Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮದುವೆ ಗೌನ್ ಆಲ್ಟ್ರಾರೇಷನ್ ಮಾಡಿ ಧರಿಸಿದ ಸಮಂತಾ ಹೀಗೆ ಹೇಳಿದ್ದಾರೆ....
ಸಮಂತಾ ಅಂದು ಮದುವೆಗೆ ಧರಿಸಿರುವ ಗೌನ್ ಅನ್ನು ಮತ್ತೆ ಧರಿಸಿ ಎಲ್ಲರು ಹುಬ್ಬೇರುವಂತೆ ಮಾಡಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಡ್ರೆಸ್ ಅನ್ನು ಮರು ಬಳಕೆ ಮಾಡಲ್ಲ, ಈಗ ಈಗ ಮರು ಬಳಕೆಯ ಟ್ರೆಂಡ್ ಮಾಡ್ತಾ ಇದ್ದಾರೆ.
ಅವಾರ್ಡ್ ಫಂಕ್ಷನ್‌ಗೆ ಹೋಗುವಾ ಆಲಿಯಾ ಭಟ್ ಮದುವೆ ಸೀರೆ ಧರಿಸಿದ್ದರು, ಅಷ್ಟಕ್ಕೆ ಅವರ ಡ್ರೆಸ್ಸಿಂಗ್ ಫ್ಯಾಷನ್ ಲೋಕದ ಗಮನ ಸೆಳೆದಿತ್ತು. ಆದರೆ ಸಮಂತಾ ಮದುವೆ ಗೌನ್ ಧರಿಸಿರುವುದು ವಿಶೇಷವಾಗಿದೆ, ಏಕೆಂದು ಮದುವೆಯಲ್ಲಿ ಅಂದು ಖುಷಿಯಿಂದ ಧರಿಸಿದಾಗ ಅವರ ಅಂದ ಹೊಗಳಲು ನಾಗಚೈತನ್ಯ ಜೊತೆಗಿದ್ದರು, ಆದರೆ ಈಗ ವಿಚ್ಛೇದನ ಬಳಿಕ ದೂರಾಗಿದ್ದಾರೆ, ಆದರೆ ಈಗ ಸಮಂತಾ ಆ ಮದುವೆಯ ಗೌನ್ ಧರಿಸಿದ್ದಾರೆ.

ಆಲ್ಟ್ರಾರೇಷನ್ ಮಾಡಿ ಗೌನ್ ಧರಿಸಿ ಪೋಸ್
ಆವಾಗ ಅದು ಬಿಳಿ ಬಣ್ಣದಲ್ಲಿತ್ತು ಅದೀಗ ಕಪ್ಪು ಬಣ್ಣಕ್ಕೆ ಆಲ್ಟ್ರಾರೇಷನ್ ಮಾಡಲಾಗಿದೆ. ನಾನು ಹಳೆಯ ಡ್ರೆಸ್‌ಗಳನ್ನು ಆಲ್ಟ್ರಾರೇಷನ್ ಮಾಡಿ ಬಳಸುತ್ತೇನೆ ಎಂದು ಬರೆದುಕೊಂಡಿದ್ದಾರೆ, ಆದರೆ ಕೆಲವರು ಆಕೆಯ ಸೇಡಿದು ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.
ಅವರು ಹೇಳದಿದ್ದರೆ ಗುರುತೇ ಸಿಗುತ್ತಿರಲಿಲ್ಲ
ಅವರು ಈ ಗೌನ್ ನನ್ನ ಅಚ್ಚುಮೆಚ್ಚಿನ ಗೌನ್ ಎಂದು ಹೇಳಿಕೊಂಡಿದ್ದು ಇದನ್ನು ತಯಾರಿಸಿದ ಫ್ಯಾಷನ್ ಡಿಸೈನ್‌ರ್‌ಗಳನ್ನು ಹೊಗಳಿದ್ದಾರೆ. ಅವರ ಈ ಐಡಿಯಾ ಖಂಡಿತ ಹಲವಿರಗೆ ತಮ್ಮಲ್ಲಿರುವ ಹಳೆಯ ದುಬಾರಿ ಡ್ರೆಸ್‌ಗಳನ್ನು ಸ್ವಲ್ಪ ಆಲ್ಟ್ರಾರೇಷನ್ ಮಾಡಿದರೆ ಮರು ಬಳಕೆ ಮಾಡಬಹುದು ಎಂಬ ಐಡಿಯಾ ಕೊಟ್ಟಿದೆ. ಕೆಲವೊಂದು ಡ್ರೆಸ್‌ಗಳನ್ನು ತುಂಬಾ ಇಷ್ಟಪಟ್ಟು ದುಬಾರಿ ಬೆಲೆ ಕೊಟ್ಟು ಖರೀದಿಸುತ್ತೇವೆ, ಆದರೆ ಅದನ್ನು ಹೆಚ್ಚು ಬಳಸಲು ಸಾಧ್ಯವಾಗಲ್ಲ, ಒಂದೆರಡು ಫಂಕ್ಷನ್‌ಗೆ ಬಳಸಿದ ಬಳಿಕ ಕಬೋರ್ಡ್‌ನ ಮೂಲೆ ಸೇರುತ್ತದೆ. ಈ ರೀತಿ ಐಡಿಯಾ ಮಾಡಿದರೆ ನೀವು ನಿಮ್ಮ ಡ್ರೆಸ್‌ಗಳನ್ನೂ ಮರು ಬಳಕೆ ಮಾಡಬಹುದು.
ಇತ್ತೀಚೆಗೆ ಒಂದೇ ವೇದಿಕೆಯಲ್ಲಿ ಕಾಣಿಸಿದ್ದ ಸಮಂತಾ-ನಾಗಚೈತನ್ಯ
ಅಭಿಮಾನಿಗಳ ಅಚ್ಚುಮೆಚ್ಚಿನ ಜೋಡಿಯಾಗಿತ್ತು ಈ ಜೋಡಿ, ಅಷ್ಟು ವರ್ಷ ಪ್ರೀತಿಸಿ ಮದುವೆಯಾಗಿ ಮೂರೇ ವರ್ಷಕ್ಕೆ ಒಬ್ಬರಿಗೊಬ್ಬರು ಬೇಡವಾದರು ಎಂದು ತಿಳಿದಾಗ ಜನರಿಗೆ ಅಚ್ಚರಿ ಉಂಟಾಗಿತ್ತು, ಇವರ ಅಭಿಮಾನಿಗಳಿಗೆ ಬೇಸರವಾಗಿತ್ತು, ಮತ್ತೆ ಈ ಜೋಡಿ ಒಂದಾಗಲಿ ಎಂದು ಬಯಸಿದ್ದರು, ಆದರೆ ಇಬ್ಬರು ತಮ್ಮದೇ ಹಾದಿಯಲ್ಲಿ ಹೋಗಲಾರಂಭಿಸಿದರು, ಅದಾದ ಬಳಿಕ ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು.
ಸಮಂತಾರನ್ನು ಬಾಧಿಸಿದ ಆರೋಗ್ಯ ಸಮಸ್ಯೆ
ಕೆಲವೊಮ್ಮೆ ದೇವರು ನೋವು ಒಂದರ ಮೇಲೆ ಒಂದರಂತೆ ಕೊಡುತ್ತಾನೆ ಎಂಬುವುದು ಸಮಂತಾ ವಿಷಯದಲ್ಲಿ ನಿಜವಾಗಿದೆ. ವಿಚ್ಚೇದನದ ನೋವಿನಿಂದ ಹೊರ ಬರುವ ಮುನ್ನವೇ ಅಟೋಇಮ್ಯೂನೆ ಕಾಯಿಲೆ ಅವರನ್ನು ತುಂಬಾ ಬಾಧಿಸಿರು. ಸಮಂತಾ ಎಂಬ ನಟಿ ಚಿತ್ರ ಜಗತ್ತಿನಿಂದ ದೂರಾಗಬಹುದು ಎಂದು ಭಾವಿಸಿದ್ದರು, ಆದರೆ ಗಟ್ಟಿಗಿತ್ತಿ ಸಮಂತಾ. ತಮ್ಮ ಮನೋಧೈರ್ಯದಿಂದ ಆ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದಾರೆ. ಎದ್ದು ನಡೆದಾಡಲು ಕಷ್ಟ ಪಡುತ್ತಿದ್ದ ಸಮಂತಾ ಇದೀಗ ಆರೋಗ್ಯವಂತರಾಗಿ ಕಾಣುತ್ತಿದ್ದಾರೆ. ವ್ಯಾಯಾಮ , ಫಿಟ್ನೆಸ್ ಅಂತ ಗಮನ ಹರಿಸಿದ್ದಾರೆ. ಸಿನಿಮಾದಿಂದ ತುಸು ಬ್ರೇಕ್ ಪಡೆದಿರುವ ಸಮಂತಾ ಈಗ ಮೊದಲಿನಂತೆಯೇ ಲವಲವಿಕೆಯಿಂದ ಕಾಣಿಸಿಕೊಳ್ಳುತ್ತಿದ್ದಾರೆ.
ಅವರ ಒಂದೊಂದು ಫೋಟೋ ಶೂಟ್ ವೈರಲ್ ಆಗುತ್ತೆ
ದಕ್ಷಿಣ ಭಾರತದಲ್ಲಿ ಸಮಂತಾ ನಟಿಗಿರುವ ಕ್ರೇಝೇ ಬೇರೆ. ಅವರ ಒಂದೊಂದು ಫೋಟೋ ಶೂಟ್‌ಗೆ ಸಿಗುವ ಪ್ರತಿಕ್ರಿಯೆ ಅದಕ್ಕೆ ಸಾಕ್ಷಿ, ಫ್ಯಾಷನಬಲ್ ಡ್ರೆಸ್ಸಿಂಗ್ ಮೂಲಕ ಗಮನ ಸೆಳೆಯುತ್ತಿರುತ್ತಾರೆ, ಆ ಫೋಟೋ ವೈರಲ್ ಆಗುತ್ತವೆ, ಆದರೆ ಈ ಗೌನ್ ಫೋಟೋ ಶೂಟ್ ಮಾತ್ರ ತುಂಬಾನೇ ಗಮನ ಸೆಳೆದಿದೆ. ಈ ಡ್ರೆಸ್‌ನಂತೆಯೇ ತಮ್ಮೆಲ್ಲಾ ಕಹಿ ನೆನಪು ಮರೆತುಈ ಜೋಡಿ ಮತ್ತೆ ಒಂದಾದರೆ ಎಷ್ಟು ಚೆನ್ನಾಗಿತ್ತು ಎಂದು ಯೋಚಿಸುವಂತಿದೆ ಮಾಡಿದೆ ಇವರ ಈ ಗೌನ್ ಫೋಟೋಶೂಟ್.



Click it and Unblock the Notifications
