Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೆನೆ ಬಣ್ಣದ ಸೀರೆಯಲ್ಲಿ ಲಕ್ಷ್ಮಿ ಕಳೆಯಲ್ಲಿ ಹಣಕಾಸು ಸಚಿವೆ: ಈ ಬಾರಿಯ ಬಜೆಟ್‌ನ ಸೂಚನೆಯೇ ಈ ಲುಕ್
ಬಹು ನಿರೀಕ್ಷಿತ ಬಡ್ಜೆಟ್ ಮಂಡನೆಯ ಈ ದಿನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸೀರೆ ಕೂಡ ಅಷ್ಟೇ ಗಮನ ಸೆಳೆಯುತ್ತದೆ, ಅದಕ್ಕೆ ಕಾರಣ ಅವರು ಈ ದಿನದಂದು ನೇಯ್ಗೆಯಿಂದ ಮಾಡಿದಂಥ ಸೀರೆ ಉಡುವ ಮೂಲಕ ಸಾಂಸ್ಕೃತಿಕ, ಸ್ವಾವಲಂಬನೆ, ಪ್ರಗತಿ ಎಲ್ಲವನ್ನೂ ಪ್ರತಿನಿಧಿಸುತ್ತಾರೆ.

ಈ ಬಾರಿ ಮೆಜೆಂತಾ ಬ್ಲೌಸ್ ಧರಿಸಿ ಕ್ರೀಮ್ ಕಲರ್ ಸ್ಯಾರಿ ಧರಿಸಿ ಬಜೆಟ್ ಮಂಡನೆ ಮಾಡಲಿರುವ ಹಣಕಾಸು ಸಚಿವೆ. ಕ್ರೀಮ್ ಬಣ್ಣದ ಸೀರೆಗೆ ಚೆಕ್ಸ್ ಇದೆ, ಆದರೆ ಅದು ತಕ್ಷಣಕ್ಕೆ ಗೋಚರಿಸುವುದಿಲ್ಲ. ನಾವು ತಾಯಿ ಲಕ್ಷ್ಮಿ, ಸರಸ್ವತಿ ಫೋಟೋಗಳನ್ನು ನೋಡುವಾಗ ದೇವಿಯರು ಈ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ.
ಇದೀಗ ನಿರ್ಮಲಾ ಸೀತಾರಾಮನ್ ಅವರು ಕ್ರೀಮ್ ಬಣ್ಣದ ಸೀರೆಯಲ್ಲಿ ಲಕ್ಷ್ಮಿ ಕಳೆಯಿಂದ ಕಂಗೊಳಿಸುತ್ತಿದ್ದಾರೆ, ಅವರು ಈ ಬಾರಿ ಮಂಡಿಸಿಲಿರುವ ಬಜೆಟ್ ಆರ್ಥಿಕವಾಗಿ ಸಾಮಾನ್ಯ ಜನರಿಗೆ, ಉದ್ಯಮಿಗಳಿಗೆ, ಕೃಷಿಕರಿಗೆ, ಸಣ್ಣ ಉದ್ಯಮಿಗಳಿಗೆ ಹೇಗೆ ಪ್ರಯೋಜನಕಾರಿಯಾಗಿದೆ ಎಂದು ಇಡೀ ದೇಶ ಕುತೂಹಲದಿಂದ ಕಾಯುತ್ತಿದೆ. ಆ ಕೆಂಪು ಬ್ರೀಫ್‌ಕೇಸ್ ಯಾವೆಲ್ಲಾ ವಿಷಯಗಳನ್ನು ಒಳಗೊಂಡಿದೆ ಎಂದು ಇನ್ನು ಕಲವೇ ಗಂಟೆಗಳಲ್ಲಿ ತಿಳಿಯಲಿದೆ.
#WATCH | Delhi: Finance Minister Nirmala Sitharaman along with her team with the Budget tablet outside the Ministry of Finance in North Block.
— ANI (@ANI) July 23, 2024
She will present the Union Budget today at around 11 AM in Lok Sabha. pic.twitter.com/NARqjCBOW1
ಸತತ 7 ಬಾರಿ ಬಜೆಟ್ ಮಂಡನೆ ಮಾಡಿ ದಾಖಲೆ ಮಾಡಿರುವ ನಿರ್ಮಲಾ ಸೀತಾರಾಮನ್
ಇದುವರೆಗೆ ಸತತ 7 ಬಾರಿ ಬಜೆಟ್ ಮಂಡನೆ ಮಾಡಿರುವುದು ನಿರ್ಮಲಾ ಸೀತಾರಾಮನ್ ಮಾತ್ರ ಅವರು, ಈ 7 ಬಾರಿಯೂ ಅವರ ಸೀರೆ ಲುಕ್ ಗಮನ ಸೆಳೆಯುತ್ತಿತ್ತು.
6 ನೇ ಬಾರಿ ಬಜೆಟ್ ಮಂಡನೆ ಮಾಡಿದಾಗ ಪಶ್ಚಿಮ ಬಂಗಾಳದ ತುಸ್ಸಾರ್ ಸಿಲ್ಕ್ ಸೀರೆ
ನಿರ್ಮಲಾ ಸೀತಾರಾಮನ್ 6ನೇ ಬಜೆಟ್ ಮಂಡನೆ ಮಾಡಿದಾಗ ನೇಕಾರರು ನೇಯ್ದ ತುಸ್ಸಾರ್ ಸೀರೆ ಧರಿಸಿ ಬಂದಿದ್ದರು.
5ನೇ ಬಜೆಟ್‌ನಲ್ಲಿ ಕರ್ನಾಟಕದ ಧಾರಾವಾಡದ ನವಲಗುಂದ ಕಸೂತಿ ಸ ಕಲೆಯ ಸೀರೆ
ಈ ಸೀರೆಯನ್ನು ದಾರಾವಾಡದಲ್ಲಿ ತಯಾರಿಸಲಾಗಿತ್ತು, ಧಾರಾವಾಡದ ನಾರಾಯಣಪುರದಲ್ಲಿ ಆರತಿ ಹಿರೇಮಠ ಮಾಲೀಕತ್ವದ ಆರತಿ ಕ್ರಾಫ್ಟ್‌ನ 210 ಮಹಿಳೆಯರು ಕೈಯಿಂದಲೇ ತಯಾರಿಸಿ ಹಣಕಾಸು ಸಚಿವೆಯವರಿಗೆ ಕೊಡುಗೆಯಾಗಿ ಕಳುಹಿಸಿದ ಸೀರೆಯಾಗಿತ್ತು.
4ನೇ ಬಜೆಟ್‌ನಲ್ಲಿ ಒಡಿಸ್ಸಾದ ಸಾಂಪ್ರದಾಯಕ ಸೀರೆ
ಈ ಸೀರೆಯನ್ನು ಬೋಮ್ಕಿ ಸೀರೆ ಎಂದು ಕರೆಯಲಾಗುವುದು, ಇದು ಒಡಿಸ್ಸಾದ ಬೋಮ್ಕಿ ಸೀರೆ, ಇವರು ಈ ಸೀರೆ ಧರಿಸಿದ ಮೇಲೆ ಆ ಸೀರೆಗೆ ತುಂಬಾನೆ ಪ್ರಚಾರ ಸಿಕ್ಕಿತ್ತು.
2021ರಲ್ಲಿ ಪೋಚಂಪಲ್ಲಿ ಸೀರೆ ಧರಿಸಿದ್ದರು
ಕೆಂಪು ಬಿಳಿ ಮಿಶ್ರಿತ ನೇಕಾರರು ನೇಯ್ಗೆ ಮಾಡಿರುವ ಪೋಚಂಪಲ್ಲಿ ಸೀರೆ ಕೂಡ ಗಮನ ಸೆಳೆದಿತ್ತು.
2020ರಲ್ಲಿ
ಗೋಲ್ಡನ್ ಬಣ್ನದ ಸೀರೆಗೆ ಮ್ಯಾಚಿಂಗ್ ಬ್ಲೌಸ್ ಧರಿಸಿ ಗಮನ ಸೆಳೆದಿದ್ದರು.
ನಿರ್ಮಲಾ ಸೀತಾರಾಮನ್‌ರವರ ಮೊದಲ ಬಜೆಟ್‌ನಲ್ಲಿ
ಮೊಟ್ಟ ಮೊದಲು ಬಜೆಟ್ ಮಂಡನೆ ಮಾಡಿದಾಗ ಅವರ ಲುಕ್ ತುಂಬಾನೇ ಗಮನ ಸೆಳೆದಿತ್ತು, ಏಕೆಂದರೆ ಈ ಸಮಯದಲ್ಲಿ ಹಳೆಯ ಪದ್ಧತಿ ನಿಲ್ಲಿಸಿ ಪಟ್ಟಿಗೆ ಬದಲಿಗೆ ಕೆಂಪು ಬಟ್ಟೆಯಲ್ಲಿ ಸುತ್ತಿದ ಲ್ಯಾಪ್‌ಟಾಪ್ ಸುತ್ತಲಾಯ್ತು, ಅದರಲ್ಲಿ ದೇಶದ ಲಾಂಛನವಿತ್ತು.



Click it and Unblock the Notifications





