Latest Updates
-
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ!
ಮಳೆಗಾಲದಲ್ಲಿ ಮದುವೆಯಿದೆಯೇ? ಈ ರೀತಿ ಸ್ಕಿನ್ ಮಾಡಿದರೆ ನಿಮ್ಮ ತ್ವಚೆ ಕಾಂತಿ ಹೆಚ್ಚುತ್ತೆ
ಸೌಂದರ್ಯ ಅನ್ನೋದು ಹೆಣ್ಣಿಗೆ ಆ ಜನ್ಮಸಿದ್ಧ ಹಕ್ಕು ಎನ್ನಬಹುದು. ಯಾಕೆಂದರೆ ಹೆಣ್ಣು ಮಕ್ಕಳಿಗೆ ತಾನು ಸುಂದರವಾಗಿ ಕಾಣಬೇಕು ತನ್ನ ಮುಖ ಪಳಪಳ ಹೊಳೆಯಬೇಕು ಅಂತ ಸದಾ ಅನಿಸುತ್ತೆ. ಸಾಮಾನ್ಯ ದಿನಗಳಲ್ಲಿಯೇ ಹೀಗೆ ಅನ್ನಿಸುತ್ತೆ ಇನ್ನೂ ಮದುವೆ ಅಂದ್ರೆ ಕೇಳಬೇಕಾ?
ಮದುವೆ ದಿನ ಲಕಲಕ ಅಂತ ಹೊಳೆಯಬೇಕು ಅನ್ನೋದು ಪ್ರತಿಯೊಬ್ಬ ವಧುವಿನ ಆಸೆಯಾಗಿರುತ್ತೆ. ಅದಕ್ಕಾಗಿ ಮದುಮಗಳು ತಲೆಕೆಡಿಸಿಕೊಳ್ಳುತ್ತಾಳೆ. ಯಾವ ತರಹದ ಮೇಕಪ್ ಹಾಕಿಕೊಳ್ಳಬೇಕು ಮೇಕಪ್ ಗೆ ಯಾವೆಲ್ಲ ವಸ್ತು ಬಳಸಬೇಕು ಅಂತ ಯೋಚಿಸುತ್ತಲೇ ಇರುತ್ತಾಳೆ. ಆದರೆ ಕೇವಲ ಮೇಕಪ್ ನಿಂದ ವಧುವಿನ ಮುಖ ಕಂಗೊಳಿಸಲು ಸಾಧ್ಯವಿದೆಯಾ?

ಮದುಮಗಳು ಎಲ್ಲರಿಗಿಂತಲೂ ಎಲ್ಲರ ಎದುರು ಸುಂದರವಾಗಿ ಕಾಣಬೇಕು ಅಂದ್ರೆ ಕೇವಲ ಮೇಕಪ್ ಮಾತ್ರ ವರ್ಕೌಟ್ ಆಗೋದಿಲ್ಲ. ಅದರ ಮೊದಲು ಒಂದು ತಿಂಗಳ ತ್ವಚೆಯ ಆರೈಕೆ ಮಾಡಬೇಕು. ಹೌದು ಕನಿಷ್ಠ ಒಂದು ತಿಂಗಳಿನಿಂದ 45 ದಿನಗಳ ವರೆಗೆ ಮುಖಕ್ಕೆ ಸರಿಯಾಗಿ ಆರೈಕೆ ಮಾಡಿದರೆ ಮದುಮಗಳು ಕೂಡ ಕಡಿಮೆ ಮೇಕಪ್ ಹಾಕಿದರು ಎಲ್ಲರಿಗಿಂತಲೂ ಸುಂದರವಾಗಿ ಕಾಣಲು ಸಾಧ್ಯವಿದೆ. ವಧುವಿನ ತ್ವಚೆ ಆರೈಕೆ ಎನ್ನುವುದು ಬಹಳ ಮುಖ್ಯ. ಅದರಲ್ಲೂ ಮಳೆಗಾಲದಲ್ಲಿ ಮದುವೆಯಾಗುವ ಹೆಣ್ಣು ಮಕ್ಕಳು ತಮ್ಮ ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿ ಮಾಡಬೇಕಾಗುತ್ತದೆ.
ಮಳೆಗಾಲದಲ್ಲಿ ತ್ವಚೆಯ ಆರೈಕೆ
ಸಾಮಾನ್ಯವಾಗಿ ಆಯ್ಲಿ ಸ್ಕಿನ್ ಅಥವಾ ಎಣ್ಣೆಯುತ್ತ ಮುಖ ಹೊಂದಿರುವವರಿಗೆ ಮಳೆಗಾಲದಲ್ಲಿ ತ್ವಚೆಯ ಆರೈಕೆ ದೊಡ್ಡ ಸವಾಲೇ ಸರಿ. ಯಾಕೆಂದ್ರೆ ಮುಖದ ಮೇಲಿನ ರಂಧ್ರಗಳು ಎಣ್ಣೆ ಅಥವಾ ಕೊಳಕುಗಳಿಂದ ಧೂಳುಗಳಿಂದ ಮುಚ್ಚಿ ಹೋಗಬಹುದು. ಇದರಿಂದ ತ್ವಚೆ ಸುಂದರವಾಗಿ ಕಾಣಲು ಸಾಧ್ಯವಿಲ್ಲ. ಹಾಗಾಗಿ ಮುಖವನ್ನು ಆಳವಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಇದಕ್ಕಾಗಿ ಮುಖ್ಯವಾಗಿ ಪ್ರತಿದಿನ ಬೆಳಿಗ್ಗೆ ಎದ್ದು ಮುಖ ತೊಳೆದು ಸ್ವಚ್ಛಗೊಳಿಸಿ ನಂತರ ಸ್ಕ್ರಬ್ ಹಾಕಿ ಮುಖವನ್ನು ಮಸಾಜ್ ಮಾಡಿ. ಸ್ಕ್ರಬ್ ನ್ನು ದಿನವೂ ಬಳಸದಿದ್ದರೂ ಎರಡು ದಿನಗಳಿಗೆ ಒಮ್ಮೆಯಾದರೂ ಬಳಸಿ. ಸ್ಕ್ರಬ್ ಅನ್ನು ಬಳಸಿ ಮುಖವನ್ನು ವೃತ್ತಾಕಾರದಲ್ಲಿ ಉಜ್ಜಿ ನಂತರ ತುಸು ಬೆಚ್ಚಗಿನ ನೀರಿನಲ್ಲಿ ಮುಖವನ್ನು ಪುನಃ ತೊಳೆದುಕೊಂಡು ಒಣಗಿರುವ ಮೆತ್ತಗಿನ ಬಟ್ಟೆಯಲ್ಲಿ ಮುಖವನ್ನು ಒರೆಸಿ. ನಂತರ ಫೇಸ್ ಕ್ರೀಮ್ ಅಥವಾ ಮಾಯಿಶ್ಚರೈಸರ್ ಹಚ್ಚಬಹುದು.
ಮನೆಯಲ್ಲಿಯೇ ತಯಾರಿಸಿ ಸ್ಕ್ರಬ್
ಮಾರುಕಟ್ಟೆಯಲ್ಲಿ ದುಬಾರಿಯಾಗಿರುವ ಸಾಕಷ್ಟು ಬೇರೆ ಬೇರೆ ಬ್ರಾಂಡ್ ಗಳ ಸ್ಕ್ರಬ್ ಸಿಗುತ್ತದೆ ಆದರೆ ನೀವು ನಿಮ್ಮ ಮದುವೆಗೆ ತಯಾರಿ ಆಗುತ್ತಿದ್ದರೆ ಒಂದು ತಿಂಗಳ ಮುಂಚೆ ಮನೆಯಲ್ಲಿಯೇ ತಯಾರಿಸಿದ ಕೆಲವು ಸ್ಕ್ರಬ್ ಬಳಸುವುದು ತ್ವಚೆಗೂ ಕೂಡ ಬಹಳ ಒಳ್ಳೆಯದು. ಮನೆಯಲ್ಲಿ ಯಾವ ರೀತಿ ಸ್ಕ್ರಬ್ ತಯಾರಿಸಿಕೊಳ್ಳಬಹುದು ನೋಡೋಣ.
- ಟೊಮ್ಯಾಟೋ ಹಣ್ಣನ್ನು ಅರ್ಧ ಕತ್ತರಿಸಿ, ಅರ್ಧ ತುಂಡನ್ನು ಸಕ್ಕರೆಯಲ್ಲಿ ಅದ್ದಿ ಮುಖಕ್ಕೆ ವೃತ್ತಾಕಾರದಲ್ಲಿ ಉಜ್ಜಿ ಇದು ಸ್ಕ್ರಬ್ಬರ್ ನಂತೆ ಕೆಲಸ ಮಾಡುತ್ತದೆ.
- ಕಾಫಿ ಪುಡಿ, ಹಾಲು, ಜೇನುತುಪ್ಪ ಈ ಮೂರನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ನಂತರ ಮುಖಕ್ಕೆ ಉಜ್ಜಿಕೊಳ್ಳಿ.
- ನೆನೆಸಿದ ಬಾದಾಮಿಯನ್ನು ಮಿಕ್ಸರ್ ಗೆ ಹಾಕಿ ಪೇಸ್ಟ್ ನಂತೆ ತಯಾರಿಸಿ. ಅದಕ್ಕೆ ಸ್ವಲ್ಪ ಮೊಸರನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ.
- ಅದೇ ರೀತಿ ನಿಂಬೆ ಸಿಪ್ಪೆ ಕಿತ್ತಳೆ ಸಿಪ್ಪೆಗಳನ್ನ ಒಣಗಿಸಿ ಪುಡಿ ಮಾಡಿಟ್ಟುಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಮುಖಕ್ಕೆ ಬಳಸಿಕೊಳ್ಳಬಹುದು.
ಈ ಮೇಲಿನ ಯಾವುದೇ ಮನೆಯಲ್ಲಿ ತಯಾರಿಸಿದ ಸ್ಕ್ರಬರ್ ಗಳನ್ನು ನಿಯಮಿತವಾಗಿ ಮುಖಕ್ಕೆ ಹಚ್ಚುತ್ತಾ ಬಂದರೆ ತ್ವಚೆ ಕಾಂತಿಯುತವಾಗುತ್ತದೆ ಮುಖದಲ್ಲಿ ಇರುವಂತಹ ಧೂಳು ಸಣ್ಣ ಕಣಗಳು ಹೋಗುತ್ತವೆ. ತ್ವಚೆಯ ಆರೋಗ್ಯವು ಚೆನ್ನಾಗಿರುತ್ತೆ.
ಇದನ್ನೂ ಟ್ರೈ ಮಾಡಿ:
ಪ್ರತಿ ದಿನ ಕೆಲವು ಬಾರಿಯಾದರೂ ಮುಖ ತೊಳೆದು ಸ್ವಚ್ಛಗೊಳಿಸಿಕೊಳ್ಳುವುದು ಬಹಳ ಮುಖ್ಯ. ಮಳೆಗಾಲದಲ್ಲಿ ಹೊರಗಿನ ವಾತಾವರಣದಿಂದಾಗಿ ಮುಖದಲ್ಲಿ ಆದ್ರತೆ ಉಂಟಾಗುತ್ತದೆ. ಹಾಗಾಗಿ ನೀರಿನಿಂದ ಮುಖವನ್ನು ಆಗಾಗ ಸ್ವಚ್ಛಗೊಳಿಸಿಕೊಳ್ಳಿ. ರೋಜ್ ವಾಟರ್ ಅಥವಾ ಹಾಲಿನಿಂದ ಮುಖವನ್ನು ತೊಳೆದುಕೊಳ್ಳುವುದು ಒಳ್ಳೆಯದು. ಹಾಲಿಗೆ ಸ್ವಲ್ಪ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ ಹಾಲನ್ನು ಹತ್ತಿಯಲ್ಲಿ ಅದ್ದಿ ಮುಖಕ್ಕೆ ನಿಧಾನವಾಗಿ ಹೊತ್ತಿ ಕೆಲವು ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ. ರೋಜ್ ವಾಟರ್ ನೊಂದಿಗೆ ಟೋನರ್ ಬಳಸಿ ಕೂಡ ಮುಖವನ್ನು ಸ್ವಚ್ಛಗೊಳಿಸಿಕೊಳ್ಳಬಹುದು.
ಇನ್ನು ಮಳೆಗಾಲದಲ್ಲಿ ಅದರಲ್ಲೂ ಆಯ್ಲಿ ಸ್ಕಿನ್ ಇರುವವರು ಮುಲ್ತಾನಿ ಮಿಟ್ಟಿ ಪ್ಯಾಕ್ ಬಳಸಬಹುದು. ಮುಲ್ತಾನಿ ಮಿಟ್ಟಿಯನ್ನು ರೋಜ್ ವಾಟರ್ ಜೊತೆಗೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದವರೆಗೆ ಹಾಗೆ ಬಿಟ್ಟು ನಂತರ ತೊಳೆಯಿರಿ. ಅಥವಾ ಮನೆಯಲ್ಲಿ ಇರುವ ಕಡಲೆ ಹಿಟ್ಟಿಗೆ ಹಾಲನ್ನು ಬೆರೆಸಿ ಮುಖ ತೊಳೆಯಬಹುದು. ಮುಖಕ್ಕೆ ಹಚ್ಚುವ ಯಾವುದಾದರೂ ಫೇಸ್ ಪ್ಯಾಕ್ ಗೆ ನಿಂಬೆರಸ ಬೆರೆಸಿ ಕೂಡ ಮುಖಕ್ಕೆ ಹಚ್ಚಿದರೆ ಮುಖದಲ್ಲಿ ಇರುವ ಡಲ್ ನೆಸ್ ಮಾಯವಾಗುತ್ತದೆ.
ಮಾನ್ಸೂನ್ ಸಮಯದಲ್ಲಿ ವಧುವಿನ ಮೇಕಪ್ ಹೇಗಿರಬೇಕು
ತಣ್ಣೀರಿನಲ್ಲಿ ಅಥವಾ ಐಸ್ ಕ್ಯೂಬ್ ಸಹಾಯದಿಂದ ಮುಖಕ್ಕೆ ಒತ್ತಿ ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಸ್ವಚ್ಛವಾದ ಬಟ್ಟೆಯಿಂದ ಒರೆಸಿಕೊಳ್ಳಬೇಕು. ಮುಖಕ್ಕೆ ಫೌಂಡೇಶನ್ ಕ್ರೀಮ್ ಅಥವಾ ಪೌಡರ್ ಬಳಸುವುದಕ್ಕಿಂತಲೂ ಮೊದಲು ಮಾಯಿಶ್ಚರ್ ಇರುವ ಪ್ರೈಮರ್ ಬಳಸಬೇಕು. ಮುಖಕ್ಕೆ ಮೇಕಪ್ ಮಾಡುವಾಗ ಕುತ್ತಿಗೆ ಭಾಗಕ್ಕೂ ಅದನ್ನು ಅಪ್ಲೈ ಮಾಡುವುದನ್ನು ಮರೆಯಬೇಡಿ ಇಲ್ಲದಿದ್ದರೆ ಮುಖ ಹಾಗೂ ಕತ್ತಿನ ಭಾಗ ಬೇರೆ ಬೇರೆ ಟೋನ್ ಕಾಣಿಸಿಕೊಳ್ಳುತ್ತದೆ. ಸ್ವಲ್ಪ ಒದ್ದೆಯಾಗಿರುವ ಸ್ಪಂಜಿನಲ್ಲಿ ಮುಖಕ್ಕೆ ಪೌಡರ್ ಹಚ್ಚಿದರೆ ಹೆಚ್ಚು ಸಮಯ ಅದು ಉಳಿದುಕೊಳ್ಳುತ್ತದೆ. ಇನ್ನು ಮುಖಕ್ಕೆ ಮೇಕಪ್ ಮಾಡಿಕೊಳ್ಳುವಾಗ ಅದು ನಿಮ್ಮ ತ್ವಚೆಗೆ ಹೊಂದುಕೊಳ್ಳುತ್ತದೆಯೇ ಎಂಬುದನ್ನು ಸ್ಪಲ್ಪ ದಿನದ ಮೊದಲೇ ಟ್ರೈ ಮಾಡಿಕೊಂಡರೆ ಒಳ್ಳೆಯದು.



Click it and Unblock the Notifications