Latest Updates
-
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ?
ಬೇಸಿಗೆ: ಸೆಕೆಗೆ ಬೆವರಿ ಮೇಕಪ್ ಹಾಳಾಗದಿರಲು ಈ ಟಿಪ್ಸ್ ಬೆಸ್ಟ್
ಬೇಸಿಗೆ ಬಂತೆಂದರೆ ಸಾಲು-ಸಾಲು ಪಂಕ್ಷನ್‌ಗಳು ಶುರುವಾಗುತ್ತವೆ. ಫಂಕ್ಷನ್‌ನಲ್ಲಿ ಚೆನ್ನಾಗಿ ಅಲಂಕಾರ ಮಾಡಿ ಮಿಂಚೋಣ ಅಂದರೆ ಸೆಕೆ ಅಧಿಕವಿರುವುದರಿಂದ ಮುಖ ಬೆವರಿ ಮುಖದಲ್ಲಿ ಮೇಕಪ್ ಅಳಸಿ ಹೋಗುವುದು ಹಲವರ ಸಮಸ್ಯೆಯಾಗಿದೆ. ನಿಮಗೂ ಕೂಡ ಈ ಸಮಸ್ಯೆಯಾಗುತ್ತಿದೆಯೇ?
ಹಾಗಾದರೆ ಬೇಸಿಗೆಯಲ್ಲಿ ಮೇಕಪ್ ಹಾಳಾಗದಿರಲು ಮೇಕಪ್ ಯಾವ ರೀತಿ ಮಾಡಬೇಕು ಎಂದು ನೋಡೋಣ:

ಪ್ರೈಮರ್ ಹಚ್ಚಿದ ಬಳಿಕವಷ್ಟೇ ಮೇಕಪ್ ಸ್ಟಾರ್ಟ್ ಮಾಡಬೇಕು.
ನೀವು ಮುಖಕ್ಕೆ ಮೊದಲು ಪ್ರೈಮರ್ ಹಚ್ಚಬೇಕು, ಪ್ರೈಮರ್ ಹಚ್ಚುವುದರಿಂದ ಮೇಕಪ್ ತುಂಬಾ ಹೊತ್ತು ಇರುತ್ತದೆ, ಬೇಸಿಗೆಯಲ್ಲಿ ಜೆಲ್ ರೀತಿಯ ಪ್ರೈಮರ್ ಹಚ್ಚಿ. ಪ್ರೈಮರ್ ಹಚ್ಚುವುದರಿಂದ ನೆರಿಗೆ ತಡೆಗಟ್ಟಬಹುದು, ಮುಖದಲ್ಲಿ ಆಯಿಲ್ ಕಂಟ್ರೋಲ್ ಮಾಡಬಹುದು, ಅಲ್ಲದೆ ತುಂಬಾ ಹೊತ್ತಿನವರೆಗೆ ಮೇಕಪ್ ಹಾಳಾಗಲ್ಲ.

ವಾಟರ್‌ಫ್ರೂಫ್ ಫಾರ್ಮುಲಾ ಬಳಸಿ
ಮಸ್ಕರಾ, ಕಾಜಲ್, ಲಿಪ್‌ಸ್ಟಿಕ್ ಇವೆಲ್ಲಾ ವಾಟರ್‌ಫ್ರೂಮ್ ಆಗಿರಲಿ. ಇನ್ನು ಬೇಸಿಗೆಯಲ್ಲಿ ಮುಖಕ್ಕೆ ಹಚ್ಚುವ ಕ್ರೀಮ್ ಮೇಕಪ್ ಕೂಡ ಸ್ವೆಟ್ ಫ್ರೂಫ್ ಅಂದರೆ ಬೆವರು ತಡೆಗಟ್ಟುವಂತಿರಬೇಕು. ನೀವು ಮೇಕಪ್ ಹಚ್ಚಿ ಹಾಗೆಯೇ ಮಲಗಬಾರದು, ಮೇಕಪ್ ಸಂಪೂರ್ಣ ತೆಗೆದ ಬಳಿಕವಷ್ಟೇ ಮಲಗಿ.

ಬೇಸಿಗೆಯಲ್ಲಿ ಗ್ಲೋಸಿಗಿಂತ ಮ್ಯಾಟೆ ಫಿನಿಷ್ ಒಳ್ಳೆಯದು
ಈಗ ಗ್ಲೋಸಿ ಮತ್ತೆ ಟ್ರೆಂಡ್ ಆಗಿದೆ, ಆದರೂ ಬೇಸಿಗೆಯಲ್ಲಿ ನಿಮಗೆ ಮ್ಯಾಟೆ ಫಿನಿಷಿಂಗ್ ಬೆಸ್ಟ್. ನಿಮಗೆ ಸ್ವಲ್ಪ ಗ್ಲೋ ಬೇಕೆಂದು ಅನಿಸಿದರೆ ಬ್ಲಷ್ ಬಳಸಬಹುದು, ಆದರೆ ಮೇಕಪ್ ಓವರ್ ಆಗದಂತೆ ಎಚ್ಚರವಹಿಸಿ.

ಕಣ್ಣುಗಳಿಗೆ ವಾಟರ್‌ಫ್ರೂಫ್ ಮೇಕಪ್ ಬಳಸಿ
ನೀವು ಬೇಸಿಗೆಯಲ್ಲಿ ಕಣ್ಣುಗಳಿಗೆ ಮೇಕಪ್ ಮಾಡುವಾಗ ವಾಟರ್ ಫ್ರೂಫ್ ಮೇಕಪ್ ಬಳಸಿ, ಇದರಿಂದ ಕಣ್ಣಿನ ಸುತ್ತ ಸ್ಪ್ರೆಡ್ ಆಗುವುದನ್ನು ತಪ್ಪಿಸಬಹುದು. ನೀವು ಕಣ್ಣಿಗೆ ಮೇಕಪ್ ಮಾಡುವ ಮುನ್ನ ಸ್ವಲ್ಪ ಐಶ್ಯಾಡೋ ಹಚ್ಚಿ ನಂತರ ಲೈನರ್ ಹಚ್ಚುವುದು ಒಳ್ಳೆಯದು.
ಸೆಟ್ಟಿಂಗ್ ಸ್ಪ್ರೇ ಬಳಸಿ
ನೀವು ಮೇಕಪ್ ಎಲ್ಲಾ ಮುಗಿದ ಬಳಿಕ ಸೆಟ್ಟಿಂಗ್ ಸ್ಪ್ರೇ ಬಳಸಿ, ಹೀಗೆ ಮಾಡಿದರೆ ಮೇಕಪ್ 8-10 ಗಂಟೆ ಹಾಳಾಗುವುದಿಲ್ಲ.
ಬೇಸಿಗೆಯಲ್ಲಿ ಗಾಢವಾದ ಮೇಕಪ್ ಬಳಸಬಹುದೇ?
ಬೇಸಿಗೆಯಲ್ಲಿ ತೆಳು ಮೇಕಪ್ ತುಂಬಾನೇ ಸೂಕ್ತ, ಗಾಢವಾದ ಮೇಕಪ್ ಬಳಸಿದಾಗ ಬೆವರುವುದರಿಂದ ಅಷ್ಟು ಕಂಫರ್ಟ್ ಅನಿಸಲ್ಲ.

ಲಿಪ್‌ಸ್ಟಿಕ್ ಹರಡುವುದನ್ನು ತಡೆಗಟ್ಟುವುದು ಹೇಗೆ?
* ಮೊದಲಿಗೆ ಲಿಪ್‌ಸ್ಟಿಕ್ ಹಚ್ಚಿ ಅದರ ಮೇಲೆ ಟ್ರಾನ್ಸಕ್ಯೂಲೆಂಟ್ ಪೌಡರ್ ಹಚ್ಚಿ
* ನಿಮ್ಮ ತುಟಿಯ ಸುತ್ತ ಸ್ವಲ್ಪ ಕನ್ಸೀಲರ್ ಹಚ್ಚಿ, ಇದು ಲಿಪ್‌ಸ್ಟಿಕ್ ಹರಡುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ.
* ಬ್ಲೋಟಿಂಗ್ ಪೇಪರ್ ಅನ್ನು ತುಟಿ ಮೇಲೆ ಒತ್ತಿ, ಇದು ಲಿಪ್‌ಸ್ಟಿಕ್ ನ ಕ್ರೀಮ್ ಹೀರಿಕೊಳ್ಳುವುದರಿಂದ ಲಿಪ್‌ಸ್ಟಿಕ್ ಹರಡುವುದಿಲ್ಲ.



Click it and Unblock the Notifications
