Latest Updates
-
ಕೇರಳದಲ್ಲಿ ಭಾರಿ ಮಳೆ: ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಪ್ರಯಾಣಿಕರು ಮತ್ತು ನಿವಾಸಿಗಳಿಗೆ ತುರ್ತು ಎಚ್ಚರಿಕೆ! -
ತಮಿಳುನಾಡು ಮಳೆ: ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷಗಳ ಸುಲಭ ವರ್ಕೌಟ್ ರೂಟೀನ್! -
IND vs NZ ಪಂದ್ಯದ ವೇಳೆ ಜಗಳ ಬೇಡ: ದಂಪತಿಗಳಿಗಾಗಿ ಇಲ್ಲಿದೆ 12 ನಿಮಿಷಗಳ ಮ್ಯಾಜಿಕ್ ಒಪ್ಪಂದ! -
ದೆಹಲಿ ಮಾಲಿನ್ಯದ ಭೀತಿ: ₹1,500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಮಾಡಿ 'DIY' ಏರ್ ಪ್ಯೂರಿಫೈಯರ್! -
ಕೇವಲ 40 ರೂಪಾಯಿಯಲ್ಲಿ ಪೌಷ್ಟಿಕ ಊಟ: ಪ್ರೋಟೀನ್ ಮತ್ತು ಐರನ್ ಹೆಚ್ಚಿಸುವ ಬೆಸ್ಟ್ ಡಯಟ್ ಪ್ಲಾನ್ ಇಲ್ಲಿದೆ! -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ರೀಲೋಡೆಡ್: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಮಳೆಗಾಲದ ಕಿರಿಕಿರಿ ಬೇಡ: ದಂಪತಿಗಳಿಗಾಗಿ 5 ನಿಮಿಷದ ವರ್ಕ್ ಫ್ರಮ್ ಹೋಮ್ ಸೂತ್ರ -
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಎಚ್ಚರಿಕೆ, ನಿಮ್ಮ ಮನೆ ಮತ್ತು ವಾಹನ ಸುರಕ್ಷತೆಗೆ ಈ ಟಿಪ್ಸ್ ಪಾಲಿಸಿ -
ಅಡುಗೆ ಮನೆಯ ಉಪ್ಪಿನಲ್ಲಿ ಅಯೋಡಿನ್ ಇದೆಯೇ? ಥೈರಾಯ್ಡ್ ಆರೋಗ್ಯಕ್ಕೆ ಈ ತಪ್ಪು ಮಾಡಬೇಡಿ!
ಚಳಿಗಾಲಕ್ಕೆ ಮನೆಯಲ್ಲೇ ಬೆಸ್ಟ್ ಫೇಸ್ ಮಾಸ್ಕ್ ಯಾವುದು..? ಮಾಡೋದು ಹೇಗೆ?
ಚಳಿಗಾಲದಲ್ಲಿ ನಾವು ನಮ್ಮ ಮುಖದ ಸೌಂದರ್ಯ ಕಾಪಾಡಿಕೊಳ್ಳಲು ಯಾವಾಗಲು ಮುಂದಾಗುತ್ತೇವೆ, ಏಕೆಂದರೆ ಮುಖದ ತ್ವಚೆ ಬಹುಬೇಗ ಚಳಿಯಲ್ಲಿ ಹಾನಿಯಾಗುತ್ತದೆ; ಅದರಲ್ಲೂ ಚಳಿಗಾಲದಲ್ಲಿ ನಾವು ಬಳಸುವ ಹಲವು ಕ್ರೀಮ್ಗಳು ನಮ್ಮ ಮುಖದ ಸೌದರ್ಯಕ್ಕೆ ಹಾನಿ ಮಾಡುತ್ತಿರುತ್ತವೆ. ನಮ್ಮ ತ್ವಚೆಯನ್ನು ಈ ಕ್ರೀಮ್ಗಳು ಕಪ್ಪಾಗಿಸುವ ಸಾಧ್ಯತೆ ಇರುತ್ತದೆ.
ಹಾಗಾದ್ರೆ ಚಳಿಗಾಲದಲ್ಲಿ ನಮ್ಮ ತ್ವಚೆಗೆ ಸರಿಯಾಗಿ ಹೋಂದುವಂತಹ ಫೇಸ್ ಪ್ಯಾಕ್ ಯಾವುದು? ನಾವು ಮನೆಯಲ್ಲೇ ಯಾವ ರೀತಿ ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು ಎಂಬುದನ್ನು ನಾವಿಂದು ಬ್ಯೂಟಿಷಿಯನ್ ಶೋಭಾ ಅವರ ಬಳಿ ಕೇಳಿ ತಿಳಿದುಕೊಳ್ಳೋಣ. ಶಿವಮೊಗ್ಗದಲ್ಲಿ ಬ್ಯೂಟಿಷಿಯನ್ ಆಗಿರುವ ಶೋಭಾ ಅವರು ನಿತ್ಯ ಹಲವು ರೀತಿಯ ಫೇಸ್ ಮಾಸ್ಕ್ ಮಾಡುವುದು ಸಾಮಾನ್ಯವಂತೆ.

ಅವರ ಪ್ರಕಾರ ಮನೆಯಲ್ಲಿ ಫೇಸ್ ಪ್ಯಾಕ್ ಮಾಡಿಕೊಳ್ಳುವುದನ್ನು ಶಿಫಾರಸ್ಸು ಮಾಡುವುದಿಲ್ಲವಂತೆ. ಅವರ ಪ್ರಕಾರ ಪಾರ್ಲರ್ಗೆ ತೆರಳಿ ಅವರ ಚರ್ಮಕ್ಕೆ ಅನುಗುಣವಾಗಿ ಫೇಸ್ ಮಾಸ್ಕ್ ಹಾಗೂ ಫೇಷಿಯಲ್ ಮಾಡಿಸುವುದು ಸೂಕ್ತವಂತೆ. ಒಂದು ವೇಳೆ ನೀವು ಮನೆಯಲ್ಲೆ ಫೇಸ್ ಮಾಸ್ಕ್ ಮಾಡುವುದಾದರೆ ಕೆಲವು ಅಡ್ಡ ಪರಿಣಾಮ ನೀವು ಎದುರಿಸಬಹುದು ಎಂದು ಅವರು ಸಲಹೆ ನೀಡುತ್ತಾರೆ.
ಇಷ್ಟದಾರೆ ಕೆಲವೊಂದು ನೈಸರ್ಗಿಕ ವಸ್ತುಗಳ ಬಳಸಿ, ನಮ್ಮ ತ್ವಚೆಯ ಆರೋಗ್ಯ ಕಾಪಾಡುವ ದೃಷ್ಟಿಯಲ್ಲಿ ಈ ಫೇಸ್ ಮಾಸ್ಕ್ಗಳ ಮಾಡಿಕೊಳ್ಳಬಹುದಂತೆ.
ಕಾಫಿ ಪುಡಿಯ ಫೇಸ್ ಮಾಸ್ಕ್
ಕಾಫಿ ಪುಡಿಯಲ್ಲಿ ಉತ್ತಮ ಡಿಟಾಕ್ಸಿಕ್ ಅಂಶ ಇರುತ್ತದೆ. ಇದು ಚರ್ಮದ ಮೇಲಿನ ಸತ್ತ ಕೋಶಗಳನ್ನು ತೆಗೆಯುವ ಜೊತೆಗೆ ನಿಮ್ಮ ಮುಖ ಒಣಗದಂತೆ ಸಹಾಯ ಮಾಡಲಿದೆ. ನೀವು ಒಂದು ಬೌಲ್ನಲ್ಲಿ ಕಾಫಿ ಪುಡಿ, ಕೋಕ ಪುಡಿ, ಜೇನುತುಪ್ಪ ಹಾಗೆ ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ತದನಂತರ ಮುಖದ ಮೇಲೆ ಹಚ್ಚಿಕೊಂಡು ಅದು ಒಣಗಲು ಬಿಡಬೇಕು. ಅನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ. ಇದರಿಂದ ನಿಮ್ಮ ತ್ವಚೆಗೆ ಯಾವ ಅಡ್ಡ ಪರಿಣಾಮವು ಇಲ್ಲ. ಇದನ್ನು ವಾರದಲ್ಲಿ ಒಮ್ಮೆ ನೀವು ಮಾಡಿಕೊಳ್ಳಬಹುದು.
ಮೊಸರಿನ ಫೇಸ್ ಪ್ಯಾಕ್
ಸಾಮಾನ್ಯವಾಗಿ ಎಲ್ಲರು ಈ ಮೊಸರಿನಿಂದ ಮಾಡುವ ಫೇಸ್ ಮಾಸ್ಕ್ ಮಾಡಿಯೇ ಮಾಡುತ್ತಾರೆ. ಬೌಲ್ನಲ್ಲಿ ಅರ್ಧ ಕಪ್ ಮೊಸರು ಹಾಕಿಕೊಳ್ಳಬೇಕು. ಗಟ್ಟಿ ಮೊಸರು ಇದ್ದರೆ ಬಹಳ ಉತ್ತಮ. ಇದಕ್ಕೆ ಜೇನುತುಪ್ಪ, ಚಿಟಿಕೆ ಅರಶಿಣ ಹಾಕಿ ಮಿಕ್ಸ್ ಮಾಡಿಕೊಂಡು ನಂತರ ಮುಖಕ್ಕೆ ಹಚ್ಚಿಕೊಳ್ಳಬೇಕು. ಅನಂತರ ತೊಳೆದುಕೊಂಡರೆ ಆಯಿತು. ಈ ರೀತಿ ನೀವು ವಾರದಲ್ಲಿ ಎರಡು ಬಾರಿ ಮಾಡಬಹುದು.
ಪಪ್ಪಾಯ ಮತ್ತು ಹಾಲಿನ ಫೇಸ್ ಪ್ಯಾಕ್
ನೀವು ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಫೇಸ್ ಪ್ಯಾಕ್ ಇದು. ಪಪ್ಪಾಯ ಮತ್ತು ಹಾಲನ್ನು ಬಳಸಿಕೊಂಡು ಈ ಫೇಸ್ ಪ್ಯಾಕ್ ಮಾಡಲಾಗುತ್ತದೆ. ಪಪ್ಪಾಯಿಯನ್ನು ಸಣ್ಣದಾಗಿ ಕತ್ತರಿಸಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು. ನಂತರ ಹಾಲು ಬೆರೆಸಿಕೊಂಡು ಮಿಕ್ಸ್ ಮಾಡಿ. ಇದು ದಪ್ಪವಾಗಿ ಮಾಡಿಕೊಂಡು ಮುಖಕ್ಕೆ ಕುತ್ತಿಗೆಗೆ ಹಚ್ಚಿಕೊಂಡು ಒಣಗಿದ ಬಳಿಕ ತೊಳೆಯಿರಿ. ಇದನ್ನು ಕೂಡ ವಾರದಲ್ಲಿ ಒಮ್ಮೆ ಮಾಡಿದರೆ ಸಾಕಾಗುತ್ತದೆ, ಇದರಿಂದ ಮುಖದ ಕಾಂತಿ ಹೆಚ್ಚಾಗುವುದನ್ನು ನೊಡಬಹುದು. ಚಳಿಗಾಲದಲ್ಲಿ ಇದು ಬೆಸ್ಟ್.
ಅಕ್ಕಿ ಹಿಟ್ಟಿನ ಪ್ಯಾಕ್
ಒಂದು ಬೌಲ್ನಲ್ಲಿ ಅಕ್ಕಿ ಹಿಟ್ಟು ತೆಗೆದುಕೊಂಡು ಅದಕ್ಕೆ ಓಟ್ಮಿಲ್, ಜೇನು ತುಪ್ಪ ಹಾಕಿಕೊಂಡು ಚೆನ್ನಾಗಿ ಬೆರೆಸಬೇಕು. ಇದನ್ನು ಹಚ್ಚುವ ಮುನ್ನ ಮುಖಕ್ಕೆ ಬಿಸಿ ನೀರಿನ ಹಬೆ ಕೊಟ್ಟರೆ ಉತ್ತಮ. ಹಾಗೆ ಇದನ್ನು ಮಾಡಿ 5 ನಿಮಿಷ ಬಿಟ್ಟು ಮುಖಕ್ಕೆ ಹಚ್ಚಿಕೊಂಡು ನಂತರ ತೊಳೆಯಿರಿ. ಮುಖ ಸುಂದರವಾಗಿ ಹೊಳೆಯುತ್ತೆ. ಒಣಗಿದ ತ್ವಚೆಯಿಂದ ಮುಕ್ತಿ ಪಡೆಯಬಹುದು.



Click it and Unblock the Notifications
