Latest Updates
-
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು!
ಮಳೆಗಾಲ: ವಾಟರ್ ಫ್ರೂಪ್ ಮೇಕಪ್ ಬಳಸಿದರೂ ಈ ಟಿಪ್ಸ್ ಪಾಲಿಸಿ
ಮಳೆಗಾಲದಲ್ಲಿ ಮೇಕಪ್ ತುಂಬಾ ಹೊತ್ತು ನಿಲ್ಲುವುದು ಸ್ವಲ್ಪ ಕಷ್ಟವೇ, ವಾಟರ್‌ಫ್ರೂಪ್ ಮೇಕಪ್ ಬಳಸಿದರೂ ಮಳೆಯಲ್ಲಿ ಓಡಾಡುತ್ತಿದ್ದರೆ ಆ ಮೇಕಪ್ ಹಾಳಾಗುವುದು, ಮೇಕಪ್ ಹಾಳಾದರೆ ಅಂದ ಹೆಚ್ಚಲು ಹಾಕಿದ ಮೇಕಪ್ ಮುಖದ ಅಂದ ಕೆಡಿಸುವುದು. ಕಣ್ಣಿಗೆ ಹಚ್ಚಿದ ಕಾಜಲ್ ಸ್ಪ್ರೆಡ್ ಆದ್ರೆ, ಮುಖಕ್ಕೆ ಹಚ್ಚಿದ ಫೌಂಡೇಷನ್ ಪ್ಯಾಚ್-ಪ್ಯಾಚ್ ಆಗಿ ಕಂಡು ಬಂದರೆ ಮುಖದ ಅಂದ ಕೆಡುವುದು.
ನೀವು ಮಳೆಗಾಲಕ್ಕೆಂದೇ ವಾಟರ್ ಫ್ರೂಫ್ ಮೇಕಪ್ ಬಳಸುವುದಾದರೂ ಕೆಲವೊಂದು ಟಿಪ್ಸ್ ಪಾಲಿಸಿದರೆ ಮಾತ್ರ ಮೇಕಪ್ ಮೇಕಪ್ ಹಾಳಾಗುವುದಿಲ್ಲ. ಮಳೆಗಾಲದಲ್ಲಿ ಮೇಕಪ್ ಮಾಡುವಾಗ ಈ ಟ್ರಿಕ್ಸ್ ಪಾಲಿಸಿದರೆ ಮೇಕಪ್ ನೀವು ಮುಖ ತೊಳೆಯುವವರೆಗೂ ಹಾಗೇ ಇರುತ್ತದೆ, ಬನ್ನಿ ಹಾಗಾದರೆ ಆ ಟ್ರಿಕ್ಸ್ ಏನೆಂದು ನೋಡೋಣ:

ಮಾಯಿಶ್ಚರೈಸರ್:
ಮಾಯಿಶ್ಚರೈಸರ್ ಅನ್ನು ಮಳೆಗಾಲದಲ್ಲಿಯೂ ಬಳಸಿ. ಮಳೆಗಾಲದಲ್ಲಿ ಬಳಸುವ ಮಾಯಿಶ್ಚರೈಸರ್ ವಾಟರ್ ಬೇಸ್ಡ್ ಆಗಿರಲಿ, ಇದು ಮುಖದಲ್ಲಿರುವ ಎಣ್ಣೆಯಂಶ ಹೀರಿಕೊಳ್ಳಲು ಸಹಕಾರಿ, ಅಲ್ಲದೆ ಮಳೆಗಾಲವಾದರೂ ಮುಖದ ತ್ವಚೆ ಒಣಗುವುದು, ಅದನ್ನು ತಡೆಗಟ್ಟಲು ಕೂಡ ಸಹಕಾರಿ.

ಪೌಡರ್ ಬಳಸಿ:
ಮಳೆಗಾಲದಲ್ಲಿ ಕ್ರೀಮ್ ಬದಲಿಗೆ ಪೌಡರ್ ಮೇಕಪ್ ಸಾಧನಗಳನ್ನು ಬಳಸಿ. ಪೌಡರ್‌ನಿಂದ ಮ್ಯಾಟ್ ಲುಕ್ ಸಿಗುವುದು. ತುಂಬಾ ಫೌಂಡೇಷನ್ ಮತ್ತು ಕನ್ಸೀಲರ್ ಬಳಸ ಬೇಡಿ. ಅಲ್ಲದೆ ಮೇಕಪ್ ಹಚ್ಚುವ ಮುನ್ನ ಪ್ರೈಮರ್ ಹಚ್ಚಲು ಮರೆಯದಿರಿ. ಇದರಿಂದ ಮುಖಕ್ಕೆ ಹಚ್ಚಿದ ಫೌಂಡೇಷನ್ ದೀರ್ಘ ಸಮಯ ಇರುತ್ತದೆ.

ತುಟಿಗೆ ಲಿಪ್ ಟಿಂಟ್ಸ್ ಒಳ್ಳೆಯದು
ತುಟಿಗೆ ಗ್ಲೋಸಿ ಬದಲಿಗೆ ಪ್ಯಾಟ್ ಟಿಂಟ್ಸ್ ಒಳ್ಳೆಯದು. ಕಡು ಕೆಂಪು ಅಥವಾ ಹೊಳೆಯುವ ಲಿಪ್‌ಸ್ಟಿಕ್ ಬಣ್ಣದ ಬದಲಿಗೆ ಮಳೆಗಾಲಕ್ಕೆ ಪಿಂಕ್ ಅಥವಾ ಬ್ರೌನ್ ಶೇಡ್‌ನ ಲಿಪ್‌ಸ್ಟಿಕ್ ಬಳಸಿ.

ಕಣ್ಣುಗಳಿಗೆ
ಕಣ್ಣುಗಳ ಅಲಂಕಾರಕ್ಕೆ ವಾಟರ್ ಫ್ರೂಪ್ ಮಸ್ಕರಾ ಹಾಗೂ ಐಲೈನರ್ ಬಳಸಿ. ಇನ್ನು ಐ ಲೈನರ್ ಬಳಸುವ ಮುನ್ನ ನಿಮ್ಮ ಕಣ್ಣುಗಳನ್ನು ತೇವ ಮಾಡಿ ನಂತರ ಹಚ್ಚಿ. ಇನ್ನು ಪೆನ್ಸಿಲ್ ಲೈನರ್ ಬಳಸುವ ಬದಲಿಗೆ ಕ್ರೀಮ್ ಬೇಸ್ಡ್ ಪೆನ್ ಲೈನರ್ ಬಳಸಿ. ಕಪ್ಪು ಬಣ್ಣದ ಕಾಜಲ್ ಪೆನ್ಸಿಲ್ ಬದಲಿಗೆ ಬ್ರೌನ್ ಅಥವಾ ವೈಟ್ ಕಲರ್ (ಬಿಳಿ ಅಥವಾ ಕಂದು ಬಣ್ಣ) ಪೆನ್ಸಿಲ್ ಬಳಸಿ.

ಬ್ಲಷರ್ ಮತ್ತು ಐ ಶ್ಯಾಡೋ
ನೀವು ಬ್ಲಷರ್ ಅಥವಾ ಐ ಶ್ಯಾಡೋ ಬಳಸುವುದಾದರೆ ಕ್ರೀಮ್ ಬೇಸ್ಡ್ ಬದಲಿಗೆ ಪೌಡರ್ ಬೇಸ್ಡ್ ಬಳಸಿ. ಇನ್ನು ಐ ಶ್ಯಾಡೋ ಕ್ರೀಮಿ ಪಿಂಕ್, ಲೈಟ್ ಬ್ರೌನ್ ಇವೆಲ್ಲಾ ಮಳೆಗಾಲಕ್ಕೆ ಸೂಕ್ತವಾದ ಬಣ್ಣಗಳಾಗಿವೆ.

ಕಡಿಮೆ ಮೇಕಪ್ ಬಳಸಿ
ಮಳೆಗಾಲದಲ್ಲಿ ನೀವು ಲೈಟ್ ಮೇಕಪ್ ಹಾಕಿ.. ತುಂಬಾ ಮೇಕಪ್ ಹಾಕಿದರೆ ಸ್ವಲ್ಪ ಹಾಳಾದರೂ ತುಂಬಾ ಕೆಟ್ಟದಾಗಿ ಕಾಣುವುದು.



Click it and Unblock the Notifications
