Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಈ ನಟರ ರೋಲ್‌ನೆಕ್ ಫ್ಯಾಷನ್ ಸೆನ್ಸ್ ಸಕತ್ ಫ್ಯಾಷನಬಲ್ ಆಗಿದೆ ನೋಡಿ
ಸ್ತ್ರೀಯರು ಗಂಟೆಗಟ್ಟಲೆ ಕನ್ನಡಿ ಮುಂದೆ ನಿಂತು ಅಲಂಕರಿಸಿಕೊಳ್ಳುವುದನ್ನು ನೋಡಿದಾಗ ಪುರುಷರು ' ಹೊರಡಲು ನಿಮಗೆ ಗಂಟೆ-ಗಟ್ಟಲೆ ಟೈಮ್ ಬೇಕು, ನಮ್ಮದು ಒಂದು ಪ್ಯಾಂಟ್ -ಶರ್ಟ್ ಹಾಕಿದರೆ ಮುಗೀತು' ಎಂದು ಸಾಮಾನ್ಯವಾಗಿ ಹೇಳುತ್ತಿರುತ್ತಾರೆ, ಅವರ ಆ ಮಾತಿನಲ್ಲಿ ಹಿಂದೆ ಸ್ವಲ್ಪ ಅಸೂಯೆ ಇಲ್ಲ ಅಂತ ಹೇಳಕ್ಕೆ ಸಾಧ್ಯವಿಲ್ಲ.

ನಮಗೆ ಡ್ರೆಸ್ಸಿಂಗ್‌ನಲ್ಲಿ ಹೆಚ್ಚಿನ ಆಯ್ಕೆಗಳಲ್ಲ ಎಂದು ಪುರುಷರು ಬೇಸರ ಪಡಬೇಕಾಗಿಲ್ಲ, ಏಕೆಂದರೆ ಅನೇಕ ಮಾಡೆಲ್‌ಗಳು, ಅನೇಕ ಸ್ಟಾರ್ ನಟರು ವಿಭಿನ್ನವಾದ ಫ್ಯಾಷನ್ ಸೆನ್ಸ್‌ನಲ್ಲಿ ಮಿಂಚುವುದನ್ನು ಕಾಣಬಹುದು. ಇಲ್ಲಿ ನಮ್ಮ ಸೌತ್ ಇಂಡಿಯಾ ನಟರು ಸಕತ್ ಫ್ಯಾಷನಬಲ್ ಲುಕ್‌ನಲ್ಲಿ ಕಾಣಿಸಿರುವ ಫೋಟೋಗಳನ್ನು ನೀಡಲಾಗಿದೆ, ತುಂಬಾ ಸ್ಟ್ಯಾಂಡರ್ಡ್ ಆಗಿ ಕಾಣ ಬಯಸುವುದಾದರೆ ಈ ಫ್ಯಾಷನ್ ಲುಕ್ ಚೆನ್ನಾಗಿದೆ ನೋಡಿ:

ನಮ್ಮ ರಾಕಿಂಗ್ ಬಾಯ್ ಯಶ್
ಸೌತ್ ಇಂಡಿಯನ್ ಸ್ಟಾರ್‌ಗಳಿಗೆ ಮಾತ್ರವಲ್ಲ, ಬಾಲಿವುಡ್ ಸ್ಟಾರ್ ನಟರುಗಳಿಗೆ ಸಡ್ಡು ಹೊಡೆಯುವಂಥ ಸ್ಟೈಲ್ ನಮ್ಮ ಯಶ್ ಅವರದ್ದು... ಅವರು ನಟನೆಯಲ್ಲಿ ಮಾತ್ರವಲ್ಲ ತಮ್ಮ ಸ್ಟೈಲಿಷ್ ಲುಕ್ ಮೂಲಕ ಯುವಕರ ಗಮನ ಸೆಳೆಯುತ್ತಾರೆ. ರೋಲ್ ನೆಕ್‌ನ ಬ್ಲೂ ಕಲರ್‌ನ ಜಾಕೆಟ್ ಹಾಗೂ ಲಾಂಗ್ ಕುರ್ತಾ ಗ್ರ್ಯಾಂಡ್ ಫಂಕ್ಷನ್‌ಗಳಿಗೆ ಹೋಗುವಾಗ ತುಂಬಾನೇ ಸೂಕ್ತ.

ಅಲ್ಲು ಸಿರಿಶ್
ಅಲ್ಲು ಸಿರಿಶ್ ಫ್ಯಾಷನ್ ಲುಕ್‌ಗೆ ಸ್ತ್ರೀಯರ ಫ್ಯಾನ್ ಫಾಲೋವಿಂಗ್ ಹೆಚ್ಚೇ ಇದೆ. ಅವರ ಪ್ರತಿಯೊಂದು ಲುಕ್ ತುಂಬಾನೇ ಸ್ಟೈಲಿಷ್ ಆಗಿರುತ್ತದೆ. ಪೋಲೋ ನೆಕ್‌ನ ಬ್ಲ್ಯಾಕ್ ಟೀ ಶರ್ಟ್, ಗ್ರೀನ್ ಕಾರ್ಗೋ ಪ್ಯಾಂಟ್, ಬ್ರೌನ್ ಶೂನಲ್ಲಿ ಕಿಲ್ಲಿಂಗ್ ಲುಕ್ ಅಲ್ವಾ?

ವಿಜಯ್ ದೇವರಕೊಂಡ
ಪೋಲೋ ನೆಕ್‌ನ ಬ್ಲ್ಯಾಕ್ ಟೀ ಶರ್ಟ್, ಬ್ಲೇಝರ್ನಲ್ಲಿ ವಿಜಯ್ ದೇವರಕೊಂಡ ಲುಕ್ ಸೂಪರ್ ಆಗಿದೆ ಅಲ್ವಾ?

ದುಲ್ಖರ್ ಸಲ್ಮಾನ್
ವೆಲ್ವೆಟ್ ಕಲರ್ ಬ್ಲೇಝರ್‌ಗೆ ಫುಲ್ ಬ್ಲ್ಯಾಕ್ ಶರ್ಟ್ ಮ್ಯಾಚ್ ಮಾಡಿರುವ ಬ್ಯಾಂಗಲೂರ್ ಡೇಸ್ ನಟನ ಲುಕ್‌ಗೆ ಫಿದಾ ಆಗದವರು ಯಾರು ಅಲ್ವಾ?

ರಾಣಾ ದಗ್ಗುಬಟ್ಟಿ
ಬಾಹುಬಲಿ ನಟ ರಾಣಾ ದಗ್ಗುಬಾಟಿ ರೋಲ್‌ನೆಕ್‌ನ ಬ್ಲ್ಯಾಕ್ ಟೀ ಶರ್ಟ್‌ಗೆ ಬ್ಲೇಝರ್ ಧರಿಸಿ ನೀಡಿರುವ ಲುಕ್ ಸಕತ್ ಕೂಲ್ ಆಗಿದೆ.



Click it and Unblock the Notifications
