Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಳಿಗಾಲದಲ್ಲಿ ನುಗ್ಗೆ ಸೊಪ್ಪಿನ ಈ ಫೇಸ್ ಮಾಸ್ಕ್ ಬಳಸಿ..! ಮುಖ ಹೊಳೆಯುವಂತೆ ಮಾಡಿ!!
ಚಳಿಗಾಲದಲ್ಲಿ ನಮ್ಮ ತ್ವಚೆಯ ಆರೋಗ್ಯ ಕಾಪಾಡಲು ಹಲವು ರೀತಿಯ ಉಪಾಯಗಳನ್ನು ನೀವು ಮಾಡುತ್ತೇವೆ. ಚಳಿಗಾಲದಲ್ಲಿಯೇ ನಮ್ಮ ತ್ವಚೆ ಬಹಳ ಹಾನಿಗೆ ತುತ್ತಾಗುತ್ತದೆ. ಒಣ ಹವೆಯ ಕಾರಣದಿಂದಾಗಿ ನಮ್ಮ ಚರ್ಮ ಒಣಗಿ ಹಾನಿಯಾಗುವುದು ಒಡೆಯುವುದು ಸಾಮಾನ್ಯವಾಗಿ. ಹೀಗಾಗಿ ನಾವು ಚಳಿಗಾಲದಲ್ಲಿ ತ್ವಚೆಯ ಆರೋಗ್ಯದ ಕಡೆ ಹೆಚ್ಚು ಗಮನ ಇಡುವುದು ಮುಖ್ಯವಾಗುತ್ತದೆ.
ತ್ವಚೆಯ ಆರೈಕೆ ಎಂದರೆ ನಾವು ಕ್ರೀಮ್ ಬಳಸುವುದು, ಪಾರ್ಲರ್ ಹೋಗುವುದು, ದುಬಾರಿ ಬೆಲೆಯ ಕ್ರೀಮ್ ಹಚ್ಚುತ್ತೇವೆ. ಆದ್ರೆ ಇದಕ್ಕೆ ನಾವು ಆಹಾರದ ಮೂಲಕವೂ ನಮ್ಮ ತ್ವಚೆ ರಕ್ಷಣೆ ಮಾಡಬಹುದು. ಹೌದು ನಮ್ಮ ಚರ್ಮದ ಆರೋಗ್ಯ ಕಾಪಾಡಲು ನಾವು ಬಹಳಸುವ ಆಹಾರದಲ್ಲೂ ಒಂದಿಷ್ಟು ಪರಿಹಾರಗಳಿವೆ. ಅದರಲ್ಲೂ ಸೊಪ್ಪಿನ ಪದಾರ್ಥಗಳು ನಮ್ಮ ತ್ವಚೆಯ ಆರೋಗ್ಯಕ್ಕೆ ಬಹಳ ಉತ್ತಮ.

ನೈಸರ್ಗಿಕವಾಗಿ ನಮ್ಮ ತ್ವಚೆಯನ್ನು ಚಳಿಯಿಂದ, ಹವೆಯಿಂದ ಕಾಪಾಡಿಕೊಳ್ಳಲು ನುಗ್ಗೆ ಸೊಪ್ಪು ಬಹಳ ಉಪಕಾರಿ ಎಂಬುದನು ನಿಮಗೆ ಗೊತ್ತಿದ್ಯಾ? ಹೌದು ಸುಲಭವಾಗಿ ನಮ್ಮ ತ್ವಚೆಯ ಆರೋಗ್ಯ ಕಾಪಾಡಲು ಈ ನುಗ್ಗೆ ಸೊಪ್ಪು ಸಹಕಾರಿಯಾಗಿದೆ. ನುಗ್ಗೆ ಸೊಪ್ಪಿನಲ್ಲಿ ಉತ್ಕರ್ಷಣ ನಿರೋಧಕಗಳು, ಅಗತ್ಯವಾದ ಜೀವಸತ್ವಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ.
ನುಗ್ಗೆ ಸೊಪ್ಪು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಇದು ನಿಮ್ಮ ಚರ್ಮ ಸುಕ್ಕು ಗಟ್ಟುವುದು, ಒಣಗುವುದು, ಒರಟಾಗುವುದನ್ನು ತಡೆಯುತ್ತದೆ. ವಿಟಮಿನ್ ಎ, ಸಿ ಮತ್ತು ಇ, ಅಮೈನೋ ಆಮ್ಲಗಳು ಮತ್ತು ಖನಿಜಗಳ ಜೊತೆಗೆ, ಮೊರಿಂಗಾ ನಿಮ್ಮ ಚರ್ಮವನ್ನು ಪರಿಸರ ಹಾನಿಯಿಂದ ರಕ್ಷಿಸುತ್ತದೆ ಮತ್ತು ಯಾವಾಗಲು ಹೊಳಪು ನೀಡುತ್ತದೆ.
ಹಾಗಾದ್ರೆ ಈ ನುಗ್ಗೆ ಸೊಪ್ಪಿನ ಯಾವ ಖಾದ್ಯವು ನಿಮ್ಮ ಆರೋಗ್ಯಕ್ಕೆ ಉತ್ತಮವಾಗಿದೆ. ನುಗ್ಗೆ ಸೊಪ್ಪಿನಲ್ಲಿ ಹಲವು ರೀತಿಯ ಖಾದ್ಯ ಮಾಡಿ ಸವಿಯಹುದು ಎಂಬುದು ನಿಮಗೆ ತಿಳಿದಿರಬಹುದು. ನುಗ್ಗೆ ಸೊಪ್ಪಿನ ಚಟ್ನಿ, ನುಗ್ಗೆಯ ಸಾರು, ಪಲ್ಯ, ಟೀ ಕೂಟ ಮಾಡಿ ಸವಿಯಬಹುದು. ಇದು ಆರೋಗ್ಯಕ್ಕೆ ಬಹಳ ಉತ್ತಮ.
ನುಗ್ಗೆ ಸೊಪ್ಪಿನ ಫೇಸ್ ಮಾಸ್ಕ್
ಕಾಲಜನ್ ಉತ್ಪಾದನೆಯನ್ನು ಸುಧಾರಿಸಲು ಮತ್ತು ನಿಮ್ಮ ಚರ್ಮಕ್ಕೆ ಆರೋಗ್ಯಕರ, ಕಾಂತಿಯುತ ಹೊಳಪನ್ನು ನೀಡಲು ನುಗ್ಗೆ ಸೊಪ್ಪಿನ ಎಲೆಗಳ ಬಳಸಿ ಫೇಸ್ ಮಾಸ್ಕ್ ಮಾಡಿಕೊಳ್ಳಬಹುದು. ಸುಲಭವಾಗಿ ತಯಾರಿಸಬಹುದು. ಮೊದಲು ಈ ನುಗ್ಗೆ ಸೊಪ್ಪಿನ ಎಲೆಗಳನ್ನು ಒಂದು ಬಾಣಲೆಗೆ ಹಾಕಿಕೊಂಡು ಚೆನ್ನಾಗಿ ರೋಸ್ಟ್ ಮಾಡಿಕೊಳ್ಳಬೇಕು. ನಂತರ ಇದನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಬೇಕು, ಅನಂತರ ಉಗುರು ಬೆಚ್ಚಗಿನ ಕೊಬ್ಬರಿ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಇದಕ್ಕೆ ಮೊಸರು ಕೂಡ ಮಿಕ್ಸ್ ಮಾಡಬಹುದು. ನಿಮಗೆ ಯಾವ ವಸ್ತು ಸರಿ ಹೊಂದುತ್ತದೆಯೋ ಹಾಗೆ ಮಾಡಿಕೊಂಡು ಮುಖಕ್ಕೆ ಹಚ್ಚಬಹುದು.
ನುಗ್ಗೆ ಸೊಪ್ಪು, ಮೊಸರು, ಅಲೋವೆರಾ ಫೇಸ್ ಮಾಸ್ಕ್
ಈಲ್ಲಿ ನುಗ್ಗೆ ಸೊಪ್ಪಿನ ಪುಡಿಗೆ ನೀವು ಮೊಸರು, ಆಲೂವೆರಾ, ಜೇನು ತುಪ್ಪ ಸರಿಯಾದ ಕ್ರಮದಲ್ಲಿ ಬೆರೆಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಮುಖಕ್ಕೆ ಹಚ್ಚಿ ಒಣಗಲು ಬಿಡಬೇಕು. ಒಣಗಿದ ಬಳಿಕ ಶುದ್ಧ ನೀರಿನಿಂದ ತೊಳೆಯಬೇಕು. ಇದರಿಂದ ಮುಖದಲ್ಲಿ ಹೊಳಪು ಮಾಡುತ್ತದೆ, ಮುಖ ಒಣಗುವುದು ಕಡಿಮೆಯಾಗುತ್ತದೆ.
ನುಗ್ಗೆ ಸೊಪ್ಪು ಅರಿಶಿನ ಮತ್ತು ಹಾಲಿನ ಮಾಸ್ಕ್:
ನುಗ್ಗೆ ಸೊಪ್ಪಿನ ಪುಡಿಯನ್ನು ಒಂದು ಬೌಲ್‌ನಲ್ಲಿ ತೆಗೆದುಕೊಂಡು ಅದಕ್ಕೆ ಅರಶಿಣ, ಹಾಲು ಸೇರಿಸಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಹಾಗೆ ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು ಒಣಗಲು ಬಿಡಬೇಕು. ಹಾಗೆ ಬಳಿಕ ಇದನ್ನು ಕೂಡ ನೀರಿನಿಂದ ತೊಳೆಯಿರಿ. ಇದರಿಂದ ನಿಮ್ಮ ಮುಖಕ್ಕೆ ನೈಸರ್ಗಿಕ ಹೊಳಪು ಬರಲಿದೆ.



Click it and Unblock the Notifications