಜೆಂಟಲ್ ಕ್ಲೆನ್ಸಿಂಗ್: ಶುಷ್ಕತೆಯನ್ನು ಎದುರಿಸಲು ಕನಿಷ್ಠ ವಾರಕ್ಕೆ ಎರಡು ಬಾರಿ ಮೈಲ್ಡ್ ಶ್ಯಾಂಪೂ ಅಥವಾ ಕಂಡಿಷನರ್ ಬಳಸಿ.
3.ನೈಸರ್ಗಿಕವಾಗಿ ಒಣಗಿಸಿ: ಒದ್ದೆಯಾದ ಕೂದನ್ನು ನೈಸರ್ಗಿಕವಾಗಿ ಒಣಗಲು ಬಿಡಿ. ಡ್ರೈಯರ್ ನಿಂದ ಒಣಗಿಸುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.
4.ಅಗಲ ಹಲ್ಲಿನ ಬಾಚಣಿಗೆ: ಕೂದಲು ಒಡೆಯುವುದು ಮತ್ತು ಹಾನಿಯನ್ನು ತಪ್ಪಿಸಲು ಅಗಲ ಹಲ್ಲಿನ ಬಾಚಣಿಗೆ ಉಪಯೋಗಿಸಿ.
5.ರಕ್ಷಣಾತ್ಮಕ ಕ್ರಮಗಳು: ಹೊರಗೆ ಹೋಗುವಾಗ ಕಠಿಣ ಹವಾಮಾನ ಪರಿಸ್ಥಿತಿಗಳಿಂದ ಕೂದಲನ್ನು ರಕ್ಷಿಸಲು ತಲೆಗೆ ಸ್ಕಾರ್ಫ್ ಅಥವಾ ಟೋಪಿ ಧರಿಸಿ.
6.ಉಗುರುಬೆಚ್ಚಗಿನ ಹೆಡ್ ವಾಶ್: ಒಣ ಮತ್ತು ಸುಕ್ಕು ಗಟ್ಟಿದ ಕೂದಲನ್ನು ತಡೆಯಲು ತಲೆ ತೊಳೆಯುವಾಗ ಉಗುರು ಬೆಚ್ಚಗಿನ ನೀರನ್ನು ಬಳಸಿ.
7.ಹೇರ್ ಸೀರಮ್ ಗಳು ಮತ್ತು ಎಣ್ಣೆ ಹಚ್ಚುವುದು: ಕೂದಲಿನ ಆರೈಕೆಗೆ ಹೇರ್ ಸೀರಮ್ ಅನ್ನು ತೆಗೆದುಕೊಳ್ಳಿ ಮತ್ತು ಹೆಚ್ಚುವರಿ ಪೋಷಣೆಗೆ ವಾರಕ್ಕೊಂದು ಬಾರಿಯಾದರೂ ಎಣ್ಣೆ ಹಚ್ಚುವ ಅಭ್ಯಾಸ ರೂಢಿಸಿಕೊಳ್ಳಿ.
ಚಳಿಗಾಲದಲ್ಲಿ ತ್ವಚೆ ಮತ್ತು ಕೂದಲಿನ ಆರೈಕೆಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಹೈಡ್ರೇಶನ್ ಮತ್ತು ಬಾಹ್ಯ ಅಂಶಗಳಿಂದ ರಕ್ಷಣೆ ಮುಖ್ಯವಾಗಿರುತ್ತದೆ.
ಆರೋಗ್ಯಕರ ಚರ್ಮ ಮತ್ತು ಸದೃಢ ಕೂದಲನ್ನು ಕಾಪಾಡಿಕೊಳ್ಳಲು ಈ ಸಲಹೆಗಳನ್ನು ಅನುಸರಿಸಬೇಕಾಗುತ್ತದೆ ಎಂದು ಹೇರ್ ಲೈನ್ ಇಂಟರ್ ನ್ಯಾಶನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್ ಟ್ರೈಕಾಲಜಿಸ್ಟ್ ಹಾಗೂ ಡರ್ಮಟಾಲಜಿಸ್ಟ್ ಡಾ.ಕಲಾ ವಿಮಲ್ ಒತ್ತಿ ಹೇಳಿದ್ದಾರೆ.



Click it and Unblock the Notifications