Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸೈಮಾ ಅವಾರ್ಡ್ 2021: ಈ ಫಂಕ್ಷನ್‌ನಲ್ಲಿ ಸೌತ್ ನಟರ ಆಕರ್ಷಕ ಲುಕ್
ದಕ್ಷಿಣ ಭಾರತದ ಚಿತ್ರೋದ್ಯಮದ ಪ್ರತಿಷ್ಠಿತ ಸೈಮಾ ಅವಾರ್ಡ್ ಕಾರ್ಯಕ್ರಮ ಹೈದರಾಬಾದ್‌ನಲ್ಲಿ ನಡೆಯಿತು. ಅನೇಕ ತಾರೆಯರು ಈ ಸಮಾರಂಭದಲ್ಲಿ ಭಾಗವಹಿಸಿ ಈ ಫಂಕ್ಷನ್ ಮತ್ತಷ್ಟು ಕಲರ್ ಫುಲ್ ಮಾಡಿದ್ದಾರೆ. ನಟಿಯರು ಆಕರ್ಷಕ ಉಡಪುಗಳನ್ನು ಧರಿಸಿ ಗಮನ ಸೆಳೆದರೆ ಸೌತ್ ಇಂಡಿಯಾ ನಟರು ಕೂಡ ತಮ್ಮ ಫ್ಯಾಷನ್‌ನಿಂದ ಗಮನ ಸೆಳೆದರು.
ಸ್ಯಾಂಡಲ್‌ವುಡ್‌ನಿಂದ ರಕ್ಷಿತ್ ಶೆಟ್ಟಿ, ಡಾಲಿ ಧನಂಜಯಾ, ತೆಲುಗಿನ ಅಲು ಅರ್ಜುನ್, ಮಹೇಶ್ ಬಾಬು ಮುಂತಾದವರು ತಮ್ಮ ಸ್ಟೈಲ್‌ನಿಂದ ಗಮನ ಸೆಳೆದಿದ್ದಾರೆ. ಸೈಮಾ ಅವಾರ್ಡ್ 2021ರಲ್ಲಿ ಸೌತ್ ಇಂಡಿಯಾ ಸ್ಟಾರ್ ನಟರ ಲುಕ್ ನೋಡೋಣ:

ರಕ್ಷಿತ್ ಶೆಟ್ಟಿ ಓವ್! ಸ್ಟೈಲ್
ಸೈಮಾ ಅವಾರ್ಡ್ ಫಂಕ್ಷನ್‌ಗೆ ಬಂದಾಗ ಯೋ.. ಯೋ ಲುಕ್‌ನಲ್ಲಿ ರಕ್ಷಿತ್ ಶೆಟ್ಟಿ ಕಾಣಿಸಿದ್ದು ಹೀಗೆ. ಸ್ವಲ್ಪ ಲಾಂಗ್ ಹೇರ್ ಸ್ಟೈಲ್, ಕಪ್ಪು ಗಾಗಲ್ಸ್, ಟೀ ಶರ್ಟ್ ಮೇಲೆ ಬ್ಲ್ಯಾಕ್ ಶರ್ಟ್ ಧರಿಸಿದ ರಕ್ಷಿತ್ ಲುಕ್ ಯುವಕರನ್ನು ಸೆಳೆಯುವುದರಲ್ಲಿ ನೋ ಡೌಟ್. ಸಕತ್ ಕೂಲ್ ಲುಕ್ ಅಲ್ವಾ?

ಪ್ರಶಸ್ತಿ ಸ್ವೀಕರಿಸುವಾಗ ರಕ್ಷಿತ್ ಶೆಟ್ಟಿ ಲುಕ್
ಸೈಮಾ ಅವಾರ್ಡ್‌ನಲ್ಲಿ ಬ್ಲ್ಯಾಕ್ ಶರ್ಟ್‌ಗೆ ಪರ್ಪಲ್ ಸೂಟ್ ಧರಿಸಿದ್ದ ರಕ್ಷಿತ್ ತುಂಬಾ ಕ್ಲಾಸ್ ಆಗಿ ಕಂಡರು.

ಡಾಲಿ ಧನಂಜಯಾ
ಸೈಮಾ ಅವಾರ್ಡ್‌ಗೆ ಬಂದ ಡಾಲಿ ಧನಂಜಯಾ ಅವರು ವೈಟ್ ಜೀನ್ ಟೀ ಶರ್ಟ್‌ನಲ್ಲಿ ಕೂಲ್ ಲುಕ್ ನೀಡಿದ್ದು ಹೀಗೆ....

ಸಾಧು ಕೋಕಿಲಾ ಕಲರ್‌ಫುಲ್ ಲುಕ್
ಕನ್ನಡದ ಮ್ಯೂಸಿಷಿಯನ್ ಸ್ಯಾಂಡಲ್‌ವುಡ್ ಕಾಮಡಿ ಕಿಂಗ್ ಸೈಮಾ ಅವಾರ್ಡ್‌ನಲ್ಲಿ ಜೀನ್-ಟೀ ಶರ್ಟ್‌ಗೆ ಕಲರ್ ಫುಲ್ ಬ್ಲೇಝರ್ ಧರಿಸಿ ಪೋಸ್ ನೀಡಿದ್ದು ಹೀಗೆ...

ಸಿಂಪಲ್ ಅಂಡ್ ಕಾಮನ್ ಲುಕ್
ಸೈಮಾ ಅವಾರ್ಡ್ ಫಂಕ್ಷನ್‌ಗೆ ಹೋಗುವಾಗ ಎಲ್ಲರೂ ಯಾವ ರೀತಿ ಡ್ರೆಸ್ಸಿಂಗ್ ಮಾಡಬೇಕು ಎಂದು ತಲೆ ಕೆಡಿಸಿಕೊಳ್ಳುತ್ತಾರೆ. ಆದರೆ ನಮ್ಮ ರಂಗಾಯಣ ರಘು ಅವರು ಸಾಮಾನ್ಯ ಲುಕ್‌ನಲ್ಲಿ ಕ್ಲಾಸ್ ಆಗಿ ಕಾಣಿಸಿದ್ದು ಹೀಗೆ...

ಮಹೇಶ್ ಬಾಬು ಸೂಪರ್ ಲುಕ್
ಸೈಮಾ ಅವಾರ್ಡ್‌ಗೆ ಜೀನ್ ಹಾಗೂ ಟೀ ಶರ್ಟ್ ಲುಕ್‌ನಲ್ಲಿ ಬಂದರೂ ತುಂಬಾ ಕ್ಲಾಸ್ ಆಗಿ ಕಾಣಿಸಿದರೂ.

ಬ್ಲ್ಯಾಕ್ ಸೂಟ್‌ನಲ್ಲಿ ಅಭಿಷೇಕ್ ಗೌಡ
ಸೈಮಾ ಅವಾರ್ಡ್‌ನಲ್ಲಿ ಭಾಗವಹಿಸಿದ್ದ ಅಭಿಷೇಕ್ ಗೌಡ ಅವರು ಬ್ಲ್ಯಾಕ್ ಅಂಡ್ ವೈಟ್ ಸೂಟ್‌ನಲ್ಲಿ ಮಿಂಚಿದರು.

ನಾನಿ
ಸೈಮಾ ಅವಾರ್ಡ್‌ನಲ್ಲಿ ನಾರ್ಮಲ್ ಹುಡುಗನ ಲುಕ್‌ನಲ್ಲಿ ಕಾಣಿಸಿದ ತೆಲುಗು ನಟ ನಾನಿ.

ಸ್ಯಾಂಡಲ್‌ವುಡ್ ಕುಟುಂಬ
ಸ್ಯಾಂಡಲ್‌ವುಡ್ ನಟರಾದ ಪ್ರಜ್ವಲ್ ದೇವರಾಜ್, ದೇವರಾಜ್ ಹಾಗೂ ಅಭಿಷೇಕ್ ಗೌಡ . ಪ್ರಜ್ವಲ್ ದೇವರಾಜ್ ಲುಕ್ ಸಕತ್ ಆಗಿದೆ.

ಸೈಮಾ ಅವಾರ್ಡ್‌ನಲ್ಲಿ ಡಾಲಿ ಧನಂಜಯ ಲುಕ್
ಬ್ಯಾಟಲ್ ಗ್ರೀನ್ ಸೂಟ್‌ಗೆ ಬ್ಲ್ಯಾಕ್ ಶರ್ಟ್ ಧರಿಸಿ, ಬ್ಲ್ಯಾಕ್ ಬಣ್ಣದ ವಾಚ್ ಧರಿಸಿದ್ದ ಡಾಲಿ ಧನಂಜಯಾ ಅವರ ಡ್ರೆಸ್ಸಿಂಗ್ ತುಂಬಾ ಆಕರ್ಷಕವಾಗಿದೆ.

ಅಲ್ಲು ಅರ್ಜುನ್
ಬಿಯರ್ಡ್ ಲುಕ್, ವೈಟ್ ಡ್ರೆಸ್ಸಿಂಗ್‌ನಲ್ಲಿ ತೆಲುಗು ನಟ ಅಲ್ಲು ಅರ್ಜುನ್ ಸೈಮಾ ಅವಾರ್ಡ್ ಫಂಕ್ಷನ್‌ನಲ್ಲಿ ಗಮನ ಸೆಳೆದಿದ್ದು ಹೀಗೆ.

ಪೃಥ್ವಿ ರಾಜ್ ಕ್ಲಾಸ್ ಲುಕ್
ಸೈಮಾ ಅವಾರ್ಡ್ ಫಂಕ್ಷನ್‌ನಲ್ಲಿ ಮಲಯಾಳಂ ನಟ ಪೃಥ್ವಿ ರಾಜ್ ಬ್ಲ್ಯಾಂಕ್ ಅಂಡ್ ಪರ್ಪಲ್ ಕಾಂಬಿನೇಷನ್‌ನಲ್ಲಿ ಮಿಂಚಿದ್ದು ಹೀಗೆ.



Click it and Unblock the Notifications
