Latest Updates
-
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್?
ಪ್ರತಿಷ್ಠಿತ ಮೆಟ್ ಗಾಲಾದಲ್ಲಿ ಭಾರತೀಯ ಸೆಲೆಬ್ರಿಟಿಗಳು: ಇಶಾ ಅಂಬಾನಿ ಡ್ರೆಸ್ಸಿಂಗ್ ಟಾಕ್ ಆಫ್ ದಿ ಟೌನ್
ಜಗತ್ತಿನ ಫ್ಯಾಷನ್ ಈವೆಂಟ್‌ಗಳಲ್ಲಿ ಮೆಟ್‌ಗಾಲಾ ಪ್ರತಿಷ್ಠಿತ ಈವೆಂಟ್ ಆಗಿದೆ. ಒಂದು ದಿನ ಈ ಫ್ಯಾಷನ್ ಈವೆಂಟ್‌ನಲ್ಲಿ ಆಗಮಿಸುವ ಸೆಲೆಬ್ರಿಟಿಗಳು ತಮ್ಮ ಚಿತ್ರ ವಿಚಿತ್ರ ಉಡುಪು ಮೂಲಕ ಗಮನ ಸೆಳೆಯುತ್ತಾರೆ. ಈ ಕಾರ್ಯಕ್ಕೆ ಆಹ್ವಾನ ಸಿಗುವುದೇ ಪ್ರತಿಷ್ಠೆಯಾಗಿದೆ.
2023ರ ಈ ಮೆಟ್‌ಗಾಲಾ ಕಾರ್ಯಕ್ರಮ ಅಮೆರಿಕಾದ ನ್ಯೂಯಾರ್ಕ್ ಸಿಟಿಯಲ್ಲಿ ನಡೆಯಿತು. ಈ ಬಾರಿ ಈ ಕಾರ್ಯಕ್ರಮಕ್ಕೆ ಭಾರತದಿಂದ ಅಂಬಾನಿ ಮಗಳು ಇಶಾ ಅಂಬಾನಿ, ಬಾಲಿವುಡ್ ನಟಿ ಆಲಿಯಾ ಭಟ್, ಬಾಲಿವುಡ್ -ಹಾಲಿವುಡ್ ನಟಿಯಾಗಿರುವ ಪ್ರಿಯಾಂಕಾ ಚೋಪ್ರಾ ಭಾಗವಹಿಸಿದ್ದರು.

ಇದೀಗ ನಮ್ಮ ಭಾರತದ ಸೆಲೆಬ್ರಿಟಿಗಳ ಧಿರಿಸು ಫ್ಯಾಷನ್ ಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ರತಿಬಾರಿ ಸ್ವಲ್ಪ ವಿಚಿತ್ರ ವೇಷ ಹಾಕಿ ಗಮನ ಸೆಳೆಯುತ್ತಿದ್ದ ಪಿಗ್ಗಿ ಈ ಬಾರಿ ಆ ಪ್ರಯತ್ನ ಮಾಡದೆ ಆಕರ್ಷಕ ಧಿರಿಸಿನ ಮೂಲಕ ಗಮನ ಸೆಳೆದಿದ್ದಾರೆ. ಅದರಲ್ಲೂ ಈಗ ಇಶಾ ಅಂಬಾನಿ ಧರಿಸಿರುವ ದುಬಾರಿ ಕಾಸ್ಟ್ಯೂಮ್ ತುಂಬಾನೇ ಸದ್ದು ಮಾಡುತ್ತಿದೆ. ಮೆಟ್ ಗಾಲಾದಲ್ಲಿ ಭಾರತೀಯ ಸೆಲೆಬ್ರಿಟಿಗಳ ಝಲಕ್ ಹೇಗಿತ್ತು ನೋಡೋಣ ಬನ್ನಿ:
ಆಲಿಯಾ ಭಟ್:
ಆಲಿಯಾ ಭಟ್ ಇದೇ ಮೊದಲ ಬಾರಿಗೆ ಮೆಟ್ ಗಾಲಾದಲ್ಲಿ ಭಾಗವಹಿಸಿದ್ದಾರೆ, ಮುತ್ತಿನ ಬಣ್ಣದ ಗೌನ್ ಧರಿಸಿ ರೆಡ್ ಕಾರ್ಪೆಟ್ ವಾಕ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಹೆಚ್ಚೇನು ಅಭರಣವಿಲ್ಲದೆ ಕಿವಿಗೆ ಕಿವಿಯೋಲೆ , ಕೈಗೆ ಗ್ಲೌಸ್ ರೀತಿಯ ಆಭರಣ ಧರಿಸಿ ಮಿಂಚಿದ್ದಾರೆ. ಆಲಿಯಾ ಪ್ರಬಲ್ ಗುರುಂಗ್ ಬ್ರ್ಯಾಂಡ್‌ನ ಗೌನ್ ಧರಿಸಿದ್ದು ಇದು ದುಬಾರಿಯ ಬೆಲೆ ಗೌನ್ ಆಗಿದ್ದು ಡಿಸ್ನಿ ಪ್ರಿನ್ಸಸ್ ಲುಕ್‌ನಲ್ಲಿ ಮಿಂಚಿದ್ದಾರೆ. ಈ ಬ್ರ್ಯಾಂಡ್‌ನ ಗೌನ್‌ನ ಪ್ರಾರಂಭದ ಬೆಲೆಯೇ 3 ಲಕ್ಷಕ್ಕೂ ಅಧಿಕ ಇರುತ್ತದೆ.
ಬ್ಲ್ಯಾಕ್ ಅಂಡ್ ವೈಟ್ ಲುಕ್‌ನಲ್ಲಿ ಗಮನ ಸೆಳೆದ ಪ್ರಿಯಾಂಕಾ
ಈ ಹಿಂದಿನ ಮೆಟ್‌ಗಾಲಾ ಲುಕ್‌ಗೆ ಹೋಲಿಸಿದರೆ ಈ ಬಾರಿ ಪ್ರಿಯಾಂಕಾ ಡ್ರೆಸ್ಸಿಂಗ್ ತುಂಬಾ ವಿಭಿನ್ನ ಅನಿಸದಿದ್ದರೂ ಆಕರ್ಷಕವಾಗಿದೆ. ಪತಿ ನಿಕ್ ಜೋನಸ್ ಜೊತೆ ರೆಡ್ ಕಾರ್ಪೆಟ್ ವಾಕ್ ಮಾಡಿ ಪ್ರಿಯಾಂಕಾ ಹಾಗೂ ಪತಿ ನಿಕ್ ಜೋನಸ್ ಬ್ಲ್ಯಾಕ್ ಅಂಡ್ ವೈಟ್ ಕಾಂಬಿನೇಷನ್‌ನಲ್ಲಿ ಮಿಂಚಿದ್ದಾರೆ.
ಸ್ಯಾರಿ ಕಂ ಗೌನ್ ಲುಕ್‌ನಲ್ಲಿ ನಿಶಾ ಅಂಬಾನಿ
ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯವರ ಏಕೈಕ ಪುತ್ರಿ ನಿಶಾ ಅಂಬಾನಿ ಸ್ಯಾರಿ ಕಂ ಗೌನ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಮೆಟ್‌ಗಾಲಾದಲ್ಲಿ ಭಾರತೀಯ ಸಂಪ್ರದಾಯ ಪ್ರತಿನಿಧಿಸಿದ್ದಾರೆ. ಹೀಗಾಗಿ ನಿಶಾ ಅಂಬಾನಿ ಲುಕ್‌ಗೆ ತುಂಬಾನೇ ಮೆಚ್ಚುಗೆ ವ್ಯಕ್ತವಾಗಿದೆ. ಈ ಸ್ಯಾರಿಯನ್ನು ಕೂಡ ಪ್ರತಿಷ್ಠಿತ ಪ್ರಬಲ್ ಗುರುಂಗ್ ಬ್ರ್ಯಾಂಡ್ ಸಿದ್ಧಪಡಿಸಿದ್ದು, ಮುತ್ತು ಹಾಗೂ ಹರಳುಗಳನ್ನು ಬಳಸಿ ಈ ಔಟ್‌ಫಿಟ್ ತಯಾರಿಸಲಾಗಿದೆ.
ಈ ಬಾರಿ ಭಾಗವಹಿಸಿದ ಭಾರತೀಯ ಸೆಲೆಬ್ರಿಟಿಗಳ ವಿಶೇಷತೆಯೇನು ಗೊತ್ತೆ?
ಇಶಾ ಅಂಬಾನಿ, ಅಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಎಲ್ಲರೂ ತಾಯಂದಿರು. ಅಮ್ಮ ಎಂಬ ಪಾತ್ರ ನಿರ್ವಹಿಸುತ್ತಿದ್ದು ಫ್ಯಾಷನ್ ಲೋಕದಲ್ಲೂ ಸೈ ಎನಿಸಿಕೊಂಡಿದ್ದಾರೆ.



Click it and Unblock the Notifications



