Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪುರುಷರೇ ಅಂದವಾಗಿ ಕಾಣ್ಬೇಕಾ? ಹಾಗಾದ್ರೆ ಈ ಪ್ರಾಡಕ್ಟ್‌ಗಳು ಇರಲೇಬೇಕು
ಸುಂದರವಾಗಿ ಕಾಣ್ಬೇಕು ಅನ್ನೋ ಆಸೆ ಯಾರಿಗಿರೋದಿಲ್ಲ ಹೇಳಿ. ಪ್ರತಿಯೊಬ್ಬರು ಕೂಡ ಸೌಂದರ್ಯದ ಹಿಂದೆ ಬಿದ್ದವರೇ. ಮುಂಚೆ ಮಹಿಳೆಯರು ಮಾತ್ರ ತಮ್ಮ ಸೌಂದರ್ಯ ಬಗ್ಗೆ ಗಮನ ಹರಿಸುತ್ತಿದ್ದರು ಇತ್ತೀಚಿಗೆ ಪುರುಷರು ಕೂಡ ತಮ್ಮ ಬಾಹ್ಯ ಸೌಂದರ್ಯದ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ನಾವು ನಮ್ಮನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಸೌಂದರ್ಯ ತನ್ನಿಂದ ತಾನೇ ಹೆಚ್ಚಾಗುತ್ತದೆ. ಹೀಗಾಗಿ ಈ ಪ್ರಾಡಕ್ಟ್‌ಗಳು ಪುರುಷರ ಬಳಿ ಇದ್ದರೆ ಸಾಕು. ನಿಮ್ಮ ಅಂದ ಹೆಚ್ಚಾಗುತ್ತದೆ. ಹಾಗಾದ್ರೆ ಪುರುಷರ ಬಳಿ ಇರಲೇಬೇಕಾದ ಆ ಪ್ರಾಡಕ್ಟ್‌ಗಳು ಯಾವುದು ಅನ್ನೋದನ್ನು ತಿಳಿಯೋಣ.

1. ಹೇರ್‌ಸ್ಟೈಲ್ ಪ್ರಾಡಕ್ಟ್‌ಗಳು
ನಾವು ಮಾಡೋ ಹೇರ್‌ಸ್ಟೈಲ್ ನಮ್ಮ ಅಂದವನ್ನು ಹೆಚ್ಚಿಸುತ್ತದೆ. ಕೂದಲನ್ನು ಸರಿಯಾಗಿ ಬಾಚಿಕೊಳ್ಳೋದು ಕೂಡ ನಮ್ಮ ಶಿಸ್ತನ್ನು ತೋರಿಸುತ್ತದೆ. ಹೀಗಾಗಿ ಬಾಚಣಿಗೆ, ಹೇರ್ ಜೆಲ್, ಅಗತ್ಯವಿದ್ರೆ ಸ್ಟ್ರೈಟ್‌ನಿಂಗ್ ಮೆಷಿನ್ ಇಟ್ಟುಕೊಳ್ಳಿ. ಹೊರಗಡೆ ಹೋಗುವಾಗ ನಿಮ್ಮ ಬಟ್ಟೆಗೆ ಹೋಲುವ ರೀತಿ ಹೇರ್ ಸ್ಟೈಲ್ ಮಾಡಿಕೊಂಡರೆ ಸುಂದರವಾಗಿ ಕಾಣಿಸುತ್ತದೆ.
2. ಸಾಬೂನು ಮತ್ತು ಶವರ್ ಜೆಲ್
ಸ್ನಾನ ಮಾಡೋದಕ್ಕೆ ಹೆಚ್ಚಿನವರು ಸಾಬೂನು ಬಳಕೆ ಮಾಡುತ್ತಾರೆ. ಸಾಬೂನು ಬಳಸಿ ಸ್ನಾನ ಮಾಡೋದ್ರಿಂದ ನಮಗೆ ಫ್ರೆಶ್ ಆದ ಅನುಭವವನ್ನು ನೀಡುತ್ತದೆ.
ಹಿಂದೆಲ್ಲಾ ಸ್ನಾನಕ್ಕಾಗಿ ಹೆಚ್ಚಾಗಿ ಸಾಬೂನು ಬಳಕೆ ಮಾಡಲಾಗುತ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಸಾಬೂಲ್‌ಗಳು ಮರೆಯಾಗಿ ಶವರ್ ಜೆಲ್‌ಗಳು ರಾರಾಜಿಸುತ್ತಿವೆ. ಸ್ನಾನಕ್ಕೆ ಶವರ್ ಜೆಲ್ ಬಳಕೆ ಮಾಡುವುದು ನಿಮಗೆ ಲಕ್ಷುರಿ ಅನುಭವವನ್ನು ನೀಡುತ್ತದೆ.
3. ಶೇವಿಂಗ್ ಕಿಟ್ ಮತ್ತು ಟ್ರಿಮ್ಮರ್
ಸಾಮಾನ್ಯವಾಗಿ ಪುರುಷರು ಶೇವಿಂಗ್ ಕಿಟ್ ಇಟ್ಟುಕೊಂಡಿರುತ್ತಾರೆ. ಶೇವಿಂಗ್ ಕಿಟ್ ಮನೆಯಲ್ಲಿದ್ದರೆ ಸಲೂನ್‌ಗೆ ಹೋಗಬೇಕಾದ ಅವಶ್ಯಕತೆ ಇರೋದಿಲ್ಲ. ಇನ್ನೂ ಟ್ರಿಮ್ಮರ್ ಇದು ಪುರುಷರಿಗೆ ಬೇಕಾಗಿರುವ ಮುಖ್ಯವಾದ ಪ್ರಾಡಕ್ಟ್‌ಗಳಲ್ಲಿ ಒಂದು. ಟ್ರಿಮ್ಮರ್‌ನಿಂದ ನಿಮ್ಮ ಗಡ್ಡಕ್ಕೆ ಸರಿಹೊಂದುವ ಶೇಪ್ ನೀಡಬಹುದು. ಇದರಿಂದ ಪುರುಷರ ಗಡ್ಡದ ಅಂದ ಮತ್ತಷ್ಟು ಹೆಚ್ಚಾಗುತ್ತದೆ.
4. ಫೇಸ್‌ವಾಶ್
ಅನೇಕರು ಇಂದಿಗೂ ಕೂಡ ಮುಖಕ್ಕೆ ಸಾಬೂನು ಬಳಕೆ ಮಾಡುತ್ತಾರೆ. ಆದರೆ ಮೈಗೆ ಬಳಸುವ ಸಾಬೂನನ್ನು ಮುಖಕ್ಕೆ ಬಳಕೆ ಮಾಡಬಾರದು ಏಕೆಂದರೆ ಮುಖ ತುಂಬಾನೇ ಸೂಕ್ಷ್ಮ. ಹೀಗಾಗಿ ವಿಶೇಷವಾಗಿ ಮುಖಕ್ಕಾಗಿ ತಯಾರಿಸಿದ ಫೇಸ್‌ವಾಶ್‌ಗಳನ್ನೇ ಬಳಕೆ ಮಾಡಿ. ಇದು ಮುಖದಲ್ಲಿರುವ ಕೊಳಕು ಹಾಗೂ ಕಲ್ಮಶಗಳನ್ನು ತೊಲಗಿಸಿ. ಮುಖದಲ್ಲಿ ಸತ್ತ ಜೀವಕೋಶಗಳನ್ನು ತೆಗೆದು ಹಾಕುತ್ತದೆ.
5. ಡಿಯೋಡ್ರೆಂಟ್
ಪುರುಷರಿಗಾಗಲಿ ಅಥವಾ ಮಹಿಳೆಯರಿಗಾಗಲಿ ಡಿಯೋಡ್ರೆಂಟ್ ಬಳಕೆ ಮಾಡುವುದು ತುಂಬಾನೇ ಮುಖ್ಯ. ಬೆವತು ದುರ್ವಾಸನೆ ಹೊಡೆಯುತ್ತಿರುವ ನಮ್ಮ ದೇಹವನ್ನು ಫ್ರೆಶ್ ಆಗಿ ಸುಗಂಧ ದ್ರವ್ಯದ ವಾಸನೆ ಬೀರಲು ಈ ಡಿಯೋಡ್ರೆಂಟ್‌ಗಳು ಸಹಾಯ ಮಾಡುತ್ತದೆ. ಇತ್ತೀಚಿಗೆ ಬೇರೆ ಬೇರೆ ಫ್ಲೇವರ್‌ಗಳಲ್ಲಿ ಡಿಯೋಡ್ರೆಂಟ್‌ಗಳು ಲಭ್ಯವಿದೆ. ಅನೇಕರು ಮಹಿಳೆಯರನ್ನು ಆಕರ್ಷಿಸಲೆಂದು ಡಿಯೋಡ್ರೆಂಟ್‌ಗಳನ್ನು ಬಳಕೆ ಮಾಡುತ್ತಾರೆ.
6. ಸ್ಕ್ರಬ್ ಮತ್ತು ಮೋಸ್ಚರೈಸರ್
ಸ್ಕ್ರಬ್ ಕೂಡ ಮಹಿಳೆಯರು ಬಳಕೆ ಮಾಡುವ ಮತ್ತೊಂದು ವಸ್ತು. ಇತ್ತೀಚಿಗೆ ಪುರುಷರು ಕೂಡ ಇದನ್ನು ಬಳಕೆ ಮಾಡುತ್ತಿದ್ದಾರೆ. ಇದು ಸತ್ತ ಕೋಶಗಳನ್ನು ತೆಗೆದುಹಾಕುವುದು ಮಾತ್ರವಲ್ಲದೆ ಕೂದಲು ಉದುರುವುದನ್ನು ತಡೆಯುತ್ತದೆ. ಪುರುಷರಾಗಲಿ ಮಹಿಳೆಯರಾಗಲಿ ಮೋಸ್ಚರೈಸರ್ ಬಳಕೆ ಮಾಡಲೇಬೇಕು. ಇದು ನಿಮ್ಮ ಮುಖವನ್ನು ತೇವವಾಗಿಡಲು ಸಹಾಯ ಮಾಡುತ್ತದೆ. ಹಾಗೂ ಮೃದುವಾದ ತ್ವಚೆ ನಿಮ್ಮದಾಗಿಸುತ್ತದೆ.
7. ಲಿಪ್ ಬಾಮ್ ಮತ್ತು ಶಾಂಪು
ಲಿಪ್‌ಬಾಮ್ ಕೇವಲ ಮಹಿಳೆಯರಿಗಷ್ಟೇ ಅಂತ ಅನೇಕರು ಅಂದುಕೊಂಡಿದ್ದಾರೆ. ಆದರೆ ಆ ಪರಿಕಲ್ಪನೆ ತಪ್ಪು ಪುರುಷರು ಕೂಡ ಲಿಪ್ ಬಾಮ್‌ಗಳನ್ನು ಬಳಕೆ ಮಾಡಬೇಕು. ಒಡೆದ ತುಟಿಯನ್ನು ಮಾಸ್ಚರ್ ಮಾಡೋದಕ್ಕೆ ಇದು ಸಹಾಯ ಮಾಡುತ್ತದೆ. ಇನ್ನೂ ಚಳಿಗಾಲದಲ್ಲಿ ಲಿಪ್‌ಬಾಮ್ ನಿಮ್ಮ ಬಳಿ ಇರಲೇಬೇಕು. ಇನ್ನೂ ಕೂದಲಿನ ಆರೋಗ್ಯ ಕಾಪಾಡೋದಕ್ಕೆ ಶಾಂಪು ಒಳ್ಳೆಯದು. ಆದರೆ ಶಾಂಪು ಬಳಕೆ ಮಾಡುವಾಗ ಕೊಂಚ ಜಾಗರೂಕರಾಗಿರಿ. ಕೆಲವೊಂದು ಶಾಂಪುಗಳಲ್ಲಿ ಅತಿ ಹೆಚ್ಚಿನ ಕೆಮಿಕಲ್ ಸೇರಿಸಲಾಗಿರುತ್ತದೆ.
ಸ್ಕಿನ್‌ಕೇರ್, ಹೇರ್‌ಕೇರ್, ಬಾಡಿಕೇರ್ ಅನ್ನು ಪ್ರತಿಯೊಬ್ಬರು ಮಾಡಲೇಬೇಕು. ಕೆಲ ಪುರುಷರು ಇದರ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳೋದಿಲ್ಲ. ಆದರೆ ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಇದು ತುಂಬಾನೇ ಒಳ್ಳೆಯದು. ಬೇರೆಯವರಿಗಾಗಿ ಅಲ್ಲದಿದ್ದರೂ ನಿಮಗಾಗಿ ನೀವು ಇದನ್ನು ಮಾಡಲೇಬೇಕು.



Click it and Unblock the Notifications


