Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪಾರ್ಟಿಗೆ ತೆರಳುವ ಮುನ್ನ ಈ ಟಿಪ್ಸ್ ಗಮನದಲ್ಲಿರಲಿ
ಈಗಿನ ಕಾಲದಲ್ಲಿ ಪಾರ್ಟಿಗಳು, ಚಹಾಕೂಟಗಳು ಮತ್ತು ಇತರೆ ಸಮಾರಂಭಗಳು ಆಗಿಂದಾಗ್ಗೆ ಜರುಗುವುದು ಸಾಮಾನ್ಯ ಸಂಗತಿ. ಈ ಎಲ್ಲಾ ಕಾರ್ಯಕ್ರಮಗಳಿಗೂ ತೆರಳಬೇಕಾದ ಅನಿವಾರ್ಯತೆ ನಮ್ಮ ಪುರುಷರಿಗೆ. ಹೀಗಿರುವಾಗ ಪಾರ್ಟಿಗೆ ಸುಖಾಸುಮ್ಮನೆ ಕೆಲವು ಯೋಜಿತ ಅಭ್ಯಾಸಗಳಿಲ್ಲದೆ ತೆರಳಿದರೆ ಅಲ್ಲಿ ನೆರೆದವರ ಮುಂದೆ ಮುಜುಗರ ಪಡಬೇಕಾದ ಸಂದರ್ಭ ಎದುರಾಗುತ್ತದೆ. ಸುಮ್ಮನೆ ಪೇಚಿಗೆ ಸಿಲುಕಿ ಅವಮಾನ ಎದುರಿಸುವುದಕ್ಕಿಂತ ಕೆಲವು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ.
ಪುರುಷರೇ, ಅದೇ ಹಳೆಯ ಸಾಂಪ್ರದಾಯಿಕವಾದ ರೀತಿಯಲ್ಲಿ ಜಾಕೆಟ್ ಹಾಕಿಕೊಂಡು ಅದೇ ಮಾಮೂಲಿ ಶೂಗಳನ್ನು ಧರಿಸಿ ಪಾರ್ಟಿಗೆ ತೆರಳುವ ಕಾಲ ಮುಗಿದು ಹೋಯಿತು. ನೀವು ಅದೇ ಸಾಂಪ್ರದಾಯಿಕವಾದ ಸಹಜ ಸ್ಥಿತಿಯ ಯುವಕನಲ್ಲದೇ, ಆಧುನಿಕವಾದ ಉತ್ಕೃಷ್ಟವಾದ ಪುರುಷರಾಗಿದ್ದಲ್ಲಿ ನಾವು ನಿಮಗಾಗಿ ಈ ಲೇಖನದಲ್ಲಿ ನೀಡಿರುವ ಕೆಲವು ವಿಶೇಷ ವಿಚಾರಗಳನ್ನು ಗಮನದಲ್ಲಿರಿಸಿ.
ಮೊದಲಿಗೆ ನೀವು ಮಾಡಬೇಕಾದ ಕೆಲಸವೆಂದರೆ ನೀವು ತೆರಳುವ ಮುನ್ನ ನಿಮ್ಮ ಗಡ್ಡವನ್ನು ತುಂಡರಿಸಬೇಕೇ ಅಥವಾ ಟ್ರಿಮ್ ಮಾಡಬೇಕೇ ಎಂಬುದನ್ನು ನಿರ್ಧರಿಸುವುದು ಅಥವಾ ಗಡ್ಡವಿಲ್ಲದೇ ತೆರಳುವುದು. ಫ್ಯಾಷನ್ ಬದಲಾಗಿದೆ, ಇನ್ನು ಎರ್ರಾಬಿರ್ರಿ ಗಡ್ಡ ಬೆಳೆಸಿಕೊಳ್ಳಬೇಡಿ!

Image courtesy- Pinterest.com
*ನೀವು ಹೆಚ್ಚು ಆಧುಕತೆಯನ್ನು ಬಯಸಿದಲ್ಲಿ ನಿಮ್ಮ ಗಡ್ಡವನ್ನು ಸರಿಯಾಗಿ ಟ್ರಿಮ್ ಮಾಡಿಕೊಂಡು ತೆರಳಿದಲ್ಲಿ, ನಿಮಗೇ ಅರಿವಿಲ್ಲದ ವಿಶಿಷ್ಟ ಅಂದವು ನಿಮ್ಮನ್ನು ಮೈಗೂಡಿಸಿಕೊಳ್ಳುತ್ತದೆ.
*ರಾತ್ರಿ ಹೊತ್ತು ತೆರಳಬೇಕಾದರೆ ಸುವಾಸನಾವರ್ಧಕವನ್ನು ಬಳಸಲು ಮರೆಯದಿರಿ. ಬಗೆಬಗೆಯ ಸೆಂಟ್‌ಗಳಾದ ಮಸ್ಕ್, ಚಂದನ, ಪಚೌಲಿ ಸೆಂಟ್‌ಗಳನ್ನು ಬಳಸುವುದು. ಇವು ಹೆಚ್ಚು ಕಾಲ ಉಳಿಯುತ್ತವೆ.
*ನಿಮ್ಮ ಚರ್ಮದಲ್ಲಿನ ಸತ್ತ ಜೀವಕೋಶಗಳನ್ನು ಹೊರತೆಗೆಯಲು ಸಮಯ ನೀಡಿ. ಇದು ನಿಮ್ಮ ತ್ವಚೆಯು ಅಂದವಾಗಿ ಶುಭ್ರವಾಗಿ ಕಾಣುವಂತೆ ಮಾಡುತ್ತದೆ. ನಿಮ್ಮ ಮೂಗು, ಕೆನ್ನೆ ಮತ್ತು ಗಲ್ಲದ ಭಾಗಕ್ಕೆ ಹೆಚ್ಚು ಗಮನಹರಿಸಿ.
*ಪಾರ್ಟಿಗೆ ತೆರಳುವ ಮುನ್ನ ನಿಮ್ಮ ಕೇಶವನ್ನು ತೊಳೆಯುವುದು ಸೂಕ್ತ. ಅದು ಸಾಧ್ಯವಾಗದಿದ್ದಲ್ಲಿ, ಡ್ರೈ ಶಾಂಪೂ ಬಳಸಿ ನಿಮ್ಮ ಕೂದಲಿನ ಜಿಡ್ಡನ್ನು ಹೋಗಲಾಡಿಸಿ. ನಿಮ್ಮ ಕೂದಲ ವಿನ್ಯಾಸವನ್ನು ಅಂದಗೊಳಿಸಲು ಕೂದಲ ಜೆಲ್ ಅನ್ನು ಸರಿಯಾಗಿ ಬಳಸಿ.
*ದುರ್ವಾಸನೆಯ ಉಸಿರಾಟ ನಿಮ್ಮ ಇಡೀ ಸಂತೋಷವನ್ನೇ ಬುಡಮೇಲು ಮಾಡುತ್ತದೆ. ನೀವು ಪಾರ್ಟಿಗೆ ತೆರಳುವ ಮುನ್ನ ಹಲ್ಲನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಮತ್ತು ಸಕ್ಕರೆ ರಹಿತ ಗಮ್ ಅನ್ನು ನಿಮ್ಮೊಂದಿಗೆ ಕೊಂಡೊಯ್ಯಲು ಮರೆಯದಿರಿ.



Click it and Unblock the Notifications
