Latest Updates
-
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ
ಆರ್ಯರ್ವಧನ್ ಡ್ರೆಸ್ಸಿಂಗ್ ಸ್ಟೈಲ್ ಹಿಂದಿರುವ ಸ್ಪೆಷಲ್ ವ್ಯಕ್ತಿ ಇವರೇ ನೋಡಿ
ಕಿರುತೆರೆ ಲೋಕದಲ್ಲಿ ಒಂದು ಆಯಾಮವನ್ನು ಸೃಷ್ಟಿಸಿದ ಸೆನ್ಸೇಷನ್ ಧಾರಾವಾಹಿ ಜೊತೆಜೊತೆಯಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವ ಅನಿರುದ್ಧ್ ಆರ್ಯವರ್ಧನ್ ಆಗಿ ನಟನೆಯಿಂದ ಮಾತ್ರವಲ್ಲ ಡ್ರೆಸ್ಸಿಂಗ್‌ನಿಂದಲೂ ಸಕತ್ ಗಮನ ಸೆಳೆಯುತ್ತಿದ್ದಾರೆ.
ಇನ್ನು ಸ್ಟೈಲ್ ವಿಷಯದಲ್ಲಿ ಹೇಳುವುದಾದರೆ ಹೊಸ ಹೊಸ ಟ್ರೆಂಡ್ ಅನ್ನೇ ಹುಟ್ಟು ಹಾಕಿದ್ದಾರೆ. ಅವರ ಸ್ಟೈಲ್ ಹಾಗೂ ಮ್ಯಾನರಿಸಂ ಅನ್ನು ವೀಕ್ಷಕರು ತುಂಬಾ ಇಷ್ಟಪಟ್ಟಿದ್ದಾರೆ. ಈಗಾಗಲೇ ತಮ್ಮ ಗಡ್ಡದ ಸ್ಟೈಲ್‌ನಿಂದ ಟ್ರೆಂಡ್ ಸೆಟ್ ಮಾಡಿದ್ದಾರೆ. ಮೊದಲೆಲ್ಲಾ ಗಡ್ಡ ಸ್ವಲ್ಪ ಬೆಳ್ಳಗಾದರೆ ಡೈ ಮಾಡಬೇಕೆಂದು ಯೋಚಿಸುತ್ತಿದ್ದವರು ಆರ್ಯವರ್ಧನ್ ಸ್ಟೈಲ್ ಟ್ರೆಂಡ್ ಶುರುವಾದ ಬಳಿಕ ತಾವೂ ಕೂಡ ಸಾಲ್ಟ್ ಪೆಪ್ಪರ್ ಲುಕ್‌ನಲ್ಲಿ ಮಿಂಚಲು ಇಷ್ಟಪಡುತ್ತಿದ್ದಾರೆ.

ಆರ್ಯವರ್ಧನ್ ಅವರ ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ಗೆ ಸಕತ್ ಮೆರಗು ನೀಡಿರುವುದು ಅವರ ಡ್ರೆಸ್ಸಿಂಗ್ ಸ್ಟೈಲ್. ಅವರ ಪ್ರತಿಯೊಂದು ಡ್ರೆಸ್ಸಿಂಗ್ ಕೂಡ ಸೂಪರ್ ಆಗಿರುತ್ತದೆ. ಇನ್ನು ಅವಾರ್ಡ್ ಫಂಕ್ಷನ್‌ಗಳಿಗೆ ಬರುವಾಗ ಕೂಡ ಅನಿರುದ್ಧ್ ಭಿನ್ನ ಡ್ರೆಸ್ಸಿಂಗ್ ಗಮನ ಸೆಳೆದೇ ಸೆಳೆಯುತ್ತದೆ. ಅವರ ಡ್ರೆಸ್ಸಿಂಗ್ ಸ್ಟೈಲ್ ಅಷ್ಟೊಂದು ಆಕರ್ಷಕವಾಗಿರುತ್ತದೆ. ಇಷ್ಟಕ್ಕೂ ಅವರ ಅದ್ಭುತ ಡ್ರೆಸ್ಸಿಂಗ್ ಹಿಂದಿರುವ ಆ ಅದ್ಭುತ ಫ್ಯಾಷನ್ ಡಿಸೈನರ್ ಯಾರು ಗೊತ್ತೇ? ಅದನ್ನು ತಿಳಿಯಲು ಮುಂದೆ ಓದಿ:

ಅನಿರುದ್ಧ್ ಡ್ರೆಸ್ಸಿಂಗ್ ಡಿಸೈನರ್ ಕೀರ್ತಿವರ್ಧನ್
ಅನಿರುದ್ಧ್ ತಾವು ಧರಿಸುವ ಪ್ರತಿಯೊಂದು ಡ್ರೆಸ್ ಹೇಗಿರಬೇಕೆಂದು ನಿರ್ಧಾರ ಮಾಡುವುದು ಯಾರು ಎಂಬುವುದನ್ನು ಅವರೇ ಹೇಳಿಕೊಂಡಿದ್ದಾರೆ. ಹೌದು ಅನಿರುದ್ಧ್ ಆರ್ಯವರ್ಧನ್ ಆಗಿ ತುಂಬಾ ಹ್ಯಾಂಡ್ಸಮ್ ಆಗಿ ಕಾಣುತ್ತಿದ್ದಾರೆ ಎಂದರೆ ಅದರ ಕ್ರೆಡಿಟ್ ಅವರು ಮನದರಸಿ ಕೀರ್ತಿವರ್ಧನ್ ಅವಿರಿಗೆ ಸಲ್ಲುತ್ತದೆ. ಆರ್ಯವರ್ಧನ್ ಧರಿಸುವ ಡ್ರೆಸ್ಸಿಂಗ್ ಹೀಗೇ ಇರಬೇಕೆಂದು ಖುದ್ದಾಗಿ ಡ್ರೆಸ್ ವಿನ್ಯಾಸ ಮಾಡುವುದು ಕೀರ್ತಿವರ್ಧನ್.

ಗಮನ ಸೆಳೆಯುವ ಡ್ರೆಸ್ಸಿಂಗ್
ಸೀರಿಯಲ್‌ನಲ್ಲಿ ಅವರು ಹೆಚ್ಚಾಗಿ ಸೂಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಒಂದೊಂದು ಸೂಟ್‌ನಲ್ಲೂ ವಾವ್! ಎನ್ನುವಷ್ಟು ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಧರಿಸಿದ ಮೆರೂನ್ ಡ್ರೆಸ್ಸಿಂಗ್ ಸ್ಟೈಲ್ ನೋಡಿ ವೀಕ್ಷಕರು ಫುಲ್ ಫಿದಾ ಆಗಿದ್ದರು. ಅಷ್ಟೊಂದು ಆಕರ್ಷಕವಾಗಿತ್ತು.

ವಿಷ್ಣುವರ್ಧನ್ ಅವರಿಗೂ ಡ್ರೆಸ್ಸಿಂಗ್ ವಿನ್ಯಾಸ ಮಾಡಿದ್ದ ಕೀರ್ತಿವರ್ಧನ್
ಕೀರ್ತಿವರ್ಧನ್ ಅವರು ಅಪ್ಪ ವಿಷ್ಣುವರ್ಧನ್ ಅವರಿಗೂ ಡ್ರೆಸ್ಸಿಂಗ್ ಡಿಸೈನ್ ಮಾಡಿದ್ದಾರೆ. ಯಜಮಾನ, ಕೋಟಿಗೊಬ್ಬ, ಆಪ್ತಮಿತ್ರ ಮುಂತಾದ ಚಿತ್ರಗಳಲ್ಲಿ ವಿಷ್ಣುವರ್ಧನ್ ಅವರಿಗೆ ಡ್ರೆಸ್ಸಿಂಗ್ ವಿನ್ಯಾಸ ಮಾಡಿದ್ದು ಕೀರ್ತಿ ಅವರೇ. ಆದರೆ ತುಂಬಾ ಸರಳ ಸ್ವಭಾವದ ಕೀರ್ತಿವರ್ಧನ್ ಇಷ್ಟೊಂದು ಕ್ರಿಯೇಟಿವ್ ಎಂಬುವುದು ಬಹುತೇಕರಿಗೆ ಗೊತ್ತೇ ಇಲ್ಲ.

ಹೆಚ್ಚಾಗಿ ಪ್ರಚಾರ ಪಡೆಯದ ಕೀರ್ತಿವರ್ಧನ್
ತಮ್ಮ ಕೆಲಸದ ಬಗ್ಗೆ ಕೀರ್ತಿವರ್ಧನ್ ಯಾವುದೇ ಸಾಮಾಜಿಕ ತಾಣದಲ್ಲಿ ಹಾಕಿಕೊಳ್ಳಲ್ಲ. ಆದ್ದರಿಂದ ಇವರು ಇಷ್ಟೊಂದು ಅದ್ಭುತವಾಗಿ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಾರೆ ಎಂಬುವುದೇ ಯಾರಿಗೂ ಗೊತ್ತಿರಲಿಲ್ಲ. ಇದೀಗ ಜೊತೆಜೊತೆಯಲಿ ಧಾರಾವಾಹಿ ಜನಪ್ರಿಯವಾಗಿ ಆರ್ಯವರ್ಧನ್ ಸ್ಟೈಲ್ ಗಮನ ಸೆಳೆಯಿತು. ಇದರಿಂದಾಗಿ ಕೀರ್ತಿವರ್ಧನ್ ಅವರಲ್ಲಿದ್ದ ಪ್ರತಿಭೆಯೂ ಜನರಿಗೆ ಗೊತ್ತಾಯಿತು.

ಗ್ರೇ ವಿಥ್ ಬ್ಲೂ
ಅನಿರುದ್ಧ್ ಧರಿಸುವ ಪ್ರತಿಯೊಂದು ಸೂಟ್ ನೋಡಲು ಅದ್ಭುತವಾಗಿರುತ್ತದೆ. ಇಲ್ಲಿ ಅವರು ಧರಿಸಿರುವ ಗ್ರೇ ವಿಥ್ ಬ್ಲೂ ಕಾಂಬಿನೇಷನ್ ಆರ್ಯವರ್ಧನ್ ಅವರ ಸ್ಟೈಲಿಷ್ ಲುಕ್‌ಗೆ ಮತ್ತಷ್ಟು ಮೆರಗು ನೀಡಿದೆ. ಹೆಣ್ಮಕ್ಕಳ ಮನ ಗೆಲ್ಲಲು ಆರ್ಯವರ್ಧನ್ ಅವರ ಈ ರಿತಿಯ ಡ್ರೆಸ್ಸಿಂಗ್ ಸ್ಟೈಲ್ ಕೂಡ ಒಂದು ಕಾರಣ.

ಸ್ಟೆಟರ್ ಲುಕ್
ಚಳಿಯ ರಕ್ಷಣೆಗೆ ಸ್ವೆಟರ್ ಧರಿಸುತ್ತೇವೆ. ಆದರೆ ಆ ಸ್ವೆಟರ್‌ಗೂ ಒಂದು ಸ್ಟೈಲಿಷ್ ಲುಕ್ ನೀಡಿದ್ದಾರೆ. ವಿ ನೆಕ್‌ನ ಬ್ಲೂ ಸ್ಟೆಟರ್‌ಗೆ ಒಳಗೆ ಪಿಂಕ್ ಶರ್ಟ್ ಸೂಪರ್ ಕಾಂಬಿನೇಷನ್ ಆಗಿದ್ದು, ಆಕರ್ಷಕವಾಗಿ ಕಾಣಿಸಿದ್ದಾರೆ ಆರ್ಯವರ್ಧನ್.

ಫಾರ್ಮಲ್ ಡ್ರೆಸ್ಸಿಂಗ್
ಸೂಟ್‌ನಲ್ಲಿ ಮಾತ್ರವಲ್ಲ ಫಾರ್ಮಲ್ ಡ್ರೆಸ್‌ನಲ್ಲಿ ಕೂಡ ಆಕರ್ಷಕವಾಗಿ ಕಾಣುವಂತೆ ಡ್ರೆಸ್ಸಿಂಗ್ ವಿನ್ಯಾಸ ಮಾಡಲಾಗಿದೆ. ಫಾರ್ಮಲ್ ಡ್ರೆಸ್ಸಿಂಗ್ ಇಷ್ಟ ಪಡುವವರು ಈ ಎರಡು ಕಾಂಬಿನೇಷನ್ ಬಳಸಿದರೆ ಆಕರ್ಷಕವಾಗಿ ಕಾಣಬಹುದು.

ವೈಟ್ ಅಂಡ್ ವೈಡ್
ಆರ್ಯವರ್ಧನ್ ಯಾವುದೇ ಡ್ರೆಸ್ಸಿಂಗ್ ಮಾಡಲು ಬೊಟ್ಟು ಮಾಡಿ ತೋರಿಸುವಂತೆ ಇರಲ್ಲ. ಇಲ್ಲಿ ವೈಟ್ ಪ್ಯಾಂಟ್‌ಗೆ ವೈಟ್ ಕುರ್ತಾ ಧರಿಸಿದ್ದು ಸಿಂಪಲ್ ಆಗಿಯೂ ರಾಯಲ್ ಆಗಿಯೂ ಕಾಣಿಸುವಂತೆ ಡ್ರೆಸ್ ವಿನ್ಯಾಸಗೊಳಿಸಲಾಗಿದೆ.

ಆರ್ಯವರ್ಧನ್ ಮೋಡಿ
ಸಾಮಾನ್ಯವಾಗಿ ವಯಸ್ಸಾಗುತ್ತಿದ್ದಂತೆ ಪುರುಷರು ತಮ್ಮ ಸೌಂದರ್ಯದ ಕಡೆ ಗಮನ ನೀಡುವುದು ಕಡಿಮೆ. ಇನ್ನು ಯೌವನದ ಕಳೆ ವಯಸ್ಸಾದ ಮೇಲೆ ಇರಲ್ಲ ಎಂದೇ ತಮ್ಮ ಡ್ರೆಸ್ಸಿಂಗ್ ಬಗ್ಗೆ ಅಸಡ್ಡೆ ಮಾಡುತ್ತಾರೆ. ಕೂದಲು ಬಿಳಿಯಾದರೆ ಮತ್ತಷ್ಟು ಆಕರ್ಷಕವಾಗಿ ಕಾಣಬಹುದೆಂದು ಆರ್ಯವರ್ಧನ್ ನೋಡಿದ ಮೇಲೆ ಎಲ್ಲರಿಗೆ ಅನಿಸಲಾರಂಭಿಸಿದೆ. ಆದ್ದರಿಂದ ಇವರ ಲುಕ್ ಹಾಗೂ ಡ್ರೆಸ್ಸಿಂಗ್ ಸ್ಟೈಲ್ ಕೂಡ ಟ್ರೆಂಡ್ ಸೆಟ್ ಮಾಡಿದ್ದು ತುಂಬಾ ಜನಪ್ರಿಯವಾಗಿದೆ.



Click it and Unblock the Notifications











