Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೀವು ಮುಖಕ್ಕೆ ಈ ವಸ್ತುಗಳನ್ನು ಬಳಸಲೇಬಾರದು, ತ್ವಚೆ ಒರಟಾಗುವುದು, ಮುಖದ ಕಾಂತಿ ಕುಗ್ಗುವುದು
ನೀವು ಈ ಸೋಷಿಯಲ್ ಮೀಡಿಯಾ, ಇನ್‌ಸ್ಟಾಗ್ರಾಮ್ ಪೇಜ್ ನೋಡಿದರೆ ಸಾಕು ಎಲ್ಲರೂ ಬ್ಯೂಟಿ ಎಕ್ಸ್‌ಪರ್ಟ್‌ಗಳೇ, ನಾನು ಈ ಕ್ರೀಮ್ ಬಳಸುತ್ತಿದ್ದೇನೆ, ನೀವು ಕೂಡ ಇದೇ ಕ್ರೀಮ್ ಬಳಸಿ ಎಂದು ಸಲಹೆ ನೀಡುವವರೇ, ಆದರೆ ನಿಮ್ಮ ತ್ವಚೆಗೆ ಯಾವುದು ಸೂಕ್ತ, ಯಾವುದು ಸೂಕ್ತವಲ್ಲ ಎಂದು ನೀವು ನಿರ್ಧರಿಸಬೇಕು.
ನಾವು ತ್ವಚೆ ಆರೈಕೆ ಹೆಸರಿನಲ್ಲಿ ಈ ವಸ್ತಗಳನ್ನು ಮುಖಕ್ಕೆ ಹಚ್ಚಿದರೆ ಮುಖ ಹಾಳಾಗುವುದು ಎಂದು ತ್ವಚೆ ತಜ್ಞರು ಹೇಳುತ್ತಾರೆ, ಹಾಗಾಗಿ ಈ ಬಗೆಯ ವಸ್ತುಗಳನ್ನು ಮುಖಕ್ಕೆ ಹಚ್ಚಬೇಡಿ:

ನಿಂಬೆರಸ: ಹೌದು ತುಂಬಾ ಜನ ಮುಖಕ್ಕೆ ನಿಂಬೆರಸ ಬಳಸುತ್ತಾರೆ, ಕೆಲವೊಂದು ಹೋಮ್‌ಮೇಡ್ ಫೇಸ್‌ಪ್ಯಾಕ್‌ನಲ್ಲಿ ನಿಂಬೆರಸ ಹಾಕಿ ಮುಖಕ್ಕೆ ಹಚ್ಚುತ್ತೇವೆ, ಆದರೆ ಈ ನಿಂಬೆರಸ ಮುಖಕ್ಕೆ ಹಚ್ಚಿದರೆ ಮುಖದಲ್ಲಿ pH ಬ್ಯಾಲೆನ್ಸ್‌ನಲ್ಲಿ ಅಸಮತೋಲನ ಉಂಟಾಗುವುದು.
ಟೂತ್‌ಪೇಸ್ಟ್
ಮುಖಕ್ಕೆ ಮೊಡವೆ ಬಂದರೆ ಟೂತ್‌ಪೇಸ್ಟ್ ಹಚ್ಚುವವರು ಇದ್ದಾರೆ, ಟೂತ್‌ಪೇಸ್ಟ್ ಹಲ್ಲು ಸ್ವಚ್ಛಮಾಡುವುದಕ್ಕೆ ಬಳಸುವುದು ಒಳ್ಳೆಯದು, ಆದರೆ ಮುಖದ ತ್ವಚೆಗೆ ಸೂಕ್ತವಲ್ಲ. ಮೊಡವೆಗೆ ನೀವು ಟುತ್‌ಪೇಸ್ಟ್ ಹಚ್ಚಿದಾಗ ಮೊಡವೆ ಮಾತ್ರವಲ್ಲ, ಆ ಭಾಗದ ತ್ವಚೆ ಸುಟ್ಟಂತೆ ಆಗುವುದು. ಮುಖದಲ್ಲಿ ಕಲೆ ಉಂಟಾಗುವುದು.
ಬಾಡಿ ಲೋಷನ್ ಮುಖಕ್ಕೆ ಹಚ್ಚಬೇಡಿ
ನೀವು ಬಾಡಿಗೆ ಹಚ್ಚುವ ಲೋಷನ್ ಅನ್ನು ಮುಖಕ್ಕೆ ಹಚ್ಚಬೇಡಿ, ನಮ್ಮ ಮೈ ತ್ವಚೆಯಂತೆ ಮುಖದ ತ್ವಚೆ ಇಲ್ಲ ತಾನೇ? ಹಾಗಾಗಿ ನೀವು ಬಾಡಿಲೋಷನ್ ಮುಖಕ್ಕೆ ಹಚ್ಚಬೇಡಿ, ಮುಖಕ್ಕಾಗಿಯೇ ಇರುವ ಮಾಯಿಶ್ಚರೈಸರ್ ಬಳಸಿ.
ಹೇರ್‌ಸ್ಪ್ರೇ ಮುಖಕ್ಕೆ ಬೀಳದಂತೆ ಜಾಗ್ರತೆವಹಿಸಿ
ಕೂದಲನ್ನು ಸೆಟ್ ಮಾಡುವಾಗ ಹೇರ್‌ಸ್ಪ್ರೇ ಬಳಸುವಾಗ ಕೂಡ ಕೂಡ ಆ ಸ್ಪ್ರೇ ಮುಖದ ಮೇಲೆ ಬೀಳದಂತೆ ಜಾಗ್ರತೆವಹಿಸಿ. ಏಕೆಂದರೆ ಅದರಲ್ಲಿರುವ ಕೆಮಿಕಲ್ ಮುಖದ ತ್ವಚೆಗೆ ಒಳ್ಳೆಯದಲ್ಲ.
ಪೆಟ್ರೋಲಿಯಂ ಜೆಲ್ಲಿ ಮುಖದ ತ್ವಚೆಗೆ ಹಚ್ಚಬೇಡಿ
ತುಟಿಗೆ ಹಚ್ಚಬಹುದು ಅಥವಾ ಪಾದಗಳು ಒಡೆದಿದ್ದರೆ ಬಳಸಬಹುದು, ಆದರೆ ಪೆಟ್ರೋಲಿಯಂ ಜೆಲ್ಲಿಯನ್ನು ಮುಖಕ್ಕೆ ಹಚ್ಚಬೇಡಿ, ಇದು ಮುಖವನ್ನು ಎಣ್ಣೆ-ಎಣ್ಣೆಯಾಗಿಸುತ್ತದೆ.
ಸೋಪು ಹಚ್ಚಬೇಡಿ
ಮುಖಕ್ಕೆ ಸೋಪು ಹಚ್ಚುವುದರಿಂದಮುಖ ಒರಟಾಗುವುದು ಹಾಗಾಗಿ ಸೋಪು ಹಚ್ಚಬೇಡಿಗೆ ಫೇಸ್ ವಾಶ್ ಬಳಸುವುದು ಸೂಕ್ತ.
ಮುಖಕ್ಕೆ ತುಂಬಾನೇ ಬೆಚ್ಚಗಿನ ನೀರು ಹಾಕಬೇಡಿ
ನೀವು ಮುಖಕ್ಕೆ ಬೆಚ್ಚಗಿನ ನೀರು ಹಾಕಿದರೆ ತ್ವಚೆ ಒರಟಾಗುವುದು. ನೀವು ಮುಖವನ್ನು ಯಾವಾಗಲೂ ಹದ ಬಿಸಿ ನೀರಿನಿಂದಲೇ ತೊಳಿಯಬೇಕು.
ಮುಖದ ಆರೈಕೆಗೆ ನೀವು ಬಗ್ಗೆ ಗಮನ ಹರಿಸಲೇಬೇಕು
ಸೆನ್ಸಿಟಿವ್ ಸ್ಕಿನ್: ನೀವು ಸೂಕ್ಷ್ಮ ತ್ವಚೆಯವರು ಆಗಿದ್ದರೆ ನೀವು ತ್ವಚೆ ಆರೈಕೆ ಕಡೆಗೆ ಗಮನಹರಿಸಬೇಕು.
ನಾರ್ಮಲ್ ಸ್ಕಿನ್: ನಾರ್ಮಲ್ ಸ್ಕಿನ್‌ನವರಿಗೆ ಯಾವುದೇ ದೊಡ್ಡ ಸಮಸ್ಯೆ ಇರಲ್ಲ
ಡ್ರೈ ಸ್ಕಿನ್: ಡ್ರೈನ್ ಸ್ಕಿನ್ ಆಗಿದ್ದರೆ ಮಾಯಿಶ್ಚರೈಸರ್ ಬಳಸಲೇಬೇಕು.
ಎಣ್ಣೆಯಂಶವಿರುವ ತ್ವಚೆ: ಮುಖದಲ್ಲಿ ಎಣ್ಣೆಯಂಶ ಕಡಿಮೆ ಮಾಡುವ ಕ್ರೀಮ್ ಬಳಸಬೇಕು.
ಎಲ್ಲಾ ತ್ವಚೆಯವರಿಗೆ ಕೆಲವೊಂದು ಸಿಂಪಲ್ ಟಿಪ್ಸ್
ಪ್ರತಿದಿನ ಮಾಯಿಶ್ಚರೈಸರ್ ಬಳಸಿ: ಹೌದು ತ್ವಚೆ ಆರೈಕೆಯಲ್ಲಿ ಪ್ರಮುಖವಾದ ಅಂಶ ಮಾಯಿಶ್ಚರೈಸರ್ ಬಳಸುವುದು, ಇದು ತ್ವಚೆ ನುಣಪಾಗಿಡಲು ಸಹಾಯ ಮಾಡುತ್ತದೆ.
ಯಾವುದೇ ಕ್ರೀಮ್ ಬಳಸುವ ಮುನ್ನ ಟೆಸ್ಟ್ ಮಾಡಿ ಬಳಸಿ
ಮುಖಕ್ಕೆ ಸಿಕ್ಕ ಕ್ರೀಮ್ ಬಳಸಬೇಡಿ, ನೀವು ಮೊದಲು ಸ್ವಲ್ಪ ಹಚ್ಚಿ ಟೆಸ್ಟ್ ಮಾಡಿ ಬಳಸಬೇಕು.
ಫೇಶಿಯಲ್ ಕೂಡ ಅಷ್ಟೇ... ಯಾರೋ ಸಜೆಸ್ಟ್ ಮಾಡಿದರು ಅಂತ ಮಾಡಿಸಬೇಡಿ, ನಿಮ್ಮ ಮುಖಕ್ಕೆ ಸೂಕ್ತವಾಗುವ ಫೇಶಿಯಲ್ ಮಾಡಿಸಿ.
ಮುಖಕ್ಕೆ ಮೇಕಪ್ ಕಡಿಮೆ ಬಳಸಿ, ರಾತ್ರಿ ಮಲಗುವ ಮುನ್ನ ಮೇಕಪ್ ಸಂಪೂರ್ಣ ತೆಗೆದು ಬಳಸಿ.



Click it and Unblock the Notifications
