Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕೂದಲು ಉದುರುತ್ತಿದೆಯೇ? ಪೈನಾಪಲ್ ಹೇರ್ ಮಾಸ್ಕ್ ಹೀಗೆ ಮಾಡಿ ಬಳಸಿ ನೋಡಿ
ಕೂದಲು ಉದುರುವುದು ಬಹುತೇಕರ ಸಮಸ್ಯೆಯಾಗಿದೆ. ಈ ಕೂದಲು ಉದುರುವುದನ್ನು ತಡೆಗಟ್ಟುವುದು ಹೇಗೆ ಎಂಬುವುದೇ ಅನೇಕರ ಸಮಸ್ಯೆಯಾಗಿದೆ. ಕೆಲವರು ದುಬಾರಿ ಶ್ಯಾಂಪೂ, ಕಂಡಿಷನರ್ ಟ್ರೈ ಮಾಡುತ್ತಾರೆ, ಆದರೂ ಕೂದಲು ಉದುರುವುದು ಕಡಿಮೆಯಾಗಿರುವುದಿಲ್ಲ.

ಕೆಲವೊಮ್ಮೆ ಈ ದುಬಾರಿ ಶ್ಯಾಂಪೂ, ಕಂಡೀಷನರ್‌ಗಿಂತ ಕೆಲವೊಂದು ಸರಳ ಸಾಮಗ್ರಿ ಬಳಸಿ ನಮ್ಮ ಕೂದಲಿನ ಆರೋಗ್ಯ ಕಾಪಾಡಬಹುದು, ನೀವು ಪೈನಾಪಲ್ ಅನ್ನು ಹೇರ್ ಮಾಸ್ಕ್ ಆಗಿ ಬಳಸಿದ್ದೀರಾ? ಇಲ್ಲಾಂದ್ರೆ ಟ್ರೈ ಮಾಡಿ, ಕೂದಲು ಉದುರುವ ಸಮಸ್ಯೆಗೆ ಪರಿಹಾರ ಸಿಗುವುದು.
ಈ ಪೈನಾಪಲ್ ಹೇರ್ ಮಾಸ್ಕ್ ಮಾಡುವುದು ಹೇಗೆ? ಎಂದು ನೋಡೋಣ ಬನ್ನಿ:
ಕೂದಲಿನ ಬೆಳವಣಿಗೆಗೆ ಪೈನಾಪಲ್ ಹೇರ್ ಮಾಸ್ಕ್
ಆರೋಗ್ಯಕರ ಕೂದಲು ನಿಮ್ಮ ಅಂದವನ್ನು ಹೆಚ್ಚಿಸುತ್ತದೆ. ಕೂದಲು ಕಡಿಮೆಯಾದರೆ ಮುಖ ಎಷ್ಟೇ ಚೆನ್ನಾಗಿದ್ದರೂ ಕೂದಲು ಇದ್ದಾಗ ಕಾಣುವ ಲಕ್ಷಣ ಕೂದಲು ಇಲ್ಲದಿದ್ದಾಗ ಕಾಣುವುದಿಲ್ಲ. ಆದ್ದರಿಂದ ಕೂದಲು ಉದುರುವಾಗ ತುಂಬಾ ಟೆನ್ಷನ್ ಆಗುತ್ತೆ.
ಕೂದಲು ಸೊಂಪಾಗಿರಲು ಪೈನಾಪಲ್ ಮಾಸ್ಕ್ 1
ಬೇಕಾಗುವ ಸಾಮಗ್ರಿ
1 ಕಪ್ ಪೈನಾಪಲ್ ರಸ
1 ಚಮಚ ಜೇನು
2 ಚಮಚ ತೆಂಗಿನೆಣ್ಣೆ\ ಎಳ್ಳೆಣ್ಣೆ\ಹರಳೆಣ್ಣೆ
ಈ ಮೂರು ಸಾಮಗ್ರಿ ಮಿಕ್ಸ್ ಮಾಡಿ. ನಂತರ ಈ ಮಿಶ್ರಣ ತಲೆಗೆ ಹಚ್ಚಿ 20 ನಿಮಿಷ ಬಿಡಿ, ಪೈನಾಪಲ್ ನೀರು ಹಣೆ ಮೇಲೆ ಬಾರದಿರಲು ಶವರ್ ಕ್ಯಾಪ್ ಬಳಸಿ.
ನಂತರ ಕೂದಲನ್ನು ಮೈಲ್ಡ್ ಶ್ಯಾಂಪೂ ಹಚ್ಚಿ ತೊಳೆಯಿರಿ. ಈ ರೀತಿ ವಾರದಲ್ಲಿ 2-3 ಬಾರಿ ಮಾಡಿ.
ಈ ರೀತಿ ಮಾಡುತ್ತಿದ್ದರೆ ಕೂದಲು ಸೊಂಪಾಗಿ ಬೆಳೆಯುವುದು.
ಫಲಿತಾಂಶ
ಈ ಹೇರ್ ಮಾಸ್ಕ್ ಬಳಸಿದ 2-3 ತಿಂಗಳುಗಳಲ್ಲಿ ನಿಮಗೆ ಫಲಿತಾಂಶ ಕಾಣುವುದು.
ಪೈನಾಪಲ್ ಹೇರ್‌ಮಾಸ್ಕ್ 2
ಬೇಕಾಗುವ ಸಾಮಗ್ರಿ
1 ಕಪ್ ಪೈನಾಪಲ್ ರಸ
1 ಚಮಚ ತೆಂಗಿನೆಣ್ಣೆ ಅಥವಾ ಹರಳೆಣ್ಣೆ
4-5 ಹನಿ ಗ್ರೇಪ್‌ಫ್ರೂಟ್ ಆಯಿಲ್
ಇವುಗಳನ್ನು ಮಿಶ್ರ ಮಾಡಿ ತಲೆಗೆ ಹಚ್ಚಿ 30 ನಿಮಿಷದ ಬಳಿಕ ತಲೆ ತೊಳೆಯಿರಿ. ಹೀಗೆ ಮಾಡುವುದರಿಂದಲೂ ಕೂದಲು ಉದುರುವುದನ್ನು ತಡೆಗಟ್ಟಬಹುದು.
ಪೈನಾಪಲ್ ಹೇರ್ ಮಾಸ್ಕ್ 3
ಪೈನಾಪಲ್ 1 ಕಪ್
ಮೊಸರು 2 ಚಮಚ
ಎಣ್ಣೆ 2 ಚಮಚ
ಈ ಮಿಶ್ರಣ ಮಿಕ್ಸ್ ಮಾಡಿ ತಲೆಗೆ ಹಚ್ಚಿದರೆ ಕೂದಲಿನ ಬುಡ ಬಲವಾಗುವುದು, ಇದರಿಂದ ಕೂದಲು ಉದುರುವುದು ಕಡಿಮೆಯಾಗಿ, ಕೂದಲು ಸೊಂಪಾಗಿ ಬೆಳೆಯಲಾರಂಭಿಸುತ್ತದೆ.



Click it and Unblock the Notifications
