Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಿಸ್ ಯೂನಿವರ್ಸ್ ಇಂಡಿಯಾ 2024: 18ರ ಈ ಸುಂದರಿಗೆ ಪ್ರಶಸ್ತಿಯ ಗರಿ..! ಯಾರು ಈಕೆ..?
ಸೌಂದರ್ಯ ಜಗತ್ತಿನ ಹಲವು ಪ್ರಶಸ್ತಿ, ಗೌರವಗಳಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ ಸಹ ಒಂದಾಗಿದೆ. ವರ್ಷವೂ ಈ ಪ್ರಶಸ್ತಿಗಾಗಿ ಸಾವಿರಾರು ಮಂದಿ ಸ್ಪರ್ಧೆಯಲ್ಲಿರುತ್ತಾರೆ, ಆದ್ರೆ ಒಬ್ಬರು ಮಾತ್ರ ಈ ಪ್ರಶಸ್ತಿ ಗೆದ್ದು ಬೀಗುತ್ತಾರೆ. ಈ ವರ್ಷದ ಮಿಸ್ ಯೂನಿವರ್ಸ್ ಇಂಡಿಯಾ 2024 ಪ್ರಶಸ್ತಿಯನ್ನು 18 ವರ್ಷದ ಯುವತಿ ಪಡೆದಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.
ಗುಜರಾತ್‌ನ ರಿಯಾ ಸಿಂಘಾ ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟವನ್ನು ಅಲಂಕರಿಸಿದ್ದಾರೆ. 18 ವರ್ಷದ ಸ್ಪರ್ಧಿ ನಂ. 36 ಒಟ್ಟು 51 ಫೈನಲಿಸ್ಟ್‌ಗಳೊಂದಿಗೆ ಸ್ಪರ್ಧಿಸಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ಜಾಗತಿಕ ವಿಶ್ವ ಸುಂದರಿ 2024 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ರಿಯಾ ಸಿಂಘಾ ಈಗ ಮಿಸ್ ಯೂನಿವರ್ಸ್ 2024 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಈಗಾಗಲೇ ತಯಾರಿ ನಡೆಸುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ವಿಶ್ವಸುಂದರಿ ಸ್ಪರ್ಧೆ ಸಹ ಜರುಗುತ್ತಿದೆ. ಹೀಗಾಗಿ ಆಕೆ ಭಾರತಕ್ಕೆ ಮತ್ತೊಮ್ಮೆ ವಿಶ್ವ ಸುಂದರಿ ಪಟ್ಟ ತಂದುಕೊಡಲಿದ್ದಾಳೆ ಎಂದು ಎಲ್ಲರು ಭಾವಿಸಿದ್ದಾರೆ.
'ನಾನು ಇಂದು ಮಿಸ್ ಯೂನಿವರ್ಸ್ ಇಂಡಿಯಾ 2024 ಪ್ರಶಸ್ತಿಯನ್ನು ಗೆದ್ದಿದ್ದೇನೆ. ಈ ಕಿರೀಟವನ್ನು ಧರಿಸಲು ನಾನು ಸಾಕಷ್ಟು ಅರ್ಹಳೆಂದು ಭಾವಿಸಬಹುದಾದ ಈ ಮಟ್ಟವನ್ನು ತಲುಪಲು ನಾನು ತುಂಬಾ ಶ್ರಮಿಸಿದ್ದೇನೆ. ಹಿಂದಿನ ವಿಜೇತರಿಂದ ನಾನು ಸ್ಫೂರ್ತಿ ಪಡೆದಿದ್ದೇನೆ' ಎಂದಿದ್ದಾರೆ.
ಹಾಗೆ ಈ ಸ್ಪರ್ಧೆಯಲ್ಲಿ ಪ್ರಾಂಜಲ್ ಪ್ರಿಯಾ ( ಸ್ಪರ್ಧಿ ಸಂಖ್ಯೆ 34) 1ನೇ ರನ್ನರ್ ಅಪ್ ಆದರು ಮತ್ತು ಛಾವಿ ವರ್ಗ್ ಅವರು ಸ್ಪರ್ಧೆಯಲ್ಲಿ 2ನೇ ರನ್ನರ್ ಅಪ್ ಆಗಿದ್ದರು. ಸುಶ್ಮಿತಾ ರಾಯ್ (47) 3ನೇ ರನ್ನರ್ ಅಪ್ ಸ್ಥಾನ ಪಡೆದರೆ, ರುಪ್ಫುಝಾನೊ ವಿಸೊ (39) 4ನೇ ಸ್ಥಾನ ಪಡೆದಿದ್ದಾರೆ.
ಮಿಸ್ ಯೂನಿವರ್ಸ್ ಇಂಡಿಯಾ 2015 ಮತ್ತು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಈ ಸ್ಪರ್ಧೆಯ ತೀರ್ಪುಗಾರರಲ್ಲಿ ಒಬ್ಬರಾಗಿದ್ದರು. ಹಾಗೆ ಅವರು ಕೂಡ ಈ ಬಾರಿ ಮತ್ತೊಮ್ಮೆ ವಿಶ್ವ ಸುಂದರಿಯರ ಪಟ್ಟ ಭಾರತಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ವರ್ಷದ ಡಿಸೆಂಬರ್‌ನಲ್ಲಿ ಮಿಸ್ ಯೂನಿವರ್ಸ್ 2024 ಮೆಕ್ಸಿಕೋದಲ್ಲಿ ನಡೆಯಲಿದೆ.
ಅಂತಿಮ ಸುತ್ತಿನಲ್ಲಿ ರಿಯಾ ಮಿನುಗುವ ಪೀಚ್-ಗೋಲ್ಡನ್ ಉಡುಪನ್ನು ಧರಿಸಿದ್ದರು. ಈಜುಡುಗೆ ಸುತ್ತಿನಲ್ಲಿ ಅವಳು ಮೆಟಾಲಿಕ್ ಕೆಂಪು ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು. ಹಾಗೆ ಆಕೆ ತನ್ನ ತೋಳಿನಲ್ಲಿ ಶಿವಲಿಂಗದ ರಚನೆ ಸಹ ಹೊಂದಿರುವುದು ಎಲ್ಲರ ಗಮನ ಸೆಳೆದಿತ್ತು.
ರಿಯಾ ಸಿಂಘಾ ಆಧುನಿಕ ವಿನ್ಯಾಸದ ಅಂಶಗಳೊಂದಿಗೆ ತನ್ನ ಸಾಂಸ್ಕೃತಿಕ ಪರಂಪರೆಯನ್ನು ಹೆಣೆದುಕೊಂಡಿರುವ ಫ್ಯಾಷನ್‌ಗೆ ವಿಶಿಷ್ಟವಾದ ವಿಧಾನಕ್ಕೆ ಹೆಸರುವಾಸಿಯಾದ ಸಮಕಾಲೀನ ಭಾರತೀಯ ಫ್ಯಾಷನ್ ವಿನ್ಯಾಸಕಿಯಾಗಿದ್ದಾರೆ. ರಿಯಾ ಪೋಲೆಂಡ್‌ನಲ್ಲಿ ಜನಿಸಿದರು ಮತ್ತು ಸಿಂಗಾಪುರದಲ್ಲಿ ಬೆಳೆದರು. ಆದರೆ ಭಾರತೀಯ ಸಂಸ್ಕೃತಿ, ಸಂಪ್ರದಾಯದ ಕುರಿತು ಆಳವಾದ ತಿಳುವಳಿಕೆ ಹೊಂದಿದ್ದಾರೆ. ಅವರು ಭಾರತೀಯ ವಿಶಿಷ್ಟ ಪರಂಪರೆಯನ್ನು ಚಿತ್ರಸುವಂತಹ ಡಿಸೈನರ್ ಬಟ್ಟೆಗಳ ಸೃಷ್ಟಿಕರ್ತರಾಗಿದ್ದಾರೆ.



Click it and Unblock the Notifications

