Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಪುರುಷರ ಮುಖದ ಅಂದ ಚೆಂದಕ್ಕೆ ಒಂದಿಷ್ಟು ಟಿಪ್ಸ್
ಸೌಂದರ್ಯಪಜ್ಞೆ ಇಂದಿನ ಪೀಳಿಗೆಯಲ್ಲಿ ಹಿಂದಿಂದೆಗಿಂತಲೂ ಹೆಚ್ಚಾಗಿದ್ದು ಪುರುಷರಲ್ಲಿಯೂ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಮುಖದ ಸೌಂದರ್ಯ ವೃದ್ದಿಸಲು ಪುರುಷರು ಸಾಮಾನ್ಯವಾಗಿ ಹೆಚ್ಚಿನ ಪ್ರಸಾಧನಗಳ ಮೊರೆ ಹೋಗುತ್ತಿರಲಿಲ್ಲ. ಆದರೆ ಇಂದು ಸುಮಾರು ಹತ್ತು ಪ್ರತಿಶತ ಪುರುಷರು ಆಗಾಗ ಮಹಿಳೆಯರಷ್ಟೇ ಮೇಕಪ್ ಮೊರೆ ಹೋಗುತ್ತಿರುವುದು ಕಂಡುಬರುತ್ತಿದೆ. ಹತ್ತರಲ್ಲಿ ಒಬ್ಬರು ಕೂದಲು ನಿವಾರಿಸುವ ಕ್ರೀಮ್, ಮೇಣವನ್ನು ಬಳಸಿದರೆ ಹತ್ತರಲ್ಲಿ ಏಳು ಜನರು ತಮ್ಮ ಪತ್ನಿಯರು ಉಪಯೋಗಿಸುವ ಕೂದಲು ನೇರವಾಗಿಸುವ ಸಲಕರಣೆಯನ್ನು ಬಳಸುತ್ತಾರೆ.

ಮುಖದ ಮೇಕಪ್‌ನ ಪ್ರಮುಖ ಉದ್ದೇಶವೆಂದರೆ ಮುಖದ ಕಲೆಗಳನ್ನು ಮರೆಮಾಚುವುದು. ಪುರುಷರಿಗೇ ಆಗಲಿ, ಮಹಿಳೆಯರಿಗೇ ಆಗಲಿ, ಈ ಕಲೆಗಳನ್ನು ತೋರ್ಪಡಿಸಿಕೊಳ್ಳಲು ಇಚ್ಛಿಸುವುದಿಲ್ಲ. ಇಂದು ಲಭ್ಯವಿರುವ ಕಂಸೀಲರ್ ಪ್ರಸಾಧನ ಈ ಕಲೆಗಳನ್ನು ಮರೆಮಾಚಲು ಸಮರ್ಥವಾಗಿದ್ದು ಪುರುಷರೂ ಇದನ್ನು ಬಳಸಲು ತೊಡಗುತ್ತಿದ್ದಾರೆ. ಇವುಗಳನ್ನು ಪ್ರಮುಖವಾಗಿ ಮೊಡವೆಗಳ ಕಲೆ, ಮಚ್ಚೆ, ಕಣ್ಣ ಕೆಳಗಿನ ಕಪ್ಪು ವರ್ತುಲಗಳನ್ನು ಮರೆಮಾಚಲು ಬಳಸಲಾಗುತ್ತಿದೆ. ಬ್ಯೂಟಿ ಟಿಪ್ಸ್- ಇದು ಸೌಂದರ್ಯ ಪ್ರಿಯ ಪುರುಷರಿಗೆ ಮಾತ್ರ!
ಕಂಸೀಲರ್ ಎಂದರೆ ಕ್ರೀಮ್ ಅಲ್ಲ, ಬದಲಿಗೆ ಚರ್ಮದ ಮೇಲೆ ಯಾವುದೇ ಪರಿಣಾಮ ಬೀರದ ತಟಸ್ಥ ಲೇಪ. ಇದನ್ನು ಹಚ್ಚಲು ಅತಿ ಸಮರ್ಥವಾದ ವಿಧಾನವೆಂದರೆ ಇದು ಲಭ್ಯವಿರುವ ಕಡ್ಡಿಯೊಂದನ್ನು ಕಲೆಗಳ ಮೇಲೆ ಉರುಳಿಸುತ್ತಾ ಹಚ್ಚುವುದು. ಬಳಿಕ ಕಲೆಯನ್ನು ಮರೆಮಾಚುವಂತೆ ಅಕ್ಕಪಕ್ಕದ ಚರ್ಮದಮೇಲೆ ಈ ಕಡ್ಡಿಯ ತುದಿಯಿಂದ ಉರುಳಾಡಿಸುತ್ತಾ ಮರೆಯಾಗಿಸಿ. ಬಳಿಕ ಬೆರಳಿನಿಂದ ನಯವಾಗಿ ವೃತ್ತಾಕಾರದಲ್ಲಿ ಅಂಚುಗಳನ್ನು ನಯವಾಗಿಸಿ. ಬೆರಳುಗಳನ್ನು ಬಳಸುವುದು ಅಷ್ಟು ಸುಲಭವಲ್ಲ ಅನ್ನಿಸಿದರೆ ಟಿಶ್ಯೂ ಪೇಪರ್ ಒಂದನ್ನು ಸುರುಳಿ ಸುತ್ತಿಯೂ ಬಳಸಬಹುದು.
ಚರ್ಮದ ವಿಧ ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಭಿನ್ನವಾಗಿದೆ. ಅದೇ ಪ್ರಕಾರ ಈ ಕಂಸೀಲರ್‌ಗಳೂ ಭಿನ್ನವಾಗಿರಬೇಕು. ಆದ್ದರಿಂದ ಮಹಿಳೆಯರ ಕಂಸೀಲರ್ ಗಳನ್ನು ಪುರುಷರೂ, ಪುರುಷರ ಕಂಸೀಲರ್ ಗಳನ್ನು ಮಹಿಳೆಯರೂ ಉಪಯೋಗಿಸಬಾರದು. ಬಳಸಿದರೆ ಇದು ಚರ್ಮದ ಮೇಲೆ ಪರಿಣಾಮ ಬೀರಬಹುದು. ಪುರುಷರ ಚರ್ಮದ ಬಗ್ಗೆ ತಜ್ಞರು ಏನು ಸಲಹೆ ನೀಡುತ್ತಾರೆ?
ಬಹುತೇಕ ಪುರುಷರ ಕಂಸೀಲರ್‌ಗಳು ತೈಲಾಧಾರಿತವಾಗಿದ್ದು ಒಂದು ವೇಳೆ ಪುರುಷರಲ್ಲಿ ಪದೇ ಪದೇ ಕಾಡುವ ಮೊಡವೆಗಳ ತೊಂದರೆ ಇದ್ದರೆ ಈ ಕಂಸೀಲರ್ ಗಳು ಒಳ್ಳೆಯದಲ್ಲ, ಇವು ಮೊಡವೆಗಳನ್ನು ಇನ್ನಷ್ಟು ಹೆಚ್ಚಿಸಬಹುದು. ಬದಲಿಗೆ ತೈಲರಹಿತ ಕಂಸೀಲರ್‌ಗಳನ್ನು ಬಳಸಲು ಆದ್ಯತೆ ನೀಡಬೇಕು.
ತೈಲಾಧಾರಿತ ಕಂಸೀಲರ್‌ಗಳು ಚರ್ಮದ ಸೂಕ್ಷ್ಮ ರಂಧ್ರಗಳನ್ನು ಮುಚ್ಚಿ ಒಳಗಣ ಮೊಡವೆಗಳನ್ನು ಇನ್ನಷ್ಟು ಹೆಚ್ಚು ದೊಡ್ಡದಾಗುವಂತೆ ಮಾಡುತ್ತವೆ. ತೈಲವಿಲ್ಲದ್ದನ್ನು ಆಯ್ಕೆ ಮಾಡಲು ಒಂದು ಸುಲಭ ಕ್ರಮವಿದೆ. ಇದರ ಪರಿಕರಗಳಲ್ಲಿ ಸ್ಯಾಲಿಸಿಲಿಕ್ ಆಮ್ಲ (salicylic acid) ಇದೆಯೇ ನೋಡಿ. ಇದ್ದರೆ ಇದು ತೈಲರಹಿತ ಎಂದು ತಿಳಿದುಕೊಳ್ಳಬಹುದು. ಕ್ಷಣಾರ್ಧದಲ್ಲಿ ಪುರುಷರ ತ್ವಚೆಯ ಕಾಂತಿ ಹೆಚ್ಚಿಸುವ ಬಿಬಿ ಕ್ರೀಮ್!
ಈ ರಾಸಾಯನಿಕ ಸತ್ತ ಜೀವಕೋಶಗಳನ್ನು ಸಡಿಲಿಸಿ ನಿವಾರಿಸಲು ಸಕ್ಷಮವಾಗಿದೆ. ಇದು ಮೊಡವೆಗಳನ್ನು ಗುಣಪಡಿಸಲು ನೆರವಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪುರುಷರಿಗಾಗಿ ಹದಿನೇಳು ಬಣ್ಣದ ಕಂಸೀಲರ್‌ಗಳು ಲಭ್ಯವಿವೆ. ಕಂಸೀಲರ್‌ಗಳನ್ನು ಹಚ್ಚುವ ಮುನ್ನ ಎರಡು ವಿಷಯಗಳನ್ನು ಅರಿತಿರುವುದು ಅಗತ್ಯವಾಗಿದೆ. ಮೊದಲನೆಯದಾಗಿ ತಕ್ಕನಾದ ಬಣ್ಣವನ್ನು ಆಯ್ದುಕೊಳ್ಳುವುದು. ಇದು ನಿಮ್ಮ ಚರ್ಮದ ಸಹಜವರ್ಣವನ್ನು ಹೋಲಬೇಕು.
ಇದು ಹೆಚ್ಚು ಕಡಿಮೆಯಾದರೆ ವಿದೂಷಕನಂತೆ ಕಾಣಿಸಬಹುದು. ಎರಡನೆಯದಾಗಿ ಹಚ್ಚಿದ ಬಳಿಕ ಇದನ್ನು ಚರ್ಮದ ಉಳಿದ ಭಾಗದಲ್ಲಿ ಬಣ್ಣ ಬದಲಾಗದಂತೆ ಹರಡಿಸುವುದು. ಇದಕ್ಕೆ ಕೊಂಚ ಕಲೆಗಾರಿಕೆ ಅಗತ್ಯ. ಇಲ್ಲದಿದ್ದರೆ ಹೆಬ್ಬಾವಿನ ಚರ್ಮದ ಮೇಲಿನ ಪಟ್ಟೆಗಳಂತೆ ಕಾಣಬಹುದು.



Click it and Unblock the Notifications














