Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಯಾರಪ್ಪಾ ಸಾನ್ವಿ ಸುದೀಪ್ ಬ್ಲೌಸ್ ಇಷ್ಟೊಂದು ಕೆಟ್ಟದಾಗಿ ಸ್ಟಿಚ್ಚಿಂಗ್ ಮಾಡಿದ್ದು?
ಸಾನ್ವಿ ಸುದೀಪ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ಅವರ ಅಜ್ಜಿಯ (ಸುದೀಪ್ ಅವರ ತಾಯಿಯ)ಸೀರೆ ಧರಿಸಿ ಬಂದಿದ್ದರು. ಸಾನ್ವಿ ಸುದೀಪ್ ಸೀರೆ ಧರಿಸಿ ಬಂದಿದ್ದನ್ನು ನೋಡಿ ಅವರನ್ನು ಒಂದಿಷ್ಟು ಮಂದಿ ಹಾಡಿ ಹೊಗಳಿದ್ದರು, ಸೀರೆಯಲ್ಲಿ ತುಂಬಾ ಲಕ್ಷಣವಾಗಿಯೇ ಬಂದಿದ್ದರು, ಸೀರೆ ಅವರ ಲುಕ್‌ಗೆ ವಿಶೇಷ ಲುಕ್ ನೀಡಿತ್ತು, ಆದರೆ ಅವರು ಧರಿಸಿದ ಬ್ಲೌಸ್ ಮಾತ್ರ ಫ್ಯಾಷನ್ angleನಿಂದ ನೋಡಿದಾಗ ಅಯ್ಯೋ ಅನಿಸಿತು.

ಡ್ರೆಸ್ಸಿಂಗ್ ಸ್ಟೈಲ್‌ನಿಂದ ಫ್ಯಾಷನ್ ಲೋಕವನ್ನು ತಿರುಗಿ ನೋಡುವಂತೆ ಸುದೀಪ್‌ರ ಮಗಳು ಏಕೆ ಈ ರೀತಿಯ ಬ್ಲೌಸ್ ಧರಿಸಿದರು?
ಆ ಸೀರೆ ಅಜ್ಜಿಯದು ಎಂದು ಅವರೇ ಹೇಳಿಕೊಂಡಿದ್ದಾರೆ, ಆದರೆ ಬ್ಲೌಸ್ ಪ್ಯಾಟ್ರನ್ ಮಾತ್ರ ಈಗ ಅಜ್ಜಿಯರು ಕೂಡ ಧರಿಸಲು ಹಿಂದೇಟು ಹಾಕುವಂತಿತ್ತು, ಯಾರಪ್ಪಾ ಅವರ ಬ್ಲೌಸ್ ಡಿಸೈನರ್? ಹಳ್ಳಿಯ ಒಬ್ಬ ಸಾಮಾನ್ಯ ಟೈಲರ್‌ಗೆ ಕೊಟ್ಟರೂ ಇದಕ್ಕಿಂತ ಚೆನ್ನಾಗಿ ಬ್ಲೌಸ್ ಸ್ಟಿಚ್ ಮಾಡಿಕೊಡ್ತಾ ಇದ್ದರು. ದೊಡ್ಡ ದೊಡಡ್ ಸೆಲೆಬ್ರಿಟಿಗಳ ಡ್ರೆಸ್ ಸ್ಟಿಚ್ ಮಾಡಲು ಅವರದ್ದೇ ಡಿಸೈನರ್‌ಗಳ ಟೀಂ ಇರುತ್ತದೆ. ಪ್ರತಿಯೊಂದು ಡ್ರೆಸ್ಸಿಂಗ್ ಅಷ್ಟೊಂದು ಚೆನ್ನಾಗಿ ಸ್ಟಿಚ್ ಮಾಡಿ ಕೊಡುತ್ತಾರೆ, ಅದಕ್ಕೆ ಅವರು ಹಾಕುವ ಚಾರ್ಜ್ ಕೂಡ ಅಷ್ಟೇ ದುಬಾರಿಯಾಗಿರುತ್ತದೆ. ಆದರೆ ಈ ಸೀರೆ ಬ್ಲೌಸ್ ನೋಡಿದಾಗ ಇನ್ನೂರು.. ಮುನ್ನೂರು ರುಪಾಯಿಗೆ ಅದಕ್ಕಿಂತ ಸ್ಟೈಲಿಷ್ ಆಗಿ ಬ್ಲೌಸ್ ಹೊಲಿದು ಕೊಡುವ ಟೈಲರ್‌ಗಳು ಸಿಗುತ್ತಾರೆ.
ಅತ್ಯಾಕರ್ಷಕ ಡ್ರೆಸ್ಸಿಂಗ್ ಮೂಲಕ ಗಮನ ಸೆಳೆಯುವ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಈ ವಯಸ್ಸಿನಲ್ಲಿ ಎಂಥ ಆಕರ್ಷಕ ಡ್ರೆಸ್ಸಿಂಗ್ ಸ್ಟೈಲ್? ಬಿಗ್‌ಬಾಸ್‌ನಲ್ಲಿ ಅಂತೂ ಕಿಚ್ಚನ ಪಂಚಾಯಿತಿ ಎಷ್ಟು ಮುಖ್ಯವೋ ಅಷ್ಟೇ ಕಾತರದಿಂದ ವೀಕೆಂಡ್‌ನಲ್ಲಿ ಕಿಚ್ಚನ ಲುಕ್‌ಗೂ ಕಾಯುತ್ತಾರೆ ಅಭಿಮಾನಿಗಳು. ಅವರು ಧರಿಸುವ ಪ್ರತಿಯೊಂದು ಡ್ರೆಸ್ ಒಂದಕ್ಕಿಂತ ಒಂದು ಸೂಪರ್ ಅನಿಸುವಂತಿರುತ್ತದೆ, ಈ ಕಾರಣದಿಂದಲೇ ಬಿಗ್‌ಬಾಸ್ ಸ್ಪರ್ಧಿಗಳು ನಿಮ್ಮ ಜಾಕೆಟ್ ತುಂಬಾ ಇಷ್ಟವಾಗಿದೆ ಪ್ಲೀಸ್ ಕೊಡಿ ಎಂದು ಕೇಳಿದ್ದೂ ಇದೆ, ಕಿಚ್ಚ ಅಷ್ಟೇ ಪ್ರೀತಿಯಿಂದ ಕಳಿಸಿದ್ದೂ ಇದೆ. ಸುದೀಪ್ ಅವರಿಗೆ ಇಷ್ಟೊಂದು ಚೆನ್ನಾಗಿ ಡ್ರೆಸ್ಸಿಂಗ್ ಮಾಡುವ ಟೀಂ ಇರುವಾಗ ಸಾನ್ವಿ ಅವರ ಡಿಸೈನರ್‌ಗಳು ಹೀಗ್ಯಾಕೆ ಸ್ಟಿಚ್ ಮಾಡಿದ್ದಾರೆ ಎಂದನಿಸುವುದು.
ದೊಗಳೆ ಬ್ಲೌಸ್
ಯಾವುದೇ ಸ್ಪೆಷಲ್ ಎಂಬ್ರಾಯಡ್ರಿ ಅಥವಾ ವರ್ಕ್ ಏನೂ ಇಲ್ಲದ ಸಿಂಪಲ್ ಬ್ಲೌಸ್, ಅದನ್ನು ನೀಟಾಗಿ ಸ್ಟಿಚ್ ಮಾಡಬಹುದಿತ್ತು, ಆದರೆ ಬ್ಲೌಸ್ ತುಂಬಾನೇ ದೊಗಳೆ-ದೊಗಳೆ,ಈಗ ಅಜ್ಜಿಂದಿರು ಕೂಡ ಹೀಗೆ ಸ್ಟಿಚ್ ಮಾಡಿ ಕೊಟ್ಟರೆ ಇದೇನಪ್ಪಾ ಹೀಗೆ ಸ್ಟಿಚ್ ಮಾಡಿದ್ದೀಯ ಎಂದು ಕೇಳಬಹುದು. ದೊಗಳೆ-ದೊಗಳೆ ಬ್ಲೌಸ್ ಸಾನ್ವಿ ಅವರ ಸೀರೆ ಲುಕ್ ಅನ್ನೇ ಹಾಳು ಮಾಡಿದೆ.
ಸೀರೆ ತುಂಬಾನೇ ಆಕರ್ಷಕವಾಗಿತ್ತು, ಉಟ್ಟ ರೀತಿಯೂ ಚೆನ್ನಾಗಿತ್ತು, ಆದರೆ ಬ್ಲೌಸ್‌ನಿಂದಾಗಿ ಲುಕ್ ಹಾಳಾಗಿದೆ
ಬ್ಲೌಸ್ ಯಾರೋ ಈಗಷ್ಟೇಸ್ಟಿಚ್ಚಿಂಗ್ ಕಲೀತಾ ಇರುವವರು ಹೊಲಿದಂತಿದೆ, ಇಂದಿಷ್ಟೂ ಸ್ಟಿಚ್ ಚೆನ್ನಾಗಿಲ್ಲ, ಪ್ರಿಯಾ ಸುದೀಪ್ ಅವರು ಕೂಡ ಡ್ರೆಸ್ಸಿಂಗ್ ಸೆನ್ಸ್‌ಗೆ ತುಂಬಾ ಗಮನ ಕೊಡುತ್ತಾರೆ, ಸಾನ್ವಿ ಸುದೀಪ್ ಅವರ ಡ್ರೆಸ್ಸಿಂಗ್ ಕೂಡ ಮಾಡರ್ನ್‌ನಲ್ಲಿ ಆಕರ್ಷಕವಾಗಿರುತ್ತದೆ, ಆದರೆ ಟ್ರೆಡಿಷಿಯನ್ ಡ್ರೆಸ್‌ನಲ್ಲಿಈ ಬ್ಲೌಸ್ ಹೇಗೆ ಒಪ್ಪಿಕೊಂಡರಪ್ಪಾ? ಹೆಣ್ಮಕ್ಕಳೇ ಈ ಬ್ಲೌಸ್ ಡಿಸೈನ್‌ಗೆ ಬಗ್ಗೆ ನಿಮ್ಮ ಅಬಿಪ್ರಯ ಕಮೆಂಟಿಸಿ.............



Click it and Unblock the Notifications
