Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎಷ್ಟೇ ಆಯಾಸವಾದರೂ, ಮಲಗುವ ಮುನ್ನ ಮುಖ ತೊಳೆಯಿರಿ
ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು ಎಂದರೆ ಪ್ರತಿದಿನ ನಾವು ಕೆಲವೊಂದು ಕೆಲಸಗಳನ್ನು ಮಾಡಬೇಕು. ಅದರಲ್ಲೂ ಮಲಗುವ ಮುನ್ನ ಮುಖವನ್ನು ತೊಳೆಯುವುದು ಅತ್ಯಂತ ಮುಖ್ಯವಾದ ಕೆಲಸವಾಗಿರುತ್ತದೆ. ಇಡೀ ದಿನ ನಾವು ಸಿಕ್ಕಾಪಟ್ಟೆ ಸುಸ್ತಾಗಿರುತ್ತೇವೆ ಮತ್ತು ಆಯಾಸದಿಂದ ನಲುಗಿ ಹೋಗಿರುತ್ತೇವೆ. ಆಗ ಸುಮ್ಮನೆ ಹೋಗಿ ಮಲಗದೆ ಸುಮ್ಮನೆ ಎದ್ದು ಹೋಗಿ ಮುಖವನ್ನಾದರು ತೊಳೆಯಿರಿ. ಇದರಿಂದ ನಿಮ್ಮ ಮುಂಜಾನೆಗಳು ಆಹ್ಲಾದಕತೆಯಿಂದ ಆರಂಭಗೊಳ್ಳುತ್ತದೆ. ಸುಲಭವಾಗಿ ಮೇಕಪ್ ತೆಗೆಯುವುದು ಹೀಗೆ
ನಾವು ಸಾಮಾನ್ಯವಾಗಿ ಮಲಗಲು ತುದಿಗಾಲಿನಲ್ಲಿ ನಿಂತಿರುತ್ತೇವೆ. ನಿದ್ದೆ ಮಾಡಲು ಮತ್ತು ವಿಶ್ರಾಂತಿ ತೆಗೆದುಕೊಳ್ಳಲು ಹಲವಾರು ಕಾರಣಗಳನ್ನು ಮತ್ತು ನೆಪಗಳನ್ನು ನೀಡುತ್ತೇವೆ. ಆದರೆ ಹಾಗೆಯೇ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮಾಡಬೇಕಾದ ಕೆಲಸಗಳನ್ನು ಮಾಡಲು ಯಾವುದಾದರು ನೆಪಗಳನ್ನು ಮತ್ತು ಕಾರಣಗಳನ್ನು ನೀಡಿಕೊಳ್ಳುವುದನ್ನು ಕಲಿಯಬೇಕು. ಸೌಂದರ್ಯ ಚೆನ್ನಾಗಿರಬೇಕು ಎಂದರೆ ತಪ್ಪದೆ ಕೆಲವೊಂದು ಕೆಲಸಗಳನ್ನು ಮಾಡಬೇಕು. ದಿನಕ್ಕೆರಡು ಬಾರಿ ಮುಖ ತೊಳೆಯಿರಿ, ವ್ಯತ್ಯಾಸ ನೀವೇ ನೋಡಿ!

ರಾತ್ರಿಯ ಹೊತ್ತು ಮುಖವನ್ನು ತೊಳೆಯಲು ಹಲವಾರು ಕಾರಣಗಳಿವೆ. ರಾತ್ರಿಯ ಹೊತ್ತು ಮೇಕಪ್ ತೆಗೆಯದಿರುವುದು ಮಾತ್ರವಷ್ಟೇ ಇದರ ಹಿಂದಿನ ಕಾರಣವಲ್ಲ. ಬನ್ನಿ ರಾತ್ರಿ ಹೊತ್ತು ಮುಖ ತೊಳೆಯಲು ಇರುವ ಕಾರಣಗಳನ್ನು ನಾವು ಇಂದು ನಿಮ್ಮ ಮುಂದೆ ಇಡುತ್ತಿದ್ದೇವೆ. ಮುಂದೆ ಓದಿ...
ಮೇಕಪ್ ತುಂಬಾ ಹೊತ್ತಿದ್ದರೆ ಗುಳ್ಳೆಗಳು ಬರುತ್ತವೆ
ಮುಖದ ಮೇಲೆ ತುಂಬಾ ಹೊತ್ತು ಮೇಕಪ್ ಇದ್ದಲ್ಲಿ, ಗುಳ್ಳೆಗಳು ಬರುತ್ತವೆ. ಆದ್ದರಿಂದ ಅದನ್ನು ತಪ್ಪದೆ ತೆಗೆಯಿರಿ. ಮೇಕಪ್‌ನಿಂದ ಮುಖದಲ್ಲಿರುವ ರಂಧ್ರಗಳು ಮುಚ್ಚಿಕೊಳ್ಳುತ್ತವೆ. ಇದು ಗುಳ್ಳೆಗಳು ಮತ್ತು ಸಮರೂಪವಿಲ್ಲದ ತ್ವಚೆಯ ಸಮಸ್ಯೆಯನ್ನು ಉಂಟು ಮಾಡುತ್ತದೆ.
ಕಟ್ಟಿಕೊಂಡ ಕೊಳೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ
ಯಾವಾಗ ನೀವು ರಾತ್ರಿಯ ಹೊತ್ತು ಮುಖವನ್ನು ತೊಳೆಯುತ್ತೀರೋ, ಆಗ ದಿನದ ಸಮಯದಲ್ಲಿ ಮುಖದಲ್ಲಿ ಕಟ್ಟಿಕೊಂಡಿರುವ ಧೂಳು ನಿವಾರಣೆಯಾಗುತ್ತದೆ. ಜೊತೆಗೆ ನಿಮ್ಮ ತ್ವಚೆಯಲ್ಲಿ ಕಟ್ಟಿಕೊಂಡಿರುವ ರಂಧ್ರಗಳನ್ನು ನಿವಾರಿಸುತ್ತದೆ. ಮಹಿಳೆಗೆ ಮೇಕಪ್ ಸಾಧನಗಳ ಮೇಲೆ ಏಕೆ ಅಷ್ಟೊಂದು ಪ್ರೀತಿ?
ಕಣ್ಣು ರೆಪ್ಪೆಗಳ ಆರೈಕೆಗೆ
ಒಂದು ವೇಳೆ ಮಸ್ಕರ ಮತ್ತು ಐಶಾಡೋಗಳನ್ನು ನೀವು ಹಾಕಿಕೊಂಡಿದ್ದಲ್ಲಿ ಮಲಗುವ ಮುನ್ನ ಅದನ್ನು ತಪ್ಪದೆ ತೆಗೆಯಿರಿ. ಏಕೆಂದರೆ ಇದರಿಂದ ನಿಮ್ಮ ಕಣ್ಣುರೆಪ್ಪೆಗಳಿಗೆ ಹಾನಿಯುಂಟಾಗುವುದು ನಿಶ್ಚಿತ. ಅವು ಕಣ್ಣು ರೆಪ್ಪೆಗಳು ಉದುರುವಂತೆ ಮಾಡುತ್ತವೆ. ಏಕೆಂದರೆ ಮಸ್ಕರ ಅವುಗಳನ್ನು ದುರ್ಬಲಗೊಳಿಸುತ್ತದೆ.
ಮೇಕಪ್ ತೆಗೆಯಲಿಲ್ಲವಾದಲ್ಲಿ, ತ್ವಚೆಯೇ ಅದನ್ನು ಎಕ್ಸ್‌ಫೋಲಿಯೇಟ್ ಮಾಡುವುದಿಲ್ಲ



Click it and Unblock the Notifications



