Latest Updates
-
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ!
ಮೆಟ್‌ಗಾಲಾದಲ್ಲಿ ಆಲಿಯಾ..ದೀಪಿಕಾ..ಪ್ರಿಯಾಂಕ ಸೈಡ್ ಲೈನ್..! ದುಬಾರಿ ಆಭರಣ ತೊಟ್ಟ ಈ ಸುಂದರಿ ಯಾರು..?
ಜಗತ್ತಿನ ಅತಿದೊಡ್ಡ ಫ್ಯಾಷನ್ ಈವೆಂಟ್‌ಗಳಲ್ಲಿ ಒಂದಾಗಿರುವ ಮೆಟ್ ಗಾಲಾ ಚಿತ್ರ ವಿಚಿತ್ರ ಉಡುಪುಗಳಿಂದಲೇ ಫೇಮಸ್ ಆಗಿದೆ. ನ್ಯೂಯಾರ್ಕ್ ಎಫ್‌ಎಸ್‌ಇ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಪ್ರತಿ ವರ್ಷ ಈ ಫ್ಯಾಷನ್ ಈವೆಂಟ್ ಜರುಗುತ್ತದೆ. ಇಲ್ಲಿ ಹಾಲಿವುಡ್ ಹಾಗೂ ಬಾಲಿವುಡ್ ಸೇರಿ ಖ್ಯಾತನಾಮರು ಸೇರುತ್ತಾರೆ.
ಅಲ್ಲದೆ ವಿಭಿನ್ನ ಡ್ರೆಸ್ ತೊಟ್ಟು ರೆಡ್‌ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಾರೆ. ಡಿಸೈನರ್‌ಗಳು ವಿಶೇಷಗಾಗಿ ಸಿದ್ಧಪಡಿಸಿದ ಚಿತ್ರವಿಚಿತ್ರ ಕಾಸ್ಟ್ಯೂಮ್ ತೊಟ್ಟು ಚೆಲುವೆಯರು ಮೋಡಿ ಮಾಡುತ್ತಾರೆ. ಈ ವರ್ಷ ಮೆಟ್ ಗಾಲಾ ಈವೆಂಟ್‌ನಲ್ಲಿ ಬಾಲಿವುಡ್ ಚೆಲುವೆ ಆಲಿಯಾ ಭಟ್ ಬ್ಯೂಟಿಫುಲ್ ಸೀರೆಯಲ್ಲಿ ಕಂಗೊಳಿಸಿದರು. ಬಿಳಿ ಬಣ್ಣದ ಸಬ್ಯಸಾಚಿ ಸೀರೆಯಲ್ಲಿ ರೆಡ್ ಕಾರ್ಪೆಟ್ ಮೇಲೆ ಆಲಿಯಾ ಅಪ್ಸರೆಯಂತೆ ಕಾಣಿಸಿಕೊಂಡರು.

ಇನ್ನು ಇವರ ಜೊತೆ ಯುವ ಉದ್ಯಮಿಯಾಗಿರುವ ಸುಧಾ ರೆಡ್ಡಿ ಮೆಟ್ ಗಾಲಾದಲ್ಲಿ ಕಾಣಿಸಿಕೊಂಡಿದ್ದಲ್ಲದೆ ನೋಡುಗರ ಹುಬ್ಬೇರುವಂತೆ ಮಾಡಿದ್ರು. ಅವರು ಧರಿಸಿದ್ದ ಆಭರಣ ಇಡೀ ಈವೆಂಟ್‌ನಲ್ಲಿ ಸದ್ದು ಮಾಡಿತ್ತು. ಈ ಮೊದಲು ಅಂಬಾನಿ ಪತ್ನಿ ನೀತಾ ಅಂಬಾನಿ ಹಾಕಿದ್ದ ವಜ್ರದ ಆಭರಣಕ್ಕೆ ಸಡ್ಡು ಹೊಡೆಯುವಂತೆ ಅವರ ಆಭರಣವಿತ್ತು.
ಈವೆಂಟ್‌ನಲ್ಲಿ 200 ಕ್ಯಾರೆಟ್‌ಗಿಂತಲೂ ಅಧಿಕ ಬೆಲೆಯ ವಜ್ರದ ಆಭರಣ ಹಾಕಿಕೊಂಡಿದ್ದ ಎಲ್ಲರ ಕಣ್ಣು ಕುಕ್ಕಿದೆ. ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಅನ್ನು ನಿರ್ದೇಶಿಸುವ ಮತ್ತು ತನ್ನ ಚಾರಿಟಬಲ್ ಕೆಲಸಕ್ಕೆ ಹೆಸರುವಾಸಿಯಾಗಿರುವ ಸುಧಾ ಅವರು ಬಿಳಿ ಗೌನ್‌ನಲ್ಲಿ ಧರಿಸಿದ್ದರು. ಜೊತೆಗೆ ಕೊರಳಲ್ಲಿ ಒಂದು ವಜ್ರದ ಆಭರಣವಿತ್ತು.
ಈ ವಜ್ರದ ಆಭರಣವು "ಅಮೋರ್ ಎಟರ್ನೊ" ನೆಕ್ಲೇಸ್ನಿಂದ ಹೈಲೈಟ್ ಮಾಡಲ್ಪಟ್ಟಿದೆ, 180 ಕ್ಯಾರೆಟ್‌ಗಳು, ಮಧ್ಯದಲ್ಲಿ 25-ಕ್ಯಾರೆಟ್ ಹೃದಯದ ಆಕಾರದ ವಜ್ರ ಮತ್ತು ಮೂರು ಹೆಚ್ಚುವರಿ 20-ಕ್ಯಾರೆಟ್ ಹೃದಯದ ಆಕಾರದ ವಜ್ರಗಳು ಇದರಲ್ಲಿ ಸೇರಿವೆ. ಇದು ಸುಮಾರು $20 ಮಿಲಿಯನ್ (160 ಕೋಟಿ) ಮೌಲ್ಯದ ಎರಡು ಪ್ರಭಾವಶಾಲಿ ವಜ್ರದ ಸಾಲಿಟೇರ್ ಉಂಗುರಗಳನ್ನು ಧರಿಸಿದ್ದಳು, ಒಂದನ್ನು 23 ಕ್ಯಾರೆಟ್‌ಗಳು ಮತ್ತು ಇನ್ನೊಂದು 20 ಕ್ಯಾರೆಟ್‌ನ ವಜ್ರ ಒಳಗೊಂಡಿದ್ದವು ರಂದು ವರದಿಯಾಗಿದೆ.
ಈ ವರ್ಷ ಸುಧಾ ರೆಡ್ಡಿ ಅವರು ಎರಡನೇ ಬಾರಿಗೆ ಮೆಟ್ ಗಾಲಾ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ. 2024 ರ ಮೆಟ್ ಗಾಲಾದಲ್ಲಿ ಸುಧಾ ರೆಡ್ಡಿ ಅವರ ಉಪಸ್ಥಿತಿಯು ಸೊಗಸಾದ ಫ್ಯಾಷನ್ ಲೋಕಕ್ಕೆ ಮೆರುಗು ನೀಡಿತು. ಆಕೆಯ ಕುತ್ತಿಗೆಯಲ್ಲಿನ ವಜ್ರದ ಹಾರ ಇಡೀ ಈವೆಂಟ್‌ನ ಗಮನ ಸೆಳೆದಿದಂತು ನಿಜ.
ಯಾರು ಈ ಸುಧಾ ರೆಡ್ಡಿ?
ಸುಧಾ ರೆಡ್ಡಿ ಅವರು ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ನಿರ್ದೇಶಕಿ. ಆದರೆ ಆಕೆ ಸಮಾಜ ಸೇವಕಿಯಾಗಿಯೇ ಹೆಸರು ಮಾಡಿದ್ದಾರೆ. ಅವರು ಸುಧಾ ರೆಡ್ಡಿ ಫೌಂಡೇಶನ್, ಯುನಿಸೆಫ್, ಗ್ಲೋಬಲ್ ಗಿಫ್ಟ್ ಫೌಂಡೇಶನ್, ಸ್ತನ ಕ್ಯಾನ್ಸರ್ ಸಂಶೋಧನಾ ಪ್ರತಿಷ್ಠಾನ, ಫೈಟ್ ಹಂಗರ್ ಫೌಂಡೇಶನ್ ಮತ್ತು ಹಸಿವಿನ ವಿರುದ್ಧ ಕ್ರಿಯೆಯ ಮೂಲಕ ವ್ಯಾಪಕವಾದ ಸಮಾಜಮುಖಿ ಕಾರ್ಯಗಳಿಂದ ಹೆಸರುವಾಸಿಯಾಗಿದ್ದಾರೆ. ಈ ವರ್ಷ ಮೆಟ್ ಗಾಲಾವನ್ನು 2ನೇ ಬಾರಿಗೆ ಪ್ರತಿನಿಧಿಸಿದ್ದು, ಎಲ್ಲರ ಗಮನ ಅವರತ್ತ ಸೆಳೆದಿದ್ದಾರೆ.
ಮೆಟ್ ಗಾಲಾ 2024 ಕುರಿತ ಮಾಹಿತಿ ಇಲ್ಲಿದೆ
ಮೆಟ್ ಗಾಲಾ ಎಂಬುದು ವಿಶ್ವದ ಅತಿದೊಡ್ಡ ಮತ್ತು ಹೆಚ್ಚು ಮಂದಿ ಭೇಟಿ ನೀಡಿದ ಕಲೆಯ ವಸ್ತುಸಂಗ್ರಹಾಲಯವಾಗಿದೆ, ಸಾರ್ವಜನಿಕರ ಶಿಕ್ಷಣ ಮತ್ತು ಆನಂದಕ್ಕಾಗಿ ಅತ್ಯುತ್ತಮ ಕಲಾಕೃತಿಗಳನ್ನು ಸಂಗ್ರಹಿಸುವುದು, ಸಂರಕ್ಷಿಸುವುದು, ವ್ಯಾಖ್ಯಾನಿಸುವುದು ಮತ್ತು ಪ್ರಸ್ತುತಪಡಿಸುವುದು ಇದರ ಉದ್ದೇಶವಾಗಿದೆ. ಮೆಟ್ ಗಾಲಾ ವಸ್ತುಸಂಗ್ರಹಾಲಯಕ್ಕಾಗಿ ಹಣವನ್ನು ಸಂಗ್ರಹಿಸಲು ಅದರ ಕಾಸ್ಟ್ಯೂಮ್ ಇನ್ಸ್ಟಿಟ್ಯೂಟ್‌ನ ಒಂದು ಆಯೋಜನೆ ಇದಾಗಿದೆ. ಪ್ರತಿ ವರ್ಷ ರೀತಿ ಈವೆಂಟ್‌ಗಳ ಆಯೋಜನೆ ಮಾಡಿ ಗಮನ ಸೆಳೆಯುತ್ತಿದೆ.



Click it and Unblock the Notifications