Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕಣ್ರೆಪ್ಪೆ ಮೇಕಪ್ ಮಾಡುವಾಗ ನಾವೆಲ್ಲಾ ಮಾಡುವ ತಪ್ಪುಗಳಿವು
ಹೆಣ್ಮಕ್ಕಳು ಯಾವುದೇ ಮೇಕಪ್ ಮಾಡದಿದ್ದರೂ ಬರೀ ಕಣ್ಣಿಗೆ ಕಾಡಿಗೆ ಹಚ್ಚಿದರೆ ಸಾಕು ತುಂಬಾನೇ ಆಕರ್ಷಕವಾಗಿ ಕಾಣುವುದು. ಅದೇ ಮುಖಕ್ಕೆ ಮೇಕಪ್ ಮಾಡಿ ಕಣ್ಣಿಗೆ ಮಾಡದಿದ್ದರೆ ಮೇಕಪ್ ಅಪೂರ್ಣವಾದಂತೆ ಅನಿಸುವುದು.

ಕಣ್ಣಿನ ಮೇಕಪ್‌ನಲ್ಲಿ ಕಣ್ರೆಪ್ಪೆಯ ಮೇಕಪ್ ಕೂಡ ನಮ್ಮ ಲುಕ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನೀಳವಾದ ಅಥವಾ ಸ್ವಲ್ಪ ಕರ್ಲಿ ಕಣ್ರೆಪ್ಪೆ ಮೇಕಪ್ ನಮ್ಮ ಮುಖಕ್ಕೆ ಮತ್ತಷ್ಟು ಅಂದ ನೀಡುತ್ತದೆ, ಕಣ್ರೆಪ್ಪೆ ತುಂಬಾ ಇಲ್ಲದವರು ಆರ್ಟಿಫಿಶಿಯಲ್ ಲ್ಯಾಷಶ್ (ಕೃತಕ ಕಣ್ರೆಪ್ಪೆ ) ಬಳಸುತ್ತಾರೆ.
ನೀವು ಕಣ್ರೆಪ್ಪೆ ಮೇಕಪ್ ಮಾಡುವಾಗ ಗೊತ್ತಿಲ್ಲದೆ ಮಾಡುವ ಕೆಲವು ತಪ್ಪುಗಳಿಂದಾಗಿ ನಿಮ್ಮ ಮೇಕಪ್ ಹಾಳಾಗುವುದು ಮಾತ್ರವಲ್ಲ ಕೆಲವೊಂದು ತಪ್ಪುಗಳು ಕಣ್ಣಿಗೆ ಹಾನಿಯುಂಟು ಮಾಡುತ್ತದೆ. ಆದ್ದರಿಂದ ಈ ಬಗೆಯ ತಪ್ಪುಗಳನ್ನು ಮಾಡುತ್ತಿದ್ದರೆ ನಿಮ್ಮ ಕಣ್ರೆಪ್ಪೆಗೆ ಹಾನಿಯುಂಟು ಮಾಡುವುದು, ಆದ್ದರಿಂದ ಜಾಗ್ರತೆ!
1. ಕಣ್ಣುಗಳನ್ನು ಉಜ್ಜುವುದು: ಈ ಅಭ್ಯಾಸ ಅನೇಕರಲ್ಲಿ ಇರುತ್ತದೆ. ನೀವು ಆಗಾಗ ಕಣ್ಣುಜ್ಜುವುದು ಮಾಡುವುದಾದರೆ ಕಣ್ರೆಪ್ಪೆಗೆ ಮೇಕಪ್ ಮಾಡದಿರುವುದೇ ಒಳ್ಳೆಯದು, ಇಲ್ಲದಿದ್ದರೆ ಸ್ಪ್ರೆಡ್ ಆಗಿ ಹಾಳಾಗುವುದು. ಕಣ್ರೆಪ್ಪೆಗೆ ಮೇಕಪ್ ಮಾಡಿದಾಗ ಕಣ್ಣು ಉಜ್ಜಬೇಡಿ.
2. ಅವಧಿ ಮುಗಿದ ಮಸ್ಕರಾ ಬಳಸುವುದು
ಮಸ್ಕರಾ ಬೇಗನೆ ಖಾಲಿಯಾಗಲ್ಲ, ಇನ್ನೂ ಇದೆ ಎಂದು ಕೆಲವರು ಅವಧಿ ಮುಗಿದರೂ ಬಳಸುತ್ತಾರೆ. ಈ ತಪ್ಪುಗಳನ್ನು ಮಾಡಲು ಹೋಗಬೇಡಿ.
3. ಆಗಾಗ ಕೃತಕ ಕಣ್ರೆಪ್ಪೆ ಬಳಸುವುದು
ಅಪರೂಪಕ್ಕೆ ಒಮ್ಮೆ ಕೃತಕ ಕಣ್ರೆಪ್ಪೆ ಬಳಸುವುದಾದರೆ ಸರಿ, ಅದೇ ವಾರಕ್ಕೆ ಒಂದು ಅಥವಾ ಎರಡು ಬಾರಿ ಹಾಕುತ್ತಿದ್ದರೆ ಕಣ್ರೆಪ್ಪೆ ಹಾಳಾಗುವುದು. ಇದರಿಂದ ಸೋಂಕು, ಅಲರ್ಜಿ ಉಂಟಾಗಬಹುದು, ಅಲ್ಲದೆ ನಿಮ್ಮ ನೈಸರ್ಗಿಕ ಕಣ್ರೆಪ್ಪೆಗೆ ಕೂಡ ಹಾನಿಯುಂಟು ಮಾಡುತ್ತದೆ.
4. ಪ್ರತಿದಿನ ಮಸ್ಕರಾ ಧರಿಸುವುದು
ಪ್ರತಿದಿನ ಮಸ್ಕರಾ ಹಾಕುವುದು ಕೂಡ ಕಣ್ರೆಪ್ಪೆಗೆ ಒಳ್ಳೆಯದಲ್ಲ. ಮಸ್ಕರಾ ಹಾಕಿ ಅದನ್ನು ತೆಗೆಯುವಾಗ ಕಣ್ರೆಪ್ಪೆ ಹಾಳಾಗುವುದು, ಆದ್ದರಿಂದ ಪ್ರತಿದಿನ ಬಳಸಬೇಡಿ.
5. ಕಣ್ರೆಪ್ಪೆ ಕರ್ಲ್ಸ್ ಮಾಡುವುದು
ಮಸ್ಕರಾ ಹಾಕುವಾಗ ಕಣ್ರೆಪ್ಪೆ ಸ್ವಲ್ಪ ಸುರುಳಿ ರೀತಿ ಮಾಡುವ ಅಭ್ಯಾಸ ಹಲವರಲ್ಲಿ ಇರುತ್ತದೆ. ಆದರೆ ಈ ರೀತಿ ಸುರುಳಿ ಮಾಡಿದಾಗ ಕಣ್ರೆಪ್ಪೆ ಒಂದಕ್ಕೊಂಡು ಅಂಟಿಕೊಳ್ಳುವುದು, ಅಲ್ಲದೆ ಈ ರೀತಿ ಸುರಳಿ ಮಾಡುವುದು ನೈಸರ್ಗಿಕವಾದ ಕಣ್ರೆಪ್ಪೆಗೆ ಒಳ್ಳೆಯದಲ್ಲ.
6. ಮಸ್ಕರಾ ಶೇರ್ ಮಾಡುವುದು
ನಿಮ್ಮ ಮೇಕಪ್ ವಸ್ತುಗಳನ್ನು ಯಾರ ಜೊತೆಯೂ ಶೇರ್ ಮಾಡುವುದು. ಅದು ಕಾಡಿಗೆ , ಮಸ್ಕರಾ ಕೂಡ ಆಗಿರಲಿ, ನಿಮ್ಮ ಮೇಕಪ್ ನೀವೇ ಬಳಸಬೇಕು. ಬೇರೆಯವರು ಬಳಸಿದ ಮೇಕಪ್ ನೀವು ಬಳಸಿದರೆ ಅಥವಾ ನಿಮ್ಮ ಮಸ್ಕರಾ ಬೇರೆಯವರಿಗೆ ಮೇಕಪ್ ಮಾಡಲು ನೀಡಿದರೆ ಕಣ್ಣಿನ ಸೋಂಕು ಇದ್ದರೆ ಹರಡುವುದು. ಆದ್ದರಿಂದ ಮಸ್ಕರಾ ಮಾತ್ರವಲ್ಲ ಯಾವುದೇ ಮೇಕಪ್ ವಸ್ತುಗಳನ್ನು ಶೇರ್ ಮಾಡ್ಬೇಡಿ.



Click it and Unblock the Notifications


