Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ!
ಸ್ಟೈಲಿಷ್ ಆಗಿ ಕಾಣ ಬಯಸುವ ಪುರುಷರಿಗೆ ಇಲ್ಲಿದೆ 20 ಗಡ್ಡದ ಸ್ಟೈಲ್‌ಗಳು
ಸ್ಟೈಲ್‌ನ ವಿಷಯಕ್ಕೆ ಬಂದಾಗ ಪುರುಷರಿಗೆ ಆಯ್ಕೆಗಳು ತುಂಬಾ ಕಡಿಮೆ ಅಂತ ಕೊರಗಬೇಡಿ, ನೀವು ಕೂಡ ತುಂಬಾ ಬಗೆಯ ಸ್ಟೈಲ್ ಮಾಡಬಹುದು. ಡ್ರೆಸ್ಸಿಂಗ್‌ನಲ್ಲಿ ಹೆಣ್ಮಕ್ಕಳಿಗೆ ಇರುವ ಹಾಗೆ ಹೆಚ್ಚು ಆಯ್ಕೆಗಳು ಇಲ್ಲದಿದ್ದರೂ ಕೂದಲು ಹಾಗೂ ಗಡ್ಡದಲ್ಲಿ ನಿಮ್ಮ ಲುಕ್ ಬದಲಾಯಿಸಬಹುದು ನೋಡಿ. ಲುಕ್ ಅಂತ ಬಂದಾಗ ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣಬೇಕೆಂಬ ಬಯಕೆ ಇರುತ್ತದೆ. ಕೆಲವರಿಗೆ ತುಂಬಾ ಡೀಸೆಂಟ್ ಲುಕ್‌ನಲ್ಲಿ ಕಾಣಲು ಇಷ್ಟ, ಮತ್ತೆ ಕೆಲವರಿಗೆ ಸ್ವಲ್ಪ ಫಂಕಿ ಲುಕ್‌ನಲ್ಲಿ, ಇನ್ನು ಕೆಲವರಿಗೆ ಸ್ವಲ್ಪ ಯೋ... ಯೋ... ಲುಕ್‌ನಲ್ಲಿ ಬೇರೆಯವರ ಗಮನ ಸೆಳೆಯಲು ಇಷ್ಟ.

ನೀವು ಹೇಗೆ ಕಾಣಲು ಇಷ್ಟಪಡುತ್ತೀರೋ ಅದರಂತೆ ನಿಮ್ಮ ಗಡ್ಡದ ಸ್ಟೈಲ್ ಬದಲಾಯಿಸಿದರೆ ಸಾಕು, ನಿಮ್ಮ ಲುಕ್ ಬದಲಾಗುವುದು. ಇಲ್ಲಿ ನಾವು ನಿಮಗಾಗಿ ನಾವು ಸುಮಾರು ಬಗೆಯ ಗಡ್ಡದ ಸ್ಟೈಲ್ ಹೇಳಿದ್ದೇವೆ, ಕೆಲವರಿಗೆ ಕುರುಚಲು ಗಡ್ಡ ಆಕರ್ಷಕವಾಗಿ ಕಂಡರೆ ಮತ್ತೆ ಕೆಲವರಿಗೆ ಸ್ವಲ್ಪ ಉದ್ದದ ಗಡ್ಡ ಆಕರ್ಷಕವಾಗಿ ಕಾಣುತ್ತದೆ, ಇನ್ನು ಕೆಲವರಿಗೆ ಫ್ರೆಂಚ್ ಗಡ್ಡ ಫ್ರೊಫೆಷನಲ್ ಲುಕ್ ನೀಡುವುದು. ಇಲ್ಲಿ ಸುಮಾರು 20 ಬಗೆಯ ಗಡ್ಡದ ಸ್ಟೈಲ್ ನೀಡಲಾಗಿದೆ. ಈ ಗಡ್ಡ ಸ್ಟೈಲ್‌ಗಳಲ್ಲಿ ನಿಮಗೆ ಇಷ್ಟ ಬಂದ ಸ್ಟೈಲ್ ಮಾಡಿ ಸಕತ್ ಫ್ಯಾಷನಬಲ್ ಆಗಿ ಕಾಣಿ.

1.ಸರ್ಕಲ್ ಗಡ್ಡ
ಈ ಬಗೆಯ ಗಡ್ಡ ಎಲ್ಲಾ ಶೇಪ್‌ನ ಮುಕದವರಿಗೆ ಅಕರ್ಷಕವಾಗಿ ಕಾಣುತ್ತದೆ. ಅಲ್ಲದೆ ಈ ರೀತಿ ಗಡ್ಡ ಯುವಕ, ಮಧ್ಯವಯಸ್ಕ, ವಯಸ್ಸಾದವರು ಅಂತ ಇಲ್ಲದೆ ಎಲ್ಲರಿಗೆ ಚೆನ್ನಾಗಿ ಕಾಣುತ್ತದೆ. ಆದ್ದರಿಂದ ಈ ಗಡ್ಡದ ಸ್ಟೈಲ್ ಸ್ವಲ್ಪ ಜನಪ್ರಿಯವಾಗಿದೆ. ಈ ರೀತಿ ಗಡ್ಡ ಬಿಡಬೇಕೆಂದರೆ ಮೊದಲು ಗಡ್ಡ ಮತ್ತು ಮೀಸೆಯನ್ನು ಸ್ವಲ್ಪ ಮಂದವಾಗಿ ಬೆಳೆಸಿ ನಂತರ ಶೇಪ್ ನೀಡಬೇಕು. ಈ ಶೇಪ್‌ಗೆ ಬಂದ ಮೇಲೆ ಗಡ್ಡ ಬೆಳೆಯುವಾಗ ಅದೇ ಶೇಪ್‌ನಲ್ಲಿ ಟ್ರಿಮ್ ಮಾಡಿದರೆ ಸಾಕು.

2. ಬ್ಯಾಂಢೋಲ್ಜ್ ಗಡ್ಡ
ಈ ರೀತಿಯ ಗಡ್ಡ ಎರಿಕ್ ಬ್ಯಾಂಢೋಲ್ಜ್ ಎಂಬವರಿಂದ ಪರಿಚಯವಾಯಿತು. ಈ ರೀತಿಯ ಗಡ್ಡ ಬೇಕೆನ್ನುವವರಿಗೆ ತುಂಬಾ ತಾಳ್ಮೆಬೇಕು. ಏಕೆಂದರೆ ಈ ಗಡ್ಡ ಬೆಳೆಯಲು ತಿಂಗಳುಗಳು ಬೇಕಾಗುತ್ತದೆ. ಮೊದ ಮೊದಲು ಇದನ್ನು ಬೆಳೆಸುವಾಗ ಅಷ್ಟು ಆಕರ್ಷಕವಾಗಿ ಕಾಣುವುದಿಲ್ಲ. ಈ ರೀತಿ ಗಡ್ಡ ಬಿಡಲು ಗಡ್ಡ ಬೆಳೆಸುವಾಗ ಏಕೆ ಈ ರೀತಿ ಬೆಳೆಸುತ್ತಿದ್ದೀಯಾ ಎಂದು ಕೇಳುವವರು ನಂತರ ನಿಮ್ಮ ಗಡ್ಡ ಸ್ಟೈಲ್‌ಗೆ ಮಾರು ಹೋಗುವುದಂತೂ ಗ್ಯಾರಂಟಿ.

3. ಗ್ವಾಯೆಟೆ ಗಡ್ಡ
ಈ ರೀತಿ ಗಡ್ಡ ಬಿಟ್ಟಾಗ ಸ್ವಲ್ಪ ಕುರಿಗೆ ಗಡ್ಡ ಬಂದಂತೆ ಕಾಣುವುದರಿಂದ ಇದನ್ನು ಗ್ವಾಯೆಟೆ ಗಡ್ಡವೆಂದು ಕರೆಯುತ್ತಾರೆ. ಈ ಸ್ಟೈಲ್‌ನಲ್ಲಿ ಗಲ್ಲದ ಕೆಳಗಡೆ ಸ್ವಲ್ಪ ಗಡ್ಡ ಬಿಟ್ಟು ಫ್ಯಾಷನ್ ಮಾಡುತ್ತಾರೆ. ಈ ರೀತಿ ಗಡ್ಡ ಬಿಡಲು ಬಯಸುವವರು ಎಷ್ಟು ಉದ್ದದಲ್ಲಿ ಬಿಡಬೇಕೆಂಬುವುದು ಅವರವರಿಗೆ ಬಿಟ್ಟದ್ದು, ಕೆಲವರು ಚಿಕ್ಕದಾಗಿ ಬಿಟ್ಟರೆ, ಮತ್ತೆ ಕೆಲವರು ಸ್ವಲ್ಪ ಉದ್ದ ಬಿಟ್ಟು ನೋಡುವಾಗ ಕುರಿಗಳನ್ನು ನೆನಪಿಸುತ್ತಾರೆ. ಈ ರೀತಿಯ ಗಡ್ಡವನ್ನು ಹದಿ ಹರೆಯದ ಪ್ರಾಯದವರು ಹೆಚ್ಚು ಇಷ್ಟ ಪಡುತ್ತಾರೆ.

4. ಗ್ವಾಯೆಟೆ ಗಡ್ಡದಲ್ಲಿ ಸ್ವಲ್ಪ ಉದ್ದವಾಗಿ ಬಿಡುವುದು
ಈ ಗಡ್ಡ ಗ್ವಾಯೆಟೆ ಗಡ್ಡದ ರೀತಿಯಲ್ಲಿ ಇದ್ದರೂ ಈ ಸ್ಟೈಲ್ ಮೀಸೆಯನ್ನು ಸ್ವಲ್ಪ ಉದ್ದವಾಗಿ ಬಿಟ್ಟು ಗಡ್ಡ ಬಿಡಲಾಗುವುದು, ನಂತರ ಗಲ್ಲದ ಮಧ್ಯದಲ್ಲಿ ಸ್ವಲ್ಪ ಶಾರ್ಪ್ ಮಾಡಿ, ಎರಡು ಬದಿಯಲ್ಲಿ ಸ್ವಲ್ಪ ದಪ್ಪಗೆ ಕಾಣುವಂತೆ ಗಡ್ಡ ಬಿಡಲಾಗುವುದು. ಈ ಗಡ್ಡ ತುಂಬಾ ಫ್ರೊಫೆಷನಲ್ ಲಕ್ ನೀಡುವುದು ಹಾಗೂ ಸ್ವಲ್ಪ ಉದ್ದ ಮುಖದವರಿಗೆ ಈ ರೀತಿಯ ಗಡ್ಡ ಆಕರ್ಷಕವಾಗಿ ಕಾಣುವುದು.

5. ಪೆಟಿಟೆ ಗ್ವಾಯೆಟೆ
ಈ ಗಡ್ಡ ಫ್ಯಾಷನ್‌ನಲ್ಲಿ ಗಲ್ಲದ ಚಿಕ್ಕ ಗಡ್ಡವಿರುತ್ತದೆ, ಅದರೆ ಈ ಸ್ಟೈಲ್ ಮಾಡುವವರು ಮೀಸೆ ಬಿಡುವುದಿಲ್ಲ. ಈ ರೀತಿಯ ಗಡ್ಡ ಬಿಡುವ ಸ್ಟೈಲ್ ಸಾಮಾನ್ಯವಾಗಿ ಹದಿಹರೆಯದ ಯುವಕರಲ್ಲಿ ಹಾಗೂ ಕಾಲೇಜು ಹುಡುಗರಲ್ಲಿ ಕಾಣಬಹುದು. ಈ ಗಡ್ಡದ ಸ್ಟೈಲ್ ಸಕತ್ ಯೋ ಯೋ ಲುಕ್ ನೀಡುವುದು.

6. ವಾನ್ ಡೈಕೆ ಗಡ್ಡ
ಇದನ್ನು ಜೆಂಟಲ್ ಮ್ಯಾನ್ ಗಡ್ಡವೆಂದು ಕರೆಯುತ್ತಾರೆ. ಈ ರೀತಿಯ ಗಡ್ಡ ಚಿತ್ರಕಲೆಗಾರ ವಾನ್ ಡೈಕೆಯವರಿಂದಾಗಿ ಜನಪ್ರಿಯವಾಯಿತು. ಈ ಸ್ಟೈಲ್‌ನಲ್ಲಿ ನೀಟಾಗಿ ಮೀಸೆ ಬಿಟ್ಟು ಗಲ್ಲದಲ್ಲಿ ತ್ರಿಭುಜಾಕಾರದಲ್ಲಿ ಗಡ್ಡವಿರುತ್ತದೆ. ಈ ರೀತಿಯ ಗಡ್ಡದ ಸ್ಟೈಲ್ ಅನ್ನು ಸೆಲೆಬ್ರಿಟಿಗಳು ಹೆಚ್ಚಾಗಿ ಮಾಡುತ್ತಾರೆ.

7. ಕುಚಲು ಅಥವಾ ಸ್ಟಬಲ್ ಗಡ್ಡ
ಈ ರೀತಿಯ ಗಡ್ಡ ಬಿಡುವವರು ಟ್ರಿಮ್ಮಿಂಗ್ ಮಾಡಿ ಆಕರ್ಷಕವಾಗಿ ಇಟ್ಟುಕೊಳ್ಳಬೇಕು, ಇಲ್ಲದಿದ್ದರೆ ಏನೋ ಚಿಂತೆಯಿಂದ ಗಟ್ಟಬಿಟ್ಟವರಂತೆ ಕಾಣುವುದು ಹಾಗೂ ನೋಡಲು ಆಕರ್ಷಕವಾಗಿ ಕಾಣುವುದಿಲ್ಲ. ಈ ಗಡ್ಡ ಬಿಡುವಾಗ ಎಲ್ಲಾ ಕಡೆ ಗಡ್ಡದ ಉದ್ದ ಒಂದೇ ರೀತಿ ಕಾಣಬೇಕು, ಒಂದು ಕಡೆ ಸ್ವಲ್ಪ ಉದ್ದ, ಮತ್ತೊಂದು ಕಡೆ ಸ್ವಲ್ಪ ಗಿಡ್ಡವಾದರೆ ಆಕರ್ಷಕವಾಗಿ ಕಾಣುವುದಿಲ್ಲ.

8. ಸ್ವಲ್ಪ ಉದ್ದುದ್ದವಾಗಿ ಕುರುಚಲು ಗಡ್ಡ ಬೆಳೆಯುವುದು
ಇಲ್ಲಿ ಗಡ್ಡ ತುಂಬಾ ಚಿಕ್ಕದಾಗಿರುವುದಿಲ್ಲ, ಸ್ವಲ್ಪ ಉದ್ದವಾಗಿರುತ್ತದೆ. ಈ ರೀತಿ ಗಡ್ಡ ಬಿಟ್ಟವರು ಎರಡರಿಂದ ಮೂರು ದಿನಕ್ಕೊಮ್ಮೆ ಕತ್ತರಿಸಬೇಕು. ಈ ರೀತಿಯ ಸ್ಟೈಲ್ ಮಾಡುವವರು ಟ್ರಿಮ್ಮರ್ ಬಳಸುವಬದಲು ಕತ್ತರಿ ಬಳಸುವುದು ಒಳ್ಳೆಯದು. ಇದು ನಿಮಗೆ ಸಕತ್ ಕೂಲ್ ಲುಕ್ ನೀಡುತ್ತದೆ.

9. ಬಾಕ್ಸ್ ಗಡ್ಡದ ಸ್ಟೈಲ್
ನೀವು ಗಡ್ಡದಲ್ಲಿ ತುಂಬಾ ಸ್ಟೈಲ್ ಮಾಡಲು ಬಯಸದಿದ್ದರೆ ಬಾಕ್ಸ್ ಗಡ್ಡ ಸ್ಟೈಲ್ ಬೆಸ್ಟ್. ಇದರಲ್ಲಿ ಗಡ್ಡವನ್ನು ಬೆಳೆಸಿ, ನೀಟಾಗಿ ಕತ್ತರಿಸಿ, ಆರೈಕೆ ಮಾಡಿದರೆ ಸಾಕಾಗುತ್ತದೆ. ಈ ರೀತಿಯ ಗಡ್ಡದ ಸ್ಟೈಲ್ ತುಂಬಾ ಸ್ಟೈಲಿಷ್ ಲುಕ್ ನೀಡದಿದ್ದರೂ ಆಕರ್ಷಕ ಲುಕ್ ನೀಡುವುದು.

10. ಆ್ಯಂಕರ್ ಗಡ್ಡ
ತುಂಬಾ ಪ್ರೊಫೆಷನಲ್ ಆಗಿ ಕಾಣ ಬಯಸುವವರು ಈ ರೀತಿಯ ಗಡ್ಡ ಬೆಳೆಸಬಹುದು. ಇದರಲ್ಲಿ ಮೀಸೆಯ ಕೆಳಗಡೆ ಗಡ್ಡಕ್ಕೆ ಆಕರ್ಷಕ ಶೇಪ್ ನೀಡಿ, ಚಿಕ್ಕದಾಗಿ ಇಟ್ಟುಕೊಂಡಿರುತ್ತಾರೆ. ಕೆನ್ನೆ ಮೇಲೆ ಗಡ್ಡವಿರುವುದಿಲ್ಲ, ಈ ರೀತಿಯ ಗಡ್ಡ ಎಲ್ಲಾ ಬಗೆಯ ಮುಖದವರಿಗೆ ಆಕರ್ಷಕವಾಗಿ ಕಾಣುತ್ತದೆ.

11. ಹಾರ್ಸ್‌ಶೂ ಗಡ್ಡ
ಕುದುರೆ ಲಾಳದ ರೀತಿಯಲ್ಲೇ ಈ ಗಡ್ಡದ ಸ್ಟೈಲ್ ಇರುತ್ತದೆ. ಈ ರೀತಿಯ ಗಡ್ಡ ಸ್ಟೈಲ್‌ನಲ್ಲಿ ಮೀಸೆ ಹಾಗೂ ಗಡ್ಡವನ್ನು ಸೇರಿಸಿ ಸ್ಟೈಲ್ ಮಾಡಲಾಗಿರುತ್ತದೆ. ನೋಡಿದರೆ ಮೀಸೆಯನ್ನು ಕೆಳ ಭಾಗಕ್ಕೆ ಬಿಟ್ಟಂತೆ ಕಾಣುತ್ತದೆ. ಇದನ್ನು ಬೈಕರ್ ಮೀಸೆ ಅಂತಲೂ ಕರೆಯುತ್ತಾರೆ. ಕೂದಲು ಬೋಳಿಸಿಕೊಂಡು ಈ ರೀತಿ ಗಡ್ಡ ಸ್ಟೈಲ್ ಮಾಡಿದರೆ ತುಂಬಾ ಆಕರ್ಷಕವಾಗಿ ಕಾಣುವುದು.

12. ದಪ್ಪ ಮೀಸೆ
ಯಾರಿಗೆ ಗಡ್ಡ ಬಿಡಲು ಇಷ್ಟವಿಲ್ಲವೂ ಅವರು ಈ ಸ್ಟೈಲ್ ಅನುಸರಿಸಬಹುದು. ಇದರಲ್ಲಿ ಮೀಸೆಯನ್ನು ದಪ್ಪವಾಗಿ ತುಟಿಗೆ ತಾಗುವಂತೆ ಬಿಡಲಾಗುವುದು. ಈ ಸ್ಟೈಲ್ ಗಡ್ಡವನ್ನು ನೀಟಾಗಿ ಬೋಳಿಸಲಾಗುವುದು. ಹೆಚ್ಚಿನವರು ಈ ರೀತಿಯ ಸ್ಟೈಲ್ ಅನುಸರಿಸುತ್ತಾರೆ.

13. ರಾಯಲ್ ಗಡ್ಡ
ಈ ಗಡ್ಡದ ಸ್ಟೈಲ್ ಗ್ವಾಯೆಟೆ ಗಡ್ಡದ ಸ್ಟೈಲ್‌ಗೆ ಹೋಲುತ್ತದೆ, ಆದರೆ ಈ ಸ್ಟೈಲ್‌ನಲ್ಲಿ ಸ್ವಲ್ಪ ದಪ್ಪವಾಗಿ ಬಿಡಲಾಗಿರುತ್ತದೆ. ಈ ಗಡ್ಡದ ಸ್ಟೈಲ್ ಗ್ವಾಯೆಟೆ ಹಾಗೂ ಆ್ಯಂಕರ್ ಗಡ್ಡದ ಸ್ಟೈಲ್ ಸೇರಿಸಿ ಮಾಡಿದಂತಿರುತ್ತದೆ. ಈ ಗಡ್ಡ ದುಂಡು ಹಾಗೂ ಉದ್ದ ಮುಖದವರಿಗೆ ಆಕರ್ಷಕವಾಗಿ ಕಾಣುವುದು.

14. ಗನ್‌ಸ್ಲಿಂಗರ್ ಗಡ್ಡ
ಗನ್‌ಸ್ಲಿಂಗರ್ ಗಡ್ಡ ಹೆಸರಿಗೆ ತಕ್ಕಂತೆ ಗನ್ ರೀತಿ ಇರುತ್ತದೆ. ನಮ್ಮ ಕೆಚ್ಚೆದೆಯ ಸೈನಿಕ ಅಭಿನಂದನ್ ವರ್ಧಮಾನ್ ಅವರಿಂದಾಗಿ ಈ ಗಡ್ಡದ ಸ್ಟೈಲ್ ಮತ್ತಷ್ಟು ಜನಪ್ರಿಯವಾಗಿದೆ. ಈ ರೀತಿಯ ಗಡ್ಡದ ಸ್ಟೈಲ್ ಸಕತ್ ಕಡಕ್ ಲುಕ್ ನೀಡುವುದು. ಆರ್ಮಿ ಹಾಗೂ ಪೊಲೀಸ್ ಅಧಿಕಾರಿಗಳು ಈ ರೀತಿಯ ಗಡ್ಡದ ಸ್ಟೈಲ್ ಹೆಚ್ಚಾಗಿ ಮಾಡುತ್ತಾರೆ.

15. ಚಿನ್ ಸ್ಟ್ರಿಪ್
ಇದೊಂದು ಸರಳವಾದ ಸ್ಟೈಲ್ ಆಗಿದ್ದು, ತುಟಿಯ ಕೆಳಗಡೆ ಸ್ವಲ್ಪ ಉದ್ದಕ್ಕೆ ಚಿಕ್ಕದಾಗಿ ಬಿಡುವ ಗಡ್ಡದ ಸ್ಟೈಲ್ ಆಗಿದೆ. ಈ ರೀತಿಯ ಗಡ್ಡ ಎಲ್ಲರಿಗೆ ಆಕರ್ಷಕವಾಗಿ ಕಾಣುವುದಿಲ್ಲ. ಸಾಮಾನ್ಯವಾಗಿ ಹದಿಹರೆಯದ ಯುವಕರು ಈ ರೀತಿಯ ಗಡ್ಡದ ಸ್ಟೈಲ್ ಅನ್ನು ಹೆಚ್ಚಾಗಿ ಮಾಡುತ್ತಾರೆ. ಈ ರೀತಿಯ ಗಡ್ಡ ಬೆಳೆಸಲು 2-3 ವಾರ ಗಡ್ಡ ಬಿಟ್ಟು ನಂತರ ಈ ಸ್ಟೈಲ್‌ನಲ್ಲಿ ಶೇವ್ ಮಾಡಿಸಿದರೆ ಒಳ್ಳೆಯದು.

16. ಚಿನ್ ಸ್ಟ್ರ್ಯಾಪ್ ಸ್ಟೈಲ್ ಗಡ್ಡ
ಕಿವಿಯಿಂದ ಗಲ್ಲದವರೆಗೆ ಚಿಕ್ಕದಾಗಿ ಒಂದು ಗೆರೆಯ ರೀತಿಯಲ್ಲಿ ಮಾಡುವ ಗಡ್ಡದ ಸ್ಟೈಲ್ ಇದಾಗಿದೆ. ಕೆನ್ನೆಯ ಭಾಗದಲ್ಲಿ ಗಡ್ಡವಿರುವುದಿಲ್ಲ, ಹಾಗೂ ಗಡ್ಡ ಮೀಸೆಗೆ ತಾಗುವಂತೆ ಇರುವುದಿಲ್ಲ. ತುಂಬಾ ಕಡಿಮೆ ಜನರು ಈ ರೀತಿಯ ಸ್ಟೈಲ್ ಮಾಡುತ್ತಾರೆ. ಕೆಲವರಿಗಷ್ಟೇ ಇದು ಸೂಟ್ ಆಗುವುದು.

17. ಮಟನ್ ಚಾಪ್ ಗಡ್ಡ
ತೆಳುವಾದ ಕುದುರೆಯ ಲಾಳದಮತಹ ಮೀಸೆ, ದಪ್ಪವಾದ ಗಡ್ಡಕ್ಕೆ ತಾಗಿಕೊಂಡು ಇರುವಂತೆ ಸ್ಟೈಲ್ ಮಾಡಲಾಗುವುದು. ಈ ಸ್ಟೈಲ್‌ನಲ್ಲಿ ಗಲ್ಲದಲ್ಲಿ ಗಡ್ಡ ಬಿಡುವುದಿಲ್ಲ, ಕೆನ್ನೆ ಮೇಲೆ ದಪ್ಪವಾದ, ನೀಟಾಗಿ ಕತ್ತರಿಸಿದ ಗಡ್ಡ ಬಿಡಲಾಗುವುದು. ಈ ಗಡ್ಡ ಸಕತ್ ಸ್ಟೈಲಿಷ್ ಲುಕ್ ನೀಡುವುದು. ಸ್ವಲ್ಪ ಅಗಲ ಮುಖವಿರುವವರಿಗೆ ಈ ಸ್ಟೈಲ್ ತುಮಬಾ ಚೆನ್ನಾಗಿ ಒಪ್ಪುತ್ತದೆ. ಈ ರೀತಿಯ ಗಡ್ಡ ಬೆಳೆಯಲು ನೀವು 3-4 ತಿಂಗಳು ಗಡ್ಡ ಬಿಟ್ಟು ನಂತರ ಶೇಪ್ ಕೊಡಬೆಕಾಗುತ್ತದೆ.

18. ಉದ್ದ ಗಡ್ಡ
ಋಷಿಮುನಿಗಳು ಬಿಡುತ್ತಿದ್ದ ರೀತಿಯಲ್ಲಿ ಉದ್ದವಾಗಿ ಗಡ್ಡ ಬಿಡುವುದು. ಸಾಹಿತಿಗಳು, ವಯಸ್ಸಾದವರು ಈ ರೀತಿಯ ಗಡ್ಡ ಬಿಡುತ್ತಾರೆ. ಇನ್ನು ಯುವಕರಾದರೆ ಈ ರೀತಿಯ ಗಡ್ಡ ಬಿಟ್ಟು ತಲೆಯಲ್ಲಿ ಒಂದು ಜುಟ್ಟು ಕಟ್ಟಿ ಸಕತ್ ಸ್ಟೈಲಿಷ್ ಲುಕ್‌ನಲ್ಲಿ ಕಾಣಿಸುತ್ತಾರೆ. ಈ ಗಡ್ಡವನ್ನು ಬೆಳಸುವವರು ಎಣ್ಣೆ ಹಚ್ಚಿ, ದಿನಾ ಬಾಚಿ ಆರೈಕೆ ಮಾಡಬೇಕು. ಗಡ್ಡ ಬಾಚದಿದ್ದರೆ ಆಕರ್ಷಕವಾಗಿ ಕಾಣುವುದಿಲ್ಲ.

19. ಹ್ಯಾಂಡಲ್‌ಬಾರ್ ಗಡ್ಡ
ಈ ಗಡ್ಡದಲ್ಲಿ ಗಡ್ಡಕ್ಕಿಂತ ಮಿಸೆ ಹೆಚ್ಚು ಗಮನ ಸೆಳೆಯುತ್ತದೆ. ಗಡ್ಡವನ್ನು ಗಲ್ಲದ ಬಲಿ ಸ್ವಲ್ಪ ತೆಳು ಮಾಡಿ, ನಂತರ ಕೆನ್ನೆ ಮೇಲಿನ ಗಡ್ಡವನ್ನು ನೀಟಾಗಿ ಕತ್ತರಿಸಿ ಮೀಸೆಯನ್ನು ತಿರುವಿ ಬಿಡಲಾಗುವುದು. ಈ ಗಡ್ಡದ ಸ್ಟೈಲ್ ನಿಮ್ಮ ಮುಖಕ್ಕೆ ಗಡಸು ಲುಕ್ ನೀಡುವುದರ ಜತೆಗೆ ಆಕರ್ಷಕವಾಗಿ ಕಾಣುವಿರಿ.

20. ಸ್ವಲ್ಪ ಉದ್ದವಾಗಿ ಗಡ್ಡ ಬೆಳೆಯುವುದು
ಇಲ್ಲಿ ಗಡ್ಡ ತುಂಬಾ ಉದ್ದವಲ್ಲದಿದ್ದರೂ ಸ್ವಲ್ಪ ಉದ್ದವಾಗಿರುತ್ತದೆ. ಈ ಗಡ್ಡ ಸ್ಟೈಲ್ ಸ್ವಲ್ಪ ಎತ್ತರ-ದಪ್ಪವಿರುವ ಹುಡುಗರಿಗೆ ತುಂಬಾ ಆಕರ್ಷಕವಾಗಿ ಕಾಣುವುದು. ಈ ರೀತಿಯ ಗಡ್ಡ ಬಿಡುವುದಾದರೆ ಹೆಚ್ಚು ಉದ್ದ ಬರುವಾಗ ಟ್ರಿಮ್ ಮಾಡಿ, ಎಣ್ಣೆ ಹಚ್ಚಿ ಆರೈಕೆ ಮಾಡಬೇಕು. ಈ ಗಡ್ಡದ ಸ್ಟೈಲ್ ನೋಡಲು ಆಕರ್ಷಕವಾಗಿ ಕಾಣುವುದು.



Click it and Unblock the Notifications