Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ತ್ವಚೆ ಸೌಂದರ್ಯಕ್ಕಾಗಿ ಎದೆಹಾಲು ಬಳಸುತ್ತೇನೆ ಎಂದ ಖ್ಯಾತ ಗಾಯಕಿ, ಆದರೆ ಇದರಿಂದ ಅಡ್ಡಪರಿಣಾಮಗಳೇ ಅಧಿಕ!
ಮಗುವಿಗೆ ಭೂಮಿ ಮೇಲೆ ಸಿಗುವ ಅಮೃತವೆಂದರೆ ಅದು ತಾಯಿಯ ಎದೆಹಾಲು. ತಾಯಿ ಎದೆ ಹಾಲಿಗೆ ಪರ್ಯಾಯವಾದ ಪೌಷ್ಠಿಕವಾದ ಆಹಾರ ಮತ್ತೊಂದಿಲ್ಲ. ಎದೆಹಾಲು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಂಬಾನೇ ಪ್ರಯೋಜನಕಾರಿ. ಈ ಎದೆಹಾಲಿನಲ್ಲಿ ಔಷಧೀಯ ಗುಣಗಳಿರುವುದರಿಂದ ಇದನ್ನು ಕೆಲವೊಮ್ಮೆ ಔಷಧಿಯಾಗಿ ಬಳಸುತ್ತಾರೆ.ಉದಾಹರಣೆಗೆ ಕಣ್ಣು ಕೆಂಪಾದರೆ, ಕಣ್ಣಿನಲ್ಲಿ ನೋವು ಇದ್ದರೆ ಎದೆಹಾಲು ಕಣ್ಣಿಗೆ ಹಾಕಿದರೆ ಕಣ್ಣು ನೋವು ದೂರಾಗುವುದು.

ಆದರೆ ಎದೆಹಾಲು ಬಳಸಿ ತ್ವಚೆ ಸೌಂದರ್ಯ ಹೆಚ್ಚಿಸಬಹುದು ಅಂತಾರೆ ಖ್ಯಾತ ಗಾಯಕಿ ಹಾಲ್ಸೆ. ಎರಡು ವರ್ಷದ ಮಗುವಿಗೆ ತಾಯಿಯಾಗಿರುವ ಹಾಲ್ಸೆ ಇತ್ತೀಚೆಗೆ ಗ್ರ್ಯಾಮಿ ಅವಾರ್ಡ್ ಸಂದರ್ಶನದಲ್ಲಿ ನಾನು ತ್ವಚೆ ಸೌಂದರ್ಯ ಹೆಚ್ಚಿಸಲು ಎದೆಹಾಲು ಉಪಯೋಗಿಸುತ್ತೇನೆ ಎಂಬುವುದಾಗಿ ಹೇಳಿದ್ದಾರೆ. ಎದೆಹಾಲು ತ್ವಚೆ ಆರೈಕೆಗೆ ಬಳಸುವುದರಿಂದ ಪ್ರಯೋಜನ, ಅಡ್ಡಪರಿಣಾಮಗಳೇನು ಎಂದು ನೋಡೋಣ ಬನ್ನಿ:
ಎದೆಹಾಲಿನಲ್ಲಿರುವ ಪ್ರಯೋಜನಗಳು
* ಎದೆಹಾಲಿನಲ್ಲಿ ವಿಟಮಿನ್ ಡಿ ಇರುತ್ತದೆ: ಇದು ಮಗುವನ್ನು ಸೋಂಕಿನಿಂದ ರಕ್ಷಣೆ ಮಾಡುತ್ತದೆ
* ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ
* ಎದೆಹಾಲಿನಲ್ಲಿ ಲೈಸೋಜೈಮೆ, ಲ್ಯಾಕ್ಟೋಫೆರಿನ್, ಇಂಟರ್‌ಫೆರೋನ್ ಮಗುವಿಗೆ ಸೋಂಕಿನಿಂದ ರಕ್ಷಣೆ ನೀಡುತ್ತದೆ.
* ಎದೆಹಾಲಿನಲ್ಲಿರುವ ಒಮೆಗಾ 3 ಕೊಬ್ಬಿನಂಶ ಮಗುವಿನ ನರಗಳ ಬೆಳವಣಿಗೆಗೆ ಸಹಕಾರಿಯಾಗಿದೆ.
* ಇಮ್ಯೂನೋಗ್ಲೋಬುಲಿನ್ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ತ್ವಚೆ ಆರೈಕೆಯಲ್ಲಿ ಎದೆಹಾಲು
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸನ್ ಪ್ರಕಾರ ಎದೆಹಾಲನ್ನು ಹಲವು ತ್ವಚೆ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುವುದು. ಹೆರಿಗೆಯ ಬಳಿಕ ಕೆಲವರಿಗೆ ಮೊಲೆತೊಟ್ಟಿನಲ್ಲಿ ಬಿರುಕು ಉಂಟಾಗುವುದು, ಆವಾಗ ಮೊಲೆತೊಟ್ಟಿಗೆ ಎದೆಹಾಲು ಹಚ್ಚಿದರೆ ಗಾಯ ಬೇಗನೆ ಒಣಗುವುದು, ಅಲ್ಲದೆ ಮೊಲೆತೊಟ್ಟು ಡ್ರೈಯಾಗುವುದನ್ನು ತಡೆಗಟ್ಟಬಹುದು.
ಕೆಲವರು ಈ ಸಮಸ್ಯೆಗೂ ಬಳಸುತ್ತಾರೆ
ಮಗುವಿನ ಮೈಯಲ್ಲಿ ಗುಳ್ಳೆಗಳು ಎದ್ದರೆ ಎದೆಹಾಲು ಹಚ್ಚುತ್ತಾರೆ, ಡಯಾಪರ್ ರ‍್ಯಾಶಶ್‌ಗೆ ಎದೆಹಾಲನ್ನು ಹಚ್ಚಿದರೆ ಬೇಗನೆ ಗುಣಮುಖವಾಗುವುದು. ಇನ್ನು ಕೆಲವರು ಮೊಡವೆಗೂ ಎದೆಹಾಲು ಹಚ್ಚುತ್ತಾರೆ.
ತ್ವಚೆಗೆ ಎದೆ ಹಾಲು ಹಚ್ಚುವುದರಿಂದ ಮುಖ ಕಾಂತಿ ಹೆಚ್ಚುವುದು ಅಂತಾರೆ ಹಾಲ್ಸೆ
ಇತರ ಹಾಲನ್ನು ತ್ವಚೆ ಆರೈಕೆಗೆ ಬಳಸುವುದನ್ನು ಕೇಳಿದ್ದೇವೆ. ಅದೇ ಗುಣ ಎದೆ ಹಾಲಿನಿಂದಲೂ ದೊರೆಯುವುದು. ತ್ವಚೆಯನ್ನು ಮಾಯಿಶ್ಚರೈಸರ್ ಆಗಿಡುತ್ತದೆ.
ಆದರೆ ಎದೆಹಾಲನ್ನು ತ್ವಚೆ ರಕ್ಷಣೆಗೆ ಬಳಸಲಾರಂಭಿಸಿದರೆ ಮಗುವಿಗೆ ಸಾಕಷ್ಟು ಹಾಲು ಸಿಗದಂತಾಗುವುದು, ಮಗುವಿನ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ತ್ವಚೆ ಸೌಂದರ್ಯಕ್ಕಿಂತ ಮಗುವಿನ ಆರೋಗ್ಯ ಮುಖ್ಯವಾಗಿರುವುದರಿಂದ ಇದು ಅಷ್ಟೊಂದು ಸೂಕ್ತವಾದ ವಿಧಾನವಲ್ಲ.
ಈ ಅಡ್ಡಪರಿಣಾಮಗಳೂ ಉಂಟಾಗಬಹುದು:
* ಸರಿಯಾದ ಶುಚಿತ್ವ ವಿಧಾನವನ್ನು ಬಳಸದೆ ಎದೆಹಾಲನ್ನು ಮುಖಕ್ಕೆ ಹಚ್ಚಿದರೆ ಬ್ಯಾಕ್ಟಿರಿಯಾ ಸೋಂಕು ಉಂಟಾಗಬಹುದು.
* ಕೆಲವರಿಗೆ ಅಲರ್ಜಿ ಉಂಟಾಗಿ ಊತ, ತುರಿಕೆ ಉಂಟಾಗುವುದು.
* ಮಗುವಿಗೆ ಸಾಕಷ್ಟು ಹಾಲು ಸಿಗದೆ ರೋಗನಿರೋಧಕ ಶಕ್ತಿ ಕುಂಠಿತವಾಗುವುದು.
ಆದ್ದರಿಂದ ಎದೆಹಾಲನ್ನು ಮಗುವಿನ ಆರೈಕೆಗೆ ಮಾತ್ರ ಬಳಸಿ, ಇದರಲ್ಲೂ ತ್ವಚೆ ಆರೈಕೆ ಮಾಡಲಾರಂಭಿಸಿದರೆ ತಮ್ಮ ಮುದ್ದು ಕಂದನ ಆರೋಗ್ಯಕ್ಕೆ ಒಳ್ಳೆಯದಲ್ಲ, ಈ ಕುರಿತು ನಿಮ್ಮ ಅಭಿಪ್ರಾಯ ಕಮೆಂಟ್ ಮಾಡಿ.



Click it and Unblock the Notifications

