Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಧ್ರುವಿ ಪಾಟೇಲ್ ಸುಂದರಿಯ ಮುಡಿಗೇರಿದ ಮಿಸ್ ಇಂಡಿಯಾ ವರ್ಲ್ಡ್‌ವೈಡ್ 2024 ಪಟ್ಟ
ಭಾರತ ಮೂಲದ ಯುಎಸ್ ನಿವಾಸಿ ಧ್ರುವಿ ಪಾಟೇಲ್ ಅವರು ಮಿಸ್ ಇಂಡಿಯಾ ವರ್ಲ್ಡ್ ವೈಡ್ 2024 ವಿಜೇತೆಯಾಗಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಎಂಜಿನಿಯರ್ ಓದುತ್ತಿರುವ ಧ್ರುವಿ ಪಾಟೇಲ್ ತನ್ನ ಪಾಲಿಗೆ ಒದಗಿದ ಇಂಥ ಸುವರ್ಣ ಅವಕಾಶದ ಖುಷಿಯಲ್ಲಿದ್ದಾರೆ. ಮಿಸ್ ಇಂಡಿಯಾ ವರ್ಲ್ಡ್‌ವೈಡ್ ವಿಜೇತೆಯಾಗಿರುವುದು ತುಂಬಾ ದೊಡ್ಡ ಗೌರವವಾಗಿ ನಾನು ಪರಿಗಣಿಸುತ್ತೇನೆ, ಕಿರೀಟಕ್ಕಿಂತ ಇದು ನನ್ನ ಪರಂಪರೆ, ಮೌಲ್ಯಗಳನ್ನು ಜಾಗತಿಕ ಮಟ್ಟದಲ್ಲಿ ಪ್ರತಿನಿಧಿಸಲುಸಾಧ್ಯವಾಗುವುದರಿಂದ ನನಗೆ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ.

ಯಾರು ಈ ಧ್ರುವಿ ಪಾಟೇಲ್ ಎಂಬ ಸುಂದರಿ
ಇವರೊಬ್ಬ ಅಮೆರಿಕದಲ್ಲಿ ಕಂಪ್ಯೂಟರ್ ಇನ್‌ಫಾರ್ಮೇಷನ್ ಸಿಸ್ಟಮ್‌ನ ವಿದ್ಯಾರ್ಥಿನಿಯಾಗಿದ್ದು ಇನ್‌ಸ್ಟಾಗ್ರಾಮ್‌ನಲ್ಲಿ ತುಂಬಾನೇ ಆಕ್ಟಿವ್ ಆಗದ್ದಾರೆ.
2023ರಲ್ಲಿ ಈ ಸುಂದರಿ ಮಿಸ್ ಇಂಡಿಯಾ ನ್ಯೂ ಇಂಗ್ಲೆಂಡ್ ಕಿರೀಟ ಗೆದ್ದಿದ್ದರು. ಚಾರಿಟಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಈ ಸುಂದರಿ 3DCharities ನಡೆಸುತ್ತಿದ್ದು ಇದು ಲಾಭರಹಿತ ಚಾರಿಟಿಯಾಗಿದ್ದು ಈ ಮೂಲಕ ಅಗ್ಯತವಿರುವವರಿಗೆ ನೆರವು ನೀಡುತ್ತಿದ್ದಾರೆ. ಅಲ್ಲದೆ UNICEF ಮತ್ತು Feeding America ಚಾರಿಟಿಗಳಿಗೆ ಡೊನೇಷನ್ ಮಾಡ್ತಾ ಇರ್ತಾರೆ.
ಮಾನವೀಯತೆಗೆ ಹೆಚ್ಚು ಒತ್ತು ನೀಡುವ ಧ್ರುವಿ ಪಾಟೇಲ್
ಈ ಸುಂದರಿಗೆ ಮಾಡೆಲಿಂಗ್ ಅಂದರೆ ಪ್ರಾಣ, ಅಷ್ಟೇ ತುಡಿತ ದಾನ ಧರ್ಮ ಮಾಡುವುದರ ಕಡೆಯೂ ಇದೆ, ಹಾಗಾಗಿಯೇ ಚಾರಿಟಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ, ಇದೀಗ ಮಿಸ್ ಇಂಡಿಯಾ ವರ್ಲ್ಡ್ ವೈಡ್‌ನ ಕೂಡ ಆಗಿರುವುದರಿಂದ ಇವರಿಗೆ ತಮ್ಮ ಚಾರಿಟಿ ಮೂಲಕ ಇನ್ನಷ್ಟು ಜನರಿಗೆ ಸಹಾಯ ಮಾಡಲು ಸಾಧ್ಯವಾಗುವುದು.
ಬಾಲಿವುಡ್‌ನತ್ತ ಆಕರ್ಷಣೆ ಹೊಂದಿರುವ ಧ್ರುವಿ ಪಾಟೇಲ್
ಧ್ರುವಿ ಪಾಟೇಲ್‌ಗೆ ಸಿನಿಮಾ ಕ್ಷೇತ್ರದಲ್ಲಿಯೂ ಆಸಕ್ತಿ ಇದೆ, ಹೀಗಾಗಿ ಬಾಲಿವುಡ್‌ನತ್ತ ಮುಖ ಮಾಡುವ ಸಾಧ್ಯತೆಯೂ ಇದೆ.
8 ವರ್ಷ ಇರುವಾಗಲೇ ಮಾಡೆಲಿಂಗ್ ಕ್ಷೇತ್ರದತ್ತ ಆಸಕ್ತಿ ಬೆಳೆಸಿಕೊಂಡಿದ್ದ ಧ್ರುವಿ ಪಾಟೇಲ್
ಧ್ರುವಿ ಪಾಟೇಲ್ ಇಂಟರ್‌ವ್ಯೂವ್‌ವೊಂದರಲ್ಲಿ ಗ್ಲಾಮರ್ ಲೋಕದತ್ತ ಆಕರ್ಷಣೆಯಿತ್ತು,ಆದರೆ ಸ್ಕೂಲ್ ಕಮಿಟ್‌ಮೆಂಟ್ ಕಾರಣ ಗ್ಲಾಮರ್ ಲೋಕದ ಕಡೆಗೆ ಗಮನಹರಿಸಲು ಸಾಧ್ಯವಾಗಲಿಲ್ಲ, ಈಗ ನಾನು ನನ್ನ ಪ್ಯಾಷನ್ ಕಡೆ ಗಮನ ಹರಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.



Click it and Unblock the Notifications
