For Quick Alerts
ALLOW NOTIFICATIONS  
For Daily Alerts

ನಕಲಿ ಫ್ರೆಕ್ಲೆಸ್‌ ಮೇಕಪ್‌ನಿಂದ ಮುಖದ ಕಾಂತಿ ಹೆಚ್ಚಿಸಿ!

|

ಮುಖದ ಮೇಲೆ ತುಂಬಾ ಸಣ್ಣ ಸಣ್ಣ ಮಚ್ಚೆಗಳು ಆವರಿಸಿಕೊಂಡು ಬಿಡುವುದನ್ನು ಫ್ರೆಕ್ಲೆಸ್ ಎಂದು ಕರೆಯಲಾಗುತ್ತದೆ. ಇದು ಕೆಲವೊಂದು ಜನರ ಮುಖದ ಮೇಲೆ ಕಾಣಿಸಿಕೊಳ್ಳುವುದು. ಹೆಚ್ಚಿನವರಿಗೆ ಇದು ಸೌಂದರ್ಯವನ್ನು ಕೆಡಿಸುವುದು ಎನ್ನುವಂತಹ ಭಾವನೆಯಿದೆ. ಆದರೆ ಅದನ್ನು ಸರಿಯಾಗಿ ಗಮನಿಸಿದರೆ ಕೆಲವೊಂದು ಸಂದರ್ಭದಲ್ಲಿ ಇದು ಸೌಂದರ್ಯವನ್ನು ಹೆಚ್ಚಿಸುವುದು. ಫ್ರೆಕ್ಲೆಸ್ ಎನ್ನುವುದು ಕೆಟ್ಟದಲ್ಲ. ಇದು ತುಂಬಾ ಸುಂದರ ಹಾಗೂ ಅದ್ಭುತವಾಗಿರುವುದು. ಮುಖದ ಮೇಲೆ ಹಾಗೂ ಗಲ್ಲದ ಮೂಳೆ ಮೇಲೆ ಸ್ವಲ್ಪ ಫ್ರೆಕ್ಲೆಸ್ ಗಳು ಇದ್ದರೆ ಆಗ ಸೌಂದರ್ಯವನ್ನು ಮತ್ತಷ್ಟು ಎದ್ದು ಕಾಣುವುದು. ಇದರಿಂದ ಒಬ್ಬರ ಮುಖಕ್ಕೆ ಮತ್ತಷ್ಟು ಆಕರ್ಷಣೆ ಸಿಗುವುದು.

ಫ್ರೆಕ್ಲೆಸ್‌ಗಳು ಇದ್ದರೆ ಆಗ ನೀವು ತುಂಬಾ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಯಾಕೆಂದರೆ ಇಂದಿನ ದಿನಗಳಲ್ಲಿ ಇದು ಒಂದು ರೀತಿಯ ಟ್ರೆಂಡ್ ಆಗಿದೆ ಮತ್ತು ನಿಮ್ಮಲ್ಲಿ ಫ್ರೆಕ್ಲೆಸ್ ಗಳು ಇಲ್ಲವೆಂದಾದರೆ ಆಗ ನಕಲಿ ಫ್ರೆಕ್ಲೆಸ್ ಗಳು ಮೂಡಲು ಕೆಲವೊಂದು ಕಂಪೆನಿಗಳು ಹಲವಾರು ರೀತಿಯ ಕ್ರೀಮ್ ಗಳು ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇದರಿಂದ ನೀವು ನೈಸರ್ಗಿಕ ಫ್ರೆಕ್ಲೆಸ್ ಬದಲು ಮುಖದ ಮೇಲೆ ನಕಲಿ ಫ್ರೆಕ್ಲೆಸ್ ಪಡೆಯಬಹುದು. ಫ್ರೆಕ್ಲೆಸ್ ಪೆನ್ಸಿಲ್ ಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದರ ಮೂಲಕವಾಗಿ ನಕಲಿ ಫ್ರೆಕ್ಲೆಸ್ ಗಳನ್ನು ಸೃಷ್ಟಿ ಮಾಡಬಹುದು. ನಿಮ್ಮ ಮುಖದ ಮೇಲೆ ಫ್ರೆಕ್ಲೆಸ್ ಗಳು ಇಲ್ಲವೆಂದಾದರೆ ಆಗ ನೀವು ಇದನ್ನು ಪಡೆಯಲು ಬಯಸಿದ್ದರೆ ಈ ಲೇಖನವನ್ನು ಓದುತ್ತಾ ಸಾಗಿ ಮತ್ತು ಅದ್ಭುತವಾಗಿರುವಂತಹ ಮೇಕಪ್ ಸಲಹೆ ಹಾಗೂ ವಿಧಾನದ ಮೂಲಕ ನೀವು ಇದನ್ನು ಪಡೆಯಬಹುದು.

freckles

ಮನೆಯಲ್ಲಿ ನಕಲಿ ಫ್ರೆಕ್ಲೆಸ್ ಪಡೆಯುವುದು ಹೇಗೆ?

ಬೇಕಾಗುವ ಸಾಮಗ್ರಿಗಳು

•ಫ್ರೆಕ್ಲೆ ಮೇಕಪ್ ಸಾಧನ/ಸ್ವ ಟ್ಯಾನರ್
•ಒಂದು ಪೆನ್ಸಿಲ್ ಬ್ರಷ್
•ಮಾಯಿಶ್ಚರೈಸರ್
•ಫೌಂಡೇಶನ್
•ಕೌನ್ಸಿಲರ್
•ಬ್ಲಷ್
•ಲಿಪ್ ಸ್ಟಿಕ್

ವಿಧಾನ

•ಫೇಶ್ ವಾಶ್ ಅಥವಾ ಸೋಪ್ ಹಾಕಿಕೊಂಡು ಮುಖವನ್ನು ಸರಿಯಾಗಿ ತೊಳೆದುಕೊಳ್ಳಬೇಕು. ಇದರಿಂದ ಮುಖದ ಮೇಲೆ ಇರುವಂತಹ ಕಲೆ, ಧೂಳು ಅಥವಾ ಅತಿಯಾದ ಎಣ್ಣೆಯಂಶವನ್ನು ತೆಗೆಯಲು ನೆರವಾಗುವುದು. ಅದರಲ್ಲೂ ಮುಖ್ಯವಾಗಿ ಚರ್ಮದ ರಂಧ್ರಗಳಲ್ಲಿ ಇರುವಂತಹ ಕಲ್ಮಷವನ್ನು ಇದು ತೆಗೆದುಹಾಕುವುದು.
•ಹೀಗೆ ಮಾಡಿಕೊಂಡ ಬಳಿಕ ನೀವು ಮುಖಕ್ಕೆ ಮೊಶ್ಚಿರೈಸರ್ ನ್ನು ಹಚ್ಚಿಕೊಳ್ಲಬೇಕು. ಶಮನ ಹಾಗೂ ತೇವಾಂಶ ನೀಡುವಂತಹ ಮೊಶ್ಚಿರೈಶರ್ ನ್ನು ಹಚ್ಚಿಕೊಳ್ಳಿ. ಇದರಿಂದ ಮುಖ ಯಾವಾಗಲೂ ಪೋಷಣೆಯನ್ನು ಪಡೆಯುವುದು. ಮೊಶ್ಚಿರೈಸರ್ ಲೋಷನ್ ಅಥವಾ ಮೊಶ್ಚಿರೈಸರ್ ಟೋನರ್ ನ್ನು ನೀವು ಬಳಸಿಕೊಳ್ಳಬಹುದು.
•ಇದರ ಬಳಿಕ ಫ್ರೆಕ್ಲೆ ಪೆನ್ಸಿಲ್ ತೆಗೆದುಕೊಳ್ಳಿ ಮತ್ತು ಮುಖದ ಮೇಲೆ ಫ್ರೆಕ್ಲೆಸ್ ನ್ನು ಮೂಡಿಸಿ. ತೆಳುವಾದ ಪೆನ್ಸಿಲ್ ಬ್ರಷ್ ನ್ನು ಬಳಸಿಕೊಂಡು ಕಂಚಿನ ಬಣ್ಣದ ಸ್ವಟ್ಯಾನರ್ ನ್ನು ನೀವು ಫ್ರೆಕ್ಲೆಸ್ ಮೂಡಿಸಲು ಬಳಸಬಹುದು.
•ಮುಖದ ಗಾತ್ರ, ವಿನ್ಯಾಸ ಮತ್ತು ಆದ್ಯತೆಗೆ ಅನುಗುಣವಾಗಿ ನಿಮಗೆ ಬೇಕಿದ್ದಷ್ಟು ಫ್ರೆಕ್ಲೆಸ್ ಗಳನ್ನು ಮೂಡಿಸಿಕೊಳ್ಳಿ.
•15-20 ನಿಮಿಷ ಕಾಲ ಹಾಗೆ ಬಿಡಿ.
•ಒದ್ದೆಯಾಗಿರುವ ಮುಖದ ಬಟ್ಟೆ ತೆಗೆದುಕೊಂಡು ಫ್ಲೆಕ್ಲೆಸ್ ಮೂಡಿಸಿದ ಭಾಗವನ್ನು ಒರೆಸಿಕೊಳ್ಳಿ. ಮುಖದ ಮೇಲೆ ಫ್ರೆಕ್ಲೆಸ್ ಹಾಗೆ ಉಳಿದುಕೊಳ್ಳಲು ನೀವು ಚರ್ಮಕ್ಕೆ ಹೆಚ್ಚಿನ ಮೇಕಪ್ ಉತ್ಪನ್ನವನ್ನು ಬಳಸಿಕೊಳ್ಳಬೇಡಿ.

•ಇದರ ಬಳಿಕ ನೀವು ಸ್ವಲ್ಪ ಫೌಂಡೇಶನ್ ಹಾಕಿಕೊಳ್ಳಬೇಕು. ಒಂದು ನೆಲಗಡಲೆ ಗಾತ್ರದ ಲಘುವಾಗಿರುವಂತಹ ಮ್ಯಾಟ್ ಫಿನಿಶ್ ಫೌಂಡೇಶನ್ ತೆಗೆದುಕೊಳ್ಳಿ ಮತ್ತು ಇಷ್ಟೇ ಪ್ರಮಾಣದ ಮೊಶ್ಚಿರೈಸರ್ ತೆಗೆದುಕೊಳ್ಳಿ. ಇದೆರಡು ಮಿಶ್ರಣ ಮಾಡಿಕೊಳ್ಳಿ ಮತ್ತು ನಿಧಾನವಾಗಿ ಮುಖಕ್ಕೆ ಹಚ್ಚಿಕೊಳ್ಳಿ. ಕೈಬೆರಳನ್ನು ಬಳಸಿಕೊಂಡು ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
•ಒಂದು ಸಲ ನೀವು ಇದನ್ನು ಬಳಸಿಕೊಂಡ ಬಳಿಕ ಕನ್ಸಿಲರ್ ಬಳಸಿ. ಕನ್ಸಿಲರ್ ಎಲ್ಲಿ ಅಗತ್ಯವಿದೆಯೋ ಅಲ್ಲೆಲ್ಲಾ ಇದನ್ನು ಬಳಸಿಕೊಳ್ಳಿ. ಸಮಸ್ಯೆ ಇರುವಂತಹ ಭಾಗಕ್ಕೆ ಕನ್ಸಿಲರ್ ಹಚ್ಚಿಕೊಳ್ಳಿ. ಮಿತ ಪ್ರಮಾಣದಲ್ಲಿ ಇದನ್ನು ಬಳಸಿಕೊಳ್ಳಿ. ಅತಿಯಾಗುವುದು ಬೇಡಿ.
•ಕೆನ್ನೆ ಮೇಲೆ ಗುಲಾಬಿ ಬಣ್ಣದ ಬ್ಲಷ್ ಹಚ್ಚಿಕೊಳ್ಳಿ. ಆದರೆ ಇದನ್ನು ನೀವು ಅತಿಯಾಗಿ ಮಾಡಿಕೊಳ್ಳಬೇಡಿ. ಇದರಿಂದ ನೀವು ಮೂಡಿಸಿರುವಂತಹ ಫ್ರೆಕ್ಲೆಸ್ ಗೆ ಅಡ್ಡಿಯಾಗುವುದು.
•ಅಂತಿಮವಾಗಿ ನೀವು ಲಿಪ್ ಸ್ಟಿಕ್ ಅಥವಾ ಲಿಪ್ ಗ್ಲೊಸ್ ಬಳಸಿಕೊಳ್ಳಿ.
ಇನ್ನು ನೀವು ತಡ ಮಾಡುವುದು ಯಾಕೆ? ನಕಲಿ ಫ್ರೆಕ್ಲೆಸ್ ರಚಿಸಿಕೊಂಡು ನಿಮ್ಮ ಮುಖವು ಎದ್ದು ಕಾಣುವಂತೆ ಮಾಡಲು ತಯಾರಾಗಿ.

English summary

Faking Freckles Make-up for Glowing Face

Whoever said freckles are not beautiful never understood the actual meaning of beauty. Freckles are not ugly. In fact, they are downright gorgeous and amazing. A tad bit of freckles on your nose and cheekbones lifts up your face and makes you look pretty. It basically adds character to a person's face.
X
Desktop Bottom Promotion