Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪುರುಷರಿಗೆ ಹಾಟ್ ಲುಕ್ ನೀಡುವ 5 ಹೇರ್‌ಸ್ಟೈಲ್‌ಗಳಿವು
ನಮಗೆ ಫ್ಯಾಷನ್ ಅಥ ವಾಸ್ಟೈಲ್ ವ್ಯಾಪ್ತಿ ತುಂಬಾ ಕಡಿಮೆ ಎಂಬ ಕಂಪ್ಲೇಂಟ್ ಪುರುಷರನ್ನು ಹೇಳುವುದನ್ನು ಕೇಳುತ್ತಾರೆ. ಹೇರ್ ಸ್ಟೈಲ್ ಬಗ್ಗೆ ಹೇಳುವುದಾದರೆ ಮಹಿಳೆಯರಿಗೆ ನೂರಕ್ಕೂ ಹೆಚ್ಚು ವಿನ್ಯಾಸದ ಹೇರ್ ಸ್ಟೈಲ್ ಮಾಡಬಹುದು, ಆದರೆ ಪುರುಷರಿಗೆ ಅಷ್ಟೊಂದು ಬಗೆಯ ಹೇರ್ ಸ್ಟೈಲ್ ಮಾಡಲು ಸಾಧ್ಯವಾಗದಿದ್ದರೂ ಕೆಲವೊಂದು ವಿನ್ಯಾಸದ ಸ್ಟೈಲ್ ಮಾಡಬಹುದು ಹಾಗೂ ಆ ಸ್ಟೈಲ್ ಮೂಲಕ ಗಮನ ಕೂಡ ಸೆಲೆಯಬಹುದು.

ಇಲ್ಲಿ ನಾವು ಈಗ ಟ್ರೆಂಡ್‌ನಲ್ಲಿರುವ ಸಕತ್ ಸ್ಟೈಲಿಷ್ ಆಗಿರುವ ಪುರುಷರ ಹೇರ್‌ಸ್ಟೈಲ್ ವಿನ್ಯಾಸದ ಬಗ್ಗೆ ಹೇಳಿದ್ದೇವೆ. ಈ ರೀತಿಯ ಹೇರ್ ಸ್ಟೈಲ್ ಎಲ್ಲರಿಗೂ ಆಕರ್ಷಕವಾಗಿ ಕಾಣುತ್ತದೆ. ಯೋ ಯೋ ಲುಕ್ ಜೊತೆ ಫ್ಯಾಷನಬಲ್ ಆಗಿ ಕಾಣ ಬಯಸುವುದಾರೆ ಈ ಹೇರ್ ಸ್ಟೈಲ್ ಟ್ರೈ ಮಾಡಿ:

ಬ್ಲೋಔಟ್ ಲುಕ್
ಈ ಹೇರ್ ಸ್ಟೈಲ್ ಸಕತ್ ರಗಡ್ ಲುಕ್ ನೀಡುತ್ತದೆ. ತಲೆಯ ಎರಡೂ ಬದಿಯ ಕೂದಲನ್ನು ಶಾರ್ಟ್ ಮಾಡಿ, ಮಧ್ಯದಲ್ಲಿ ಸ್ವಲ್ಪ ಉದ್ದವಾಗಿ ಬಿಡುವುದು. ಈ ಹೇರ್ ಸ್ಟೈಲ್ ಯುವಕರಿಗೆ ತುಂಬಾ ಆಕರ್ಷಕವಾಗಿ ಕಾಣುವುದು, ಮಧ್ಯವಯಸ್ಸು ದಾಟಿದವರಿಗೆ ಈ ಹೇರ್ ಸ್ಟೈಲ್ ಅಷ್ಟು ಸೂಕ್ತವಲ್ಲ.

ದಿ ಕ್ಲಾಸಿಕ್ ಲುಕ್
ಈ ಹೇರ್ ಸ್ಟೈಲ್ ನೋಡಿ ಎಲ್ಲಾ ವಯಸ್ಸಿನವರಿಗೂ ಸೂಕ್ತ, 60ರ ವಯಸ್ಸಿನವರೂ ಈ ಹೇರ್ ಸ್ಟೈಲ್ ಮಾಡಿಸಿದರೆ ತುಂಬಾಆಕರ್ಷಕವಾಗಿ ಕಾಣುವುದು. ಗಂಡು ಮಕ್ಕಳಿಗೂ ಚೆನ್ನಾಗಿ ಕಾಣುತ್ತದೆ.

ಜುಟ್ಟು
ಇನ್ನು ಈಗ ಜುಟ್ಟು ಬಿಡುವ ಸ್ಟೈಲ್ ಕೂಡ ಬಂದಿದೆ. ಹೇರ್ ಕಟ್ ಮಾಡಲು ಸಲೂನ್‌ಗೆ ಹೋಗುವಂತಿಲ್ಲ, ಹಾಗಾಗಿ ಈ ಸ್ಟೈಲ್ ಹೆಚ್ಚಿನವರು ಫಾಲೋ ಮಾಡುತ್ತಿದ್ದಾರೆ ಎಂದೇ ಹೇಳಬಹುದು.

ಆರ್ಮಿ ಕಟ್
ಸಕತ್ ಖಡಕ್ ಲುಕ್ ನೀಡುವ ಹೇರ್ ಸ್ಟೈಲ್ ಇದು. ಇದು ಸದೃಢ ಮೈ ಕಟ್ಟು ಹೊಂದಿದವರೆಗೆ ತುಂಬಾ ಆಕರ್ಷಕವಾಗಿ ಕಾಣುವುದು. ತುಂಬಾ ತೆಳ್ಳಗೆ ಇರುವವರೆಗೆ ಈ ಹೇರ್ ಸ್ಟೈಲ್ ಚೆನ್ನಾಗಿ ಕಾಣುವುದಿಲ್ಲ.

ಸೈಡ್ ಶೇವ್ ಮಾಡಿದ ಉದ್ದ ಕೂದಲಿನ ವಿನ್ಯಾಸ
ಇದು ಯೋ ಯೋ ಲುಕ್‌ಗೆ ಹೇಳಿ ಮಾಡಿಸಿದ ಹೇರ್ ಸ್ಟೈಲ್. ಹದಿ ಹರೆಯದ ಹುಡುಗರಿಗೆ, ಯುವಕರಿಗೆ ಈ ಹೇರ್ ಸ್ಟೈಲ್ ಚೆನ್ನಾಗಿ ಕಾಣುತ್ತದೆ. ಕೂದಲು ಸ್ವಲ್ಪ ಮಂದವಾಗಿದ್ದರೆ ಈ ಹೇರ್ ಸ್ಟೈಲ್ ತುಂಬಾ ಆಕರ್ಷಕ ಲುಕ್ ನೀಡುವುದು.



Click it and Unblock the Notifications
