Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ನಿಮ್ಮ ಡ್ರೆಸ್ ಕೋಡ್ ಬದಲಾಯಿಸಿ, ಸ್ಮಾರ್ಟ್ ಆಗಿ ಕಾಣಿ!
ನಿಮ್ಮ ಕೆಲಸ ಸುಗಮಗೊಳ್ಳಬೇಕಾದರೆ ವ್ಯಕ್ತಿತ್ವ ಮತ್ತು ನಿಮ್ಮ ಉಡುಗೆ ಆಕರ್ಷಕವಾಗಿರಬೇಕು ಎಂದು ಒಂದು ಸಮೀಕ್ಷೆ ತಿಳಿಸುತ್ತದೆ. ಆದರೆ ಹೆಚ್ಚಿನವರಿಗೆ ತಾವು ಹೇಗೆ ಆಕರ್ಷಕವಾಗಿ ಕಾಣಿಸಿಕೊಳ್ಳಬೇಕು ಎಂಬುದೇ ಗೊತ್ತಿರುವುದಿಲ್ಲ. ಆಕರ್ಷಕವಾಗಿ ಕಾಣಿಸಿಕೊಳ್ಳುವವರು ತಮ್ಮ ಎಲ್ಲಾ ಕೆಲಸಗಳನ್ನು ಸುಲಭವಾಗಿ ಮಾಡಿಸಿಕೊಳ್ಳುತ್ತಿರುವುದು ಇಡಿಯ ವಿಶ್ವಕ್ಕೇ ಗೊತ್ತಿರುವ ಸತ್ಯವಾಗಿದೆ. ಕ್ಷಣಾರ್ಧದಲ್ಲಿ ಪುರುಷರ ತ್ವಚೆಯ ಕಾಂತಿ ಹೆಚ್ಚಿಸುವ ಬಿಬಿ ಕ್ರೀಮ್!
ಏಕೆಂದರೆ ನೀವು ಹೇಗಿದ್ದೀರಿ ಎನ್ನುವುದಕ್ಕಿಂತ ನಿಮ್ಮನ್ನು ನೀವು ಹೇಗೆ ಪ್ರಸ್ತುತಪಡಿಸಿಕೊಳ್ಳುತ್ತಿದ್ದೀರಿ ಎಂಬ ಅಂಶವನ್ನು ಜಗತ್ತು ಗಮನಿಸುತ್ತದೆ. ಉದಾಹರಣೆಗೆ ಲುಂಗಿ ತೊಟ್ಟು ಸರ್ಕಾರಿ ಕಛೇರಿಗೆ ಹೋದ ವ್ಯಕ್ತಿಗೂ ಸೂಟು ಬೂಟು ತೊಟ್ಟು ಹೋದ ವ್ಯಕ್ತಿಗೂ ಒಳಗಿನ ಅಧಿಕಾರಿ ನೀಡುವ ಗೌರವ ಬೇರೆಯೇ ತೆರನಾಗಿರುತ್ತದೆ.
ರಿಕ್ಷಾದಲ್ಲಿ ಬಂದಿಳಿದ ವ್ಯಕ್ತಿಗೂ ಕಾರಿನಲ್ಲಿ ಬಂದಿಳಿದ ವ್ಯಕ್ತಿಗೂ ಹೋಟೆಲಿನ ಜವಾನ ನೀಡುವ ಗೌರವ ಬೇರೆ ತೆರನಾಗಿದೆ. ಇದು ಜಗತ್ತಿನ ವಾಸ್ತವ, ಕಹಿಯಾದರೂ ಅರಗಿಸಿಕೊಳ್ಳಲೇಬೇಕಾದ ಸತ್ಯ. ಡೊಳ್ಳು ಹೊಟ್ಟೆಯ ಪುರುಷರಿಗೆ ಇದೋ ಕಿವಿಮಾತು
ನೀವು ಯಾವ ಸಂದರ್ಭಕ್ಕೆ ಯಾವ ರೀತಿಯಾಗಿ ಬಟ್ಟೆ ತೊಟ್ಟುಕೊಂಡಿದ್ದೀರಿ, ಹೇಗೆ ನಡೆಯುತ್ತೀರಿ, ಹೇಗೆ ಮಾತನಾಡುತ್ತೀರಿ ಎಂದೆಲ್ಲಾ ವಿಷಯಗಳು ನಿಮ್ಮ ವ್ಯಕ್ತಿತ್ವವನ್ನು ಪ್ರಕಟಿಸುತ್ತವೆ. ಇದು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಿಮಗರಿವಿಲ್ಲದೇ ನೀವು ಮಾಡುತ್ತಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಕೆಳಗಿನ ಸ್ಲಡ್ ಶೋ ನೆರವಾಗಬಲ್ಲದು.

ನಿಮ್ಮ ನೆರೆಗೂದಲನ್ನು ಒಪ್ಪವಾಗಿರಿಸಿ, ಬಣ್ಣ ಬದಲಿಸಲು ಹೋಗಬೇಡಿ
ಬಿಳಿ ಕೂದಲನ್ನು ಕಪ್ಪುಬಣ್ಣ ಹಾಕಿದ ಮಾತ್ರಕ್ಕೇ ಆಕರ್ಷಕವಾಗುವುದಿಲ್ಲ. ವಾಸ್ತವವಾಗಿ ನೆರೆತ ಕೂದಲಿದ್ದರೂ ಒಪ್ಪವಾಗಿ ಕ್ರಾಪು ಮಾಡಿಸಿ ಬಾಚಿಕೊಂಡು ಎದುರಿನವರಿಗೆ ಆಕರ್ಷಕವಾಗಿ ಕಾಣಿಸಿಕೊಳ್ಳುವಂತೆ ಮಾಡಿಕೊಳ್ಳುವುದು ಮುಖ್ಯವೇ ಹೊರತು ಕೇವಲ ಕಪ್ಪುಗೊಳಿಸುವುದಿಲ್ಲ. ಉತ್ತಮ ಶಾಂಪೂ ಮತ್ತು ಕಂಡೀಶನರ್ ಉಪಯೋಗಿಸಿ ಸುಸ್ಥಿತಿಯಲ್ಲಿರಿಸಿಕೊಂಡ ಕೂದಲು ಬಣ್ಣ ಹಚ್ಚಿದ ಕೂದಲಿಗಿಂತಲೂ ಹೆಚ್ಚು ಆಕರ್ಷಕವಾಗಿದೆ.

ವಿಪರೀತವಾಗಿ ಸುಗಂಧ ಹಚ್ಚಿಕೊಳ್ಳಬೇಡಿ
ಕೆಲವರಿಗೆ ಇಡಿಯ ಊರುತುಂಬಾ ಘಮಘಮಿಸುವಷ್ಟು ಸುಗಂಧ ಹಚ್ಚುವ ಅಭ್ಯಾಸವಿರುತ್ತದೆ. ಕೇವಲ ಅಗತ್ಯವಿರುವಷ್ಟು ಅಂದರೆ ಕೆಲವು ಸಿಂಪರಣೆಗಳನ್ನು ಮಾತ್ರ ಧರಿಸಿಕೊಂಡು ಹೋದರೆ ವ್ಯಕ್ತಿತ್ವ ಉತ್ತಮಗೊಳ್ಳುತ್ತದೆ.

ಗಡ್ಡ, ಮೀಸೆ ಇದ್ದರೂ, ಇಲ್ಲದಿದ್ದರೂ ಒಪ್ಪವಾಗಿರಲಿ
ದಕ್ಷಿಣ ಭಾರತೀಯರು ಮೀಸೆಯನ್ನು ನಿವಾರಿಸಲು ಇಷ್ಟಪಡುವುದಿಲ್ಲ. ವಾಸ್ತವವಾಗಿ ಗಡ್ಡ, ಮೀಸೆ ಇದ್ದರೂ ಇಲ್ಲದಿದ್ದರೂ, ಪ್ರೆಂಚ್ ಕಟ್, ಟ್ರಿಮ್ ಗಡ್ಡ ಮೊದಲಾಗಿ ಯಾವುದೇ ತರಹದ ಅಲಂಕಾರ ನಿಮಗಿಷ್ಟವೋ ಅದನ್ನು ಅನುಸರಿಸಿ. ಆದರೆ ಯಾವುದೇ ಆಯ್ಕೆಯಾದರೂ ಪ್ರತಿದಿನ ಒಪ್ಪ ಓರಣವಾಗಿರಿಸಿಕೊಳ್ಳುವುದು ಮಾತ್ರ ಅಗತ್ಯ. ಸ್ಪಷ್ಟವಾದ ಧಾರ್ಮಿಕ ಕಾರಣಗಳಿಲ್ಲದ ಹೊರತು ಗಡ್ಡ ಮತ್ತು ಮೀಸೆಗಳನ್ನು ನಿತ್ಯವೂ ಟ್ರಿಮ್ ಆಗಿಸಿರುವುದು ಅಗತ್ಯ.

ಬಕ್ಕತಲೆಯೆಂದು ತಲೆಬಿಸಿ ಮಾಡಿಕೊಳ್ಳಬೇಡಿ
ಬಕ್ಕತಲೆ ಎಂದು ನೀವು ಮಾಡಿಕೊಳ್ಳುವ ತಲೆಬಿಸಿಯೇ ನಿಮ್ಮನ್ನು ವಿಚಲಿತಗೊಳಿಸುತ್ತದೆಯೇ ವಿನಃ ನಿಮ್ಮ ವ್ಯಕ್ತಿತ್ವಕ್ಕೆ ಇದಕ್ಕೆ ಏನೂ ಧಕ್ಕೆಯುಂಟಾಗದು. ಬಕ್ಕತಲೆಯನ್ನು ಅಡಗಿಸಿಡಲು ಪ್ರಯತ್ನಿಸಿದಷ್ಟೂ ನಿಮ್ಮ ವ್ಯಕ್ತಿತ್ವ ಮಂಕಾಗುತ್ತಾ ಹೋಗುತ್ತದೆ. ನಿಮ್ಮ ಬಕ್ಕತಲೆಗೆ ಸೂಕ್ತವಾಗುವ ಗಡ್ಡ ಅಥವಾ ಕಿವಿಯ ಬದಿಯ ಕೂದಲನ್ನು ಹೆಚ್ಚಿಸುವ, ಒಟ್ಟಾರೆ ನಿಮ್ಮ ಮನಸ್ಸಿಗೆ ಹಿತವೆನಿಸುವ ಅಲಂಕಾರ ಮಾಡಿಕೊಳ್ಳಿ.

ತೋಳುಗಳನ್ನು ಬಲಿಷ್ಟಗೊಳಿಸಿ
ನಿತ್ಯದ ವ್ಯಾಯಾಮದಿಂದ ಇಡಿಯ ದೇಹವನ್ನು ಹುರಿಗಟ್ಟಿಸಿ ನಿಮ್ಮ ಶರೀರವನ್ನು ಆಕರ್ಷಕವಾಗಿಸಿಕೊಳ್ಳಿ. ಅದರಲ್ಲೂ ತೋಳು ಮತ್ತು ಭುಜಗಳ ಸ್ನಾಯುಗಳು ಬಲಿಷ್ಟವಾಗಿದ್ದಷ್ಟು ವ್ಯಕ್ತಿತ್ವ ಆಕರ್ಷಕವಾಗಿರುವುದು ಕಂಡುಬಂದಿದೆ. ಮಹಿಳೆಯರು ಈ ಸ್ನಾಯುಗಳನ್ನು ಒಂದು ಸುರಕ್ಷತೆಯ ಭಾವನೆಯಿಂದ ನೋಡುತ್ತಾರೆ.

ತಿಂಗಳಿಗೊಂದು ಬಾರಿಯಾದರೂ ಮುಖದ ಫೇಶಿಯಲ್ ಮಾಡಿಸಿ
ಮುಖದ ಚರ್ಮಕ್ಕೆ ಕೊಂಚ ಹೆಚ್ಚಿನ ಆರೈಕೆಯಿದೆ. ಇಂದು ವೃತ್ತಿಪರರು ಇದಕ್ಕಾಗಿ ಲಭ್ಯರಿದ್ದು ತಿಂಗಳಿಗೊಂದು ಬಾರಿಯಾದರೂ ಅವರಿಂದ ಮುಖದ ಮಸಾಜ್ ಮತ್ತು ಇತರ ಸೇವೆಗಳನ್ನು ಪಡೆದು ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ.

ನಿಮ್ಮ ಹಲ್ಲುಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ
ನಿಮ್ಮ ಹಲ್ಲುಗಳು ಸಾಧ್ಯವಾದಷ್ಟು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ನೀವು ಧೂಮಪಾನಿಯಾಗಿದ್ದರೆ ಅದನ್ನು ತ್ಯಜಿಸುವತ್ತ ಧನಾತ್ಮಕವಾಗಿ ಚಿಂತಿಸಿ. ನಿಮ್ಮ ವೈದ್ಯರು ನಿಮಗೆ ಇದನ್ನು ತ್ಯಜಿಸಲು ಉತ್ತಮ ಸಲಹೆ ನೀಡಬಲ್ಲರು. ಧೂಮಪಾನಿಗಳನ್ನು ಹೆಚ್ಚಿನ ಮಹಿಳೆಯರು ಇಷ್ಟಪಡುವುದಿಲ್ಲ, ಗೊತ್ತೇ? ಅದರಲ್ಲೂ ಮುಖದಿಂದ ಕೆಟ್ಟ ವಾಸನೆ ಮತ್ತು ಹಳದಿ ಹಲ್ಲುಗಳಿದ್ದರೆ ನಿಮ್ಮಿಂದ ದೂರ ಓಡುತ್ತಾರೆ.

ವೃತ್ತಿಪರ ಕ್ಷೌರಿಕನ ಸೇವೆ ಪಡೆಯಿರಿ
ನಿಮ್ಮ ತಲೆಕ್ಷೌರ ನಿಮ್ಮ ವ್ಯಕ್ತಿತ್ವಕ್ಕೆ ಪೂರಕವಾಗಿರಬೇಕು. ನಿಮ್ಮ ನಿತ್ಯದ ಕ್ಷೌರಿಕನಿಗಿಂತಲೂ ಉತ್ತಮ ಮತ್ತು ವೃತ್ತಿಪರ ನಿಮ್ಮ ಊರಿನಲ್ಲಿದ್ದರೆ ಆತನ ಸೇವೆಯನ್ನು ಪಡೆಯುವ ಬಗ್ಗೆ ಚಿಂತಿಸಿ. ನಿಮಗೆ ಯಾವ ರೀತಿಯ ಕ್ಷೌರ ಉತ್ತಮ ಎಂಬ ಆಯ್ಕೆಯನ್ನು ನಿಮಗಿಂತಲೂ ಆತ ಹೆಚ್ಚು ಸಮರ್ಪಕವಾಗಿ ಮಾಡಬಲ್ಲರು. ಅವರ ಸೇವೆಯನ್ನು ಪಡೆದು ನಿಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳಿ.

ನಿಮ್ಮ ಕಣ್ಣುಗಳು ನಿಮ್ಮ ಆರೋಗ್ಯವನ್ನು ತಿಳಿಸುತ್ತವೆ.
ನಿಮ್ಮ ಕಣ್ಣುಗಳು ನಿಮ್ಮ ಆರೋಗ್ಯದ ಕೈಗನ್ನಡಿಯಾಗಿದೆ. ನಿದ್ದೆಯಿಲ್ಲದ, ಹಿಂದಿನ ದಿನದ ಮದ್ಯಪಾನ, ಪಾರ್ಟಿ ಮೊದಲಾದವು ನಿಮ್ಮ ಕಣ್ಣುಗಳನ್ನು ಕೆಂಪಗಾಗಿಸುವ ಮೂಲಕ ಪ್ರಕಟವಾಗುತ್ತವೆ. ಅಲ್ಲದೇ ನಿಮ್ಮ ಆರೋಗ್ಯವನ್ನು ಕಣ್ಣ ಕೆಳಗಿನ ಚರ್ಮ ಜೋಲುಬಿದ್ದಿರುವುದು ಸ್ಪಷ್ಟವಾಗಿ ಪ್ರಕಟಿಸುತ್ತದೆ. ಈ ಬಗ್ಗೆ ಧನಾತ್ಮಕವಾಗಿ ಚಿಂತಿಸಿ.

ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ
ಉಗುರುಗಳನ್ನು ಅಡ್ಡಾದಿಡ್ಡಿಯಾಗಿ ಬೆಳೆಸುವುದು ಮತ್ತು ಹಲ್ಲುಗಳಿಂದ ಕತ್ತರಿಸಿಕೊಂಡಿರುವುದು ನಿಮ್ಮ ವ್ಯಕ್ತಿತ್ವವನ್ನು ಕಳೆಗುಂದಿಸುತ್ತದೆ. ಬದಲಿಗೆ ಉಗುರುಗಳನ್ನು ನೇಲ್ ಕಟರ್ ಉಪಯೋಗಿಸಿ ಕಾಲಕಾಲಕ್ಕೆ ಕತ್ತರಿಸಿಕೊಂಡು ಚಿಕ್ಕದಾಗಿರಿಸಿ. ಮಹಿಳೆಯರಿಗೆ ಉದ್ದದ ಮತ್ತು ಅಡ್ಡದಿಡ್ಡಿ ಕತ್ತರಿಸಿದ ಉಗುರು ಇಷ್ಟವಾಗುವುದಿಲ್ಲ.

ಸಂದರ್ಭಕ್ಕೆ ತಕ್ಕ ಉಡುಗೆ ಧರಿಸಿ
ಯಾವ ಸಂದರ್ಭಕ್ಕೆ ಯಾವ ಉಡುಗೆ ಉತ್ತಮ ಎಂದು ಗಮನಿಸಿ ಅದರಂತೆ ಉಡುಗೆ ಧರಿಸಿ. ಸೂಕ್ತ ಸಂದರ್ಭದಲ್ಲಿ ಸೂಟ್ ಧರಿಸಿ. ಸೂಟ್ ಧರಿಸಿದ ವ್ಯಕ್ತಿಗಳನ್ನು ಕಂಡಾಗ ಮಹಿಳೆಯರು ಅವರ ಬಗ್ಗೆ ತಳೆಯುವ ಅಭಿಪ್ರಾಯ ಬೇರೆಯೇ ಆಗಿರುತ್ತದೆ.



Click it and Unblock the Notifications











