Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ವ್ಯಾಲೆಂಟೈನ್ಸ್ ಡೇ: ಈ ರೀತಿ ಡ್ರೆಸ್ಸಿಂಗ್ ಮಾಡಿದರೆ ನಿಮ್ಮ ಹುಡುಗಿ ಆಗ್ತಾಳೆ ಫುಲ್ ಇಂಪ್ರೆಸ್!
ಫೆಬ್ರವರಿ ತಿಂಗಳು... ಪ್ರೇಮ ಜ್ವರದ ತಿಂಗಳು.... ಈಗಾಗಲೇ ಪ್ರೇಮಿಸುತ್ತಿರುವವರಿಗೆ ಬರುವ ಪ್ರೇಮಿಗಳ ದಿನವನ್ನು ಇನ್ನಷ್ಟು ಸ್ಪೆಷಲ್ ಆಗಿಸುವುದು ಹೇಗೆ ಎಂಬ ಚಿಂತೆ ಹತ್ತಿರುತ್ತದೆ, ಇನ್ನೂ ಯಾರಿಗಾದರೂ ಪ್ರಪೋಸ್ ಮಾಡಬೇಕು ಎಂದಾದರೆ 'ನನ್ನ ಪ್ರೀತಿಗೆ ಗ್ರೀನ್ ಸಿಗ್ನಲ್ ಸಿಗುತ್ತೋ ಇಲ್ವೋ' ಎಂಬ ಚಡಪಡಿಕೆ ಹೀಗೆ ಈ ಫೆಬ್ರವರಿ ತಿಂಗಳು ಅದರಲ್ಲೂ ವ್ಯಾಲೆಂಟೈನ್ಸ್ ಡೇ ಮುಗಿಯುವವರೆಗೂ ಪ್ರೀತಿ-ಪ್ರೇಮದ್ದೇ ಗುಂಗು...ಈ ವ್ಯಾಲೆಂಟೈನ್ಸ್ ಡೇಗೆ ನಿಮ್ಮ ಹುಡುಗಿಗೆ ಪ್ರೀತಿಯ ಉಡುಗೊರೆ ಕೊಡುವಾಗ ಅಥವಾ ಅವಳನ್ನು ಪ್ರಪೋಸ್ ಮಾಡುವಾಗ ನಾನು ಹೇಗೆ ರೆಡಿಯಾಗಬೇಕು, ಯಾವ ರೀತಿ ಡ್ರೆಸ್ಸಿಂಗ್ ಮಾಡಿದರೆ ಚೆನ್ನಾಗಿರುತ್ತೆ? ನನ್ನನ್ನು ನೋಡಿದ ತಕ್ಷಣ ಇಂಪ್ರೆಸ್ ಮೂಡುವಂತೆ ನಾನು ಕಾಣಬೇಕು, ಆದರೆ ಹೇಗೆ? ಎಂದೆಲ್ಲಾ ಯೋಚಿಸುತ್ತಿದ್ದರೆ ಇಲ್ಲಿದೆ ನೋಡಿ ಸೂಪರ್ ಡ್ರೆಸ್ಸಿಂಗ್ ಐಡಿಯಾಗಳು...
ನೀವು ಈ ರೀತಿ ಡ್ರೆಸ್ಸಿಂಗ್ ಮಾಡಿದ್ದೇ ಆದರೆ ನಿಮ್ಮ ಹುಡುಗಿ ಮಾತ್ರವಲ್ಲ, ಇತರ ಹುಡುಗಿಯರು ಕೂಡ ನಿಮ್ಮ ಡ್ರೆಸ್ಸಿಂಗ್ ಸ್ಟೈಲ್ ನೋಡಿ ಮೆಚ್ಚುಗೆ ವ್ಯಕ್ತಪಡಿಸುವುದು ಗ್ಯಾರಂಟಿ ನೋಡಿ...

ರೆಡ್ ಅಂಡ್ ಹಾಟ್ ಲುಕ್
ಈ ಡ್ರೆಸ್ಸಿಂಗ್ ನೋಡಿ ಸೂಪರ್ ಆಗಿದೆ ಅಲ್ವಾ? ವ್ಯಾಲೆಂಟೈನ್ಸ್ ಡೇಗೆ ಹೇಳಿ ಮಾಡಿಸಿದಂಥ ಡ್ರೆಸ್ಸಿಂಗ್ ಅಲ್ವಾ? ಹಾಂ... ಈ ರೀತಿ ಡ್ರೆಸ್ಸಿಂಗ್ ಮಾಡಿ ಕೈಯಲ್ಲಿ ಒಂದು ಗುಲಾಬಿ ಬೊಕ್ಕೆ ಹಿಡಿದು ಹೋದರೆ ನಿಮ್ಮ ಹುಡುಗಿ ನಿಮ್ಮನ್ನು ನೋಡಿ ಫುಲ್ ಫಿದಾ...

ಕ್ಯಾಸ್ಯೂಯಲ್ ಅಂಡ್ ಸೆಕ್ಸಿ
ಬ್ಲ್ಯಾಕ್ ಅಂಡ್ ವೈಡ್ ಕಾಂಬೀನೇಷನ್ ಕ್ಯಾಸ್ಯೂಯಲ್ ಡ್ರೆಸ್ಸಿಂಗ್ ಪ್ರತಿಯೊಬ್ಬ ಪುರುಷರಿಗೂ ಆಕರ್ಷಕ ಲುಕ್ ನೀಡುವುದರಲ್ಲಿ ನೋ ಡೌಟ್. ಇನ್ನು ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ಆಗಿ ನೀವು ರೆಡ್ ಅಂಡ್ ಬ್ಲ್ಯಾಕ್ ಡ್ರೆಸ್ಸಿಂಗ್‌ನಲ್ಲೂ ಮಿಂಚಬಹುದು.

ವೈಟ್ ಅಂಡ್ ಗ್ರೇ ಕಾಂಬಿನೇಷನ್
ಪ್ಯಾಂಟ್‌ನ ತುದಿ ಮಡಚಿದಂಥ ಗ್ರೇ ಪ್ಯಾಂಟ್ ಅದಕ್ಕೆ ಒಪ್ಪುವ ವೈಟ್ ಶರ್ಟ್ ತುಂಬಾನೇ ಸ್ಟೈಲಿಷ್ ಲುಕ್ ನಿಡುವುದು, ನಿಮ್ಮ ಈ ಡ್ರೆಸ್ಸಿಂಗ್ ಸ್ಟೈಲ್ ನೋಡಿ ಪ್ರತಿಯೊಬ್ಬರು ವಾವ್ ಅಂತಾರೆ ನೋಡಿ.

ಬ್ಲೂ ಜೀನ್ಸ್ ಅಂಡ್ ವೈಟ್ ಶರ್ಟ್, ಜರ್ಕಿನ್
ಬ್ಲೂ ಬಣ್ಣದ ಟೋರ್ನ್ ಜೀನ್ಸ್, ಅದಕ್ಕೆ ಒಪ್ಪುವಂತೆ ವೈಟ್ ಟೀ ಶರ್ಟ್, ಜೊತೆಗೆ ಅದಕ್ಕೊಂದು ಜರ್ಕಿನ್, ಈ ಅಣ್ಣಾ ಬಾಂಡ್ ಲುಕ್ ತುಂಬಾ ಸ್ಟೈಲಿಷ್ ಆಗಿದೆ ಅಲ್ವಾ?

ಓಪನ್ ಬಟನ್ ಶರ್ಟ್ ಅಂಡ್ ಕಾಟನ್ ಪ್ಯಾಂಟ್ ಸ್ಟೈಲಿಷ್ ಲುಕ್
ಬಾಡಿ ಫಿಟ್‌ನ ಮಂಡಿಯವರೆಗಿನ ಕಾಟನ್ ಪ್ಯಾಂಟ್ ಅದರ ತುದಿ ಮಡಚಿದಂತೆ ಇರಬೇಕು, ಅದಕ್ಕೊಂದು ಆಫ್ ಸ್ಲೀವ್ ಅಥವಾ ಫುಲ್ ಸ್ಲೀವ್‌ನ ಶರ್ಟ್ , ಶರ್ಟ್ ಎರಡು ಬಟನ್ ಓಪನ್ ಆಗಿರುವಂತೆ ಮಾಡುವ ಡ್ರೆಸ್ಸಿಂಗ್ ನಿಮಗೆ ಸೆಕ್ಸಿ ಲುಕ್ ನೀಡುವುದು.

ಶರ್ಟ್ ವಿಥ್ ಟೀ ಶರ್ಟ್ ಲುಕ್
ಜೀನ್ಸ್ ಪ್ಯಾಂಟ್‌ಗೆ ಟೀ ಶರ್ಟ್ ಹಾಗೂ ಶರ್ಟ್ ಹಾಕಿರುವ ಡ್ರೆಸ್ಸಿಂಗ್ ಸ್ಟೈಲ್ ನೋಡಿರುತ್ತೀರಿ, ನೀವು ಕಾಲಿನ ಮಣಿಗಂಟಿನವರೆಗಿನ ಕಾಟನ್ ಪ್ಯಾಂಟ್ ಧರಿಸಿ ಅದಕ್ಕೆ ಟೀ ಶರ್ಟ್ ಹಾಗೂ ಶರ್ಟ್ ಧರಿಸಿ, ಕಾಲಿಗೆ ಸ್ನೀಕರ್ಸ್ ಹಾಕಿದರೆ ತುಂಬಾನೇ ಸ್ಟೈಲಿಷ್ ಆಗಿರುತ್ತದೆ.

ಜೀನ್ ಲುಕ್
ಜೀನ್‌ಗೆ ಜೀನ್ ಶರ್ಟ್ ಧರಿಸಿ, ತಲೆಗೊಂದು ಕ್ಯಾಪ್ ಧರಿಸಿರುವ ಡ್ರೆಸ್ಸಿಂಗ್ ಚಳಿಗಾಲದ ಫ್ಯಾಷನ್‌ಗೆ ತುಂಬಾನೇ ಸೂಕ್ತವಾಗಿದೆ.

ಬ್ಲೇಝರ್ ಲುಕ್
ಡೇಟಿಂಗ್, ಆಫೀಸ್ ಮೀಟಿಂಗ್, ಮ್ಯಾರೇಜ್ ಫಂಕ್ಷನ್ ಹೀಗೆ ಎಲ್ಲಾ ಕಡೆ ಸೂಕ್ತವಾಗುವ ಡ್ರೆಸ್ಸಿಂಗ್ ಸ್ಟೈಲ್ ಇದಾಗಿದೆ.

ಫಾರ್ಮಲ್‌ನಲ್ಲಿ ಹಾಟ್ ಲುಕ್
ಸ್ಲಿಮ್‌ಫಿಟ್‌ನ ಪಿಂಕ್ ಶರ್ಟ್, ಅದಕ್ಕೊಪ್ಪುವ ಬ್ಲ್ಯಾಕ್ ಫಾರ್ಮಲ್ ಪ್ಯಾಂಟ್, ಫಾರ್ಮಲ್ ಶೂ ಧರಿಸಿದ ಲುಕ್ ತುಂಬಾನೇ ಸ್ಟೈಲಿಷ್ ಆಗಿದೆ ಅಲ್ವಾ?

ಬ್ಲ್ಯಾಕ್ ಲವ್
ಬ್ಲ್ಯಾಕ್ ಕಲರ್ ಡ್ರೆಸ್ಸಿಂಗ್ ತುಂಬಾನೇ ಇಷ್ಟಪಡುತ್ತಾರೆ, ಬ್ಲ್ಯಾಕ್ ಟೀ ಶರ್ಟ್‌ನಲ್ಲಿ ಈ ರೀತಿ ಡ್ರೆಸ್ಸಿಂಗ್ ಮಾಡಿದರೆ ತುಂಬಾನೇ ಚೆನ್ನಾಗಿ ಕಾಣುತ್ತೆ.



Click it and Unblock the Notifications
