Latest Updates
-
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್
ನೀತಾ ಅಂಬಾನಿ ಧರಿಸಿದ ನೆಕ್ಲೆಸ್ ಬೆಲೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ..!
ಅಂಬಾನಿ ಪುತ್ರ ಅನಂತ್ ಅಂಬಾನಿಯ ವಿವಾಹ ಪೂರ್ವ ಸಡಗರದ ಕುರಿತು ನಿಮಗೆಲ್ಲಾ ತಿಳಿದಿಬಹುದು. ಇಡೀ ವಿಶ್ವದ ಖ್ಯಾತ ನಾಯಕರು ಈ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವಿವಾಹದ ಒಂದೊಂದು ವಿಚಾರಗಳು ಅದ್ಭುತವಾಗಿವೆ. ಇಡೀ ಮದುವೆ ಕಾರ್ಯಕ್ರಮ ಅತ್ಯಂತ ದುಬಾರಿಯಾಗಿದ್ದು, ಇದಕ್ಕಾಗಿ ಬೃಹತ್ ವೇದಿಕೆ ಸಿದ್ಧವಾಗಿತ್ತು.
ಸದ್ಯ ಅವರ ಪ್ರಿ ವೆಡ್ಡಿಂಗ್ ಕಾರ್ಯಕ್ರಮದ ಒಂದೊಂದೇ ವಿಚಾರಗಳು ಹೊರಬರುತ್ತಿವೆ. ಈಗ ಅಂಬಾನಿ ಪತ್ನಿ ನೀತಾ ಅಂಬಾನಿ ಧರಿಸಿದ್ದ ಸೀರೆ ಮತ್ತು ಆಭರಣದ ಮೌಲ್ಯ ಕೇಳಿ ಹಲವರು ಶಾಕ್ ಆಗಿದ್ದಾರೆ. ಐಷಾರಾಮಿ ಮದುವೆ ಕಾರ್ಯಕ್ರಮ ಅಂದ ಮೇಲೆ ಅಲ್ಲಿ ಐಷಾರಾಮಿ ವಸ್ತುಗಳಿಗೇನು ಕಡಿಮೆ ಇರುವುದಿಲ್ಲ. ಆದರೆ ಅವರ ಆಭರಣದ ಮೌಲ್ಯ ಎಷ್ಟು ಕೋಟಿಯದ್ದು ಎಂದು ಗೊತ್ತಾದ್ರೆ ನೀವು ಒಮ್ಮೆ ಶಾಕ್ ಆಗ್ತಿರಾ.

ಮದುವೆ ಅಂದರೆ ಮಹಿಳೆಯರು ಹೆಚ್ಚು ದುಬಾರಿ ಬೆಲೆಯ ಆಭರಣ, ಸೀರೆ ಹಾಕಿಕೊಳ್ಳುವುದು ಸಾಮಾನ್ಯ ಆದರೆ ಅಂಬಾನಿ ಮಗನ ಮದುವೆ ಈ ದುಬಾರಿ ಎಂಬ ಕಾರಣದಿಂದಲೇ ಸುದ್ದಿಯಾಗುತ್ತಿದೆ. ಅಲ್ಲಿನ ಭೋಜನಕೂಟ, ಉಡುಗೊರೆಗಳು, ಆಚರಣೆಗಳು, ಅತಥಿಗಳು ಹೀಗೆ ನಾನಾ ರೀತಿಯಲ್ಲಿ ಸುದ್ದಿಯಾಗಿದೆ. ಈಗ ನೀತಾ ಅಂಬಾನಿ ಆಭರಣ ಎಲ್ಲರ ಗಮನ ಸೆಳೆದಿದೆ.
ನೀತಾ ಅಂಬಾನಿ ಗೋಲ್ಡನ್ ಕಲರ್ ಸೀರೆಯಲ್ಲಿ ಮಿಂಚಿದರು, ಜೊತೆಗೆ ಕುತ್ತಿಗೆಯಲ್ಲಿ ಎಮರಾಲ್ಡ್ (ಪಚ್ಚೆ) ಆಭರಣವೊಂದನ್ನು ತೊಟ್ಟಿದ್ದರು. ಈ ಆಭರಣವೀಗ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಏಕಂದರೆ ಹರಳುಗಳಲ್ಲಿ ಪಚ್ಚೆ ಅತ್ಯಂತ ದುಬಾರಿ ಹವಳ ಎಂಬ ಖ್ಯಾತಿ ಪಡೆದಿದೆ. ಅದರಲ್ಲೂ ಆಭರಣಕ್ಕೆ ಬಳಸುವ ಪಚ್ಚೆಯು ಮತ್ತಷ್ಟು ದುಬಾರಿ.
ನೀತಾ ಅಂಬಾನಿ ಕೈಮಗ್ಗದ ಕಾಂಚೀಪುರಂ ಸೀರೆಯನ್ನು ಆರಿಸಿಕೊಂಡಿದ್ದರು. ಏಸ್ ಡಿಸೈನರ್ ಮನೀಶ್ ಮಲ್ಹೋತ್ರಾ ಈ ಸೀರೆಯನ್ನು ವಿನ್ಯಾಸಗೊಳಿಸಿದ್ದಾರೆ. ಸೀರೆಯು ಸ್ಕಲೋಪ್ಡ್ ಬಾರ್ಡರ್‌ಗಳಲ್ಲಿ ಕ್ಲಾಸಿಕ್ ಸಾಂಪ್ರದಾಯಿಕ ಜರ್ದೋಸಿ ಕೆಲಸ ಮತ್ತು ಅದರ ಮೇಲೆ ಎಲ್ಲಾ ನಿಮಿಷದ ವಿವರಗಳನ್ನು ಒಳಗೊಂಡಿತ್ತು. ನೀತಾ ಅಂಬಾನಿ ತನ್ನ ಸೀರೆಯೊಂದಿಗೆ ಸ್ಲೀವ್ಸ್‌ನಲ್ಲಿ ವಿಶಿಷ್ಟವಾದ ಗೋಟಾ ವರ್ಕ್ ಹೊಂದಿರುವ ಮ್ಯಾಚಿಂಗ್ ಬ್ಲೌಸ್ ಧರಿಸಿದ್ದರು.
ನೆಕ್ಸ್ಲೆಸ್ ಬೆಲೆ ಬರೋಬ್ಬರಿ 400-500 ಕೋಟಿ
ನೀತಾ ಅಂಬಾನಿ ಕ್ಲಾಸಿ ಪಚ್ಚೆಯ ವಜ್ರದ ಆಭರಣಗಳನ್ನು ಧರಿಸಿದ್ದರು. ಅದರಲ್ಲಿ ಎರಡು ದೊಡ್ಡ ಗಾತ್ರದ ಪೆಂಡೆಂಟ್‌ಗಳಿಗೆ ಜೋಡಿಸಲಾದ ಎಮರಾಲ್ಡ್ ಹವಳದ ಒಳಗೊಂಡಿರುವ ಉದ್ದನೆಯ ನೆಕ್ಲೇಸ್ ಅನ್ನು ಧರಿಸಿದ್ದರು, ಜೊತೆಗೆ ಮ್ಯಾಚಿಂಗ್ ಸ್ಟಡ್ ಕಿವಿಯೋಲೆಗಳು, ಬಳೆಗಳು ಮತ್ತು ಉಂಗುರವನ್ನು ಧರಿಸಿದ್ದರು. ಈ ನೆಕ್ಲೆಸ್‌ನಲ್ಲಿದ್ದ ಡೈಮಂಡ್ ಕ್ಯಾರೆಡ್ ಎಷ್ಟೆಂದು ಊಹಿಸಲು ಸಾಧ್ಯವಿಲ್ಲ. ಅನ್‌ಕಟ್ ಡೈಮಂಡ್‌ನಂತೆ ಕಂಡರೂ ಕಸೂತಿ ಕೆಲಸವೂ ಇಡೀ ಆಭರಣದಲ್ಲಿ ಕಾಣುತ್ತಿತ್ತು. ಪಿಒಪಿ ಡೈರೀಸ್‌ನಲ್ಲಿನ ವರದಿಯ ಪ್ರಕಾರ, ನೀತಾ ಅವರ ಆಭರಣಗಳ ಬೆಲೆ ಸುಮಾರು 400-500 ಕೋಟಿ ರೂಪಾಯಿ ಎಂದು ವರದಿಯಾಗಿದೆ.
ಈ ದುಬಾರಿ ಸಾಲಿಗೆ ಸೇರಿದ ರಿಹಾನ್ನಾ
ಗಾಯಕಿ ರಿಹಾನ್ನಾ ಈವೆಂಟ್‌ನಲ್ಲಿ ಪ್ರದರ್ಶನ ನೀಡಲು ಭಾರಿ ಮೊತ್ತವನ್ನು ಪಡೆಯುತ್ತಿದ್ದಾರೆ. ತಮ್ಮ ಲೈವ್ ಶೋಗಳಿಂದ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿರುವ ಈ ಚೆಲುವೆಗೆ ಭಾರತದಲ್ಲಿಯೂ ಅಭಿಮಾನಿಗಳಿದ್ದಾರೆ. ತಮ್ಮ ಶೋಗಳನ್ನು ಎಷ್ಟು ಸುಂದರವಾಗಿ ನಡೆಸಿಕೊಡುತ್ತಾರೋ ಅವರ ಸಂಭಾವನೆ ಕೂಡ ಅಷ್ಟೇ ಸುಂದರ!.
ಪಾಪ್ ತಾರೆ ರಿಹಾನ್ನಾ ತಮ್ಮ ಶೋಗಳಿಗಾಗಿ 8-9 ಮಿಲಿಯನ್ ಡಾಲರ್ ಪಡೆಯುತ್ತಾರೆ. ಭಾರತೀಯ ರೂಪಾಯಿಯಲ್ಲಿ ಇದು 66 ಕೋಟಿಯಿಂದ 74 ಕೋಟಿ ರೂಪಾಯಿಯಾಗುತ್ತದೆ. ಹೀಗಾಗಿ ಅವರು ಮದುವೆಯಲ್ಲಿ ಶೋ ನೀಡಲು 74 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.



Click it and Unblock the Notifications
