Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪುರುಷರೇ, ಸಕತ್ ಹ್ಯಾಂಡ್ಸಮ್ ಲುಕ್ ನಿಮ್ಮದಾಗಬೇಕೇ?
ಮುಖಕ್ಕೆ ಕ್ರೀಮ್, ಪೌಡರ್, ಸಿಂಗಾರ, ಇದೆಲ್ಲಾ ಏನಿದ್ದರೂ ಹೆಂಗಸರಿಗೆ, ಗಂಡಸರಾದ ನಮಗೆ ಈ ಪೌಡರ್, ಕ್ರೀಮ್ ಎಲ್ಲಾ ಏತಕೆ ಎಂದು ಹೇಳುವ ಕಾಲ ಎಂದೋ ಕಳೆದು ಹೋಗಿದೆ. ಇಂದು ಮಹಿಳೆಯರಷ್ಟೇ ಪುರುಷರೂ ತಮ್ಮ ಸೌಂದರ್ಯಕ್ಕೆ, ಆರೋಗ್ಯ ಮತ್ತು ಆರೈಕೆಗೆ ಕಾಳಜಿ ವಹಿಸುತ್ತಿದ್ದಾರೆ. ನಮ್ಮ ದೇಹದ ಅತಿ ವಿಸ್ತಾರವಾದ ಮತ್ತು ಹೊರಜಗತ್ತಿಗೆ ತೆರೆದಿರುವ ಅಂಗವಾದ ಚರ್ಮಕ್ಕೆ ಹೆಚ್ಚಿನ ಆರೈಕೆಯ ಅಗತ್ಯವಿದೆ. ಪುರುಷರಿಗಾಗಿ ಹೇಳಿ ಮಾಡಿಸಿದ ಟಾಪ್ ಬ್ಯೂಟಿ ಟಿಪ್ಸ್
ನಿಮಗೆಲ್ಲಾ ಗೊತ್ತಿರುವ ಹಾಗೆ, ಇತ್ತೀಚಿನವರೆಗೂ ಸೌಂದರ್ಯ ಪ್ರಸಾಧನಗಳ ಜಾಹೀರಾತುಗಳು ಕೇವಲ ಮಹಿಳೆಯರಿಗಾಗಿಯೇ ಅನ್ವಯವಾಗುತ್ತಿದ್ದವು. ಇಂದು ಮಹಿಳೆಯರ ಸೌಂದರ್ಯಸಾಧನಗಳ ಭರಾಟೆ ತಗ್ಗಿಲ್ಲವಾದರೂ ಅಲ್ಲಲ್ಲಿ ಪುರುಷರಿಗಾಗಿಯೇ ಪ್ರತ್ಯೇಕವಾದ ಸೌಂದರ್ಯ ಪ್ರಸಾಧನಗಳ ಜಾಹೀರಾತುಗಳು ಮೂಡಿಬರುತ್ತಿವೆ. ಇದಕ್ಕೆ ಕಾರಣ ಪುರುಷರಲ್ಲಿಯೂ ಜಾಗೃತಗೊಂಡಿರುವ ಸೌಂದರ್ಯಪ್ರಜ್ಞೆ. ಮಾಡರ್ನ್ ಹುಡುಗನಿಗೆ ಫ್ಯಾಷನೇಬಲ್ ಗಡ್ಡ
ಪುರುಷರಿಗೂ ಮಹಿಳೆಯರಂತೆ ಅಂದವಾಗಿ ಕಾಣಬೇಕೆಂಬ ಹಂಬಲ ಇರುವುದು ಸಹಜವೇ ಆಗಿದೆ. ಹುಡುಗಿಯೊಬ್ಬಳು ಕುಡಿನೋಟದಲ್ಲಿ ನಿಮ್ಮನ್ನು ನೋಡಿದಾಗ ಯಾವ ಪುರುಷರಿಗೂ ಇದು ಖುಷಿಯನ್ನು ತಂದುಕೊಡದೇ ಇರಲಾರದು. ಹಾಗಿದ್ದರೆ ಈ ಸೌಂದರ್ಯವನ್ನು ಪಡೆದುಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಚಿಂತೆ ಬಿಟ್ಟು ಇಂದಿನ ಲೇಖನದಲ್ಲಿ ನಾವು ತಿಳಿಸಿರುವ ಕೆಲವೊಂದು ಸೌಂದರ್ಯ ರಹಸ್ಯಗಳನ್ನು ಪುರುಷರೇ ನೀವು ಕೂಡ ಪಾಲಿಸಿ...

ಗುಣಮಟ್ಟದ ಫೇಶಿಯಲ್
ನಿಮ್ಮ ಒಣಮುಖವನ್ನು ಹೊಳೆಯುವಂತೆ ಮಾಡುವ ಮತ್ತು ಮುಖದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ಹೊರಹಾಕುವ ಮಾಯಿಶ್ಚರೈಸರ್ ಬಗ್ಗೆ ಕೇಳಿದ್ದೀರಾ? ಎಣ್ಣೆ ಹೊರಹಾಕುವ ಕ್ರೀಮ್ಗಳು ಮತ್ತು ಏರ್ ಬ್ರಶಿಂಗ್ ಪರಿಕರಗಳಿಗಾಗಿ ನೀವು ಹಣ ವ್ಯಯಿಸಬೇಕಾಗುತ್ತದೆ. ಕೆಲವೊಂದು ಮುಖದ ಕ್ರೀಮ್ಗಳು ಬೆಳಕನ್ನು ಪ್ರತಿಫಲಿಸುವ ಅಂಶಗಳನ್ನು ಹೆಚ್ಚು ಹೊಂದಿರುವುದರಿಂದ ಕಲೆಗಳನ್ನು ಮರೆಯಾಗಿಸಲು ಸಹಕಾರಿಯಾಗಿವೆ. ಪುರುಷರಿಗಾಗಿ ನಿರ್ದಿಷ್ಟವಾಗಿರುವ ಕನ್ಸಿಲರ್ಗಳು ಕಪ್ಪು ಕಲೆಗಳನ್ನು ನಿವಾರಿಸಿ ನಿಮಗೆ ಸುಂದರ ಮುಖಾರವಿಂದವನ್ನು ದಯಪಾಲಿಸುತ್ತದೆ.

ಮುಖದಲ್ಲಿ ಮೊಡವೆ ಕಂಡುಬಂದರೆ
ಪುರುಷರ ಮುಖದಲ್ಲಿ ಮೊಡವೆ ಇದ್ದರೆ ತುಂಬಾ ತೊಂದರೆಯಾಗುತ್ತದೆ. ಶೇವ್ ಮಾಡಲೂ ಕಷ್ಟವಾಗಬಹುದು. ಈ ಮೊಡವೆ ಹೋಗಲಾಡಿಸಲು ಮುಖಕ್ಕೆ ಪುದೀನಾ ರಸ ಹಚ್ಚಿ 10 ನಿಮಿಷದ ಬಳಿಕ ಮುಖ ತೊಳೆಯಿರಿ. ಈ ರೀತಿ ಮಾಡುತ್ತಾ ಬಂದರೆ ಮೊಡವೆ ಸಮಸ್ಯೆಯಿಂದ ಮುಕ್ತರಾಗಬಹುದು.

ಸನ್ ಸ್ಕ್ರೀನ್ ಲೋಷನ್ ಬಳಸಿಕೊಳ್ಳಿ
ಬಿಸಿಲಿನಲ್ಲಿ ಹೋಗುವಾಗ ಮಹಿಳೆಯರು ಕೊಡೆ ಹಿಡಿದುಕೊಂಡು ಹೋದರೆ ಪುರುಷರು ಯಾವುದೇ ರಕ್ಷಣೆಯಿಲ್ಲದೇ ನಡೆಯುವುದಕ್ಕೆ ನಮ್ಮ ಪೂರ್ವಾಗ್ರಹ ನಂಬಿಕೆಯೇ ಕಾರಣವಾಗಿದೆ. ಅಂದರೆ ಬಿಸಿಲಿಗೆ ಪುರುಷರ ಚರ್ಮ ಹಾಳಾಗುವುದಿಲ್ಲ ಎಂಬುದು. ಆದರೆ ವಾಸ್ತವವಾಗಿ ಮಹಿಳೆಯರ ಚರ್ಮದಷ್ಟು ಅಲ್ಲದಿದ್ದರೂ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಬಿಸಿಲು ಪುರುಷರ ಚರ್ಮವನ್ನೂ ಘಾಸಿಗೊಳಿಸಬಲ್ಲದು. ಇದೇ ಕಾರಣಕ್ಕೆ ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರಸಾಧನಗಳಲ್ಲಿ ಸನ್ ಸ್ಕ್ರೀನ್, ಬಿಬಿ ಕ್ರೀಂ ಗಳೂ ಪ್ರಮುಖವಾಗಿ ಮಾರಾಟವಾಗುತ್ತಿದೆ. ಹಾಗಾಗಿ ಸಾಧ್ಯವಾದಷ್ಟು, ಸನ್ ಸ್ಕ್ರೀನ್ ಲೋಷನ್ ಗಳನ್ನು ಬಳಸಿಕೊಳ್ಳಿ

ಸೋಮಾರಿತನ ಬೇಡ
ಚರ್ಮದ ಆರೈಕೆಯಲ್ಲಿ ಸೋಮಾರಿತನ ವಹಿಸುವವರ ಚರ್ಮ ಕಾಂತಿರಹಿತವಾಗಿದ್ದು ಸಾಮಾನ್ಯಕ್ಕಿಂತಲೂ ಹೆಚ್ಚು ಕೃಷ್ಣವರ್ಣ ಪಡೆದಿರುತ್ತದೆ. ಆದ್ದರಿಂದ ನಿತ್ಯವೂ ಸ್ವಚ್ಟತೆ, ರಕ್ಷಣೆ ಮತ್ತು ಆರೈಕೆಗಳನ್ನು ಪಾಲಿಸುವುದು ಆರೋಗ್ಯಕ್ಕೆ ಉತ್ತಮವಾಗಿದೆ.

ಮುಖದ ಫೇಶಿಯಲ್
ತಿಂಗಳಿಗೊಂದು ಬಾರಿಯಾದರೂ ಮುಖದ ಫೇಶಿಯಲ್ ಮಾಡಿಸಿ ಮುಖದ ಚರ್ಮಕ್ಕೆ ಕೊಂಚ ಹೆಚ್ಚಿನ ಆರೈಕೆಯಿದೆ. ಇಂದು ವೃತ್ತಿಪರರು ಇದಕ್ಕಾಗಿ ಲಭ್ಯರಿದ್ದು ತಿಂಗಳಿಗೊಂದು ಬಾರಿಯಾದರೂ ಅವರಿಂದ ಮುಖದ ಮಸಾಜ್ ಮತ್ತು ಇತರ ಸೇವೆಗಳನ್ನು ಪಡೆದು ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ.

ಗಡ್ಡ, ಮೀಸೆಯ ಲುಕ್...
ದಕ್ಷಿಣ ಭಾರತೀಯರು ಮೀಸೆಯನ್ನು ನಿವಾರಿಸಲು ಇಷ್ಟಪಡುವುದಿಲ್ಲ. ವಾಸ್ತವವಾಗಿ ಗಡ್ಡ, ಮೀಸೆ ಇದ್ದರೂ ಇಲ್ಲದಿದ್ದರೂ, ಪ್ರೆಂಚ್ ಕಟ್, ಟ್ರಿಮ್ ಗಡ್ಡ ಮೊದಲಾಗಿ ಯಾವುದೇ ತರಹದ ಅಲಂಕಾರ ನಿಮಗಿಷ್ಟವೋ ಅದನ್ನು ಅನುಸರಿಸಿ. ಆದರೆ ಯಾವುದೇ ಆಯ್ಕೆಯಾದರೂ ಪ್ರತಿದಿನ ಒಪ್ಪ ಓರಣವಾಗಿರಿಸಿಕೊಳ್ಳುವುದು ಮಾತ್ರ ಅಗತ್ಯ. ಸ್ಪಷ್ಟವಾದ ಧಾರ್ಮಿಕ ಕಾರಣಗಳಿಲ್ಲದ ಹೊರತು ಗಡ್ಡ ಮತ್ತು ಮೀಸೆಗಳನ್ನು ನಿತ್ಯವೂ ಟ್ರಿಮ್ ಆಗಿಸಿರುವುದು ಅಗತ್ಯ.

ಶೇವಿಂಗ್ ಬಳಿಕ
ಶೇವಿಂಗ್ ಬಳಿಕ ನಿಮ್ಮ ಮುಖಕ್ಕೆ ಜೇನನ್ನು ಹಚ್ಚಿ ಮತ್ತು 20-30 ನಿಮಿಷ ಹಾಗೆ ಬಿಟ್ಟು ಬಳಿಕ ಬಿಸಿ ನೀರಿನಲ್ಲಿ ಅದನ್ನು ತೊಳೆಯಿರಿ. ಇದರ ಬಳಿಕ ಮುಖಕ್ಕೆ ತಂಪು ನೀರನ್ನು ಹಾಕಿದರೆ ಮುಖದ ಚರ್ಮಕ್ಕೆ ಪೋಷಕಾಂಶಗಳು ಸಿಗುತ್ತದೆ.

ಸಂದರ್ಭಕ್ಕೆ ತಕ್ಕ ಉಡುಗೆ ಧರಿಸಿ
ಯಾವ ಸಂದರ್ಭಕ್ಕೆ ಯಾವ ಉಡುಗೆ ಉತ್ತಮ ಎಂದು ಗಮನಿಸಿ ಅದರಂತೆ ಉಡುಗೆ ಧರಿಸಿ. ಸೂಕ್ತ ಸಂದರ್ಭದಲ್ಲಿ ಸೂಟ್ ಧರಿಸಿ. ಸೂಟ್ ಧರಿಸಿದ ವ್ಯಕ್ತಿಗಳನ್ನು ಕಂಡಾಗ ಮಹಿಳೆಯರು ಅವರ ಬಗ್ಗೆ ತಳೆಯುವ ಅಭಿಪ್ರಾಯ ಬೇರೆಯೇ ಆಗಿರುತ್ತದೆ.



Click it and Unblock the Notifications
