Latest Updates
-
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ
Miss World 2025: ಇಂದು ಮಿಸ್ ವರ್ಲ್ಡ್ ಫೈನಲ್; ಯಾರಿಗೆ ವಿಶ್ವ ಸುಂದರಿ ಕಿರೀಟ? ಬಹುಮಾನ ಎಷ್ಟು ಗೊತ್ತಾ?
Miss World 2025: ಇಂದು 72ನೇ ವಿಶ್ವ ಸುಂದರಿ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ. ಭಾರತದ ನಂದಿನಿ ಗುಪ್ತಾ ಮುಡಿಗೇರುತ್ತಾ ವಿಶ್ವ ಸುಂದರಿ ಪಟ್ಟ! ಹೌದು, ಬಹುನಿರೀಕ್ಷಿತ ವಿಶ್ವ ಸುಂದರಿ 2025 (Miss World 2025) ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ವೇದಿಕೆ ಸಜ್ಜಾಗಿದೆ. ಹೈದರಾಬಾದ್‌ನ ಹೈಟೆಕ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಸ್ಪರ್ಧೆಯ ಫೈನಲ್ ನಡೆಯಲಿದೆ. ಹಾಗಿದ್ರೆ, ಈ ಬಾರಿ ಯಾರ ಮುಡಿಗೇರಲಿದೆ ವಿಶ್ವ ಸುಂದರಿ ಕಿರೀಟ? ಈ ಸ್ಪರ್ಧೆಯಲ್ಲಿ ಗೆಲ್ಲುವ ಅದೃಷ್ಟ ಶಾಲಿಗೆ ಸಿಗುವ ಬಹುಮಾನದ ಮೊತ್ತ ಎಷ್ಟು? ಎಂಬ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಇಂದು ಸಂಜೆ 6 ರಿಂದ ರಾತ್ರಿ 9 ಗಂಟೆಯ ವರೆಗೆ ಮಿಸ್ ವರ್ಲ್ಡ್ ಫೈನಲ್ ನಡೆಯಲಿದೆ. ಈ ಸಮಾಂಭದಲ್ಲಿ 3,500 ಮಂದಿ ಪ್ರೇಕ್ಷಕರು ಬರುವ ಸಾಧ್ಯತೆಯಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಭಾಗವಹಿಸಲಿದ್ದಾರೆ. ಇನ್ನು ವಿಶ್ವ ಸುಂದರಿ ಅಧ್ಯಕ್ಷೆ ಜೂಲಿಯಾ ಮಾರ್ಲಿ ಮತ್ತು ಹಾಲಿ ವಿಶ್ವ ಸುಂದರಿ ಕ್ರಿಸ್ಟಿನಾ ಪಿಸ್ಜ್ಕೋವಾ ಅವರು ಭಾಗವಹಿಸಲಿದ್ದಾರೆ. ಕ್ರಿಸ್ಟಿನಾ ಅವರು ನೂತನ ವಿಶ್ವ ಸುಂದರಿಗೆ ಕಿರೀಟಧಾರಣೆ ಮಾಡಲಿದ್ದಾರೆ. ಇಂದು ರಾತ್ರಿ 9.15ಕ್ಕೆ ಮಿಸ್ ವರ್ಲ್ಡ್ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

ವಿಶ್ವ ಸುಂದರಿ ಸ್ಪರ್ಧೆಯ ಅಂತಿಮ ಸುತ್ತಿಗೆ ಈಗಾಗಲೇ 24 ಮಂದಿ ಸುಂದರಿಯರು ಆಯ್ಕೆಯಾಗಿದ್ದಾರೆ. ಭಾರತದಿಂದ ನಂದಿನಿ ಗುಪ್ತಾ (Nandini Gupta) ಅವರು ಸ್ಪರ್ಧಿಸಿದ್ದಾರೆ. ಇವರು ರಾಜಸ್ಥಾನ ಮೂಲದವರಾಗಿದ್ದಾರ. ನಂದಿನಿ ಗುಪ್ತಾ ಅವರು ಈ ಹಿಂದೆ 2023ರಲ್ಲಿ ಮಿಸ್ ಇಂಡಿಯಾ ಪಟ್ಟ ತಮ್ಮ ಮುಡಿಗೇರಿಸಿಕೊಂಡಿದ್ದರು. ಇದೀಗ ವಿಶ್ವ ಸುಂದರಿ 2025 ಸ್ಪರ್ಧೆಯಲ್ಲಿ ಅಂತಿಮ 24ರ ಸುತ್ತನ್ನೂ ಯಶಸ್ವಿಯಾಗಿ ತಲುಪಿದ್ದಾರೆ. ಮಿಸ್ ವರ್ಲ್ಡ್ ಆಗಿ ಅವರು ಆಯ್ಕೆ ಆಗುತ್ತಾರಾ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಾರಿಯ ಮಿಸ್ ವರ್ಲ್ಡ್ ಪಟ್ಟ ನಂದಿನಿ ಗುಪ್ತಾ ಅವರಿಗೆ ಸೇರಲಿದೆ ಎಂದು ವೈರಲ್ ಆಗುತ್ತಿದೆ.
ವಿಜೇತರಿಗೆ ಸಿಗುವ ಬಹುಮಾನದ ಮೊತ್ತ ಎಷ್ಟು?
ಮಿಸ್ ವರ್ಲ್ಡ್ ವಿಜೇತರಿಗೆ ಸುಮಾರು 8.5 ಕೋಟಿ ರೂಪಾಯಿ (ಒಂದು ಮಿಲಿಯನ್ ಡಾಲರ್) ಹಣ ಬಹುಮಾನವಾಗಿ ಸಿಗಲಿದೆ. ಇದಲ್ಲದೆ ಒಂದು ವರ್ಷದವರೆಗೆ ಉಚಿತವಾಗಿ ಪ್ರಪಂಚವನ್ನು ಸುತ್ತುವ ಅವಕಾಶ ಪಡೆಯಬಹುದು. ಎಲ್ಲಾ ವೆಚ್ಚಗಳನ್ನು ಮಿಸ್ ವರ್ಲ್ಡ್ ಆಯೋಜಕರು ಭರಿಸುತ್ತಾರೆ. ಆದರೆ, ಮಿಸ್ ವರ್ಲ್ಡ್ ವಿಜೇತರು ಸೇವಾ ಕಾರ್ಯಕ್ರಮಗಳು ಮತ್ತು ನಿಧಿ ಸಂಗ್ರಹಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿದೆ. ಒಂದು ವರ್ಷಗಳ ಕಾಲ ಮಿಸ್ ವರ್ಲ್ಡ್ ಸಂಸ್ಥೆಯ ಬ್ಯಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡಲಿದ್ದಾರೆ.
ಇವರೇ ನೋಡಿ ಮಿಸ್ ವರ್ಲ್ಡ್ ಆದ ಭಾರತದ ಆರು ಮಂದಿ
* 1966ರಲ್ಲಿ ಭಾರತಕ್ಕೆ ಮೊದಲ ಬಾರಿಗೆ ಗೆಲುವು - ಭಾರತದ ರೀಟಾ ಫಾರಿಯಾ ಪೊವೆಲ್ ಮೊದಲ ಬಾರಿಗೆ ಸ್ಪರ್ಧೆಯಲ್ಲಿ ಗೆದ್ದರು.
* 1994ರಲ್ಲಿ ಐಶ್ವರ್ಯಾ ರೈ ಅವರು ಮಿಸ್ ವರ್ಲ್ಡ್ ಆದರು. 28 ವರ್ಷಗಳ ಬಳಿಕ ಎರಡನೇ ಪ್ರಶಸ್ತಿ ಬಂದಿತು.
* 1997ರಲ್ಲಿ ಡಿಯಾನಾ ಹೇಡನ್ ಅವರು ಮಿಸ್ ವರ್ಲ್ಡ್ ಆದರು. ಇದು ಮೂರನೇ ಕಿರೀಟ.
* 1999ರಲ್ಲಿ ನಟಿ ಯುಕ್ತಾಗೆ ಮಿಸ್ ವರ್ಲ್ಡ್ ಪಟ್ಟ ಸಿಕ್ಕಿತು.
* 2000ರಲ್ಲಿ ಪ್ರಿಯಾಂಕಾ ಚೋಪ್ರಾ ಅವರು ವಿಶ್ವ ಸುಂದರಿ ಆದರು.
* 2017ರಲ್ಲಿ ಮಾನುಷಿ ಚಿಲ್ಲರ್ ಅವರು ಮಿಸ್ ವರ್ಲ್ಡ್ ಪಟ್ಟ ಅಲಂಕರಿಸಿದರು. ಇವರು ಈ ಪಟ್ಟ ಅಲಂಕರಿಸಿದ ಆರನೇ ಭಾರತೀಯರು.
ಒಟ್ಟಾರೆ, ಭಾರತವು ಈ ಬಾರಿಯ ಮಿಸ್ ವರ್ಲ್ಡ್ 2025 ಅನ್ನು ನಡೆಸಿಕೊಡುತ್ತಿದೆ. ಈ ಬಾರಿ ಭಾರತ ಗೆದ್ದರೆ ದಾಖಲೆ ನಿರ್ಮಾಣ ಆಗಲಿದೆ. ಭಾರತ ಮತ್ತು ವೆನೆಜ್ಯುವೆಲಾ ತಲಾ 6 ಬಾರಿ ಕಿರೀಟ ಗೆದ್ದಿದೆ. ಇಂದು ಭಾರತ ಗೆದ್ದರೆ 7ನೇ ಬಾರಿ ಮಿಸ್ ವರ್ಲ್ಡ್ ಪಟ್ಟ ಅಲಂಕರಿಸಲಿದೆ.



Click it and Unblock the Notifications