Latest Updates
-
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು!
ಕಣ್ಣಿನ ಸೌಂದರ್ಯಕ್ಕೆ ಪ್ರಿಯಾಂಕಾ ಬಳಸೋದು ಇದೇ ಕ್ರೀಮ್..! ಆದ್ರೆ ಯಾರು ಇದನ್ನು ಬಳಸಬೇಡಿ...!
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಬ್ಯೂಟಿ ಹೇಗೆ ಕಾಪಾಡಿಕೊಳ್ಳುತ್ತಾರೆ ಅನ್ನೋದು ಎಲ್ಲರ ತಲೆಯಲ್ಲಿ ಬರುವ ಪ್ರಶ್ನೆಯಾಗಿದೆ. ಆಕೆ ತಮ್ಮ ಮುಖಕ್ಕೆ ಏನು ಹಚ್ಚುತ್ತಾರೆ. ಯಾವ ಕ್ರೀಮ್, ಲಿಪ್‌ಸ್ಟಿಕ್, ಫೌಂಡೇಷನ್ ಬಳಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು ಅನ್ನೋ ಕುತೂಹಲ ಇದ್ದೇ ಇರುತ್ತೆ. ಅವರೇ ಈ ಕುರಿತಂತೆ ತಾವು ಬಳಸುವ ಮೇಕ್ ಅಪ್‌ಗಳ ಕುರಿತು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಆದರೆ ಮೇಕ್ ಅಪ್ ಆಗಿ ಅಲ್ಲದೆ ಚಿಕಿತ್ಸೆಗಾಗಿ ಬಳಸುವ ಒಂದು ಕ್ರೀಮ್ ಅನ್ನು ಅವರು ತಮ್ಮ ಕಣ್ಣಿಗೆ ಕೆಳಭಾಗಕ್ಕೆ ಹಚ್ಚಲು ಬಳಸುತ್ತಿರುವುದಾಗಿ ಹೇಳಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಪ್ರಿಯಾಂಕಾ ಚೋಪ್ರಾ ಗ್ರ್ಯಾಜಿಯಾ ಇಂಡಿಯಾದೊಂದಿಗಿನ ಸಂದರ್ಶನದಲ್ಲಿ ತಮ್ಮ ಮೇಕ್‌ಅಪ್ ಕಿಟ್ ಬಹಿರಂಗಪಡಿಸಿದ್ದಾರೆ. ಇದರಲ್ಲಿ ಅವರು ಬಳಸುವ ಎಲ್ಲಾ ರೀತಿಯ ಉತ್ಪನ್ನಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಈ ವೇಳೆ ಅವರು ತಮ್ಮ ಅಂಡರ್ ಐ ಕ್ರೀಮ್ ಆಗಿ ಹೆಮೊರೊಹಾಯಿಡ್ ಕ್ರೀಮ್ ಬಳಸುತ್ತೇವೆ ಎಂದಿದ್ದಾರೆ. ಇದನ್ನು ಕೇಳಿದ ಮಂದಿ ಶಾಕ್‌ಗೆ ಒಳಗಾಗಿದ್ದಾರೆ. ಏಕೆಂದರೆ ಈ ಕ್ರೀಮ್ ಮೇಕ್‌ಅಪ್ ಕಿಟ್ ಸಿಗುವ ಅಂಗಡಿಯಲ್ಲಿ ಸಿಗುವುದಿಲ್ಲ ಬದಲಿಗೆ ಇದನ್ನು ನಾವು ಮೆಡಿಕಲ್‌ನಲ್ಲಿ ಖರೀದಿಸಬೇಕಾಗುತ್ತದೆ. ಅಂದರೆ ಇದೊಂದು ಔಷಧಿಯಾಗಿದೆ.
ನೀವು ಧೈರ್ಯವಾಗಿ ಬಳಸಿದ ಯಾವುದಾದರು ಮೇಕಪ್ ಕಿಟ್ ಕುರಿತು ಕೇಳಿದಾಗ ಆಕೆ ನಾನು ಕಣ್ಣುಗಳ ಕೆಳಗೆ ಹಚ್ಚಲು ಹೆಮೊರೊಹಾಯಿಡ್ ಕ್ರೀಮ್ ಅನ್ನು ಬಳಸುತ್ತಿದ್ದೆ ಎಂದು ಬಹಿರಂಗಪಡಿಸಿದ್ದಾರೆ. ಆದ್ರೆ ಕೆಲವರಿಗೆ ಈ ಕ್ರೀಮ್ ಏನು? ಮೆಡಿಕಲ್‌ನಲ್ಲಿ ಏಕೆ ಸಿಗುತ್ತದೆ ಎಂಬ ಪ್ರಶ್ನೆ ಕಾಡಬಹುದು. ಇದಕ್ಕೆಲ್ಲ ಉತ್ತರ ಇಲ್ಲಿದೆ ನೋಡಿ.
ಹೆಮೊರೊಹಾಯಿಡ್ ಕ್ರೀಮ್ ಎಂದರೇನು?
ಈ ಕ್ರೀಮ್ ಅನ್ನು ಸಾಮಾನ್ಯವಾಗಿ ಊತ, ತುರಿಕೆ, ಅಲರ್ಜಿ (ಮೂಲವ್ಯಾಧಿ) ಅಂತಹ ಸಮಸ್ಯೆಗೆ ಬಳಸಲಾಗುತ್ತದೆ. ಇದು ಹೈಡ್ರೋಕಾರ್ಟಿಸೋನ್ ಅಥವಾ ಫಿನೈಲ್ಫ್ರಿನ್ ನಂತಹ ಪದಾರ್ಥಗಳನ್ನು ಹೊಂದಿರುತ್ತದೆ, ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ರಕ್ತನಾಳಗಳನ್ನು ಸಂಕುಚಿತಗೊಳಿಸಲು ಸಹಾಯ ಮಾಡುತ್ತದೆ. ಹೆಚ್ಚಿನದಾಗಿ ಇದನ್ನು ಗುದನಾಳದ ಊತ, ಗುದದ್ವಾರದಲ್ಲಿ ಉಂಟಾಗುವ ಚರ್ಮದ ಮಡಿಕೆಯ ಸ್ಥಿತಿಯ ನೋವು ನಿವಾರಣೆಯಾಗಲು ಬಳಸಲಾಗುತ್ತದೆ.
ಆದರೆ ಕೆಲವರು ಇದನ್ನು ಕಣ್ಣಿನ ಕೆಳಗೆ ಉಂಟಾಗುವ ಡಾರ್ಕ್ ಸರ್ಕಲ್ ನಿವಾರಣೆಗೆ ಅಸಂಪ್ರದಾಯಿಕ ರೀತಿಯಲ್ಲಿ ಬಳಸಲಾಗುತ್ತದೆ. ಆದರೆ ವೈದ್ಯರು ಇಂತಹ ಬ್ಯೂಟಿ ಹ್ಯಾಕ್‌ಗಳನ್ನು ಶಿಫಾರಸು ಮಾಡುವುದಿಲ್ಲ ಇದರಿಂದ ಚರ್ಮಕ್ಕೆ ಅಪಾಯ ಬಂದೊದಗಬಹುದು. ಆದ್ರೆ ಪ್ರಿಯಾಂಕಾ ಚೋಪ್ರಾ ಇದೇ ಕ್ರೀಮ್ ಅನ್ನು ಬಳಸುವುದಾಗಿ ಹೇಳಿದ್ದಾರೆ.
ಇದಲ್ಲದೆ ಮೇಕ್ ಅಪ್ ಅನ್ನು ತೆರವು ಮಾಡಲು ಅವರು ಕೊಬ್ಬರಿ ಎಣ್ಣೆ ಮತ್ತು ಮಂಜುಗಡ್ಡೆಯನ್ನು ಬಳಸುತ್ತಾರಂತೆ. ಹಾಗೆ ತಮ್ಮ ತುಟಿಗಳು ಸುಂದರವಾಗಿ ಕಾಣಲು ಅವರು ಮೌವ್ ಲವ್ ಲಿಪ್‌ಸ್ಟಿಕ್ ಬಳಸುತ್ತಾರಂತೆ ಹಾಗೆ ಅದರ ಮೇಲೆ ಕ್ಯಾರಾಮೆಲ್ ಸ್ವಿಶ್ ಬಳಸುತ್ತಾರೆ, ಇದರಿಂದ ಇಡೀ ದಿನ ಅವರ ತುಟಿಗಳು ಹೊಳಪಿನಿಂದ ಕೂಡಿರಲಿದೆಯಂತೆ.
ಹಾಗೆ ಮುಖಕ್ಕೆ ನಾನು ಸ್ಯಾಂಡಲ್‌ವುಡ್ ಟೋನ್ ಅನ್ನು ಬಳಸುತ್ತೇವೆ. ಬಹುಶಃ ಹೂವಿನ ಸ್ಪ್ಲಾಶ್‌ನೊಂದಿಗೆ ಬರುವ ಈ ಟೋನರ್ ಬಳಸುತ್ತೇವೆ ಎಂದು ಆಕೆ ಬಳಸುವ ಮೇಕ್‌ಅಪ್ ಕಿಟ್ ತೋರಿಸಿ ವಿವರಿಸುವುದು ನೋಡಬಹುದು.
ಬ್ಯೂಟಿ ಹೆಚ್ಚಿಸಲು ಈ ಕ್ರೀಮ್ ಬಳಸಬಹುದೇ?
ಈ ಪ್ರಶ್ನೆಯನ್ನ ನೀವು ಬ್ಯೂಟಿಷಿಯನ್ ಅಥವಾ ವೈದ್ಯರ ಬಳಿ ಕೇಳಿದರೆ ಅವರು ಇಲ್ಲ ಎನ್ನುತ್ತಾರೆ. ಹೆಮೊರೊಹಾಯಿಡ್ ಕ್ರೀಮ್‌ಗಳನ್ನು ಕಣ್ಣುಗಳ ಸುತ್ತಲೂ ಇರುವ ಕಲೆಗಳ ನಿವಾರಣೆ ಮಾಡಲು ವಿನ್ಯಾಸಗೊಳಿಸಲಾಗಿಲ್ಲ. ಈ ಕ್ರೀಮ್‌ನಲ್ಲಿರುವ ರಾಸಾಯನಿಕವು ಸೂಕ್ಷ್ಮ ಚರ್ಮಕ್ಕೆ ಹಾನಿ ಮಾಡಬಹುದು. ಈ ಕ್ರೀಮ್ ಮೊಡವೆ ಹಾಗೂ ಸುಕ್ಕುಗಳ ವಿರುದ್ಧ ಉತ್ತಮ ಫಲಿತಾಂಶ ನೀಡಬಹುದಾದರು ಬಳಕೆಯನ್ನು ಶಿಫಾರಸು ಮಾಡುವುದಿಲ್ಲ.



Click it and Unblock the Notifications
