Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
Kiccha Sudeep Fashion: ಈ ವಾರ ಗಮನ ಸೆಳೆದ ಸುದೀಪ್ ಡ್ರೆಸ್ಸಿಂಗ್
ಬಿಗ್‌ಬಾಸ್ ಕನ್ನಡದಲ್ಲಿ ಸುದೀಪ್ ಅವರು ತಮ್ಮ ಅದ್ಭುತವಾದ ನಿರೂಪಣೆ ಶೈಲಿಯಿಂದ ಮಾತ್ರವಲ್ಲ ಅತ್ಯಾಕರ್ಷಿಕವಾದ ಉಡುಗೆಗಳ ಮೂಲಕವೂ ಗಮನ ಸೆಳೆಯುತ್ತಾರೆ. ಅವರ ಮಾತುಗಳನ್ನು ಕೇಳಲು ಎಷ್ಟು ಚೆಂದವೋ ಅವರ ಡ್ರೆಸ್ ಸ್ಟೈಲ್‌ಗಳನ್ನು ನೋಡುವುದಕ್ಕೂ ಅಷ್ಟೇ ಅಂದವಾಗಿರುತ್ತದೆ.
ಪ್ರತಿವಾರ ಅವರು ಬರುವಾಗ ಇವತ್ತು ಯಾವ ಸ್ಟೈಲ್‌ನಲ್ಲಿ ಬರಬಹುದು ಎಂಬ ನಿರೀಕ್ಷೆ ಬಿಗ್‌ಬಾಸ್‌ಸ್ಪರ್ಧಿಗಳಿಗೆ ಮಾತ್ರವಲ್ಲ ವೀಕ್ಷಕರಲ್ಲೂ ಇದ್ದೇ ಇರುತ್ತದೆ. ಅವರ ಒಂದೊಂದು ಡ್ರೆಸ್ ಸ್ಟೈಲ್ ನೋಡುವಾಗ ಪುರುಷರಿಗೆ ಈ ರೀತಿಯೂ ಡ್ರೆಸ್ಸಿಂಗ್ ಮಾಡಬಹುದಲ್ವಾ ಎಂಬ ಐಡಿಯಾ ಹೊಳೆದರೆ, ಹೆಣ್ಮಕ್ಕಳು ನಮ್ಮ ಹುಡುಗನೂ ಈ ರೀತಿ ಡ್ರೆಸ್ಸಿಂಗ್ ಮಾಡಿದರೆ ಎಷ್ಟು ಚೆನ್ನಾಗಿ ಕಾಣಬಹುದು ಎಂದು ಊಹಿಸಿಕೊಳ್ಳುವಷ್ಟರ ಮಟ್ಟಿಗೆ ಅವರ ಡ್ರೆಸ್ಸಿಂಗ್ ಚೆನ್ನಾಗಿರುತ್ತದೆ.

ಸುದೀಪ್ ಅವರ ಡ್ರೆಸ್ಸಿಂಗ್‌ನ ಮತ್ತೊಂದು ವಿಶೇಷತೆ ನೀವು ಗಮನಿಸಿದ್ದರೆ ಅವರು ಮಾಡುವ ಡ್ರೆಸ್ಸಿಂಗ್ ಸ್ಟೈಲ್ ಇದೆಯೆಲ್ಲಾ ಅವುಗಳನ್ನು ಆಫೀಸ್ ಪಾರ್ಟಿಗಳಲ್ಲಿ ಮಾಡಬಹುದು, ಇನ್ನೂಸ್ನೇಹಿತರ, ಸಂಬಂಧಿಕರ ಮದುವೆಗೆ ಹೋಗುವಾಗ ಅವರ ಸ್ಟೈಲ್ ಫಾಲೋ ಮಾಡಿದರೆ ಡಿಫರೆಂಟ್ ಲುಕ್‌ನಿಂದ ಮಿಂಚುವುದರಲ್ಲಿ ಯಾವುದೇ ಡೌಟಿಲ್ಲ.
ಪುರುಷರಿಗೆ ಹೆಚ್ಚು ಡ್ರೆಸ್ಸಿಂಗ್ ಸ್ಟೈಲೇ ಇಲ್ಲ ಎಂದು ಭಾವಿಸುವವರು ಸುದೀಪ್ ಕೋಟ್ ಸೂಟ್‌ನಲ್ಲಿ ಎಷ್ಟೆಲ್ಲಾ ಭಿನ್ನ ಸ್ಟೈಲ್ ಮಿಂಚಿದ್ದಾರೆ ನೋಡಿ. ಇಲ್ಲಿ ಸುದೀಪ್‌ರವರ ಆಕರ್ಷಕವಾದ ಸೂಟ್ ಸ್ಟೈಲ್‌ಗಳ ಬಗ್ಗೆ ಹೇಳಲಾಗಿದೆ ನೋಡಿ:
ಚಿತ್ರಕೃಪೆ:ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್

ಬ್ಲೂ ಶರ್ಟ್ ವಿಥ್ ಬ್ಲೂ ಚೆಕ್ಸ್ ವೇಸ್ಟ್ ಕೋಟ್
ಬಿಗ್‌ಬಾಸ್ 6ನೇ ವಾರದಲ್ಲಿ ವೀಕೆಂಡ್‌ನಲ್ಲಿ ಸುದೀಪ್ ಯಾವ ರೀತಿಯ ಔಟ್‌ಫಿಟ್‌ನಲ್ಲಿ ಕಾಣಿಸುತ್ತಾರೆ ಎಂದು ಬಯಸಿದವರಿಗೆ ಶನಿವಾರ ಅವರ ಡ್ರೆಸ್ಸಿಂಗ್ ಸ್ಟೈಲ್ ತುಂಬಾ ಆಕರ್ಷಕವಾಗಿತ್ತು. ಭಾನುವಾರದ ಬ್ಲೇಝರ್ ಲುಕ್ ಚೆನ್ನಾಗಿದ್ದರೂ ಶನಿವಾರ ಹಾಗೂ ಭಾನುವಾರಕ್ಕೆ ಹೋಲಿಸಿದರೆ ಶನಿವಾರ ಸುದೀಪ್ ಅವರ ಡ್ರೆಸ್ಸಿಂಗ್ ಹೆಚ್ಚು ಆಕರ್ಷಕವಾಗಿತ್ತು ಎಂದು ಹೇಳಬಹುದು. ಈ ಬಾರಿ ಅವರು ಧರಸಿದ್ದ ವೇಸ್ಟ್ ಕೋಟ್ ಸ್ವಲ್ಪ ಭಿನ್ನ ವಿನ್ಯಾಸದಲ್ಲಿ ಫ್ಯಾಷನ್ ಪ್ರಿಯರ ಗಮನ ಸೆಳೆಯಿತು. ಖಾಕಿ ಪ್ಯಾಂಟ್, ಕಪ್ಪು ಬಣ್ಣದ ಟೀ ಶರ್ಟ್ ಅದರ ಮೇಲೆ ನೀಲಿ ಶರ್ಟ್ ಧರಿಸಿ ಅದಕ್ಕೆ ಬಟನ್‌ಗಳಿಲ್ಲದ ಚೆಕ್ಸ್ ವೇಸ್ಟ್ ಕೋಸ್ಟ್ ಧರಿಸಿದ್ದರು. ಈ ಡ್ರೆಸ್ಸಿಂಗ್ ಸ್ಟೈಲ್ ಸ್ವಲ್ಪ ಭಿನ್ನವಾಗಿ, ಸ್ಟೈಲಿಷ್ ಆಗಿದೆ ಅಲ್ವಾ?

ವೈಟ್ ಶರ್ಟ್‌ಗೆ ರಾಯಲ್ ಬ್ಲೂ ವೇಸ್ಟ್‌ಕೋಟ್
ಬಿಳಿ ಬಣ್ಣದ ಶರ್ಟ್‌ಗೆ ಕಡು ನೀಲಿ ಬಣ್ಣದ ವೇಸ್ಟ್‌ಕೋಟ್ ಪರ್ಫೆಕ್ಟ್ ಕಾಂಬಿನೇಷನ್. ಅದರಲ್ಲೂ ವೇಸ್ಟ್ ಕೋಟ್ ಮೇಲಿರುವ ವೈಟ್ ಬಟನ್‌ಗಳು ಈ ಕೋಟ್‌ನ ಮೆರಗು ಮತ್ತಷ್ಟು ಹೆಚ್ಚಿಸಿದೆ. ಈ ಡ್ರೆಸ್ಸಿಂಗ್ ಸ್ಟೈಲ್ ದಪ್ಪವಿರಲಿ, ಸಣ್ಣವಿರಲಿ, ಉದ್ದವಿರಲಿ, ಗಿಡ್ಡವಿರಲಿ ಎಲ್ಲರಿಗೂ ಒಪ್ಪುವಂಥ ಸ್ಟೈಲ್ ಇದಾಗಿದೆ. ಬ್ಲೇಝರ್ ಬೇಡ, ಕೋಟ್ ಮಾತ್ರ ಸಾಕು ಎಂದು ಬಯಸಿದರೆ ಈ ರೀತಿಯ ಡ್ರೆಸ್ಸಿಂಗ್ ಆಕರ್ಷಕವಾಗಿ ಕಾಣುವುದು. ಇಲ್ಲಿ ನೀವು ಜೀನ್ಸ್‌ಗೂ ಕೂಡ ಈ ರೀತಿ ಡ್ರೆಸ್ಸಿಂಗ್ ಮಾಡಿಕೊಳ್ಳಬಹುದು.

ಬ್ಲೂ ಶರ್ಟ್ ವಿಥ್ ಚೆಕ್ಸ್ ವೇಸ್ಟ್‌ಕೋಟ್
ಶರ್ಟ್ ಕಡು ಬಣ್ಣವಿದ್ದರೆ ವೇಸ್ಟ್‌ಕೋಸ್ಟ್ ತಿಳಿ ಬಣ್ಣವಿರಬೇಕು. ಇಲ್ಲಿ ಸುದೀಪ್ ಅವರು ಕಡು ನೀಲಿ ಬಣ್ಣದ ಶರ್ಟ್‌ಗೆ, ತೆಳು ಖಾಕಿ ಬಣ್ಣವಿರುವ ಚೆಕ್ಸ್ ಇರುವ ವೇಸ್ಟ್‌ಕೋಟ್ ಧರಿಸಿದ್ದಾರೆ. ಈ ಬಣ್ಣದ ಶರ್ಟ್‌ಗೆ ವೈಟ್ ಚೆಕ್ಸ್ ವೇಸ್ಟ್‌ಕೋಟ್ ಕೂಡ ಆಕರ್ಷಕವಾಗಿ ಕಾಣುತ್ತದೆ. ಈ ರೀತಿಯ ಡ್ರೆಸ್ಸಿಂಗ್ ಮಾಡುವಾಗ ಕೈಯನ್ನು ಸ್ವಲ್ಪ ಮಡಚಿ ಇಡಿ. ಇಲ್ಲಿ ನೀವು ನಿಮ್ಮ ವೇಸ್ಟ್‌ಕೋಟ್ ಹಾಗೂ ಪ್ಯಾಂಟ್ ಮ್ಯಾಚ್ ಇರಬೇಕು.

ಶರ್ಟ್, ವೇಸ್ಟ್ ಕೋಟ್ ಹಾಗೂ ಬ್ಲೇಝರ್
ಟಿಪ್ ಟಾಪ್ ಆಗಿ ಡ್ರೆಸ್ಸಿಂಗ್ ಮಾಡಬೇಕೆಂದು ಬಯಸಿದಾಗ ಈ ರೀತಿ ಡ್ರೆಸ್ಸಿಂಗ್ ಮಾಡಬಹುದು. ಇಲ್ಲಿ ಶರ್ಟ್ ಹಾಗೂ ಬ್ಲೇಝರ್ ಕಲರ್ ಮ್ಯಾಚಿಂಗ್ ಮಾಡಬೇಕು, ಪ್ಯಾಂಟ್ ಹಾಗೂ ವೇಸ್ಟ್‌ಕೋಟ್ ಬಣ್ಣ ಮ್ಯಾಚ್ ಆಗಿರುವಂತೆ ಇರಬೇಕು. ಸುದೀಪ್ ಅವರು ಬಿಳಿ ಶರ್ಟ್‌ಗೆ ನೀಲಿ ಬಣ್ಣದ ವೇಸ್ಟ್‌ಕೋಟ್ ಅದಕ್ಕೆ ಬ್ಲೇಝರ್ ಧರಿಸಿರುವ ಸ್ಟೈಲ್ ಎಲ್ಲರ ಗಮನ ಸೆಳೆಯುವಂತಿದೆ ಅಲ್ವಾ? ಮದುವೆ ಸಮಾರಂಭದಲ್ಲಿ ಈ ರೀತಿ ಡ್ರೆಸ್ಸಿಂಗ್ ಮಾಡಬಹುದು ನೋಡಿ.

ಸ್ಟೆಟರ್ ವಿಥ್ ಸೂಟ್ ಲುಕ್
ಚಳಿಗಾಲಕ್ಕೆ ಹೇಳಿ ಮಾಡಿಸಿದ ಸ್ಟೈಲ್ ಇದಾಗಿದೆ ನೋಡಿ. ಸ್ವೆಟರ್ ಹಾಕಿ ವೇಸ್ಟ್‌ಕೋಟ್, ಬ್ಲೇಝರ್ ಹಾಕಬಹುದೆಂದು ಯಾರೂ ಯೋಚನೆಯೇ ಮಾಡಿರಲಿಲ್ಲ, ಆದರೆ ಜೈ ಜಗದೀಶ್ ಅವರಿಂದ ಸ್ಪೂರ್ತಿ ಪಡೆದ ಸುದೀಪ್‌ನವರು ಆ ರೀತಿಯ ಡ್ರೆಸ್ಸಿಂಗ್‌ನಲ್ಲಿ ಗಮನ ಸೆಳೆದೇ ಬಿಟ್ಟರು. ಈ ಡ್ರೆಸ್ಸಿಂಗ್ ಸ್ಟೈಲ್ ಇದೀಗ ಫ್ಯಾಷನ್ ಪ್ರಿಯರ ಗಮನ ಸೆಳೆದಿದೆ. ಇಲ್ಲಿ ಕೆಂಪು ಬಣ್ಣದ ಸ್ಟೆಟರ್‌ಗೆ ಮ್ಯಾಚಿಂಗ್ ಬಣ್ಣದ ವೇಸ್ಟ್‌ಕೋಟ್ ಹಾಗೂ ಬ್ಲೇಝರ್ ಮ್ಯಾಚ್ ಮಾಡಲಾಗಿದೆ.

ಶರ್ಟ್ ವಿಥ್ ಬ್ಲೇಝರ್
ನೀವು ಆಫೀಸ್‌ಗೆ ಹೋಗುವಾಗ ಸ್ಮಾರ್ಟ್ ಲುಕ್ ನಿಡುವ ಡ್ರೆಸ್ಸಿಂಗ್ ಇದಾಗಿದೆ. ಈ ಡ್ರೆಸ್ಸಿಂಗ್‌ನಲ್ಲಿ ಸುದೀಪ್ ಖಾಕಿ ಬಣ್ಣದ ಪ್ಯಾಂಟ್‌ಗೆ ವೈಟ್ ಶರ್ಟ್ ಹಾಗೂ ಬ್ಲೂ ಬ್ಲೇಝರ್ ಧರಿಸಿದ್ದಾರೆ. ನೋಡಲಿಕ್ಕೆ ಸಿಂಪಲ್ ಹಾಗೂ ಎಲಿಗಂಟ್ ಲುಕ್‌ಗಾಗಿ ಈ ಡ್ರೆಸ್ಸಿಂಗ್ ಸ್ಟೈಲ್ ಫಾಲೋ ಮಾಡಬಹುದು. ನೀವು ತೆಳುಬಣ್ಣದ ಪ್ಯಾಂಟ್ ಧರಿಸಿದ್ದರೆ ಕಡು ಬಣ್ಣದ ಶರ್ಟ್ ಹಾಗೂ ತೆಳು ಬಣ್ಣದ ಬ್ಲೇಝರ್ ಧರಿಸಿ.

ವೈಟ್ ವಿಥ್ ಗ್ರೇ ಮ್ಯಾಚಿಂಗ್
ಇಲ್ಲಿ ಬಿಳಿ ಬಣ್ಣದ ಶರ್ಟ್ ಮೇಲೆ ಗ್ರೇ ಕಲರ್ ವೇಸ್ಟ್‌ಕೋಟ್ ಧರಿಸಿ, ಅದರ ಮೇಲೆ ಗ್ರೇ ಹಾಗೂ ತೆಳು ನೀಲಿ ಮಿಶ್ರಿತ ಬಿಲಿ ಚೆಕ್ಸ್ ಬ್ಲೇಝೆರ್ ಮ್ಯಾಚ್ ಮಾಡಲಾಗಿದೆ. ಇಲ್ಲಿ ಅವರು ಬ್ಲೇಝರ್ ಅನ್ನು ಶರ್ಟ್ ಹಾಗೂ ವೇಸ್ಟ್‌ಕೋಟ್ ಬಣ್ಣದ ಕಾಂಬಿನೇಷನ್‌ನಲ್ಲಿ ಧರಿಸಿ ಸ್ಟೈಲಿಷ್ ಟಚ್ ನೀಡಿದ್ದಾರೆ. ಈ ರೀತಿಯ ಡ್ರೆಸ್ಸಿಂಗ್ ಮಾಡುವಾಗ ತುಂಬಾ ಎಚ್ಚರಿಕೆವಹಿಸಬೇಕು. ಎಲ್ಲವೂ ಕಡು ಬಣ್ಣದಲ್ಲಿದ್ದರೆ ಅಷ್ಟು ಆಕರ್ಷಕವಾಗಿ ಕಾಣುವುದಿಲ್ಲ.



Click it and Unblock the Notifications