Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಅಂಬಾನಿ ಮದುವೆಗೆ ಬಂದಿಳಿದ ರಾಕಿಬಾಯ್ ಹೊಸ ಹೇರ್‌ಸ್ಟೈಲ್:ಯಾವ ಹಾಲಿವುಡ್ ನಟರಿಗಿಂತ ಕಡಿಮೆಯಿಲ್ಲ ರಾಕಿ ಬಾಯ್
ಅಂಬಾನಿ ಮದುವೆ ಕಾರ್ಯಕ್ರಮಕ್ಕೆ ಹಾಲಿವುಡ್, ಬಾಲಿವುಡ್ ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ. ನಮ್ಮ ಕರ್ನಾಟಕದ ಸ್ಯಾಂಡಲ್‌ವುಡ್ ನಟ ರಾಕಿ ಬಾಯ್‌ಗೂ ಆಮಂತ್ರಣವಿದೆ, ಹೀಗಾಗಿ ಯಶ್ ಮುಂಬಯ ತಲುಪಿದ್ದು ಇದೀಗ ಯಶ್ ನ್ಯೂ ಹೇರ್ ಸ್ಟೈಲ್ ವೈರಲ್ ಆಗಿದೆ, ಹಾಲಿವುಡ್ ಖದರ್‌ನಲ್ಲಿ ಮಿಂಚಿದ್ದಾರೆ ನಮ್ಮ ರಾಕಿ ಬಾಯ್.

ರಾಕಿ ಬಾಯ್ ಹೊಸ ಹೇರ್ ಸ್ಟೈಲ್ ನೀಡಿದವರು ವಾವ್, ವಾವ್ ಅಂತಿದ್ದಾರೆ
ಹೌದು ರಾಕಿ ಬಾಯ್ ಹೊಸ ಹೇರ್ ಸ್ಟೈಲ್ ತುಂಬಾನೇ ಟ್ರೆಂಡ್ ಆಗುವುದರಲ್ಲಿ ನೋ ಡೌಟ್, ಯಶ್‌ನ ಹೊಸ ಲುಕ್ ನೋಡಿದವರು ಫುಲ್ ಫಿದಾ ಅಷ್ಟೊಂದು ಆಕರ್ಷಕವಾಗಿದೆ ಈ ಹೇರ್ ಸ್ಟೈಲ್, ಉದ್ದ ಕೂದಲು ಬಿಟ್ಟಾಗ ಹೆಚ್ಚಿನವರು ಆ ಹೇರ್ ಸ್ಟೈಲ್ ಕಾ ಪಿ ಮಾಡಿದ್ದರು, ಆದರೆ ಕೆಲವರು ಉದ್ದ ಕೂದಲು ಬಿಡಲು ಹಿಂದೇಟು ಹಾಕಿ ಆ ಹೇರ್ ಸ್ಟೈಲ್ ಮಾಡಿಸಿರಲಿಲ್ಲ, ಆದರೆ ಈ ಹೇರ್ ಸ್ಟೈಲ್ ಹಾಗಲ್ಲ, ಶಾರ್ಟ್ ಹೇರ್ ಅವರಿಗೆ ಕ್ಲಾಸಿ ಲುಕ್‌ನ ಹೇರ್ ಸ್ಟೈಲ್.
ಗಡ್ಡಕ್ಕೂ ಈ ಹೇರ್ ಸ್ಟೈಲ್ ಒಕೆ, ಗಡ್ಡ ಇಲ್ಲದಿದ್ದರೂ ಈ ಹೇರ್ ಸ್ಟೈಲ್ ಒಕೆ
ಯಶ್ ಅವರು ತುಂಬಾ ವರ್ಷದಿಂದ ಗಡ್ಡದಲ್ಲಿಯೇ ಗಮನ ಸೆಳೆಯುತ್ತಿದ್ದಾರೆ, ಆದರೆ ಈಗ ಮಾಡಿಸಿರುವ ಹೇರ್ ಕಟ್ ಇದೆಯೆಲ್ಲಾ ಅದು ಗಡ್ಡ ಬಿಟ್ಟರೂ ಒಕೆ ಹಾಗಿದೆ ಈ ಹೇರ್ ಸ್ಟೈಲ್, ಅಲ್ಲದೆ ಶಾರ್ಟ್ ಹೇರ್ ಬೇರೆ ಮಾಡಿಸಿದ್ದಾರೆ ಹಾಗಾಗಿ ಈ ಹೇರ್ ಸ್ಟೈಲ್ ತುಂಬಾನೇ ಟ್ರೆಂಡ್ ಆಗುವುದರಲ್ಲಿ ನೋ ಡೌಟ್.
ರಾಕಿ ಬಾಯ್ ಸ್ಟೈಲ್ ಅನ್ನು ಕರ್ನಾಟಕ ಮಾತ್ರವಲ್ಲ ಇಡೀ ಭಾರತದ ಸಿನಿ ಪ್ರಿಯರು ಗಮನಿಸುತ್ತಾರೆ
ಕೆಜಿಎಫ್ ಬಳಿಕ ಪ್ಯಾನ್ ಇಂಡಿಯಾ ನಟನಾಗಿ ಗುರುತಿಸಿಕೊಂಡಿರುವ ನಟ ಯಶ್ ತಮ್ಮ ನಟನೆಯಿಂದ ಮಾತ್ರವಲ್ಲ ಸ್ಟೈಲ್‌ನಿಂದಲೂ ಗುರುತಿಸಿಕೊಂಡಿದ್ದಾರೆ. ರಾಕಿಬಾಯ್ ಸ್ಟೈಲ್ ಅಂದರೆ ಅದಕ್ಕೆ ಸರಿಸಾಟಿ ರಾಕಿಬಾಯ್ ಮಾತ್ರ, ಅವರ ಲುಕ್‌ಗೆ ಅವರು ಮಾಡುವ ಸ್ಟೈಲ್‌ಗೆ ತುಂಬಾನೇ ಹೈಲೈಟ್ಸ್ ಆಗಿ ಕಾಣುವುದು.
ಇತ್ತೀಚೆಗೆ ಎಲ್ಲಿಯೂ ಹೇರ್ ಸ್ಟೈಲ್ ರಿವೀಲ್ ಮಾಡಿರಲಿಲ್ಲ
ಹೌದು ಯಶ್ ಎಲ್ಲಿಗೇ ಹೋಗಲಿ ಒಂದು ಕ್ಯಾಪ್ ಹಾಕಿ ಬಿಡುತ್ತಿದ್ದರು, ಹೀಗಾಗಿ ಈಗ ಅವರ ಹೇರ್ ಸ್ಟೈಲ್ ಹೇಗಿದೆ ಎಂಬ ಕುತೂಹಲಅವರ ಅಭಿಮಾನಿಗಳಲ್ಲಿತ್ತು. ಅವರು ನೀಳ ಕೂದಲು ಬಿಟ್ಟು ಅದರಲ್ಲಿ ಜುಟ್ಟು ಅಥವಾ ಹಾಗೇ ಬಿಟ್ಟು ಮಾಡಿಸಿರುವ ಫೋಟೋ ಶೂಟ್ ಗಮನ ಸೆಳೆದಿತ್ತು.
ಈ ರೀತಿ ಶಾರ್ಟ್ ಹೇರ್‌ನಲ್ಲಿ ಯಶ್ ಅವರನ್ನು ನೋಡಿ ತುಂಬಾನೇ ಸಮಯ ಆಗಿತ್ತು
ಯಶ್ ಕೆಲ ವರ್ಷಗಳಿಂದ ನೀಳ ಕೂದಲಿನ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು, ಈಗ ಅವರ ನೀಳ ಕೂದಲಿಗೆ ಕತ್ತರಿ ಬಿದ್ದಿದೆ. ಈ ಲುಕ್ ಹೇಗಿದೆ , ನಿಮಗೆ ಇಷ್ಟವಾಯಿತೆ?



Click it and Unblock the Notifications
