Latest Updates
-
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ!
ಮೊರೊಕ ನೀಲಿ ಪೌಡರ್ ಮುಖ ಬಿಳಿಯಾಗಿಸುತ್ತಾ? ಅಸಲಿ ಸತ್ಯವೇನು?
ಮುಖ ಸುಂದರವಾಗಿ ಬಿಳಿಯಾಗಿ ಕಾಣಿಸಬೇಕು, ಕಲೆಗಳಿಲ್ಲದೆ ಹೊಳಪು ಬರಬೇಕು ಎಂಬುದು ಎಲ್ಲಾ ಯುವತಿಯರು, ಮಹಿಳೆಯರ ಬಯಕೆ ಆಗಿರುತ್ತೆ. ಇದಕ್ಕಾಗಿ ಹಲವು ಬಹಳಷ್ಟು ಖರ್ಚು ಕೂಡ ಮಾಡಿ ತಮ್ಮ ಮುಖ ಬಿಳಿಯಾಗಿ ಕಲೆ ರಹಿತವಾಗಿ ಕಾಣಿಸಬೇಕು ಎಂದು ಕಷ್ಟಪಡುವುದು ನೋಡಬಹುದು. ಹಾಗೆ ವಿವಿಧ ಬಗೆಯ ಕ್ರೀಮ್‌ಗಳು, ಚಿಕಿತ್ಸೆಗಳು, ಪಾರ್ಲರ್ ಹೀಗೆ ಹತ್ತಾರು ರೀತಿಯ ವಿಧಾನಗಳಿಗೆ ಅವರು ಒಳಗಾಗುತ್ತಾರೆ.
ಆದ್ರೆ ಮತ್ತೆ ಕೆಲವರು ಬಹುಬೇಗ ಫಲಿತಾಂಶ ಪಡೆಯಲು ಸಿಕ್ಕ ಸಿಕ್ಕ ಕ್ರೀಮ್‌ಗಳು, ಮನೆಮದ್ದುಗಳ ಮಾಡುತ್ತಾರೆ, ಆದ್ರೆ ಇತ್ತೀಚಿನ ದಿನಗಳಲ್ಲಿ ಇದೆಲ್ಲದಕ್ಕಿಂತ ಹೆಚ್ಚಾಗಿ ಆನ್‌ಲೈನ್‌ನಲ್ಲಿ ಕೆಲವೊಂದು ಬ್ಯೂಟಿ ಪ್ರೋಡಕ್ಟ್‌ಗಳು, ವಿಡಿಯೋಗಳಲ್ಲಿ ಅವರು ನೀಡುವ ಟಿಪ್ಸ್‌ಗಳು ಕೂಡ ವೈರಲ್ ಆಗುತ್ತಿದೆ. ಜನರು ಆನ್‌ಲೈನ್‌ನಲ್ಲಿ ತೋರಿಸುವ ಬ್ಯೂಟಿ ಪ್ರೋಡಕ್ಟ್‌ಗಳ ಬಳಸಲು ಮುಂದಾಗುವುದು ನೋಡಬಹುದು.

ಇಂತ ಟಿಪ್ಸ್ ಹಾಗೂ ವೈರಲ್ ವಿಡಿಯೋ ಸಾಲಿನಲ್ಲಿ ಈಗ ನೀಲಿ ಬಣ್ಣದ ಪೌಡರ್‌ನಿಂದ ಮಾಡಿದ ಮಾಸ್ಕ್ ಅನ್ನು ಮುಖಕ್ಕೆ ಬಳಸುತ್ತಿರುವ ಹೊಸದೊಂದು ಟ್ರೆಂಡ್ ಹುಟ್ಟಿಕೊಂಡಿದೆ. ಇದರಲ್ಲಿ ಯುವತಿಯರು ಮುಖಕ್ಕೆ ನೀಲಿ ಬಣ್ಣದ ಪೌಡರ್‌ನಿಂದ ಮಾಡಿವ ಮಾಸ್ಕ್ ಧರಿಸುವುದು ಅವರ ಮುಖ ಬಿಳಿಯಾಗುವ ಹಾಗೂ ಹೊಳೆಯುವಂತೆ ವಿಡಿಯೋ ಮಾಡಿ ಹಂಚಿಕೊಳ್ಳುವುದು ನೋಡಬಹುದು.
ಮೊರಾಕೋದಿಂದ ಕೇಳಿಬರುತ್ತಿರುವ ಈ ನೀಲಿ ಬಣ್ಣದ ಪೌಡರ್ ಹ್ಯಾಕ್ ಯುವ ಪೀಳಿಗೆಯ ಗಮನ ಸೆಳೆದಿದೆ. ಹಾಗೆ ಎಲ್ಲರು ಈ ರೀತಿಯ ವಿಡಿಯೋ ಮಾಡಿ ಹಂಚಿಕೊಳ್ಳುತ್ತಿರುವುದು ಕೂಡ ನಾವು ನೋಡಬಹುದು. ಉದು ಉರಿಯೂತ ನಿವಾರಕ, ಚರ್ಮದ ಹೊಳಪು ಮರಳಿ ತರಲಿದೆ, ಕಲೆಗಳ ನಿವಾರಣೆ ಮಾಡಲಿದೆ, ಹೈಪರ್ ಪಿಂಗ್ಮೆಂಟೇಶನ್ ಕಡಿಮೆ ಮಾಡಲಿದೆ ಎಂದು ವಾದ ಮಾಡಲಾಗಿದೆ.
ಮೊರೊಕನ್ ನೀಲಿ ಪೌಡರ್ ಸೌಂದರ್ಯ ಹೆಚ್ಚಿಸುತ್ತಾ?
ಭಾರತದಲ್ಲಿ ಮುಖದ ಸೌಂದರ್ಯದ ಹಿಂದೆ ಅದರಲ್ಲೂ ಗಿಡಮೂಲಿಕೆ ಔಷಧಿ ಪಾತ್ರದಲ್ಲಿ ಇಂಡಿಗೊ ಹೂವಿನ ಬಳಕೆ ಇರುವುದು ನೋಡಬಹುದು. ಅದು ನೀಲಿ ಬಣ್ಣದ ಹೂವಿನ ಮೂಲಕ ಪಡೆಯಲಾಗುವ ಪೌಡರ್ ಆಗಿತ್ತು. ಮೊರೊಕನ್ ಪೌಡರ್ ಮಾರಾಟ ಮಾಡುವ ಹತ್ತಾರು ಕಂಪನಿಗಳ ಹೆಸರಿನ ಪ್ಯಾಕೆಟ್ ಅನ್ನು ನಾವು ಆನ್‌ಲೈನ್‌ನಲ್ಲಿ ನೋಡಬಹುದು. ಈ ಮೊರೊಕ ನೀಲಿ ಪೌಡರ್ ಅನ್ನು ಇಂಡಿಗೊಫೆರಾ ಸಫ್ರುಟಿಕೋಸಾದಂತಹ ಸಸ್ಯಗಳಿಂದ ನೇರವಾಗಿ ತಯಾರಿಸಲಾಗುತ್ತದೆ.
ಈ ಮೊರೊಕ ಪೌಡರ್ ಕೂಡ ನೈಸರ್ಗಿಕವಾಗಿ ಪಡೆದ ಪುಡಿ ಎಂದು ಹೇಳಲಾಗುತ್ತಿದೆ. ಇದನ್ನು ಕೂದಲಿನ ಬಣ್ಣ ಹಾಗೂ ಮುಖದ ಕಾಂತಿ ಹೆಚ್ಚಿಸಲು ಬಳಸಲಾಗುತ್ತಿದೆ. ಸಾಮಾನ್ಯವಾಗಿ ಈ ನೀಲಿ ಪೌಡರ್ ಕೂಡ ಇಂಡಿಗೊ ಹೂವಿನಿಂದಲೇ ಪಡೆಯಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ಮೊರೊಕ ಪೌಡರ್ ಅನ್ನು ಶತಮಾನಗಳ ಹಿಂದಿನಿಂದಲೂ ಉತ್ತರ ಆಫ್ರಿಕಾ ಭಾಗದಲ್ಲಿ ಸೌಂದರ್ಯ ವರ್ಧಕವಾಗಿ ಬಳಸಲಾಗುತ್ತಿದೆಯಂತೆ.
ಚೀನಾ ಮತ್ತು ಜಪಾನ್‌ನಲ್ಲೂ ಈ ನೀಲಿ ಬಣ್ಣದ ಸೌಂದರ್ಯ ವರ್ಧಕ ಪೌಡರ್ ಆಗಿ ಬಳಕೆಯಲ್ಲಿದೆ. ಇದು ಮುಖದ ಕಲೆಗಳ ನಿವಾರಣೆಗೆ ಬಹಳ ಉಪಕಾರಿ ಎಂದು ಹೇಳಲಾಗಿದೆ. ಹಾಗೆ ಮುಖದಲ್ಲಿನ ಕಪ್ಪು ಕಲೆಗಳ ನಿವಾಣೆಗೂ ಇದು ಸಹಕಾರಿಯಂತೆ. ಸದ್ಯ ಈ ನೀಲಿ ಪೌಡರ್‌ನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.



Click it and Unblock the Notifications