Latest Updates
-
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ?
ಮುಖದ ಅಂದ ಹೆಚ್ಚಿಸುವ ಬಿಬಿ ಗ್ಲೋವ್ ಟ್ರೀಟ್ಮೆಂಟ್ ಬಗ್ಗೆ ಕೇಳಿದ್ದೀರಾ? ಈ ವಿಧಾನ ಸುರಕ್ಷಿತವೇ?
ಮುಖದ ಅಂದ ಹೆಚ್ಚಿಸಲು ಹಲವಾರು ಟ್ರೀಟ್ಮೆಂಟ್‌ಗಳಿವೆ, ಅದರಲ್ಲೊ BB ಗ್ಲೋ ಟ್ರೀಟ್ಮೆಂಟ್ ಇದರ ಬಗ್ಗೆ ಕೇಳಿದ್ದೀರಾ? ಇದು ಮುಖದಲ್ಲಿಏನಾದರೂ ಕಲೆಯಿದ್ದರೆ ಅದನ್ನು ಹೋಗಲಾಡಿಸಿ ಮುಖದ ಅಂದ ಹೆಚ್ಚಿಸುವಲ್ಲಿ ಇದು ತುಂಬಾನೇ ಪರಿಣಾಮಕಾರಿಯಾಗಿರುವುದರಿಂದ ಈಗ ಈ ಟ್ರೀಟ್ಮೆಂಟ್ ತುಂಬಾನೇ ಟ್ರೆಂಡ್‌ನಲ್ಲಿದೆ.
ಆದರೆ ಈ ಟ್ರೀಟ್ಮೆಂಟ್‌ನಿಂದ ಅಡ್ಡಪರಿಣಾಮಗಳು ಇವೆ, ಈ ಲೇಖನದಲ್ಲಿ ಇದನ್ನು ಮಾಡುವುದು ಹೇಗೆ, ಇದರ ಪ್ರಯೋಜನ, ಅಡ್ಡಪರಿಣಾಮ ಎಲ್ಲದರ ಬಗ್ಗೆ ವಿವರವಾಗಿ ನೀಡಲಾಗಿದೆ ನೋಡಿ:

ಬಿಬಿ ಗ್ಲೋವ್ ಟ್ರೀಟ್ಮೆಂಟ್ ಎಂದರೇನು?
ಬಿಬಿ ಗ್ಲೋ ಎಂಬುವುದು ತಾತ್ಕಾಲಿಕ ಕಾಸ್ಮೆಟಿಕ್ ವಿಧಾನವಾಗಿದೆ. ಇದನ್ನು ಮೊದಲಿಗೆ ಕೊರಿಯನ್‌ರು ಮಾಡಿಸುತ್ತಿದ್ದರು, ಇದೀಗ ಈ ಟ್ರೆಂಡ್ ಇತರ ದೇಶಕ್ಕೂ ಹರಡಿದೆ. ಇದರಲ್ಲಿ ತ್ವಚೆಗೆ ಸೆಮಿ ಪರ್ಮನೆಂಟ್ ಮೇಕಪ್ ಮಾಡಲಾಗುವುದು.

ಇದನ್ನು ಹೇಗೆ ಮಾಡಲಾಗುವುದು?
ನೀವು ಬಿಬಿ ಗ್ಲೋ ಟ್ರೀಟ್ಮೆಂಟ್ ಮಾಡಿಸಿದರೆ ಆ ಮೇಕಪ್ ಕೆಲವು ದಿನಗಳ ಹಾಗೇ ಇರುತ್ತದೆ, ಇತರ ಮೇಕಪ್‌ನಂತೆ ದಿನಾ ಹಾಕಬೇಕಾಗಿಲ್ಲ. ಇದರಲ್ಲಿ ಪ್ರತ್ಯೇಕವಾದ ಮೇಕಪ್ ಸಾಧನಗಳನ್ನು ಬಳಸಲಾಗುವುದು. ಅದನ್ನು ಟಿಂಟೆಡ್ ಪಿಗ್ಮೆಂಟ್ ಜೊತೆ ಮಿಕ್ಸ್ ಮಾಡಿ, ನಂತರ ಮೈಕ್ರೋ ನೀಡಲ್(ಸೂಜಿ) ಮೂಲಕ ನಿಮ್ಮ ಮುಖದ ತ್ವಚೆಯೊಳಗೆ ಇಳಿಸಲಾಗುವುದು. ಹೀಗೆ ಮಾಡುವುದರಿಂದ ತ್ವಚೆ ತುಂಬ ಹೊಳಪಿನಿಂದ ಕೂಡಿರುತ್ತದೆ, ಮುಖದಲ್ಲಿ ಕಲೆಗಳು ಕಾಣುವುದಿಲ್ಲ, ನಿಮ್ಮ ಅಂದ ಹೆಚ್ಚಾಗುವುದು.

ಬಿಬಿ ಗ್ಲೋವ್ ಸುರಕ್ಷಿತವೇ?
ಚರ್ಮ ರೋಗ ತಜ್ಞರಾಗಿರುವ ಡಾ. ರಶ್ಮಿ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಬಿಬಿ ಗ್ಲೋವ್ ಟ್ರೀಟ್ಮೆಂಟ್‌ನ ಅಪಾಯ ಬಗ್ಗೆ ತುಂಬಾ ವಿವರವಾಗಿ ಹೇಳಿದ್ದಾರೆ. ಅವರು ಹೇಳಿರುವ ಪ್ರಕಾರ
1. ಬಿಬಿ ಗ್ಲೋವ್ ಟ್ರೀಟ್ಮೆಂಟ್ ಅಸುರಕ್ಷತೆಯ ವಿಧಾನ
ಇದರಿಂದ ಅಡ್ಡಪರಿಣಾಮ ಉಂಟಾಗುವುದು, ಇದರಿಂದ ಸ್ಕಿನ್ ಪ್ಯಾಚಸ್, ತ್ವಚೆ ಕೆಂಪಾಗಿ ಉರಿ ಉರಿಯಾಗುವುದು, ಕೆಲವೊಂದು ಅಲರ್ಜಿ ಸಮಸ್ಯೆ ಉಂಟಾಗುವುದು. ಕೆಲವರಿಗೆ ಮುಖದಲ್ಲಿ ಊತ ಕೂಡ ಕಂಡು ಬರಬಹುದು.
ಅಲ್ಲದೆ ಮೈಕ್ರೋನೀಡ್ಲಿಂಗ್ ಅನ್ನು ತುಂಬಾ ಪರಿಣಿತರು ನೀಡಬೇಕು, ಇಲ್ಲದಿದ್ದರೆ ಕಷ್ಟವಾಗುವುದು. ಇದರಿಂದ ಮುಖದಲ್ಲಿ ಶಾಶ್ವತ ಕಲೆ ಉಂಟಾಗುವ ಸಾಧ್ಯತೆ ಹೆಚ್ಚು.
2. ಬಿಬಿ ಗ್ಲೋವ್ ಟ್ರೀಟ್ಮೆಂಟ್‌ನಲ್ಲಿ ಮೇಕಪ್ ಅನ್ನು ಮೈ ಮೇಕಪ್ ಮೈಕ್ರೋನೀಡ್ಲಿಂಗ್ ವೃತ್ತಾಕಾರವಾಗಿ ತಿರುಗಿಸುತ್ತಾ ಮಾಡುವುದರಿಂದ ಮಾಡುವುದರಿಂದ ಮೇಕಪ್ ಸರಿಯಾಗಿ ಹರಡದೇ ಹೋಗಬಹುದು.
3. ನಮ್ಮ ಗುರಿ ಆರೋಗ್ಯಕರ ತ್ವಚೆಯನ್ನು ಪಡೆಯುವುದು ಆಗಿರಬೇಕು ಹೊರತು ಬೆಳ್ಳಗೆ ಕಾಣಿಸಬೇಕೆಂಬುವುದು ಅಲ್ಲ.
ಆದ್ದರಿಂದ ನೀವು ಬಿಬಿ ಗ್ಲೋವ್ ಟ್ರೀಟ್ಮೆಂಟ್ ಮಾಡಿಸಬೇಕೆಂದಿದ್ದರೆ ಈ ಅಂಶಗಳನ್ನು ತಿಳಿದುಕೊಂಡರೆ ನಿಮ್ಮ ತ್ವಚೆಯ ರಕ್ಷಣೆ ಮಾಡಬಹುದು.



Click it and Unblock the Notifications
