Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಗಂಡಸರೇ ತ್ವಚೆಯ ವಿಷಯದಲ್ಲಿ ಉದಾಸೀನ ಬೇಡ...
ಹೆಂಗಸರಂತೆ, ಗಂಡಸರು ಸಹ ತಮ್ಮ ತ್ವಚೆಗೆ ಆರೈಕೆಯನ್ನು ನೀಡುವ ಮನೋಭಾವವನ್ನು ಹೊಂದಿರುತ್ತಾರೆ. ಕೆಲವರಂತು ತಮ್ಮ ಅಂದ-ಚಂದವನ್ನು ಕಾಪಾಡಿಕೊಳ್ಳುವುದರಲ್ಲಿ ಹೆಂಗಸರಿಗೆ ಸರಿಸಮನಾಗಿ ನಿಂತು ಬಿಡುತ್ತಾರೆ. ಆದರೂ ಈ ಮಾತನ್ನು ಎಲ್ಲಾ ಗಂಡಸರಿಗೆ ಅನ್ವಯಿಸಲು ಆಗುವುದಿಲ್ಲ. ಪುರುಷರ ಚರ್ಮದ ಬಗ್ಗೆ ತಜ್ಞರು ಏನು ಸಲಹೆ ನೀಡುತ್ತಾರೆ?
ಕೆಲವರಿಗೆ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ಇದ್ದರೆ, ಇನ್ನೂ ಕೆಲವರಿಗೆ ಉದಾಸೀನತೆ ಇರುತ್ತದೆ. ಇದು ಸೋಮಾರಿತನದಿಂದ ಬರುವ ಉದಾಸೀನತೆಯಾಗಿರುವುದರಿಂದಾಗಿ, ಆ ಸೋಮಾರಿತನವನ್ನು ಬಿಟ್ಟು, ತ್ವಚೆಯ ಆರೈಕೆಯನ್ನು ನೋಡಿಕೊಳ್ಳಬೇಕಾದ ಕಾಲ ಬಂದಿದೆ ಎಂದು ಭಾವಿಸಿ. ಬನ್ನಿ ಗಂಡಸರೆ ನೀವು ಮಾಡುವ ತಪ್ಪುಗಳನ್ನು ಒಮ್ಮೆ ತಿಳಿದುಕೊಂಡು ಅವುಗಳನ್ನು ತಿದ್ದಿಕೊಳ್ಳಿ...

ಮೊಯಿಶ್ಚರೈಸ್ ಮಾಡದಿರುವಿಕೆ
ನೀವು ಮೊಯಿಶ್ಚರೈಸಿಂಗ್ ಹಚ್ಚಿಕೊಳ್ಳದೆ ಮನೆಯಿಂದ ಹೊರಗೆ ಹೋಗುವಂತಹ ಗಂಡಸರಲ್ಲಿ ನೀವು ಸಹ ಒಬ್ಬರಾಗಿದ್ದಲ್ಲಿ, ಆ ಕೆಲಸವನ್ನು ನೀವು ಎಂದು ಮಾಡಬೇಡಿ. ಈ ಅಭ್ಯಾಸವು ನಿಮ್ಮ ತ್ವಚೆಯನ್ನು ಒಣ ತ್ವಚೆಯನ್ನಾಗಿಸಿಬಿಡುತ್ತದೆ. ಸ್ನಾನ ಮಾಡಿ ಬಂದ ತಕ್ಷಣ ನಿಮ್ಮ ಮುಖಕ್ಕೆ ಮೊಯಿಶ್ಚರೈಸರ್ ಲೇಪಿಸಿ.

ಸನ್‌ಸ್ಕ್ರೀನ್ ಬಳಸದಿರುವುದು
ಯುವಿ ಕಿರಣಗಳು ತ್ವಚೆಗೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ. ಈ ಯುವಿ ಕಿರಣಗಳು ಕೊಲ್ಲಾಜೆನ್ ಉತ್ಪಾದನೆಯನ್ನು ಮತ್ತು ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ನಿಮಗೆ ಹೆಚ್ಚು ವಯಸ್ಸಾದಂತೆ ಕಾಣುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕು ಬಿಸಿಲಿನಲ್ಲಿ ಸನ್‌ಸ್ಕ್ರೀನ್ ಲೋಷನ್ ಹಚ್ಚದೆ ಹೊರಹೋಗಬೇಡಿ. ಇದಕ್ಕಾಗಿ SPF 15 ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಸನ್‌ಸ್ಕ್ರೀನ್ ಲೋಷನ್ ಬಳಸಿ.

ಅಧಿಕ ಒತ್ತಡ
ನಿಮ್ಮ ಮೇಲೆ ನೀವು ಅಧಿಕ ಒತ್ತಡವನ್ನು ಎಳೆದುಕೊಂಡರೆ ಅದರ ಪರಿಣಾಮವನ್ನು ನೀವು ತ್ವಚೆಯ ಮೇಲೆ ಸಹ ನೋಡಬಹುದು. ಈ ಒತ್ತಡವು ನಿಮ್ಮ ಹಾರ್ಮೋನ್ ಮಟ್ಟಗಳನ್ನು ಅಸಮತೋಲನ ಮಾಡುತ್ತದೆ ಮತ್ತು ನಿಮ್ಮ ತ್ವಚೆಯ ಕೋಶಗಳನ್ನು ಹಾನಿಗೊಳಿಸುತ್ತದೆ ಹಾಗು ನಿಮ್ಮ ಮುಖದಲ್ಲಿ ಮೊಡವೆಗಳು ಮsತ್ತು ಗುಳ್ಳೆಗಳು ಕಾಣಿಸಿಕೊಳ್ಳುವಂತೆ ಮಾಡುತ್ತದೆ. ಆದ್ದರಿಂದ ಅಗತ್ಯ ವಿಶ್ರಾಂತಿಯನ್ನು ಪಡೆಯಿರಿ ಮತ್ತು ನಿಮಗೆ ಇಷ್ಟವಾದುದನ್ನೆ ಮಾಡಿ.

ಧೂಮಪಾನವನ್ನು ತ್ಯಜಿಸಿ
ಧೂಮಪಾನವು ಸಹ ಕೊಲ್ಲಾಜೆನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ, ಇದರಿಂದ ನಿಮ್ಮ ಮುಖದಲ್ಲಿ ಸುಕ್ಕುಗಳು ಮತ್ತು ಗೆರೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ನಿಮ್ಮ ತ್ವಚೆಯು ಸ್ವಾಭಾವಿಕ ಬಣ್ಣವನ್ನು ಕಳೆದುಕೊಂಡು, ಕಳೆಗುಂದುತ್ತದೆ.

ಬಿಬಿ ಕ್ರೀಮ್ ಹಚ್ಚಿ
ವಾಸ್ತವವಾಗಿ ಮುಖದ ಮೇಕಪ್ ಚರ್ಮವನ್ನು ಪೂರ್ಣವಾಗಿ ಆವರಿಸುವುದರಿಂದ ಚರ್ಮದ ಸೂಕ್ಷ್ಮರಂಧ್ರಗಳೂ ಮುಚ್ಚಲ್ಪಡುತ್ತವೆ. ಆದರೆ ಬಿಬಿ ಕ್ರೀಮ್ ಗಳು ಈ ರಂಧ್ರಗಳನ್ನು ಮುಚ್ಚದೇ ಪೋಷಣೆಯನ್ನು ನೀಡುವುದರಿಂದ ಚರ್ಮ ಸಹಜವಾದ ಸ್ರವಿಕೆ ಮತ್ತು ಬೆವರುವಿಕೆಯನ್ನು ಪಡೆಯುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಅಲ್ಲದೇ ಇವುಗಳನ್ನು ಹಚ್ಚಲು ಹೆಚ್ಚು ಸಮಯ ಬೇಕಾಗಿಲ್ಲವಾದುದರಿಂದ ಎಲ್ಲಿಯಾದರೂ ಹೊರಡಲು ಶೀಘ್ರವಾಗಿ ತಯಾರಾಗಬಹುದು.



Click it and Unblock the Notifications
