Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸೀರೆಯಲ್ಲಿ ಪಾಕೆಟ್, ಈ ಫ್ಯಾಷನ್ ತುಂಬಾ ಅವಶ್ಯಕ ಎಂತಿದ್ದಾರೆ ನಾರಿ ಮಣಿಯರು
ಎವರ್‌ಗ್ರೀನ್ ಫ್ಯಾಷನ್ ಅಂದರೆ ಅದು ಸೀರೆ, ಎಷ್ಟೇ ವರ್ಷಗಳಾಗಲಿ ಸೀರೆಯ ಫ್ಯಾಷನ್ ಬದಲಾಗಲ್ಲ ಆದರೆ ಸೀರೆ- ಬ್ಲೌಸ್‌ನಲ್ಲಿ ಹೊಸ ಹೊಸ ಟ್ರೆಂಡ್ ಬರ್ತಾನೇ ಇರುತ್ತದೆ.
ಸೀರೆ ಹಾಗೂ ಬ್ಲೌಸ್ ಡಿಸೈನ್ ಹೊಸದು ಏನೇ ಬರಲಿ ಅದು ಬೇಗನೆ ಟ್ರೆಂಡ್ ಆಗುತ್ತದೆ, ಇದೀಗ ಪಾಕೆಟ್ ಇರುವ ಸೀರೆ ತುಂಬಾನೇ ವೈರಲ್ ಆಗಿದೆ. ಮಹಿಳೆಯೊಬ್ಬರು ತಾನು ಧರಿಸಿರುವ ಸೀರೆಗೆ ಪಾಕೆಟ್ ಇಟ್ಟು ಟ್ರೆಂಡ್ ಅದು ಸ್ಟೈಲ್ ಟ್ರೆಂಡ್ ಆಗಿದೆ, ಈ ಮೊಬೈಲ್ ಕಾಲದಲ್ಲಿ ಈ ಪಾಕೆಟ್ ಟ್ರೆಂಡ್ ಖಂಡಿ ತ ಉಪಯೋಗಕ್ಕೆ ಬರುವುದು ಅಲ್ವಾ?

ಸೀರೆ ಉಟ್ಟಾಗ ಮೊಬೈಲ್ ಕೈಯಲ್ಲಿಯೇ ಹಿಡಿದಿದ್ದರೆ ಎಲ್ಲಾದರೂ ಮರೆತು ಹೋಗುವಾ ಸಾಧ್ಯತೆ ಇದೆ, ಆದರೆ ಈ ರೀತಿಯ ಪಾಕೆಟ್ ಒಂದು ಇದ್ದರೆ ಮೊಬೈಲ್ ಇಡಬಹುದು, ಅಷ್ಟು ಮಾತ್ರವೇಕೆ ಹಣವಿಡಬಹುದು, ಪರ್ಸ್, ವ್ಯಾನಿಟಿ ಬ್ಯಾಗ್ ಇಲ್ಲದೆ ಕೈ ಬೀಸಿ ಹೋಗಬಹುದು, ಸ್ಟೈಲ್ ಜೊತೆಗೆ ಈ ಕಾರಣಗಳಿಂದ ಐಡಿಯಾ ಸೂಪರ್ ಆಗಿದೆ, ಹಾಗಾಗಿ ಇದು ಹೆಚ್ಚು ಟ್ರೆಂಡ್ ಆಗುತ್ತಿರಬಹುದು.
ಅಲ್ಲದೆ ಈ ಪಾಕೆಟ್ ಸಕತ್ ಫ್ಯಾಷನಬಲ್ ಆಗಿ ಕಾಣಿಸುತ್ತದೆ
ಸೀರೆಯ ನೆರಿಗೆ ಪಕ್ಕದಲ್ಲಿ ಈ ಪಾಕೆಟ್ ಇರುವುದರಿಂದ ಪ್ಯಾಂಟ್, ಸೂಟ್ ಧರಿಸಿದಾಗ ನಾವು ಮೊಬೈಲ್ ಇಡುವಂತೆಯೇ ಕಂಫರ್ಟ್ ಆಗಿ ಮೊಬೈಲ್ ಇಡಬಹುದು, ಈ ಪಾಕೆಟ್ ಡಿಸೈನ್ ಫ್ಯಾಬ್ರಿಕ್ ಅಥವಾ ಕಾಟನ್ ಸೀರೆಗೆ ಒಪ್ಪುತ್ತೆ.
ಸಿಲ್ಕ್ ಸೀರೆಗೆ ಚೆನ್ನಾಗಿ ಕಾಣಿಸಲ್ಲ
ಸಿಲ್ಕ್ ಸೀರೆಗೆ ಸ್ಟಿಚ್ ಮಾಡಿಸುವುದಾದರೆ ತೆಳು ಸೀರೆಗೆ ಚೆನ್ನಾಗಿರಲ್ಲ, ದಪ್ಪ ಜರಿ ಇರುವ ಸ್ಯಾರಿಗಾದರೆ ಚೆನ್ನಾಗಿ ಕಾಣಬಹುದು, ಆದರೆ ಆಫೀಸ್‌ಗೆ ಧರಿಸುವಂಥ ಕಾಟನ್ ಸೀರೆಗೆ ತುಂಬಾನೇ ಚೆನ್ನಾಗಿ ಕಾಣುವುದು.
ಅವರು ಅದನ್ನು ಧರಿಸಿ ಈ ರೀತಿ ಪಾಕೆಟ್ ಇದ್ದರೆ ಎಷ್ಟೆಲ್ಲಾ ಉಪಕಾರವಿದೆ ಎಂಬುವುದನ್ನು ಕೂಡ ತೋರಿಸಿರುವುದರಿಂದ ಇದು ಖಂಡಿತ ಗಮನ ಸೆಳೆಯುವಂತಿದೆ.
ಈ ಫ್ಯಾಷನ್ ನೋಡಿ ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ ಈ ರೀತಿ ಪಾಕೆಟ್ ಕಂಡು ಹಿಡಿದು ಎಂದು ಹೇಳಿದರೆ ಕೆಲವರು ಮಹಿಳೆಯರಿಗೆ ಪಾಕೆಟ್ ಅಗ್ಯತ ಇಲ್ಲ ಎಂದು ಭಾವಿಸಿ ಡ್ರೆಸ್‌ಗೆ ಪಾಕೆಟ್ ಇಡುವುದಿಲ್ಲ, ಆದರೆ ಈಗ ಮಹಿಳೆಯರು ಹೊರಗಡೆ ದುಡಿಯುತ್ತಿದ್ದಾರೆ, ಎಲ್ಲಾ ಕಡೆ ಪರ್ಸ್, ವ್ಯಾನಿಟಿ ಬ್ಯಾಗ್ ಅಂತ ಹಿಡಿದುಕೊಂಡು ಹೋಗಲು ಸಾಧ್ಯವಿಲ್ಲ, ಈ ರೀತಿಯ ಪಾಕೆಟ್ ಅವಶ್ಯಕವಾಗಿದೆ.



Click it and Unblock the Notifications
