Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
ನವರಾತ್ರಿ ಬಣ್ಣದಲ್ಲಿ ಭಾಗಿಯಾಗುತ್ತೀರಾ: ಯಾವ ದಿನ ಯಾವ ಬಣ್ಣ ಬಂದಿದೆ?
ನವರಾತ್ರಿ ಸಮಯದಲ್ಲಿ ಬಣ್ಣಗಳಿಗೆ ತುಂಬಾನೇ ಮಹತ್ವ ನೀಡಲಾಗಿದೆ. ಪ್ರತಿದಿನ ಆ ಬಣ್ಣದ ಸೀರೆ ಉಡಿಸಿ ದೇವಿಯನ್ನು ಅಲಂಕರಿಸಲಾಗುವುದು, ಅಲ್ಲದೆ ಅಫೀಸ್‌ಗಳಲ್ಲಿಯೂ ನವರಾತ್ರಿ ರಂಗು ಸಂಭ್ರಮಿಸಲಾಗುವುದು. ನವರಾತ್ರಿಗೆ 9 ಬಣ್ಣದ ಉಡುಗೆಗಳನ್ನು ಧರಿಸಿ ಸಂಭ್ರಮದಿಂದ ಆಚರಿಸಲಾಗುವುದು.
ಈ ವರ್ಷ ನವರಾತ್ರಿ ಅಕ್ಟೋಬರ್ 3ರಿಂದ ಪ್ರಾರಂಭವಾಗಿ ನವೆಂಬರ್ 1ಕ್ಕೆ ಮುಕ್ತಾಯವಾಗಲಿದೆ. ಈ ದಿನ ಯಾವ ದಿನ ಯಾವ ಬಣ್ಣ ಬಂದಿದೆ ಎಂದು ನೋಡೋಣ, ಅದರಂತೆ ನೀವು ಡ್ರೆಸ್‌ಕೋಡ್ ಧರಿಸಿ ಸಂಭ್ರಮಿಸಬಹುದು:

ನವರಾತ್ರಿ 1: ಅಕ್ಟೋಬರ್ 3, ಹಳದಿ ಬಣ್ಣ
ನವರಾತ್ರಿ 1 ಗುರುವಾರದ ದಿನ ಬಂದಿದೆ. ಈ ದಿನದ ಬಣ್ಣ ಹಳದಿ, ಇದು ಸಮೃದ್ಧಿ, ಖುಷಿಯ ಸಂಕೇತ. ಈ ಬಣ್ಣ ಮನುಷ್ಯನನ್ನು ಸಂತೋಷವಾಗಿ ಇಡುತ್ತದೆ, ಹಳದಿ ಬಣ್ಣ ಶುಭ ಸಂಕೇತವೂ ಹೌದು.
ನವರಾತ್ರಿ 2: ಅಕ್ಟೋಬರ್ 4, ಶುಕ್ರವಾರ, ಹಸಿರು ಬಣ್ಣ
ಶುಕ್ರವಾರದ ದಿನ ಹಸಿರು ಬಣ್ಣವನ್ನು ಸಂಭ್ರಮಿಸಲಾಗುವುದು. ಹಸಿರು ಬಣ್ಣ ಬೆಳವಣಿಗೆ, ಸಮೃದ್ಧಿ, ಪ್ರಗತಿಯ ಸಂಕೇತ. ಈ ದಿನ ದುರ್ಗೆಗೆ ಪೂಜೆ ಮಾಡುವಾಗ ಹಸಿರು ಬಣ್ಣ ಉಡುಪು ಧರಿಸಿ ದೇವಿಯನ್ನು ಆರಾಧಿಸಿ.
ನವರಾತ್ರಿ 3: ಅಕ್ಟೋಬರ್ 5, ಶನಿವಾರ . ಕಂದು ಬಣ್ಣ
ಇದು ಭಾವನೆಯನ್ನು ನಿಯಂತ್ರಿಸುತ್ತದೆ, ಮನುಷ್ಯನಲ್ಲಿನ ಅಹಂ ಹೊರದೂಡುತ್ತದೆ. ನವರಾತ್ರಿ ಸಂಭ್ರಮದಲ್ಲಿ ಭಾಗಿಯಾಗಲು ಬಯಸುವವರಿಗೆ ಈ ಅವಧಿ ಕೂಡ ಅನುಕೂಲಕರವಾಗಿದೆ.
ನವರಾತ್ರಿ 4: ಅಕ್ಟೋಬರ್ 6, ಭಾನುವಾರ, ಕಿತ್ತಳೆ ಬಣ್ಣ
ಭಾನುವಾರ ಕಿತ್ತಳೆ ಬಣ್ಣ, ಸೂರ್ಯನಿಗೂ ಇದೇ ಸೂಕ್ತ, ಹೀಗಾಗಿ ಈ ದಿನ ಸೂರ್ಯ ನಮಸ್ಕಾರ ಮಾಡಿ ಕಿತ್ತಳೆ ಬಣ್ಣದ ಉಡುಪು ಧರಿಸಿ ನವರಾತ್ರಿ ಸಂಭ್ರಮದಲ್ಲಿ ಭಾಗಿಯಾಗಿ.
ನವರಾತ್ರಿ 5: ಅಕ್ಟೋಬರ್ 7, ಸೋಮವಾರ, ಬಿಳಿ
ಸೋಮವಾರ ಚಂದ್ರನ ಬಣ್ಣ ಬಂದಿದೆ, ಸೋಮವಾರ ನವರಾತ್ರಿ ಸಂಭ್ರಮದಲ್ಲಿ ಭಾಗಿಯಾಗುವವರು ಬಿಳಿ ಬಣ್ಣದ ಉಡುಪು ತೊಟ್ಟು ಸಂಭ್ರಮಿಸಿ.
ನವರಾತ್ರಿ 7: ಅಕ್ಟೋಬರ್ 9, ಬುಧವಾರ, ರಾಯಲ್ ಬ್ಲೂ(ನೀಲಿ ಬಣ್ಣ)
ಈ ಬಣ್ಣದ ಉಡುಪು ಅತ್ಯಾಕರ್ಷಕ ಬಣ್ಣವಾಗಿದೆ, ಅಲ್ಲದೆ ಇದು ಸಂಪತ್ತು, ನಿಯತ್ತಿನ ಸಂಕೇತ ಕೂಡ ಹೌದು, 7ನೇ ದಿನ ಈ ಬಣ್ಣದಲ್ಲಿ ನವರಾತ್ರಿ ಸಂಭ್ರಮದಲ್ಲಿ ಭಾಗಿಯಾಗಬಹುದು.
ನವರಾತ್ರಿ 8ನೇ ದಿನ: ಅಕ್ಟೋಬರ್ 10, ಪಿಂಕ್ ಬಣ್ಣ
ಪಿಂಕ್ ಬಣ್ಣ ಬಣ್ಣ ಪ್ರೀತಿ, ಸಹಿಷ್ಣುತೆಯ ಸಂಕೇತ. ಇದೊಂದು ಆಕರ್ಷಕ ಬಣ್ಣವಾಗಿದೆ. ಇದು ನಮ್ಮ ಲುಕ್‌ಗೆ ಮತ್ತಷ್ಟು ಮೆರಗು ನೀಡುವ ಕಲರ್ ಆಗಿದೆ.
ನವರಾತ್ರಿ ದಿನ 9: ಶುಕ್ರವಾರ, ನೇರಳೆ ಬಣ್ಣ
ಇದು ಅದೃಷ್ಟ,ಶ್ರೀಮಂತಿಕೆಯ ಸಮಕೇತ, ಅಲ್ಲದೆ ಈ ಬಣ್ಣ ಎಲ್ಲರಿಗೂ ಆಕರ್ಷಕ ಲುಕ್ ನೀಡುತ್ತದೆ.
ಈ ನವರಾತ್ರಿಯಲ್ಲಿ ಬಣ್ಣದ ಸಂಭ್ರಮಕ್ಕೆ ರೆಡಿಯಾಗುವುದಾದರೆ ಈ ಬಣ್ಣಗಳ ಜೊತೆ ರೆಡಿಯಾಗಿ, ನವರಾತ್ರಿ ಹಬ್ಬದ ಶುಭಾಶಯಗಳು



Click it and Unblock the Notifications
