Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ನಾದಿಯಾ ಕೊಂಡೆ: ಹೆಣ್ಮಕ್ಕಳಿಗೆ ಸಕತ್ ಸ್ಟೈಲಿಷ್ ಲುಕ್ ನೀಡುವ ಈ ರೀತಿಯ ತುರುಬು ಕಟ್ಟುವುದು ಹೇಗೆ?
ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದವರು ನಾದಿಯಾ ಮೊಯ್ಡು, ತಮಿಳು ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದ ನಟಿ, ಆ ಕಾಲದಿಂದಲೂ ಸ್ಟೈಲಿಷ್ ಲುಕ್ ಮೂಲಕ ಗಮನ ಸೆಳೆದವರು, ಮಧ್ಯ ವಯಸ್ಸು ದಾಟಿದರೂ ಈಗಲೂ ಅವರನ್ನು ನೋಡಿದರೆ 30ರ ಹರೆಯದವರಂತೆ ಕಾಣುತ್ತಾರೆ, ಅಲ್ಲದೆ ಅಷ್ಟೇ ಸ್ಟೈಲಿಷ್ ಕೂಡ.
ನಾದಿಯಾ ಹೇರ್ ಸ್ಟೈಲ್, ನಾದಿಯಾ ಫ್ರಾಕ್ ಹೀಗೆ ಅವರ ಸ್ಟೈಲ್‌ಗಳು ಸಕತ್ ಟ್ರೆಂಡ್ ಸೆಟ್‌ಮಾಡಿತ್ತು, ಅದರಂತೆ ಈಗಲೂ ಅವರು ತುರುಬು ಅಂದರೆ ಕೊಂಡೆ ಕಟ್ಟುವ ಸ್ಟೈಲ್ ನೋಡಿ ಅನೇಕರು ನಾವು ಕೂಡ ಅದೇ ರೀತಿ ಹೇರ್ ಸ್ಟೈಲ್ ಮಾಡಬೇಕು ಎಂದು ಬಯಸಿರುತ್ತಾರೆ, ಏಕೆಂದರೆ ಅಷ್ಟೊಂದು ಸ್ಟೈಲಿಷ್ ಆಗಿರುತ್ತದೆ ಅವರು ಕಟ್ಟುವ ತುರುಬು.

ಇನ್ನು ಉದ್ದ ಕೂದಲಿದ್ದರೆ ತುರುಬು ಕಟ್ಟಬಹುದು, ಆದರೆ ಈಗ ಅವರ ಕೂದಲು ಭುಜದವರೆಗೆ ಇದೆ, ಅಷ್ಟು ಚಿಕ್ಕ ಕೂದಲನ್ನು ತುರುಬು ಕಟ್ಟುವುದು ಹೇಗೆ ಎಂಬುವುದು ಬಹುತೇಕರಿಗೆ ಗೊತ್ತಿರುವುದಿಲ್ಲ, ಇದೀಗ ಅವರು ತಮ್ಮ ಇನ್‌ಸ್ಟಾಖಾತೆಯಲ್ಲಿ ನಾನು ಹೇಗೆ ತುರುಬು ಕಟ್ಟುತ್ತೇನೆ ಎಂಬುವುದನ್ನು ಡೆಮೋ ಮಾಡಿ ತೋರಿಸಿದ್ದಾರೆ, ಅವು ಹೇಳಿರುವ ಸ್ಟೈಲ್ ಟಿಪ್ಸ್ ಅನುಸರಿಸಿದರೆ ಚಿಕ್ಕ ಕೂದಲಿದ್ದರೂ ಸಕತ್ ಸ್ಟೈಲಿಷ್ ಹೇರ್‌ಸ್ಟೈಲ್ ಮಾಡಬಹುದು.
ಶಾರ್ಟ್ ಹೇರ್ ಇರುವರವರು ಕೂದಲನ್ನು ತುರುಬು ರೀತಿಯಲ್ಲಿ ಕಟ್ಟಲು 3 U ಪಿನ್ ಬೇಕಾಗುತ್ತದೆ
ನೀವು ಕೂದಲನ್ನು ಹಿಡಿದು ಮೇಲಕ್ಕೆ ಎತ್ತಬೇಕು ನಂತರ ತಿರುಗಿಸಿ ನಂತರ ಯು ಪಿನ್ ನಂತರ ತಿರುಗಿಸಿ ನಂತರ ಮೇಲಿಂದ ನಂತರ ಸೈಡ್‌ನಿಂದ ಪಿನ್ ಹಾಕಿ, ನಂತರ ಮುಂದುಗಡೆ ಸ್ವಲ್ಪ ಎತ್ತಬೇಕು, ಆವಾಗ ಈ ಹೇರ್ ಸ್ಟೈಲ್ ತುಂಬಾ ಸೂಪರ್ ಆಗುತ್ತದೆ.
ಮಾಡರ್ನ್ ಆಗಲಿ, ವೆಸ್ಟರ್ನ್ ಆಗಲಿ ಈ ಬಗೆಯ ತುರುಬು ಹೇರ್ ಸ್ಟೈಲ್ ಸಕತ್ ಸೂಟ್ ಆಗಿರುತ್ತದೆ
ನೀವು ಸೂಟ್ ಧರಿಸಿ, ಸೆಲ್ವಾರ್ ಧರಿಸಿ, ಮಿಡಿ ಹೀಗೆ ಯಾವುದೇ ಡ್ರೆಸ್ ಆಗಿರಲಿ ಈ ತುರುಬು ಸಕತ್ ಸ್ಟೈಲಿಷ್ ಲುಕ್ ನೀಡುತ್ತೆ, ಹಾಗಾಗಿ ಈ ತುರುಬು ಎಂಬುವುದು ಓಲ್ಡ್ ಫ್ಯಾಷನ್ ಅಲ್ಲ, ಹೇಗೆ ಕಟ್ಟುತ್ತೇವೆ ಎಂಬುವುದು ಮುಖ್ಯ.
ತುರುಬು ಕಟ್ಟುವ ರೀತಿ ನೀಡುವುದು ನಮ್ಮ ಲುಕ್‌ಗೆ ಮೆರಗು
ಹೌದು ನಾವು ತುರುಬು ಕಟ್ಟುವ ರೀತಿ ನಾವು ಮನೆಯ್ಲಿರುವಾಗ ಇರುವ ಲುಕ್ ನೀಡಬಹುದು ಅಥವಾ ಫಂಕ್ಷನ್‌ಗೆ ಹೋಗುವಾಗ ನೀಡುವ ಲುಕ್ ಕೂಡ ನೀಡಬಹುದು, ಡ್ರೆಡಿಷನಲ್ ಲುಕ್ ಕೂಡ ನೀಡಬಹುದು, ತುರುಬು ಕಟ್ಟುವ ಸರಿಯಾದ ರೀತಿ ಗೊತ್ತಿರಬೇಕು ಅಷ್ಟೇ.
ಈ ರೀತಿ ತುರುಬು ಕಟ್ಟಿ ಒಂದು ಹೂವು ಮುಟ್ಟಿದರೆ ಅಥವಾ ಮಲ್ಲಿಗೆ ಹೂವು ಸುತ್ತಿದರೆ ತುಂಬಾನೇ ಆಕರ್ಷಕವಾಗಿ ಕಾಣುತ್ತೆ, ನೀವು ಈ ರೀತಿಯ ತುರುಬು ಟ್ರೈ ಮಾಡಿಲ್ಲ ಎಂದಾದರೆ ಟ್ರೈ ಮಾಡಿ ನೋಡಿ ಸಕತ್ ಚೆನ್ನಾಗಿ ಕಾಣುತ್ತೆ.
ಈ ಹೇರ್ ಸ್ಟೈಲ್ ನೋಡಿ ಸಕತ್ ಸ್ಟೈಲಿಷ್ ಆಗಿದೆ ಅಲ್ವಾ?
ಈ ಹೇರ್ ಸ್ಟೈಲ್ ಓಡಿ ಸಿಂಪಲ್ ಕೊಂಡೆ, ಆದರೆ ಆ ಹೂವು ಇದಕ್ಕೆ ಭಿನ್ನ ಲುಕ್ ನೀಡಿದೆ ಸಕತ್ ಆಗಿದೆ ಅಲ್ವಾ? ಸಿಂಪಲ್ ಲುಕ್‌ನ ಸ್ಟೈಲಿಷ್ ಆಗಿಸುವ ವಿಧಾನ.
ಇಲ್ಲಿಯೂ ಹೂವೇ ಹೈಲೈಟ್ಸ್
ಈ ಹೇರ್ ಸ್ಟೈಲ್ ನೋಡಿ ಎಷ್ಟೊಂದು ಸಿಂಪಲ್ ಆಗಿದೆ, ಆದರೆ ಹೇರ್‌ಸ್ಟೈಲ್‌ಗೆ ಲುಕ್ ನೀಡಿದ್ದು ಹೂವು, ಈ ರೀತಿಯ ದೊಡ್ಡ ಹೂವು ಅಥವಾ ಮಲ್ಲಿಗೆ ಹೂವು ತುಂಬಾನೇ ಆಕರ್ಷಕವಾಗಿ ಕಾಣುವುದು.



Click it and Unblock the Notifications
