Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ನಿತ್ಯ ಶ್ರೀಗಂಧದ ಎಣ್ಣೆಯನ್ನು ತ್ವಚೆಗೆ ಹಚ್ಚೋದ್ರಿಂದ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ!
ಶ್ರೀಗಂಧದ ಎಣ್ಣೆ ವಿಶ್ವದ ಅತ್ಯಂತ ದುಬಾರಿ ಎಣ್ಣೆಗಳಲ್ಲಿ ಒಂದಾಗಿದೆ. ಹಿಂದಿನ ಕಾಲದಿಂದಲೂ ಇದನ್ನು ಬಳಕೆ ಮಾಡಲಾಗುತ್ತಿದೆ. ಶ್ರೀಗಂಧದ ಎಣ್ಣೆಯನ್ನು ಸುಗಂಧ ದ್ರವ್ಯಗಳು, ಸೌಂದರ್ಯವರ್ಧಕಗಳು ಮತ್ತು ತ್ವಚೆ ಉತ್ಪನ್ನಗಳಾಗಿಯೂ ಬಳಕೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ನಾವು ಶ್ರೀಗಂಧವನ್ನು ತೇಯ್ದು ಮುಖಕ್ಕೆ ಹಚ್ಚಿ ಸೌಂದರ್ಯ ಹೆಚ್ಚಿಸೋ ಬಗ್ಗೆ ಕೇಳಿರ್ತೀವಿ. ಆದರೆ ಶ್ರೀಗಂಧದ ಎಣ್ಣೆಯನ್ನು ಬಳಸೋದ್ರಿಂದ ಕೂಡ ತಮ್ಮ ತ್ವಚೆಯನ್ನು ಮತ್ತಷ್ಟು ಅಂದಗಾಣಿಸಬಹುದು. ಹಾಗಾದ್ರೆ ಶ್ರೀಗಂಧದ ಎಣ್ಣೆಯ ಬಳಕೆಯಿಂದ ತ್ವಚೆಯ ಮೇಲೆ ಯಾವ ರೀತಿ ಆರೋಗ್ಯಕ ಪರಿಣಾಮ ಬೀಳುತ್ತೆ ಅನ್ನೋದನ್ನು ತಿಳಿಯೋಣ.
1. ಚರ್ಮವನ್ನು ಪುನರ್ ಯೌವನಗೊಳಿಸುತ್ತದೆ
ಶ್ರೀಗಂಧದ ಎಣ್ಣೆಯು ನಿಮ್ಮ ತ್ವಚೆಯನ್ನು ಹೈಡ್ರೇಟ್ ಗೊಳಿಸಲು ಸಹಕರಿಸುತ್ತದೆ. ಶ್ರೀಗಂಧದ ಎಣ್ಣೆಯು ಚರ್ಮವನ್ನು ಬಿಗಿಗೊಳಿಸುತ್ತದೆ. ಸೂಕ್ಷ್ಮವಾದ ರೇಖೆಗಳು ಮತ್ತು ಚರ್ಮದ ಸುಕ್ಕನ್ನು ಕಡಿಮೆ ಮಾಡುತ್ತದೆ. ಇದರಿಂದ ನೀವು ಮತ್ತಷ್ಟು ಸುಂದರವಾಗಿ ಕಾಣಬಹುದು. ನಿಮ್ಮ ಚರ್ಮ ಕಾಂತಿಯುತವಾಗಿ ಹೊಳೆಯಲು ಇದು ಸಹಕರಿಸುತ್ತದೆ. ಪ್ರತಿ ನಿತ್ಯ ಶ್ರೀಗಂಧದ ಎಣ್ಣೆಯನ್ನು ಮುಖಕ್ಕೆ ಹಚ್ಚಿದ್ರೆ ಒಳ್ಳೆಯದು.

2. ಮೊಡವೆ ತೆಗೆದು ಹಾಕಲು ಸಹಕರಿಸುತ್ತದೆ
ಅನೇಕರಿಗೆ ಮೊಡವೆ ಸಮಸ್ಯೆ ಹೆಚ್ಚಾಗಿ ಕಾಣುತ್ತದೆ. ಇಂತವರು ಒಂದು ಟೀಚಮಚ ಗಂಧದ ಪುಡಿ/ಎಣ್ಣೆಯನ್ನು ಒಂದು ಚಮಚ ಅಲೋವೆರಾ ಜೆಲ್ ಮತ್ತು ಎರಡು ಚಮಚ ಮೊಸರಿನೊಂದಿಗೆ ಬೆರೆಸಿ ಉತ್ತಮವಾದ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ. ನಂತರ ಯಾವ ಜಾಗದಲ್ಲಿ ಮೊಡವೆಗಳಿವೆಯೋ ಆ ಜಾಗಕ್ಕೆ ಹಚ್ಚಿರಿ. 30 ನಿಮಿಷಗಳ ಕಾಲ ಬಿಡಿ. ನಂತರ ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ. ಇದರಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲಲು ಮತ್ತು ಮೊಡವೆ ಹಾಗೂ ಕಪ್ಪು ಚುಕ್ಕೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.
3. ಪಿಗ್ಮೆಂಟೇಷನ್, ಕಪ್ಪು ಕಲೆಗಳನ್ನು ತೊಲಗಿಸುತ್ತದೆ
ಒಂದು ಚಮಚ ಗಂಧದ ಪುಡಿಗೆ ಒಂದು ಚಮಚ ಮೊಸರು, ಜೇನುತುಪ್ಪ, ಅರಿಶಿನ ಪುಡಿ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ ಮತ್ತು ಮುಖದ ಮೇಲೆ ಹಚ್ಚಿರಿ. ನಂತರ ಇದನ್ನು 15-20 ನಿಮಿಷಗಳ ಕಾಲ ಬಿಡಿ ಮತ್ತು ನಂತರ ಚೆನ್ನಾಗಿ ತೊಳೆಯಿರಿ. ಈ ಫೇಸ್ ಪ್ಯಾಕ್ ಸೂರ್ಯನಿಂದಾದ ಕಪ್ಪು ಕಲೆಗಳು, ಪಿಗ್ಮೆಂಟೇಷನ್ ತೊಲಗಿಸುತ್ತದೆ.
4. ಚರ್ಮಕ್ಕೆ ಹೊಳಪು ನೀಡುತ್ತದೆ
ನಿಮ್ಮ ಚರ್ಮದ ಕಾಂತಿ ಕುಂದಿದ್ದರೆ ಈ ಫೇಸ್ ಪ್ಯಾಕ್ ಬಳಸುವ ಮೂಲಕ ಚರ್ಮವನ್ನು ಹೊಳೆಯುವ ಹಾಗೆ ಮಾಡಬಹುದು. ಮೊದಲಿಗೆ ಒಂದು ಟೀ ಚಮಚ ಶ್ರೀಗಂಧದ ಪುಡಿಯನ್ನು ಒಂದು ಟೀಚಮಚ ಬೇಸನ್ ಹಿಟ್ಟು, ಅರಿಶಿನ ಪುಡಿ ಮತ್ತು ರೋಸ್ ವಾಟರ್ ಸೇರಿಸಿ ನುಣ್ಣಗೆ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿರಿ. ಸುಮಾರು 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ನಂತರ ಚೆನ್ನಾಗಿ ತೊಳೆಯಿರಿ. ಈ ಫೇಸ್ ಪ್ಯಾಕ್ ಅನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮದ ವಿನ್ಯಾಸ, ಹೊಳಪು ಮತ್ತು ಉತ್ತಮ ಮೈಬಣ್ಣವನ್ನು ಪಡೆಯಲು ಸಹಾಯ ಮಾಡುತ್ತದೆ.
5. ಉರಿಯೂತವನ್ನು ಕಡಿಮೆ ಮಾಡುತ್ತದೆ.
ಶ್ರೀಗಂಧವು ಮೊಡವೆಗಳಿಂದ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶ್ರೀಗಂಧದ ಎಣ್ಣೆಯು ಸುಮಾರು 30 ಪ್ರತಿಶತದಷ್ಟು ಕ್ಸಿಮೆನಿನಿಕ್ ಆಮ್ಲವನ್ನು ಹೊಂದಿದೆ. ಇದು ಶಕ್ತಿಶಾಲಿ ಉರಿಯೂತದ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಕ್ಸಿಮೆನಿನಿಕ್ ಆಮ್ಲವು ಬಿರುಕುಗಳಿಂದ ಉಂಟಾಗುವ ನೋವಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಶ್ರೀಗಂಧವನ್ನು ಬಳಸೋದ್ರಿಂದ ಮುಖಕ್ಕೆ ಹತ್ತು ಹಲವಾರು ಪ್ರಯೋಜನಗಳಿದೆ. ಶ್ರೀಗಂಧ ಅಥವಾ ಅದರ ಎಣ್ಣೆಯನ್ನು ಬಳಸೋದ್ರಿಂದ ಚರ್ಮ ಇನ್ನಷ್ಟು ಮೃದುವಾಗಿ, ಆರೋಗ್ಯವಾಗಿ ಹಾಗೂ ಕಾಂತಿಯುತವಾಗಿ ಕಾಣುತ್ತದೆ.



Click it and Unblock the Notifications
