Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಚಳಿಗಾಲದ ಪಾರ್ಟಿಗೆ ಗ್ಲಾಮರಸ್ ಲುಕ್ ನೀಡುವ ಐ ಶ್ಯಾಡೋ ಬಣ್ಣಗಳಿವು
ಸೀಸನ್ ಬದಲಾದಂತೆ ಮೇಕಪ್ ಟ್ರೆಂಡ್ ಕೂಡ ಬದಲಾಗುತ್ತಿರುತ್ತದೆ. ಮಳೆಗಾಲದಲ್ಲಿ ವಾಟರ್‌ಫ್ರೂಫ್ ಮೇಕಪ್ ಸೂಕ್ತವಾದರೆ ಚಳಿಗಾಲ ಬರುತ್ತಿದ್ದಂತೆ ಎದ್ದು ಕಾಣುವಂತೆ ಮೇಕಪ್ ಟ್ರೆಂಡ್ ಶುರುವಾಗುತ್ತದೆ. ಇನ್ನು ಮೇಕಪ್ ಹಾಕಲು ಚಳಿಗಾಲ ತುಂಬಾ ಸೂಕ್ತವಾದ ಕಾಲವಾಗಿದೆ. ಮಳೆಗಾಲದಲ್ಲಿ ಮಳೆನೀರು ಬಿದ್ದಾಗ ಮೇಕಪ್ ಹೋದರೆ, ಬೇಸಿಗೆಯಲ್ಲಿ ಬೆವರಿ ಹಾಕಿದ ಮೇಕಪ್ ಸ್ವಲ್ಪ ಹೊತ್ತಿನಲ್ಲಿ ಇಲ್ಲವಾಗುವುದು. ಆದರೆ ಚಳಿಗಾಲದಲ್ಲಿ ಬೆಳಗ್ಗೆ ಹಾಕಿದ ಮೇಕಪ್ ಸಂಜೆಯಾದರೂ ಮಾಸುವುದಿಲ್ಲ.
ಮುಖದ ಮೇಕಪ್‌ನಲ್ಲಿ ಲಿಪ್‌ಸ್ಟಿಕ್‌ನಂತೆ ಐ ಶ್ಯಾಡೋ ರಂಗು ಕೂಡ ಪಾರ್ಟಿಲುಕ್ ನೀಡಲು ಸಹಾಯ ಮಾಡುತ್ತದೆ. ಪಾರ್ಟಿ ಲುಕ್ ನೀಡುವಲ್ಲಿ ತುಟಿಯ ರಂಗಿನಷ್ಟೇ, ಐ ಶ್ಯಾಡೋ ಕೂಡ ಪ್ರಮುಖವಾಗಿದೆ. ಐ ಶ್ಯಾಡೋ ಬಳಸುವುದು ಹೇಗೆ, ಯಾವ ಬಣ್ಣದ ಐ ಶ್ಯಾಂಡೋ ಟ್ರೆಂಡ್‌ನಲ್ಲಿದೆ ಎಂದು ತಿಳಿದುಕೊಳ್ಳದಿದ್ದರೆ ಚೆಂದ ಕಾಣಲು ಹೆಚ್ಚಿಸಲು ಹಚ್ಚಿದ ಐ ಶ್ಯಾಡೋ ಮುಖದ ಅಂದವನ್ನು ಹಾಳು ಮಾಡಬಹುದು.

ಇಲ್ಲಿ ನಾವು ಚಳಿಗಾಲಕ್ಕೆ ಸೂಕ್ತವಾದ ಐ ಶ್ಯಾಡೋಗಳ ಬಗ್ಗೆ ಹೇಳಿದ್ದೇವೆ ನೋಡಿ:
View this post on InstagramA post shared by 𝐸𝓁𝒾𝓏𝒶𝒷𝑒𝓉𝒽 𝑅𝑜𝒿𝒶𝓈 🌻 (@vivexliza) on
ಪಿಂಕ್ ಮತ್ತು ನೇರಳೆ ಮಿಶ್ರಿತ ಐ ಶ್ಯಾಡೋ
ಈ ಐ ಶ್ಯಾಡೋ ಹಾಕಿದರೆ ಪಾರ್ಟಿ ಲುಕ್‌ಗೆ ಗ್ಲಾಮರಸ್ ಟಚ್ ಸಿಗುವುದರಲ್ಲಿ ನೋ ಡೌಟ್. ಡೇ ಪಾರ್ಟಿ, ನೈಟ್ ಪಾರ್ಟಿಗೆ ಹಾಕಲು ಸೂಕ್ತವಾದ ಬಣ್ಣದ ಐ ಶ್ಯಾಡೋ ಇದಾಗಿದೆ. ಈ ಐ ಶ್ಯಾಡೋ ಹಚ್ಚುವುದು ಹೇಗೆ ಎಂದು ಇಲ್ಲಿ ಹೇಳಿದ್ದೇವೆ ನೋಡಿ.
ಬೇಕಾಗುವ ಮೇಕಪ್ ಸಾಮಗ್ರಿ
ಕನ್ಸೀಲರ್
ಸೆಟ್ಟಿಂಗ್ ಪೌಡರ್
ಬ್ಲ್ಯಾಕ್ ಐ ಲೈನರ್
ಮಸ್ಕರಾ
ಪರ್ಪಲ್ ಐ ಶ್ಯಾಡೋ
ಪಿಂಕ್ ಐ ಶ್ಯಾಡೋ
* ಫ್ಲ್ಯಾಟ್ ಐ ಶ್ಯಾಡೋ ಬ್ರೆಷ್
* ಫ್ಲಫಿ ಐ ಶ್ಯಾಡೋ ಬ್ರೆಷ್
ಮೇಕಪ್ ಮಾಡುವುದು ಹೇಗೆ?
*ಕನ್ಸೀಲರ್ ತೆಗೆದು ರೆಪ್ಪೆಯ ಮೇಲ್ಪಾಗ, ಕಣ್ಣಿನ ಕೆಳಭಾಗದಲ್ಲಿ ಹಚ್ಚಿ, ಉಗುರಿನಿಂದ ಬ್ಲೆಂಡ್ ಮಾಡಿ, 1 ನಿಮಿಷ ಬಿಡಿ.
* ಈಗ ಸೆಟ್ಟಿಂಗ್ ಪೌಡರ್ ಹಚ್ಚಿ
* ಫ್ಲಫಿ ಬ್ರೆಷ್ ತೆಗೆದುಕೊಂಡು ಅದನ್ನು ಪಿಂಕ್ ಐ ಶ್ಯಾಡೋ ಮೇಲೆ ಅದ್ದಿ, ಕಣ್ಣಿಗೆ ಹಚ್ಚಿ.
* ಅದೆ ಐ ಶ್ಯಾಡೋ ಬಳಸಿ ಕಣ್ಣಿನ ತುದಿಯವರೆಗೆ ಎಳೆಯಿರಿ.
* ಈಗ ಫ್ಲ್ಯಾಟ್ ಬ್ರೆಷ್ ತೆಗೆದುಕೊಂಡು ಅದನ್ನು ನೇರಳೆ ಬಣ್ಣದ ಐ ಶ್ಯಾಡೋ ಮೇಲೆ ಅದ್ದಿ, ಪಿಂಕ್ ಐ ಶ್ಯಾಡೋ ಮೇಲೆ ಹಚ್ಚಿ.
* ಈಗ ಐ ಲೈನರ್ ಬಳಸಿ ಮೇಲ್ಭಾಗದ ರೆಪ್ಪೆ ಮೇಲೆಗೆರೆ ಎಳೆಯಿರಿ.
* ಕಣ್ಣಿನ ಕೆಳಭಾಗಕ್ಕೆ ಮಸ್ಕರಾ ಹಚ್ಚಿ. ಇಷ್ಟು ಮಾಡಿದರೆ ಸಾಕು, ನಿಮ್ಮ ಕಣ್ಣಿನ ಚೆಲುವು ಹೆಚ್ಚುವುದು.
View this post on InstagramA post shared by Anniquina (@anniquina) on
ಗ್ರೇ ಐ ಶ್ಯಾಡೋ
ಗೋಲ್ಡನ್, ಗ್ರೇ ಕಲರ್ ಡ್ರೆಸ್ ಧರಿಸಿದಾಗ ಗ್ರೇ ಐ ಶ್ಯಾಡೋ ತುಂಬಾ ಚೆನ್ನಾಗಿ ಮ್ಯಾಚ್ ಆಗುತ್ತದೆ. ಗ್ರೇ ಐ ಶ್ಯಾಡೋ ಹಚ್ಚುವ ಮೇಕಪ್ ಟಿಪ್ಸ್ ನೋಡಿ ಇಲ್ಲಿದೆ.
ಬೇಕಾಗುವ ಸಾಮಗ್ರಿ
* ಕನ್ಸೀಲರ್
* ಸೆಟ್ಟಿಂಗ್ ಪೌಡರ್
* ಐ ಲೈನರ್
* ಮಸ್ಕರಾ
* ಗ್ರೇ ಐ ಶ್ಯಾಡೋ
* ಫ್ಲಫಿ ಐ ಶ್ಯಾಡೋ ಬ್ರೆಷ್
ಹಚ್ಚುವ ವಿಧಾನ
*ಕನ್ಸೀಲರ್ ತೆಗೆದು ರೆಪ್ಪೆಯ ಮೇಲ್ಪಾಗ, ಕಣ್ಣಿನ ಕೆಳಭಾಗದಲ್ಲಿ ಹಚ್ಚಿ, ಉಗುರಿನಿಂದ ಬ್ಲೆಂಡ್ ಮಾಡಿ, 1 ನಿಮಿಷ ಬಿಡಿ.
* ಈಗ ಸೆಟ್ಟಿಂಗ್ ಪೌಡರ್ ಹಚ್ಚಿ
* ಫ್ಲಫಿ ಬ್ರೆಷ್ ತೆಗೆದುಕೊಂಡು ಅದನ್ನು ಗೇ ಕಲರ್ ಐ ಶ್ಯಾಡೋ ಮೇಲೆ ಅದ್ದಿ ಕಣ್ಣಿಗೆ ಹಚ್ಚಿ, ಐ ಲೈನರ್ ಹಾಕಿ, ನಂತರ ಮಸ್ಕರಾ ಹಚ್ಚಿದರೆ ಸ್ಮೋಕಿ ಲುಕ್ ಸಿಗುವುದು.
View this post on InstagramA post shared by Kary Padilla (@makeupby_karypadilla) on
ಬ್ಲೂ ಮ್ಯಾಜಿಕ್ ಲುಕ್
ಬ್ಲೂ ಕಲರ್ ನೈಟ್ ಪಾರ್ಟಿಗೆ ಸೂಕ್ತವಾದ ಐ ಶ್ಯಾಡೋ ಲುಕ್ ಆಗಿದೆ. ನೀವು ಬ್ಲೂ ಐ ಶ್ಯಾಡೋದಲ್ಲಿ ಮಿಂಚಲು ಬಯಸುವುದಾದರೆ ಇಲ್ಲಿದೆ ನೋಡಿ ಬ್ಯೂಟಿ ಟಿಪ್ಸ್.
ಬೇಕಾಗುವ ಮೇಕಪ್ ಸಾಮಗ್ರಿ
* ಕನ್ಸೀಲರ್
* ಸೆಟ್ಟಂಗ್ ಪೌಡರ್
* ಬ್ಲ್ಯಾಕ್ ಐ ಲೈನರ್
* ಮಸ್ಕರಾ
* ಬ್ಲೂ ಲೈಟ್ ಗ್ಲಿಟರಿಂಗ್ ಐ ಶ್ಯಾಡೊ
* ಫ್ಲ್ಯಾಟ್ ಐ ಶ್ಯಾಡೋ ಬ್ರೆಷ್
* ಡಾರ್ಕ್ ಬ್ಲೂ ಐ ಶ್ಯಾಡೊ
* ಫ್ಲಫಿ ಐ ಶ್ಯಾಡೊಬ್ರೆಷ್
ಹಚ್ಚುವ ವಿಧಾನ
*ಕನ್ಸೀಲರ್ ತೆಗೆದು ರೆಪ್ಪೆಯ ಮೇಲ್ಪಾಗ, ಕಣ್ಣಿನ ಕೆಳಭಾಗದಲ್ಲಿ ಹಚ್ಚಿ, ಉಗುರಿನಿಂದ ಬ್ಲೆಂಡ್ ಮಾಡಿ, 1 ನಿಮಿಷ ಬಿಡಿ.
* ಈಗ ಸೆಟ್ಟಿಂಗ್ ಪೌಡರ್ ಹಚ್ಚಿ.
* ಈಗ ಡಾರ್ಕ್ ಬ್ಲೂ ಐ ಶ್ಯಾಡೊವನ್ನು ಫ್ಲಫಿ ಬ್ರೆಷ್‌ನಲ್ಲಿ ತೆಗೆದು ಹಚ್ಚಿ, ನಂತರ ಗ್ಲಿಟರಿಂಗ್ ಐ ಶ್ಯಾಢೊ ತೆಗದು ಹಚ್ಚಿ, ಈಗ ಕಣ್ಣಿಗೆ ಐ ಲೈನರ್ ಹಚ್ಚಿ.
* ಕೆಳ ಭಾಗದ ಕಣ್ಣಿನ ರೆಪ್ಪೆಗೆ ಮಸ್ಕರಾ ಹಚ್ಚಿದರೆ ಸಾಕು ನೀವು ಗ್ಲಾಮರಸ್ ಲುಕ್‌ನಿಂದ ಕಾಣುವಿರಿ.
ಗೋಲ್ಡನ್ ಬಣ್ಣದ ಐ ಶ್ಯಾಡೋ ಲುಕ್
ಈ ಗೋಲ್ಡನ್ ಬಣ್ಣ ಮಾಡರ್ನ್ ಲುಕ್‌ಗೆ ಮಾತ್ರವಲ್ಲ ಸಾಂಪ್ರದಾಯಿಕ ಲುಕ್‌ಗೂ ಆಕರ್ಷಕವಾಗಿ ಕಾಣುವುದು. ಗೋಲ್ಡನ್ ಐ ಶ್ಯಾಡೋ ಲುಕ್‌ಗಾಗಿ ಇಲ್ಲಿದೆ ನೋಡಿ ಬ್ಯೂಟಿ ಟಿಪ್ಸ್.
ಬೇಕಾಗುವ ಮೇಕಪ್ ಸಾಮಗ್ರಿ
* ಕನ್ಸೀಲರ್
* ಸೆಟ್ಟಂಗ್ ಪೌಡರ್
* ಬ್ಲ್ಯಾಕ್ ಐ ಲೈನರ್
* ಮಸ್ಕರಾ
* ಫ್ಲಫಿ ಐ ಶ್ಯಾಡೋ ಬ್ರೆಷ್
* ಗೋಲ್ಡನ್ ಐ ಶ್ಯಾಡೋ
ಮೇಕಪ್ ಹಚ್ಚವ ವಿಧಾನ
* ಸ್ವಲ್ಪ ಕನ್ಸೀಲರ್ ತೆಗೆದು ರೆಪ್ಪೆಯ ಮೇಲ್ಪಾಗ, ಕಣ್ಣಿನ ಕೆಳಭಾಗದಲ್ಲಿ ಹಚ್ಚಿ, ಉಗುರಿನಿಂದ ಬ್ಲೆಂಡ್ ಮಾಡಿ, 1 ನಿಮಿಷ ಬಿಡಿ.
* ಈಗ ಸೆಟ್ಟಿಂಗ್ ಪೌಡರ್ ಹಚ್ಚಿ.
* ಗೋಲ್ಡನ್ ಕಲರ್ ಐ ಶ್ಯಾಡೋವನ್ನು ಫ್ಲಫಿ ಬ್ರೆಷ್‌ನಲ್ಲಿ ತೆಗೆದು ಹಚ್ಚಿ
* ಈಗ ಐ ಲೈನರ್ ಹಚ್ಚಿ, ಮಸ್ಕರಾ ಹಚ್ಚಿದರೆ ಗೋಲ್ಡನ್ ಬಣ್ಣದ ಐ ಶ್ಯಾಡೋ ಆಕರ್ಷಕವಾಗಿ ಕಾಣುತ್ತದೆ.
View this post on InstagramA post shared by Dimitra (@dimitrat) on
ಬೋಲ್ಡ್ ಲುಕ್ ನಿಡುವ ಗ್ರೀನ್ ಐ ಶ್ಯಾಡೋ
ಈ ಐ ಶ್ಯಾಡೋ ಎಲ್ಲಾ ಸಂದರ್ಭದಲ್ಲಿ ಬಳಸಲು ಸಾಧ್ಯವಿಲ್ಲ. ಗ್ರೀನ್ ಸ್ಕರ್ಟ್ ವೈಟ್ ಟಾಪ್ ಧರಿಸಿದಾಗ ಅದಕ್ಕೆ ಮ್ಯಾಚ್ ಹೊಂದುವಂತೆ ಗ್ರೀನ್ ಕಲರ್ ಐ ಶ್ಯಾಡೋ ಬಳಸಬಹುದು. ಗ್ರೀನ್ ಕಲರ್ ಐ ಶ್ಯಾಡೋ ಬಳಸುವ ಮುನ್ನ ಯಾವ ಬಣ್ಣದ ಡ್ರೆಸ್ ಧರಿಸುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಗ್ರೀನ್ ಐ ಶ್ಯಾಡೋ ಲುಕ್‌ಗಾಗಿ ಇಲ್ಲಿದೆ ನೋಡಿ ಮೇಕಪ್ ಟಿಪ್ಸ್.
ಬೇಕಾಗುವ ಮೇಕಪ್ ಸಾಮಗ್ರಿ
* ಕನ್ಸೀಲರ್
* ಸೆಟ್ಟಂಗ್ ಪೌಡರ್
* ಬ್ಲ್ಯಾಕ್ ಐ ಲೈನರ್
* ಮಸ್ಕರಾ
* ಫ್ಲಫಿ ಐ ಶ್ಯಾಡೋ ಬ್ರೆಷ್
*ಫ್ಲ್ಯಾಟ್ ಐ ಶ್ಯಾಡೋ ಬ್ರೆಷ್
* ಡಾರ್ಕ್ ಗ್ರೀನ್ ಐ ಶ್ಯಾಡೋ
* ಲೈಟ್ ಗ್ರೀನ್ ಐ ಶ್ಯಾಡೋ
ಹಚ್ಚುವ ವಿಧಾನ
* ಸ್ವಲ್ಪ ಕನ್ಸೀಲರ್ ತೆಗೆದು ರೆಪ್ಪೆಯ ಮೇಲ್ಪಾಗ, ಕಣ್ಣಿನ ಕೆಳಭಾಗದಲ್ಲಿ ಹಚ್ಚಿ, ಉಗುರಿನಿಂದ ಬ್ಲೆಂಡ್ ಮಾಡಿ, 1 ನಿಮಿಷ ಬಿಡಿ.
* ಈಗ ಸೆಟ್ಟಿಂಗ್ ಪೌಡರ್ ಹಚ್ಚಿ.
* ಈಗ ಫ್ಲಫಿ ಬ್ರೆಷ್ ತಗೊಂಡು ಲೈಟ್ ಗ್ರೀನ್ ಐ ಶ್ಯಾಡೋ ತಗೊಂಡು ಹಚ್ಚಿ ಬ್ಲೆಂಡ್ ಮಾಡಿ.
* ನಂತರ ಫ್ಲ್ಯಾಟ್ ಬ್ರೆಷ್‌ನಲ್ಲಿ ಡಾರ್ಕ್ ಗ್ರೀನ್ ತಗೊಂಡು ಹಚ್ಚಿ, ಕಣ್ಣಿಗೆ ಐ ಲೈನರ್, ಮಸ್ಕರಾ ಹಚ್ಚಿದರೆ ಆಕರ್ಷಕವಾಗಿ ಕಾಣುವುದು.



Click it and Unblock the Notifications