Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಹೆನ್ನಾ ಮೇಕ್ ಅಪ್ ಎಂದಿಗೂ ಟ್ರೈ ಮಾಡಬೇಡಿ..! ಮುಖದ ಚರ್ಮ ಸುಡಲಿದೆ..!
ಆನ್‌ಲೈನ್‌ನಲ್ಲಿ ಎಷ್ಟೊಂದು ವಿಡಿಯೋಗಳು ಸಲಹೆಗಳನ್ನು ನಾವು ನೋಡುತ್ತಿರುತ್ತೇವೆ. ಅದರಲ್ಲೂ ಮೇಕ್ ಅಪ್ ವಿಚಾರವಾಗಿ ಹತ್ತು ಹಲವು ವಿಡಿಯೋಗಳನ್ನ ನಾವು ನಿತ್ಯವೂ ನೋಡಿರುತ್ತೇವೆ. ಬ್ಯೂಟಿ ಟಿಪ್ಸ್‌ಗಳನ್ನು ನೀಡುವಂತಹ ನೂರಾರು ಮಂದಿಯನ್ನು ವಿಡಿಯೋ ಮೂಲಕ ನೋಡಿರುತ್ತೇವೆ.
ಇದರಲ್ಲಿ ಕೆಲವೊಂದು ಸತ್ಯವಾಗಿದ್ದರೆ ಮತ್ತೆ ಹಲವು ಕೇವಲ ವೀವ್ಸ್‌ಗಾಗಿ ತಪ್ಪು ತಪ್ಪು ಸಲಹೆಗಳ ನೀಡುತ್ತಾರೆ. ಇಂತಹ ಹಲವು ಸಲಹೆಗಳು ಜನರಿಗೆ ಸಮಸ್ಯೆಗಳ ತಂದೊಡ್ಡುವುದು ಕೂಡ ನಾವು ನೋಡಿರುತ್ತೇವೆ. ಕೆಲವೊಂದು ಬ್ಯೂಟಿ ಟಿಪ್ಸ್‌ಗಳಿಂದ ಹಾನಿಯಾಗುವುದು ಕೂಡ ನೋಡಬಹುದು.

ಹಾಗೆ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಟಿಪ್ಸ್‌ಗಳಲ್ಲಿ ಹೆನ್ನಾ ಮೇಕ್ ಅಪ್ ಹ್ಯಾಕ್ ಕೂಡ ಒಂದಾಗಿದೆ. ಎಲ್ಲಿ ನೋಡಿದರೂ ಹೆನ್ನಾ ಮೇಕ್ ಅಪ್ ವಿಡಿಯೋಗಳು ಹರಿದಾಡುತ್ತಿವೆ. ಈ ಹೆನ್ನಾ ಮೇಕ್ ಅಪ್ ಮೂಲಕ ಮುಖದ ಕಾಂತಿ ಹೊಳೆಯುವಂತೆ ಮಾಡಿ. ಎಲ್ಲಾ ಕಲೆಗಳನ್ನು ದೂರ ಮಾಡಬಹುದು ಎಂದು ಹೇಳಲಾಗುತ್ತಿದೆ.
ಆದ್ರೆ ಈ ಹೆನ್ನಾ ಮೇಕ್ ಅಪ್‌ನ ಸತ್ಯಾಂಶ ತಿಳಿದರೆ ನಿಮಗೂ ಶಾಕ್ ಆಗುತ್ತದೆ. ಹಾಗಾದ್ರೆ ಏನಿದು ಹೆನ್ನಾ ಮೇಕ್ ಅಪ್ ಇದರಿಂದ ಆಗುವ ಹಾನಿ ಏನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೆನ್ನಾ ಮೇಕ್ ಅಪ್ ಎಂದರೆ ಏನು?
ಹೆನ್ನಾ ಮೇಕ್ ಅಪ್ ಅಂದ್ರೆ ಮುಖಕ್ಕೆ ಗೋರಂಟಿ ಅಥವಾ ಮೆಹಂದಿ ಹಚ್ಚಿಕೊಳ್ಳುವುದು. ನಿಮಗಿದು ಕೇಳಲು ಸರಳವಾದ ಉಪಾಯ ಎನಿಸುತ್ತಿರಬಹುದು. ಆದ್ರೆ ಇದರಿಂದ ನಿಮ್ಮ ಮುಖ ಸುಟ್ಟು ವಿಕಾರವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಗೋರಂಟಿಯು ಕೈ ಹಾಗೂ ಕಾಲಿಗೆ ಹಚ್ಚಿದಾಗಲೂ ಕೆಲವರಿಗೆ ಅಲರ್ಜಿ, ತುರಿಕೆ, ಚರ್ಮಕ್ಕೆ ಹಾನಿಯಾಗುವುದನ್ನು ನಾವು ನೋಡಿರುತ್ತೇವೆ.
ಇದೇ ಗೋರಂಟಿ ಮುಖಕ್ಕೆ ಹಚ್ಚಲಾಗುವ ಅಸಂಪ್ರದಾಯಿಕ ಮೇಕ್ ಅಪ್ ಶೈಲಿ ಇದಾಗಿದೆ. ಈ ಶೈಲಿಯಲ್ಲಿ ಮುಖದ ಮೇಲೆ ಇರುವ ಫಾಕ್ಸ್ ಫ್ರೆಕಲ್ಸ್ (ಕಂದು ಬಣ್ಣದ ಮಚ್ಚೆಗಳು) ಗಳ ನಿವಾರಣೆಗೆ ಹಚ್ಚಲಾಗುತ್ತಿದೆ. ಆದ್ರೆ ಈ ವಿಧಾನದಲ್ಲಿ ಬಹುದೊಡ್ಡ ಹಾನಿ ಕೂಡ ಇದೆ. ಹೆನ್ನಾ ಅಂದ್ರೆ ಒಂದು ಔಷಧಿ ಗುಣ ಇರುವ ಸಸ್ಯ ಹೆಸರಾಗಿದೆ. ಲಾಸೋನಿಯಾ ಇನರ್ಮಿಸ್ ಎಂಬ ಸಸ್ಯವನ್ನು ಹೆನ್ನಾ ಎಂದು ಕರೆಯಲಾಗುತ್ತದೆ.
ಈ ಔಷಧಿಯನ್ನ ಗೋರಂಟಿ ಸಸ್ಯದ ಎಲೆಗಳನ್ನು ಒಣಗಿಸಿ ಮಾಡಲಾಗುತ್ತದೆ. ಆದ್ರೆ ಮಾರುಕಟ್ಟೆಯಲ್ಲಿ ಸಿಗುವ ಗೋರಂಟಿ ಕೋನ್‌ಗಳನ್ನು ಹತ್ತು ಹಲವು ರಾಸಾಯನಿಕಗಳ ಬಳಸಿ ಮಾಡಲಾಗುತ್ತದೆ. ಮುಖ್ಯವಾಗಿ ಪಿ-ಫೀನಿಲೆನೆಡಿಯಮೈನ್ (ಪಿಪಿಡಿ), ಸಿಲ್ವರ್ ನೈಟ್ರೇಟ್, ಕಾರ್ಮೈನ್ ಮತ್ತು ಕ್ರೋಮಿಯಂ ಎಂಬ ಅಪಾಯಕಾರಿ ರಾಸಾಯನಿಕ ಬಳಸಲಾಗುತ್ತದೆ.
ಈ ರಾಸಾಯನಿಕಗಳು ಕೃತಕ ಬಣ್ಣ ಹಾಗೂ ಬಹುಬೇಗ ಚರ್ಮಕ್ಕೆ ಬಣ್ಣ ಅಂಟಿಕೊಳ್ಳಲು ನೆರವಾಗುತ್ತದೆ. ಆದ್ರೆ ಈ ಗೋರಂಟಿಯನ್ನು ಮುಖಕ್ಕೆ ಹಚ್ಚುವ ಟ್ರೆಂಡ್ ಹುಟ್ಟಿಕೊಂಡಿರುವುದು ಅಪಾಯಕ್ಕೆ ದಾರಿಯಾಗಿದೆ. ಮುಖದಲ್ಲಿರುವ ಕಂದು ಮಚ್ಚೆಗಳ ನಿವಾರಣೆಯಾಗುತ್ತದೆ ಎಂದು ಕೆಲವರು ಗೋರಂಟಿ ಹಚ್ಚಿ ಬಳಿಕ ಅದನ್ನು ತೊಳೆಯಲು ಸಲಹೆ ನೀಡುವುದೇ ಹೆನ್ನಾ ಬ್ಯೂಟಿ ಹ್ಯಾಕ್ ಆಗಿದೆ.
ಆದ್ರೆ ಈ ರೀತಿ ಮಾಡುವುದು ಅಪಾಯ ತರುತ್ತಿದೆ. ಗೋರಂಟಿ ಕೂದಲಿಗೆ ಹಚ್ಚುವುದೇ ಸಮಂಜಸವಲ್ಲ ಎಂಬ ವಾದವಿರುವಾಗ ಮುಖಕ್ಕೆ ಹಚ್ಚುವುದು ಅದಕ್ಕಿಂತ ದೊಡ್ಡ ಅಪಾಯವಾಗಲಿದೆ. ಮುಖ್ಯವಾಗಿ ಮೂಗಿನ ಮೇಲೆ ಈ ಗೋರಂಟಿ ಹಚ್ಚಿದರೆ ತುರಿಕೆ, ಚರ್ಮಕ್ಕೆ ಹಾನಿ, ಅಲರ್ಜಿ ಕಟ್ಟಿಟ್ಟ ಬುತ್ತಿಯಂತೆ.



Click it and Unblock the Notifications
