Latest Updates
-
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ
ಮುಖ ಚೆಂದ ಕಾಣಿಸುವಲ್ಲಿ ಪರಿಣಾಮಕಾರಿ ಸೆರಮ್: ರೆಟಿನೋಲ್ VS ವಿಟಮಿನ್ ಸಿ ಯಾವುದು ಒಳ್ಳೆಯದು?
ನಾವು ನಮ್ಮ ಸೌಂದರ್ಯದ ಕಡೆಗೆ ಸ್ವಲ್ಪ ಗಮನಹರಿಸಿದರೆ ನಾವು ಹೇಗೇ ಇದ್ದರೂ ಆಕರ್ಷಕವಾಗಿ ಕಾಣುತ್ತೇವೆ. ತ್ವಚೆಯ ಆರೈಕೆ ಕಡೆಗೆ ತುಂಬಾನೇ ಗಮನಹರಿಸಬೇಕು. ತ್ವಚೆ ಸೌಂದರ್ಯ ಕಾಪಾಡುವಲ್ಲಿ ಸೆರಮ್ ತುಂಬಾನೇ ಪರಿಣಾಮಕಾರಿ, ಸೆರಮ್‌ನಲ್ಲಿ ಸ್ಕಿನ್‌ಕೇರ್ ಹೆಚ್ಚಾಗಿ ಬಳಸುವುದು ವಿಟಮಿನ್ ಸಿ ಹಾಗೂ ರೆಟಿನೋಲ್, ಆದರೆ ಕೆಲವರಿಗೆ ವಿಟಮಿನ್ ಸಿ ಪರಿಣಾಮಕಾರಿ, ಇನ್ನು ಕೆಲವರಿಗೆ ರೆಟಿನೋಲ್ ಸಹಕಾರಿ, ಇ ಇವುಗಳಲ್ಲಿ ನಿಮ್ಮ ತ್ವಚೆಗೆ ಯಾವುದು ಒಳ್ಳೆಯದು ಎಂದು ನೋಡೋಣ:

ಮೊದಲಿಗೆ ರೆಟಿನೋಲ್ ಎಂದರೇನು? ತಿಳಿಯೋಣ
ರೆಟಿನೋಲ್ ಎಂಬುವುದು ವಿಟಮಿನ್ ಎ ಬ್ಯೂಟಿ ಸೆರಮ್ ಆಗಿದೆ, ಇದು ತ್ವಚೆಯನ್ನು ಮೃದುವಾಗಿಸಲು ಹಾಗೂ ತ್ವಚೆ ಕಾಂತಿ ಹೆಚ್ಚಿಸಲು ಸಹಕಾರಿಯಾಗಿದೆ, ಯಾರಿಗೆ ನೆರಿಗೆ ಬೀಳುತ್ತದೆ, ಮೊಡವೆ, ಹೈಪರ್‌ಪಿಗ್ಮೆಂಟೇಷನ್ ಇವುಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ.
ರೆಟಿನೋಲ್ ನೆರಿಗೆ ತಡೆಗಟ್ಟಲು ಸಹಕಾರಿಯಾಗಿದೆ
ವಯಸ್ಸು ಮೂವತ್ತು ದಾಟುತ್ತಿದ್ದಂತೆ ಮುಖದಲ್ಲಿ ನೆರಿಗೆ ಬೀಳಲಾರಂಭಿಸುತ್ತದೆ, ಆದರೆ ಈ ರೆಟಿನೋಲ್ ಬಳಸಿ ಆರೈಕೆ ಮಾಡುವುದರಿಂದ ಮುಖದಲ್ಲಿ ನೆರಿಗೆ ಬೀಳುವುದು ಕಡಿಮೆಯಾಗುವುದು, ಅಲ್ಲದೆ ಡ್ರೈ ತ್ವಚೆಯಿದ್ದರೆ ತ್ವಚೆಯನ್ನು ಮೃದುವಾಗಿಸಲು ಸಹಕಾರಿ. ಹಾಗಾಗಿ ಮುಖದಲ್ಲಿ ನೆರಿಗೆ ಬೀಳುವುದನ್ನು ತಡೆಗಟ್ಟಲು ರೆಟಿನೋಲ್ ಸಹಕಾರಿಯಾಗಿದೆ.
ಮೊಡವೆ ತಡೆಗಟ್ಟುತ್ತದೆ
ವಿಟಮಿನ್ ಸಿಗೆ ಹೋಲಿಕೆ ಮಾಡಿದರೆ ಮೊಡವೆ ತಡೆಗಟ್ಟಲು ರೆಟಿನೋಲ್ ಸಹಕಾರಿಯಾಗಿದೆ, ಇದು ಮುಖದಲ್ಲಿ ರಮದ್ರಗು ಬೀಳುವುದನ್ನು ತಡೆಗಟ್ಟುತ್ತದೆ, ಅಲ್ಲದೆ ಮೊಡವೆಯಿಂದ ಉಂಟಾಗುವ ಉರಿಯೂತ ತಡೆಗಟ್ಟಲು ಅಲ್ಲದೆ ಮೊಡವೆ ಏಳುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ. ಹಾಗಾಗಿ ಮೊಡವೆ ಸಮಸಯೆ ಇರುವವರೆಗೆ ರೆಟಿನೋಲ್ ಬಳಸುವುದು ಸೂಕ್ತವಾಗಿದೆ.
ಕಪ್ಪುಕಲೆ ಹೋಗಲಾಡಿಸುತ್ತೆ
ರೆಟಿನೋಲ್ ಹೈಪರ್ ಪಿಗ್ಮೆಂಟೇಷನ್ ತಡೆಗಟ್ಟಲು ಸಹಕಾರಿಯಾಗಿದೆ, ಇದು ಕಪ್ಪು ಕಲೆ ಹೋಗಲಾಡಿಸುತ್ತೆ, ಅಲ್ಲದೆ ಸನ್ ಡ್ಯಾಮೇಜ್, ಮೊಡವೆ ಕಲೆ ಹೋಗಲಾಡಿಸಲು ಅಲ್ಲದೆ ಪಿಗ್ಮೆಂಟೇಷನ್, ಕಪ್ಪು ಕಲೆ ಇವುಗಳನ್ನು ಹೋಗಲಾಡಿಸಲು ಈ ಸೆರಮ್ ಸಹಕಾರಿಯಾಗಿದೆ.
ವಿಟಮಿನ್ ಸಿ ಸೆರಮ್ ಎಂದರೇನು?
ಇದು ತ್ವಚೆಯ ಕಾಂತಿ ಹೆಚ್ಚಿಸುತ್ತದೆ, ವಿಟಮಿನ್ ಸಿ ವಾಯು ಮಾಲಿನ್ಯದಿಂದ ತ್ವಚೆ ರಕ್ಷಣೆ ಮಾಡುತ್ತದೆ, ಅಲ್ಲದೆ ವಿಟಮಿನ್ ಸಿ ಮುಖದಲ್ಲಿ ಕೊಲೆಜಿನ್ ಉತ್ಪತ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ವಿಟಮಿನ್ ಸಿ ಸೆರಮ್ ಹೈಪರ್ ಪಿಗ್ಮೆಂಟೇಷನ್ ಕಡಿಮೆ ಮಾಡಿ, ಮುಖದ ಕಾಂತಿ ಹಚ್ಚಿಸುತ್ತದೆ, ಮುಖದ ಕಾಂತಿ ಹೆಚ್ಚಿಸುವಲ್ಲಿ ಇದು ಸಹಕಾರಿಯಾಗಿದೆ.
ಇದರಲ್ಲಿ antioxidants ಅಧಿಕವಿರುತ್ತದೆ
ವಿಟಮಿನ್ ಸಿಯಲ್ಲಿ antioxidants ಅಧಿಕವಿರುತ್ತದೆ ಅಲ್ಲದೆ ಇದು ಕೂಡ ಅವಧಿಪೂರ್ವ ನೆರಿಗೆ ಬೀಳುವುದನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ, ಅಲ್ಲದೆ ಇದನ್ನು ಯೌವನ ಪ್ರಾಯದಲ್ಲಿಯೇ ಬಳಸಲಾರಂಭಿಸಿದರೆ ವಯಸ್ಸು 40 ದಾಟಿದರೂ ಮುಖದಲ್ಲಿ ನೆರಿಗೆ ಬೀಳುವುದನ್ನು ತಡೆಗಟ್ಟಬಹುದಾಗಿದೆ ಅಲ್ಲದೆ ಇದು ಪರಿಸರ ಮಾಲಿನ್ಯದಿಂದ ತ್ವಚೆ ರಕ್ಷಣೆಗೆ ತುಂಬಾನೇ ಸಹಕಾರಿಯಾಗಿದೆ.
ಮುಖದಲ್ಲಿ ಕೊಲೆಜಿನ್ ಉತ್ಪತ್ತಿಗೆ ಸಹಕಾರಿ
ವಿಟಮಿನ್ ಸಿ ಮುಖದಲ್ಲಿ ಕೊಲೆಜಿನ್ ಉತ್ಪತ್ತಿಗೆ ತುಂಬಾನೇ ಸಹಕಾರಿಯಾಗಿದೆ, ಇದರಿಂದಾಗಿ ಮುಖದಲ್ಲಿ ಯೌವನದ ಕಳೆ ಬೇಗನೆ ಮಾಸುವುದಿಲ್ಲ. ವಿಟಮಿನ್ ಸಿ ಬಳಸುವುದರಿಂದ ತ್ವಚೆ ಸಡಿಲವಾಗುವುದಿಲ್ಲ, ತ್ವಚೆಯನ್ನು ಬಿಗಿಯಾಗಿಡುತ್ತದೆ.
ತ್ವಚೆಯ ಬಿಳುಪು ಹೆಚ್ಚಿಸುತ್ತದೆ
ಇದು ತ್ವಚೆ ಬಣ್ಣ ಬಿಳುಪಾಗಿಸುತ್ತದೆ ಹೀಗಾಗಿ ಹೈಪರ್ ಪಿಗ್ಮೆಂಟೇಷನ್ ಉಂಟಾಗದಂತೆ ತಡೆಯುವಲ್ಲಿ ಸಹಕಾರಿಯಾಗಿದೆ, ಅಲ್ಲದೆ ಮುಖದ ಕಾಂತಿ ಹೆಚ್ಚಿಸುವುದು.
ಈಗ ನಿಮ್ಮ ತ್ವಚೆಗೆಯಾವುದು ಅವಶ್ಯಕ ಅನಿಸುವುದೋ ಅದನ್ನು ಬಳಸಿ ತ್ವಚೆ ಆರೈಕೆ ಮಾಡಿ.



Click it and Unblock the Notifications