Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮಿಸ್ ಯೂನಿವರ್ಸ್ 2024: ಮೊದಲ ಬಾರಿಗೆ ಡೆನ್ಮಾರ್ಕ್ ಸುಂದರಿಗೆ ಒಲಿದ ಪ್ರಶಸ್ತಿ..!!
ಮತ್ತೊಮ್ಮೆ ಈ ಜಗತ್ತಿಗೆ ವಿಶ್ವ ಸುಂದರಿಯೊಬ್ಬರು ಸಿಕ್ಕಿದ್ದಾರೆ. 2024ರ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ಡೆನ್ಮಾರ್ಕ್‌ನ ಸುಂದರಿ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ್ದಾರೆ. ವಿಕ್ಟೋರಿಯಾ ಕ್ಜೇರ್ ವಿಶ್ವ ಸುಂದರಿಯಾಗುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಮೆಕ್ಸಿಕೋದಲ್ಲಿ ನಡೆದಿದ್ದ 73ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಈಗ ಡೆನ್ಮಾರ್ಕ್‌ನ ಸುಂದರಿಗೆ ಕಿರೀಟ ಒಲಿದು ಬಂದಿದೆ.
ಡೆನ್ಮಾರ್ಕ್ ಇದೇ ಮೊದಲ ಬಾರಿಗೆ ಈ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಇವರನ್ನು ಹೊರತುಪಡಿಸಿ ಮೊದಲ ರನ್ನರ್ ಅಪ್ ನೈಜೀರಿಯಾದ ಚಿದಿನ್ಮಾ ಅಡೆಟ್ಶಿನಾ, ಎರಡನೇ ರನ್ನರ್ ಅಪ್ ಮೆಕ್ಸಿಕೋದ ಮರಿಯಾ ಫೆರ್ನಾಂಡಾ ಬೆಲ್ಟ್ರಾನ್, ಮೂರನೇ ರನ್ನರ್ ಅಪ್ ಥಾಯ್ಲೆಂಡ್ನ ಓಪಲ್ ಸುಚಾತಾ ಚುವಾಂಗ್ಸ್ರಿ ಮತ್ತು ವೆನೆಜುವೆಲಾದ ನಾಲ್ಕನೇ ರನ್ನರ್ ಅಪ್ ಇಲಿಯಾನಾ ಮಾರ್ಕ್ವೆಜ್ ಅವರ ಆಯ್ಕೆಯಾಗಿದೆ.

ಇನ್ನು ಭಾರತದಿಂದಲೂ ಈ ಸ್ಪರ್ಧೆಗೆ ಈ ಬಾರಿ ರಿಯಾ ಸಿಂಘಾ ಕೂಡ ಭಾಗಿಯಾಗಿದ್ದರು ಒಟ್ಟು 125 ಸ್ಪರ್ಧಿಗಳ ಪೈಕಿ ರಿಯಾ 30ನೇ ಸ್ಥಾನ ಪಡೆಯುವಲ್ಲಿ ಯಶಸ್ಬಿಯಾಗಿದ್ದಾರೆ. ಹಾಗೆ ವಿಕ್ಟೋರಿಯಾ ಅವರು ಕಳೆದ ವರ್ಷದ ವಿಶ್ವ ಸುಂದರಿ ನಿಕರಾಗುವಾ ಶೆನ್ನಿಸ್ ಪಲಾಸಿಯೊಸ್ ಅವರಿಂದ ಕಿರೀಟವನ್ನು ಪಡೆದರು.
ವಿಶ್ವಸುಂದರಿ ಈ ವಿಕ್ಟೋರಿಯಾ ಕ್ಜೇರ್ ಯಾರು?
ವಿಕ್ಟೋರಿಯಾ ಕ್ಜೇರ್ ಡೆನ್ಮಾರ್ಕ್‌ನ 21 ವರ್ಷದ ಸುಂದರಿ. ಆಕೆ ವಕೀಲಿ ವೃತ್ತಿಯನ್ನು ಅಭ್ಯಾಸ ಮಾಡುತ್ತಿದ್ದಾಳೆ ಎಂದು ವರದಿಗಳಾಗಿವೆ. ಹಾಗೆ ಆಕೆ ಅತ್ಯುತ್ತಮ ನೃತ್ಯಪಟುವಂತೆ. ಹಾಗೆ ಆಕೆಗೆ ಇದು ಮೊದಲ ವಿಶ್ವ ಸುಂದರಿ ಸ್ಪರ್ಧೆಯಾಗಿದ್ದು ಮೊದಲ ಸ್ಪರ್ಧೆಯಲ್ಲೇ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾಳೆ. ಆಕೆಯ ಹೆಸರನ್ನು ಘೋಷಿಸಿದಾಗ ವೇದಿಕೆ ಮೇಲೆಯೇ ಆಕೆ ಕಣ್ಣೀರಿಟ್ಟಿದ್ದಾಳೆ. ಆಕೆ ಹೆಸರು ಕೇಳಿದ ತಕ್ಷಣ ಕುಸಿದು ಕಣ್ಣೀರಿಟ್ಟಿದ್ದಾಳೆ. ಆಕೆ ಕನಸಿನಲ್ಲಿಯೂ ಆಕೆಯ ಹೆಸರು ಘೋಷಿಸುತ್ತಾರೆ ಎಂದು ಅಂದುಕೊಂಡಿರಲಿಲ್ಲವಂತೆ.
ಈ ವರ್ಷದ ವಿಶ್ವ ಸುಂದರಿ ಸ್ಪರ್ಧೆಯು ಉಳಿದ ಸ್ಪರ್ಧೆಗಳಿಗಿಂತ ಸ್ವಲ್ಪ ಭಿನ್ನ ಎಂಬ ಹೆಸರು ಪಡೆದುಕೊಂಡಿದೆ. ಈ ಬಾರಿಯ ಸ್ಪರ್ಧೆಯಲ್ಲಿ ಬಹುತೇಕ ಸ್ಪರ್ಧಿಗಳು 28 ವರ್ಷ ಮೆಲ್ಪಟ್ಟವರಾಗಿದ್ದರು, ಹಾಗೆ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗಿಯಾಗಲು ವಯಸ್ಸಿನ ಮಿತಿ ಇಲ್ಲ ಎಂದು ಘೋಷಿಸಲಾದ ಬಳಿಕ ಈಗ 40 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆ ಒಬ್ಬರು ಕೂಡ ಈ ಸ್ಪರ್ಧೆಯಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದರು.
ಮಿಸ್ ಯೂನಿವರ್ಸ್ ಇಂಡಿಯಾ 2024 ಗೆದ್ದಿದ್ದ ರಿಯಾ
ಇದೇ ವರ್ಷ ನಡೆದಿದ್ದ ಮಿಸ್ ಯೂನಿವರ್ಸ್ ಇಂಡಿಯಾ 2024ರ ಸ್ಪರ್ಧೆಯಲ್ಲಿ ರಿಯಾ ಸಿಂಘಾ ಅವರು ಜಯಗಳಿಸಿದ್ದರು. 18 ವರ್ಷದ ಸ್ಪರ್ಧಿ ನಂ. 36 ಒಟ್ಟು 51 ಫೈನಲಿಸ್ಟ್‌ಗಳೊಂದಿಗೆ ಸ್ಪರ್ಧಿಸಿ ಈ ಗೌರವಕ್ಕೆ ಪಾತ್ರರಾಗಿದ್ದರು. ಗುಜರಾತ್‌ನ ರಿಯಾ ಸಿಂಘಾ ಮಿಸ್ ಯೂನಿವರ್ಸ್ ಇಂಡಿಯಾ 2024ರಲ್ಲಿ ಭಾಗಿಯಾಗುವಾಗ ಅವರಿಗೆ ಕೇವಲ 18 ವರ್ಷವಾಗಿತ್ತು. ಅವರು ವಿಶ್ವ ಸುಂದರಿ ಸ್ಪರ್ಧೆಯಲ್ಲೂ ಭಾಗಿಯಾಗಿದ್ದರು. ಆದರೆ ಪ್ರಶಸ್ತಿ ಗೆಲ್ಲುವಲ್ಲಿ ಸಫಲರಾಗಿಲ್ಲ.



Click it and Unblock the Notifications
