Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ದೊಡ್ಡ ಹೊಟ್ಟೆ ಮರೆಮಾಚುವ ಉಪಾಯಗಳು
ಪುರುಷರಲ್ಲಿ ಆಕರ್ಷಕ ಮೈಕಟ್ಟಿನ ವ್ಯಾಖ್ಯೆಯಲ್ಲಿ ಸ್ನಾಯುಗಳು ಪ್ರಮುಖ ಪಾತ್ರ ವಹಿಸುತ್ತವೆ ನಿಜ ಆದರೆ ಇದಕ್ಕಿಂತಲೂ ಪ್ರಮುಖವಾದದ್ದು ಮತ್ತೊಂದಿದೆ. ನಿಮ್ಮ ಊಹೆ ನಿಜ. ಹೊಟ್ಟೆ. ಹೊಟ್ಟೆ ದೊಡ್ಡದಾಗಿದ್ದರೆ ಯಾರೂ ನಿಮ್ಮನ್ನು ಆಕರ್ಷಕ ಮೈಕಟ್ಟು ಎಂದು ಕರೆಯಲಾರರು. ಅದರಲ್ಲೂ ನಲವತ್ತರ ಒಳಗಿನ ಪುರುಷರಲ್ಲಂತೂ ಇದು ಇರಲೇ ಬಾರದು.
ಇದಕ್ಕೆ ಕಾರಣ ಹುಡುಕಲು ಹೊರಟಾಗ ಒತ್ತಡ ಎಂಬ ಉತ್ತರ ಬರಬಹುದು, ನಮ್ಮ ಜೀವನಶೈಲಿಯಾಗಿರಬಹುದು ಆದರೆ ಒಂದೇ ಮಾತಿನಲ್ಲಿ ಹೇಳಬೇಕಾದರೆ ನಮ್ಮ ಅಲಕ್ಷ್ಯ, ಅಜ್ಞಾನ ಮತ್ತು ಆಲಸ್ಯ. ಇದನ್ನು ಒಂದೇ ಸಲಕ್ಕೆ ಕರಗಿಸಿ ಆಕರ್ಷಕರಾಗಿ ಕಾಣುವುದು ಅಷ್ಟೇನು ಸುಲಭದ ಮಾತಲ್ಲದಿದ್ದರೂ ಅದನ್ನು ನಿಮ್ಮ ಬಟ್ಟೆ ತೊಡುವ ರೀತಿಯಿಂದ ಮುಚ್ಚಿಡಲು ಸಾಧ್ಯ.
ಹೊಟ್ಟೆ ದೊಡ್ಡದಾಗಿದ್ದರೆ ಬಹಳ ಫಿಟ್ ಆಗುವ ಬಟ್ಟೆಗಳನ್ನು ಹೆಚ್ಚು ತೊಡದಿರಿ. ಸ್ವಲ್ಪ ಸಡಿಲವಾದ ಬಟ್ಟೆಗಳನ್ನು ತೊಟ್ಟರೆ ಬಹಳ ಸುಂದರವಾಗಿ ಕಾಣುತ್ತದೆ. ಇದರಿಂದಾಗಿ ಹೊಟ್ಟೆ ಬಹಳ ದೊಡ್ಡದಾಗಿ ಕಾಣುವುದಿಲ್ಲ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: 40 ದಾಟಿದ ಪುರುಷರಿಗಾಗಿ ಸ್ಟೈಲ್ ಟಿಪ್ಸ್
ನಿಮಗೆ ಸರಿಯಾಗಿ ಹೊಂದಿಕೊಳ್ಳದ ಬಟ್ಟೆಗಳು ಮೊದಲೇ ನಿಮಗೆ ಅಂದವನ್ನು ನೀಡುವುದಿಲ್ಲ ಅದರ ಜೊತೆಗೆ ನಿಮ್ಮ ಹೊಟ್ಟೆ ದೊಡ್ಡದಿದ್ದರೆ ಅದು ಮತ್ತಷ್ಟು ಅಂದವನ್ನು ಕೆಡಿಸುತ್ತದೆ. ಬಹಳ ಟೈಟ್ ಅಥವಾ ಬಹಳ ಸಡಿಲವಾದ ಬಟ್ಟೆಗಳನ್ನು ಆದಷ್ಟು ದೂರವಿಡಿ. ಇದರ ಜೊತೆಗೆ ಬಹಳ ಆಕರ್ಷಕವಾದ ಹೊಸ ವಿನ್ಯಾಸದ ಬಟ್ಟೆಗಳು ತೊಟ್ಟರೆ ಇದು ನಿಮ್ಮ ಹೊಟ್ಟೆಯನ್ನು ಮರೆಮಾಚುತ್ತದೆ.

ಗಾಢ ಬಣ್ಣದ ಬಟ್ಟೆಗಳನ್ನು ತೊಡಿ:
ಗಾಢ ಬಣ್ಣದ ಬಟ್ಟೆಗಳು ನಿಮ್ಮನ್ನು ಸ್ಲಿಮ್ ಆಗಿ ತೋರುವಂತೆ ಮಾಡುತ್ತವೆ. ಇದು ನಿಮ್ಮ ಹೊಟ್ಟೆಯನ್ನೂ ಇರುವುದಕ್ಕಿಂತ ಬಹಳ ಸಣ್ಣದಾಗಿ ಕಾಣುವಂತೆ ಮಾಡುತ್ತದೆ. ನೇವಿ ಬ್ಲೂ, ಕಪ್ಪು, ಕಂದು ಬಣ್ಣಗಳನ್ನು ಆರಿಸಿಕೊಳ್ಳಿ

ಬಿಗಿಯಾದ ಉಡುಪು ಬೇಡ:
ಬಹಳ ಬಿಗಿಯಾದ ಉಡುಪುಗಳನ್ನು ಆದಷ್ಟು ಬಳಸದಿರಿ. ನಿಮ್ಮ ದೇಹಕ್ಕೆ ಬಹಳ ಬಿಗಿಯೂ ಅಲ್ಲಸ ಸಡಿಲವೂ ಅಲ್ಲದ ಬಟ್ಟೆಗಳನ್ನು ಆರಿಸಿಕೊಳ್ಳಿ. ಟಿ ಶರ್ಟ್ ಹಾಕುವುದಾದರೂ ಬಹಳ ಬಿಗಿಯಾಗಿರುವುದನ್ನು ಹಾಕಬೇಡಿ.

ಜಾಕೆಟ್:
ದೊಡ್ಡ ಹೊಟ್ಟೆಯನ್ನು ಮರೆಮಾಚುವ ಮತ್ತೊಂದು ಸುಲಭೋಪಾಯ ಜಾಕೆಟ್. ಇದು ನಿಮ್ಮ ಉಬ್ಬಿದ ಹೊಟ್ಟೆಯನ್ನು ಮಾಚಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇದು ನೋಡುಗರ ದೃಷ್ಟಿಯನ್ನು ಹೊಟ್ಟೆಯಿಂದ ತನ್ನತ್ತ ಸೆಳೆಯುವಲ್ಲಿ ಸಹಾಯಕ.

ಲೋ ರೈಸ್ ಜೀನ್ಸ್:
ಹೇಗೆ ಮೇಲಿನ ಭಾಗದಲ್ಲಿ ಜಾಕೆಟ್ ನಿಮ್ಮ ಹೊಟ್ಟೆಯನ್ನು ಮರೆಮಾಚುತ್ತದೋ ಹಾಗೆಯೇ ಕೆಳಭಾಗದಲ್ಲೂ ಲೋ ರೈಸ್ ಜೀನ್ಸ್ ಗಳು ಬಹಳ ಉಪಯುಕ್ತ.

ಇನ್ ಶರ್ಟ್ ಮಾಡಿ:
ಇನ್ ಶರ್ಟ್ ಮಾಡುವುದು ಬಹಳ ಲಾಭದಾಯಕ. ಇದು ನಿಮ್ಮ ಹೊಟ್ಟೆ ಬಹಳ ದೊಡ್ಡದಾಗಿಲ್ಲ ಎಂಬ ಭಾವನೆಯನ್ನು ತರಿಸುತ್ತದೆ. ಕ್ಯಾಶುವಲ್ ಅಂಗಿಯನ್ನು ಆರಿಸಿಕೊಳ್ಳಿ ಮತ್ತು ಇನ್ ಶರ್ಟ್ ಮಾಡಿ.

ಸರಳ ಉಡುಗೆ
ಹೊಟ್ಟೆಯೇ ದೊಡ್ಡದಾಗಿರುವಾಗ ಮತ್ತೆ ಏನಾದರೂ ಆಕರ್ಷಕ ಉಡುಗೆಯ ಬದಲು ಏನಾದರೂ ಸ್ವಲ್ಪ ಆಕರ್ಷಕ ಆದರೆ ಒಂದಕ್ಕೊಂದು ಸರಿ ಹೊಂದುವ ಬಟ್ಟೆಗಳನ್ನು ಧರಿಸಿ. ಇದರಿಂದಾಗಿ ನಿಮ್ಮ ಉಡುಗೆಯ ಮುಂದೆ ಹೊಟ್ಟೆ ಹೆಚ್ಚಿನ ಗಮನ ಸೆಳೆಯುವುದಿಲ್ಲ.

ದರ್ಜಿ:
ನಿಮ್ಮ ದೇಹೆದಾಕಾರಕ್ಕೆ ಸರಿಯಾಗಿ ಹೊಟ್ಟೆಯನ್ನು ಬಹಳವಾಗಿ ಮರೆಮಾಚುವಲ್ಲಿ ಸಹಾಯ ಮಾಡುವ ದರ್ಜಿ ನಿಮ್ಮ ಬಳಿ ಇದ್ದರೆ ಎಂದಿಗೂ ಬಿಡಬೇಡಿ.



Click it and Unblock the Notifications
