Latest Updates
-
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ
ಜೆಕ್ ರಿಪಬ್ಲಿಕ್‌ನ ಕ್ರಿಸ್ಟಿನಾ ಪಿಸ್ಕೋವಾ ಮುಡಿಗೇರಿದ ವಿಶ್ವ ಸುಂದರಿ ಕಿರೀಟ 2024
2024ನೇ ವಿಶ್ವ ಸುಂದರಿ ಕಿರೀಟ ಜೆಕ್ ರಿಪಬ್ಲಿಕ್‌ನ ಕ್ರಿಸ್ಟಿನಾ ಪಿಸ್ಕೋವಾ ಮುಡಿಗೇರಿದೆ. ಈ ಬಾರಿ ವಿಶ್ವ ಸುಂದರಿ ಸ್ಪರ್ಧೆಯನ್ನು ಭಾರತದಲ್ಲಿ ಆಯೋಚಿಸಲಾಗಿತ್ತು, ಭಾರತದ ಸ್ಪರ್ಧಿ ಸಿನಿ ಶೆಟ್ಟಿ ವಿಶ್ವ ಸುಂದರಿ ಪಟ್ಟವನ್ನು ಭಾರತಕ್ಕೆ ತರಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ, ಟಾಪ್ನ10ರೊಳಗಿದ್ದ ಸಿನಿ ಶೆಟ್ಟಿ ಟಾಪ್ 4ರೊಳಗೆ ಬರುವಲ್ಲಿ ವಿಫಲರಾಗಿದ್ದಾರೆ.

ಲೆಬನಾನ್‌ನ ಯಾಸ್ಮಿನಾ ಜೈಟೌನ್ ರನ್ನರ್ ಅಪ್ ಆಗಿ ಆಯ್ಕೆ ಆಗಿದ್ದಾರೆ. ಭಾರತದಲ್ಲಿ ನಡೆದ ಈ ಸ್ಪರ್ಧೆಯನ್ನು ಬಾಲಿವುಡ್‌ನ ಪ್ರಸಿದ್ಧ ನಿರ್ಮಾಪಕ ಕರಣ್ ಜೋಹಾರ್ ಹಾಗೂ ಮಾಜಿ ವಿಶ್ವ ಸುಂದರಿ ಮೇಗನ್ ಯಂಗ್ ಅವರ ನೇತೃತ್ವದಲ್ಲಿ ಆಯೋಚಿಸಲಾಗಿತ್ತು. ಈ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ ನಟಿಯರಾದ ಕೃತಿ ಸನೋನ್, ಪೂಜಾ ಹೆಗ್ಡೆ ಹಾಗೂ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹಾಗೂ ಫ್ಯಾಷನ್ ಲೋಕದ ಹಲವು ಗಣ್ಯರು ಭಾಗಿಯಾಗಿದ್ದರು.
28 ವರ್ಷಗಳ ನಂತರ ಭಾರತದಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆ
28 ವರ್ಷಗಳ ನಂತರ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ನಡೆಸಲಾಯ್ತು, 1996ರಲ್ಲಿ 46ನೇ ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಚಿಸಲಾಯಿತು. ಆ ವರ್ಷದ ವಿಶ್ವ ಸುಂದರಿ ಪಟ್ಟ ಐರಿನ್ ಸ್ಕ್ಲಿವಾ ಅವರ ಪಾಲಾಯ್ತು.
ಭಾರತಕ್ಕೆ ಇಲ್ಲಿಯವರೆಗೆ 6 ಬಾರಿ ವಿಶ್ವ ಸುಂದರಿ ಕಿರೀಟ ದೊರೆತಿದೆ.
ರೀಟಾ ಫರಿಯಾ: ಭಾರತದ ಮೊದಲ ವಿಶ್ವ ಸುಂದರಿ, 1966ರಲ್ಲಿ ವಿಶ್ವ ಸುಂದರಿ ಪಟ್ಟ ಇವರಿಗೆ ಒಲಿದಿತ್ತು, ಅದಾದ 28 ವರ್ಷದ ಬಳಿಕ ಭಾರತಕ್ಕೆ ವಿಶ್ವ ಸುಂದರಿ ಕಿರೀಟ ಬಂತು.
ಐಶ್ವರ್ಯ ರೈ: ನೀಲಿ ಕಂಗಳ ಸುಂದರಿ 1994ರಲ್ಲಿ ಭಾರತಕ್ಕೆ ವಿಶ್ವ ಸುಂದರಿ ಹಿರಿಮೆ ತಂದರು, ಅಂದಿನಿಂದ ಇಂದಿನವರೆಗೂ ಸೌಂದರ್ಯದ ರಾಣಿಯಾಗಿ ಮೆರೆಯುತ್ತಿದ್ದಾರೆ.
ಡಯಾನಾ ಹೈಡನ್: 1997ರಲ್ಲಿ ಡಯಾನಾ ಹೈಡನ್ ಆಯ್ಕೆ ಆದರು, ಆದರೆ ಇವರು ಸಿನಿ ಕ್ಷೇತ್ರದಲ್ಲಿ ಹೆಸರುಗಳಿಸಿಲ್ಲ.
ಯುಕ್ತಾ ಮುಖಿ: 1999ರಲ್ಲಿ ಭಾರತದ ಯುಕ್ತಾ ಮುಖಿ ವಿಶ್ವ ಸುಂದರಿಯಾಗಿ ಆಯ್ಕೆ ಆದರು.
ಪ್ರಿಯಾಂಕಾ ಚೋಪ್ರಾ: 1999ರ ಮಾರನೇಯ ವರ್ಷ 2000ನೇ ಇಸವಿಯಲ್ಲಿ ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿಯಾದರು.
ಮಾನುಷಿ ಚಿಲ್ಲರ್: ಅದಾಗಿ ಮತ್ತೆ 17 ವರ್ಷದ ಬಳಿಕ ಮಾನುಷಿ ಚಿಲ್ಲರ್ ವಿಶ್ವ ಸುಂದರಿಯಾದರು.
ವಿಶ್ವ ಸುಂದರಿ ಸ್ಪರ್ಧೆ ಕುರಿತ ಕೆಲ ಆಸಕ್ತಿಕರ ಸಂಗತಿಗಳು
ಈ ವಿಶ್ವ ಸುಂದರಿ ಸ್ಪರ್ಧೆಯನ್ನು 1951ರಿಂದಲೂ ನಡೆಸುತ್ತಾ ಬರುತ್ತಿದೆ. ವಿಶ್ವದ ಅತ್ಯಂತ ಪ್ರತಿಷ್ಠೆಯ ಸೌಂದರ್ಯ ಸ್ಪರ್ಧೆ ಇದಾಗಿದೆ.
ಈ ವಿಶ್ವ ಸುಂದರಿ ಸ್ಪರ್ಧೆಯೆ ಮಿಲಿಯನ್‌ಗಿಂತಲೂ ಅಧಿಕ ಮಹಿಳೆಯರು ಭಾಗವಹಿಸುತ್ತಾರೆ.
160ಕ್ಕೂ ಅಧಿಕ ರಾಷ್ಟ್ರಗಳಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ.
ಮಿಸ್ ವರ್ಲ್ಡ್ ಕಿರೀಟವನ್ನು ರಾಣಿ 2ನೇ ಎಲಿಜಬತ್‌ನ ಆಭರಣಗಳನ್ನು ಬಳಸಿ ತಯಾರಿಸಲಾಗಿದೆ, ಇದು ಒಳ್ಳೆಯ ಕಾರ್ಯಕ್ಕೆ ಹಣ ಸಂಗ್ರಹಣೆಯ ಸಂಕೇತವಾಗಿದೆ.
ವಿಶ್ವ ಸುಂದರಿ ಕಿರೀಟದ ಬೆಲೆಯೆಷ್ಟು?
ವಿಶ್ವ ಸುಂದರಿ ಕಿರೀಟವನ್ನು 2017ರಲ್ಲಿ ಮತ್ತೆ ನವೀಕರಣ ಮಾಡಲಾಯ್ತು, ಇದರ ಬೆಲೆ ಸುಮಾರು $100,000 ಅಂದರೆ ಭಾರತದ ರುಪಾಯಿಗಳಲ್ಲಿ ಹೇಳುವುದಾದರೆ ರು. 82,75,235.00 ಎಂದು ಹೇಳಲಾಗುವುದು.
ಮಾನುಷಿ ಚಿಲ್ಲರ್ ಅವರು ವಿಶ್ವ ಸುಂದರಿಯಾದಾಗ ಅವರಿಗೆ 10 ಕೋಟಿಗೆ ಅಧಿಕ ವಿನ್ನರ್ ಹಣ ಬಂದಿತ್ತು, ಈಗ ಆ ಮೌಲ್ಯ ಇನ್ನೂ ಹೆಚ್ಚಾಗಿರಬಹುದು.
ಭಾರತದ ವಿಶ್ವ ಸುಂದರಿಯರ ಪಟ್ಟಿಯಲ್ಲಿ ತುಂಬಾನೇ ಜನಪ್ರಿಯತೆಯಲ್ಲಿರುವುದು ಐಶ್ವರ್ಯರೈ ಹಾಗೂ ಪ್ರಿಯಾಂಕಾ ಚೋಪ್ರಾ, ಅವರು ಇಂದಿನವರೆಗೂ ಸದಾ ಸುದ್ದಿಯಲ್ಲಿರುವ ನಟಿಯರಾಗಿದ್ದಾರೆ.



Click it and Unblock the Notifications
